ಜೂನ್ 15-21
ಆದಿಕಾಂಡ 48-50
ಗೀತೆ 91 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ”: (10 ನಿ.)
ಆದಿ 48:21, 22—ದೇವ ಜನರು ಮುಂದೊಂದಿನ ಕಾನಾನ್ ದೇಶದಲ್ಲಿ ಖಂಡಿತ ಬಾಳುವರು ಎಂಬ ಬಲವಾದ ನಂಬಿಕೆ ಯಾಕೋಬನಿಗೆ ಇತ್ತು (it-1-E ಪುಟ 1246 ಪ್ಯಾರ 8)
ಆದಿ 49:1—ಯಾಕೋಬ ಸಾಯೋ ಸಮಯದಲ್ಲಿ ತನ್ನ ಮಕ್ಕಳಿಗೆ ಹೇಳಿದ ವಿಷಯದಿಂದ ಅವನಲ್ಲಿ ಎಷ್ಟು ನಂಬಿಕೆ ಇತ್ತು ಅಂತ ಗೊತ್ತಾಗುತ್ತೆ (it-2-E ಪುಟ 206 ಪ್ಯಾರ 1)
ಆದಿ 50:24, 25—ಯೆಹೋವನು ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅನ್ನೋ ದೃಢ ಭರವಸೆ ಯೋಸೇಫನಿಗೆ ಇತ್ತು (ಕಾವಲಿನಬುರುಜು07 6/1 ಪುಟ 28 ಪ್ಯಾರ 10)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 49:19—ಗಾದನ ಬಗ್ಗೆ ಯಾಕೋಬ ಹೇಳಿದ ಪ್ರವಾದನೆ ಹೇಗೆ ನೆರವೇರಿತು? (ಕಾವಲಿನಬುರುಜು04 6/1 ಪುಟ 15 ಪ್ಯಾರ 4-5)
ಆದಿ 49:27—ಬೆನ್ಯಾಮೀನನ ಬಗ್ಗೆ ಯಾಕೋಬ ಹೇಳಿದ ಪ್ರವಾದನೆ ಹೇಗೆ ನೆರವೇರಿತು? (ಅನುಕರಿಸಿ ಪುಟ 164 ರ ಚೌಕ)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 49:8-26 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಪ್ರಚಾರಕರಿಬ್ಬರು ಹೇಗೆ ಜೊತೆಯಾಗಿ ಸಾಕ್ಷಿ ನೀಡಿದರು? ಪ್ರಚಾರಕ ತಾನು ಹೇಳುತ್ತಿರೋ ವಿಷಯದ ಮೇಲೆ ದೃಢ ಭರವಸೆ ಇದೆ ಅಂತ ತೋರಿಸಿದ್ರು. ಇದನ್ನು ನಾವು ಹೇಗೆ ಮಾಡಬಹುದು?
ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 6)
ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್ ಕಲಿಸುತ್ತದೆ ಪುಸ್ತಕದ 9 ನೇ ಅಧ್ಯಾಯದಿಂದ ಬೈಬಲ್ ಪಾಠ ಆರಂಭಿಸಿ. (ಪ್ರಗತಿ ಪಾಠ 16)
ನಮ್ಮ ಕ್ರೈಸ್ತ ಜೀವನ
“ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರೋರಿಂದ ಕಲಿಯಿರಿ!”: (15 ನಿ.) ಚರ್ಚೆ. ನಿಷೇಧದ ಮಧ್ಯೆ ಐಕ್ಯತೆ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 55, 56
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 113 ಮತ್ತು ಪ್ರಾರ್ಥನೆ