ಸೆಪ್ಟೆಂಬರ್ 25—ಅಕ್ಟೋಬರ್ 1
ದಾನಿಯೇಲ 4-6
ಗೀತೆ 67 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೀವು ಯೆಹೋವನ ಆರಾಧನೆಯನ್ನು ಬಿಡದೆ ಮಾಡುತ್ತಿದ್ದೀರಾ?”: (10 ನಿ.)
ದಾನಿ 6:7-10—ದಾನಿಯೇಲನು ಯೆಹೋವನ ಆರಾಧನೆಯನ್ನು ಬಿಡದೆ ಮಾಡಲು ತನ್ನ ಜೀವವನ್ನೇ ಅಪಾಯಕ್ಕೊಡ್ಡಿದನು (w10 11/15 ಪು. 6, ಪ್ಯಾ. 16; w06 11/1 ಪು. 26, ಪ್ಯಾ. 12)
ದಾನಿ 6:16, 20—ದಾನಿಯೇಲನಿಗೆ ಯೆಹೋವನೊಂದಿಗಿದ್ದ ಆಪ್ತ ಸಂಬಂಧವನ್ನು ರಾಜ ದಾರ್ಯಾವೆಷನು ಗಮನಿಸಿದ್ದನು (w03 9/15 ಪು. 15, ಪ್ಯಾ. 2)
ದಾನಿ 6:22, 23—ತನ್ನನ್ನು ಬಿಡದೆ ಆರಾಧಿಸಿದ್ದಕ್ಕಾಗಿ ಯೆಹೋವನು ದಾನಿಯೇಲನನ್ನು ಆಶೀರ್ವದಿಸಿದನು (w10 2/15 ಪು. 18, ಪ್ಯಾ. 15)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ದಾನಿ 4:10, 11, 20-22—ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ಬಹು ಎತ್ತರವಾದ ವೃಕ್ಷ ಏನನ್ನು ಸೂಚಿಸುತ್ತದೆ? (w07 9/1 ಪು. 19, ಪ್ಯಾ. 4)
ದಾನಿ 5:17, 29—ದಾನಿಯೇಲನು ಮೊದಲ ಬಾರಿ ರಾಜ ಬೇಲ್ಶಚ್ಚರನು ಕೊಟ್ಟ ಬಹುಮಾನಗಳನ್ನು ಸ್ವೀಕರಿಸದೆ ನಂತರ ಏಕೆ ಸ್ವೀಕರಿಸಿದನು? (w88-E 10/1 30 ¶3-5; ದಾನಿಯೇಲನ ಪ್ರವಾದನೆ ಪು. 109, ಪ್ಯಾ. 22)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ದಾನಿ 4:29-37
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಕೂಟದ ಆಮಂತ್ರಣ ಪತ್ರ
ಪುನರ್ಭೇಟಿ: (4 ನಿಮಿಷದೊಳಗೆ) ಕೂಟದ ಆಮಂತ್ರಣ ಪತ್ರ—ಮೊದಲ ಭೇಟಿಯಲ್ಲಿ ಕೂಟದ ಆಮಂತ್ರಣ ಪತ್ರವನ್ನು ಕೊಡಲಾಗಿದೆ. ಪುನರ್ಭೇಟಿ ಮಾಡುವುದನ್ನು ಅಭಿನಯಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 120, ಪ್ಯಾ. 16—ಕುಟುಂಬ ಸದಸ್ಯರೊಬ್ಬರ ವಿರೋಧದ ಮಧ್ಯೆಯೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಿ.
ನಮ್ಮ ಕ್ರೈಸ್ತ ಜೀವನ
“ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ”: (15 ನಿ.) ಚರ್ಚೆ. ನಂತರ ಒಬ್ಬ ಅನುಭವಸ್ಥ ಪ್ರಚಾರಕನು ಒಬ್ಬ ಹೊಸ ಪ್ರಚಾರಕನೊಂದಿಗೆ ಸೇವೆಮಾಡುವ ವಿಡಿಯೋ ಹಾಕಿ, ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಪರಿಶಿಷ್ಟ ಪು. 246-249
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 22 ಮತ್ತು ಪ್ರಾರ್ಥನೆ