ಮದ್ದುಗಳು “ಕ್ರೀಡೆಯ ಏಯ್ಡ್ಸ್”
“ಸ್ಟೆರಾಯ್ಡ್ಸ್ ನಮ್ಮ ರಾಷ್ಟ್ರೀಯ ಆರೋಗ್ಯ ಮತ್ತು ಭದ್ರತೆಗೆ ಬೆಳೆಯುತ್ತಿರುವ ಒಂದು ಬೆದರಿಕೆಯಾಗಿರುತ್ತದೆ.”—ಯು.ಎಸ್. ಮದ್ದು ಜಾರಿಯ ಆಡಳಿತಾ ಅಧಿಕಾರಿ
ಸಿಯೋಲ್ನ ಒಲಿಂಪಿಕ್ಸ್ನ್ನು ಅವಲೋಕಿಸುತ್ತಿರುವ ಮಿಲ್ಯಾಂತರ ಪ್ರೇಕ್ಷಕರು ವಿಸ್ಮಯಗೊಂಡರು. ಅವರ ವೀರನಾಯಕ, ಲೋಕದಲ್ಲಿ 100 ಮೀಟರ್ ಪಂದ್ಯದಲ್ಲಿ ಓಡಿದ ಅತಿ ವೇಗದ ಓಟಗಾರ, ಅವನ ಬಂಗಾರದ ಪದಕವನ್ನು ಅವನಿಂದ ಹಿಂದಕ್ಕೆ ತೆಗೆದುಕೊಳ್ಳಲಾಯಿತು, ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿದ್ದರಿಂದ ಅನರ್ಹನಾಗಿದ್ದನು.
ಈ ರೀತಿ ಕ್ರೀಡೆಗೆ ಇನ್ನೊಂದು ವ್ಯಾಧಿಯು ತಗಲಿತು—ಮತ್ತುಬರಿಸುವಿಕೆ, ಇದನ್ನು ನಿರ್ಮೂಲಮಾಡುವುದು ಎಷ್ಟೊಂದು ಕಷ್ಟಕರವೆಂದರೆ ಅದನ್ನು “ಕ್ರೀಡೆಯ ಏಯ್ಡ್ಸ್” ಎಂದು ಹೆಸರಿಸಲಾಗಿದೆ.
“ಔಷಧ ಒಲಿಂಪಿಕ್ಸ್”
ಎರಡನೆಯ ಲೋಕಯುದ್ಧದ ನಂತರ ಮುಖ್ಯವಾಗಿ ಕೆಲವು ಆಟಗಾರರು ಕ್ರೀಡೆಗಳಲ್ಲಿ ಮದ್ದನ್ನು ಬಳಸಲು ಆರಂಭಿಸಿದರು ಎಂದು ತಿಳಿದು ಬರುತ್ತದೆ. ಈಗ, ತಜ್ಞರಿಗನುಸಾರ, ಪಂದ್ಯಾಟಗಾರರಲ್ಲಿ ಮದ್ದುಗಳ ಬಳಕೆಯು ಎಷ್ಟು ವಿಸ್ತಾರವಾಗಿ ಇದೆಯೆಂದರೆ ಅದು “ಶ್ಲಾಘಣೀಯ ಫಲಿತಾಂಶಗಳನ್ನು ಪಡೆಯುವ ಒಂದು ಸ್ಪಷ್ಟ ಧ್ಯೇಯವಿಟ್ಟುಕೊಂಡು ಪುರಸ್ಕರಣ ಮಾಡುವವರನ್ನು ಆಕರ್ಷಿಸಲು, ಹಣ ಮತ್ತು ಅಧಿಕಾರವನ್ನು ಸಂಪಾದಿಸಲು, ಕೆಲವೊಮ್ಮೆ ಕ್ರೀಡಾ ಸಂಘಟನೆಗಳು ತಾವೇ ಸ್ಥಾಪಿಸಬೇಕಾದ, ಸಂಕ್ಲಿಷ್ಟತೆಯ ಮತ್ತು ದುಬಾರಿಯ ಸಂಸ್ಥೆಗಳ” ಅಗತ್ಯತೆಯು ಬರುತ್ತದೆ. ಈ ಬೆಳವಣಿಗೆಯು ಎಷ್ಟೊಂದು ವಿಸ್ತಾರವಾಗಿದೆಯೆಂದರೆ ಒಂದು ಇಟಾಲಿಯನ್ ಔಷಧ ನಿಯತ ಕಾಲಿಕ ಪತ್ರಿಕೆಯಾದ ಕೊರಿಯರೇ ಮೆಡಿಕೊ 1984ರ ಲಾಸ್ ಏಂಜಲೀಸ್ ಆಟಗಳನ್ನು “ಔಷಧ ಒಲಿಂಪಿಕ್ಸ್” ಎಂದು ಕರೆಯಿತು.
ವಾಸ್ತವದಲ್ಲಿ, ಅಯೋಗ್ಯ ರೀತಿಯಲ್ಲಿ, ಪೈಪೋಟಿಯ ಮೇಲಿನ ಸ್ಥಾನ ಪಡೆಯಲು ಮದ್ದುಗಳ ಮತ್ತು ಇತರ ಕಾನೂನುಬಾಹಿರ ಚಿಕಿತ್ಸೆಗಳ ಬಳಕೆಯು ಎಲ್ಲಾ ದೇಶಗಳ ಕ್ರೀಡೆಗಳನ್ನು ವ್ಯಾಧಿಗೊಳಪಡಿಸಿದೆ. ಪ್ರತಿಯೊಂದು ದೇಶವು ಇನ್ನಿತರರಿಗಿಂತ ದಾಟಿ ಮುಂದಿರಲು ಬಯಸುತ್ತದೆ, ಆದ್ದರಿಂದ ಆಟಗಾರರಿಗೆ ಮದ್ದುಗಳನ್ನು ಕೊಡುವದನ್ನು ನಿಲ್ಲಿಸಲು ಯಾರೂ ಬಯಸುವದಿಲ್ಲ. ಸಮಯೋಚಿತವಾಗಿ ಯೂರೋಪಿಯನ್ ಪಾರ್ಲಿಮೆಂಟ್ ನಿರ್ದೇಶಿಸಿದ್ದೇನಂದರೆ “ಮಹತ್ವಾಕಾಂಕ್ಷೆಯ ನಿರೀಕ್ಷೆಗಳು ಮತ್ತು ಆಗಾಗ್ಯೆ ಆಟೋಟಗಳ ಘಟನೆಗಳು ಒಬ್ಬ ಆಟಗಾರನನ್ನು ಎಷ್ಟೊಂದು ಒತ್ತಡಕ್ಕೆ ಹಾಕುತ್ತವೆಂದರೆ ಒಳ್ಳೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಹೆಚ್ಚುಕಡಿಮೆ ಕಾನೂನುಬದ್ಧ ಸಾಧನಗಳನ್ನು ಬಳಸುವ ಶೋಧನೆಗಳು ವೃದ್ಧಿಯಾಗುತ್ತಾ ಇವೆ. ಲವಲೇಶವೇ ಮನಸ್ಸಾಕ್ಷಿಯ ಆತಂಕವಿರುವ ಕ್ರೀಡಾ ತರಬೇತುಗಾರರಿಂದ ಈ ಶೋಧನೆಯು ಇನ್ನಷ್ಟು ಗಾಢತೆಯದ್ದಾಗಿ ಮಾಡಲ್ಪಡುತ್ತದೆ.” ಮತ್ತುಬರಿಸುವಿಕೆಯನ್ನು ಎಳೆಯ ಹುಡುಗರಿಂದಲೂ ಅಭ್ಯಾಸಿಸಲ್ಪಡುತ್ತದೆ.
ಮತ್ತುಬರಿಸುವಿಕೆಯ ವಿವಿಧ ರೂಪಗಳು
ಮತ್ತುಬರಿಸುವಿಕೆಯ ವಿವಿಧ ರೂಪಗಳು ಅಸ್ತಿತ್ವದಲ್ಲಿವೆ. ಉದಾಹರಣೆಗೆ:
ಸ್ಟೆರಾಯ್ಡ್ಸ್,ಇದರಲ್ಲಿ ಉಪಯೋಗಿಸಲ್ಪಡುವ ಮದ್ದುಗಳು “ಒಲಿಂಪಿಕ್ ಇತಿಹಾಸದಲ್ಲಿ ಅತಿ ಗಂಭೀರವಾದ ಘಟನೆ” ಎಂದು ಅರ್ಥವಿವರಿಸಲ್ಪಟ್ಟು, ಸಿಯೋಲ್ನಲ್ಲಿ 100 ಮೀಟರು ಓಟದ ದಾಖಲೆ ಹೊಂದಿದ, ಬೆನ್ ಜೊನ್ಸನ್ನ ಅನರ್ಹತೆಗೆ ಕಾರಣವಾಗಿತ್ತು. ಈ ಪದಾರ್ಥಗಳು ಅಮಿನೋ ಎಸಿಡ್ಸ್ಗಳ ಉತ್ಪಾದನೆಯನ್ನು ಪ್ರಭಾವಿಸಿ, ಸ್ನಾಯುಗಳು ಒಟ್ಟುಗೂಡುವಿಕೆಯ ಏರುವಿಕೆಗೆ ನೆರವನ್ನೀಯುತ್ತವೆ, ಅಲ್ಲದೆ ಆಕ್ರಮಣಾತ್ಮದ ವೃದ್ಧಿಗೂ ನೆರವಾಗುತ್ತವೆ. ಉದಾಹರಣೆಗೆ, ಕಳೆದ ಹತ್ತು ವರ್ಷಗಳ ಎಲ್ಲಾ ಭಾರ ಎತ್ತುವ ದಾಖಲೆಗಳು ಈ ಪದಾರ್ಥಗಳಿಂದ ಆಗಿವೆ ಎಂದು ಹೇಳಲಾಗುತ್ತದೆ.
ಚೋದಕಗಳು, ಕಫೇನ್ ಮತ್ತು ಸ್ಟ್ರಿಕ್ನಿನ್ನಂತಹುಗಳು, ಜಾಗ್ರತಾವಸ್ಥೆಯನ್ನು ಹೆಚ್ಚಿಸುತ್ತವೆ ಮತ್ತು ದಣಿವನ್ನು ತಡಮಾಡುತ್ತವೆ.
ನಿದ್ರಾಜನಕ ನೋವು ನಿವಾರಕಗಳು, ನೋವನ್ನು ಪರಿಹರಿಸಲು ಮತ್ತು ಶಾಂತತೆಯನ್ನು ಪ್ರಚೋದಿಸಲು.
ಬೀಟ ತಡೆಗಟ್ಟುಗಳು, ಹೃದಯಬಡಿತವನ್ನು ನಿಧಾನಗೊಳಿಸಿ ಮತ್ತು ದೇಹವನ್ನು ಸಮತೂಕತೆಯಲ್ಲಿಡುವ ಪದಾರ್ಥಗಳು, ವಿಶೇಷವಾಗಿ ಬಿಲ್ಲುಗಾರರು ಮತ್ತು ಗುರಿ ಹೊಡೆಯುವವರು ಬಳಸುತ್ತಾರೆ.
ಮೂತ್ರವರ್ಧಕ, ತೀವ್ರ ತೂಕ ಇಳಿಸುವಿಕೆಗೆ ಮತ್ತು ಪರೀಕೆಗ್ಷೆ ಒಳಪಡಿಸಿದಾಗ ಇತರ ನಿಷೇಧಿತ ಪದಾರ್ಥಗಳನ್ನು ಮರೆಮಾಡಲಿಕ್ಕಾಗಿ.
ಮತ್ತುಬರಿಸುವಿಕೆಯಲ್ಲಿ ಬಳಸಲ್ಪಡುವ ಹೆಸರುವಾಸಿ ಪದಾರ್ಥಗಳಲ್ಲಿ ಇವು ಕೇವಲ ಕೆಲವಾಗಿರುತ್ತವೆ, ಆದರೆ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಇಂತಹ ಸುಮಾರು 100ರಷ್ಟು ನಿಷೇಧಿತ ಮದ್ದುಗಳ ಪಟ್ಟಿಯನ್ನು ಮಾಡಿದೆ. ಸಮಸ್ಯೆಯೇನಂದರೆ ಅವುಗಳಲ್ಲಿ ಒಂದನ್ನು ನಿಷೇಧಿಸಿದಾಕ್ಷಣವೇ ಇಲ್ಲವೆ ಅವುಗಳ ಇರುವಿಕೆಯನ್ನು ಕಂಡುಹಿಡಿಯುವ ಕ್ರಮವಿಧಾನವು ಶೋಧಿಸಲ್ಪಟ್ಟರೆ, ವೈದ್ಯರು ಮತ್ತು ಔಷದಜ್ಞರುಗಳ ತಂಡಗಳೇ ಬೇರೆಯವುಗಳನ್ನು ಉತ್ಪಾದಿಸಲು ತೊಡಗುತ್ತವೆ.
ಆದಾಗ್ಯೂ, ಅಪ್ರಾಮಾಣಿಕ ರೀತಿಯಲ್ಲಿ ತಮ್ಮ ನಿರ್ವಹಣೆಯನ್ನು ಪ್ರಗತಿಮಾಡುವ ಪ್ರಯತ್ನದಲ್ಲಿ ಇನ್ನಿತರ ದಾರಿಗಳೂ ಇವೆ. ನೀರಿನಲ್ಲಿ ತಮ್ಮ ಸ್ಥಾನವನ್ನು ಉತ್ತಮಗೊಳಿಸಲು ಕೆಲವು ಈಜುಗಾರರು ತಮ್ಮ ಕರುಳುಗಳಲ್ಲಿ ಹೀಲಿಯಮ್ ಎಂಬ ಪಾರದರ್ಶಕ ಅನಿಲವನ್ನು ತುಂಬಿಸಿಕೊಳ್ಳುತ್ತಾರೆ.
ತಮ್ಮ ಸಹಿಷ್ಣುತೆಯನ್ನು ಪ್ರಗತಿಗೊಳಿಸಲು, ರಕ್ತ ಪೂರಣವನ್ನು ಮಾಡಿಕೊಳ್ಳುತ್ತೇವೆ ಎಂದು ಅನೇಕ ಕ್ರೀಡಾಪಟುಗಳು ಒಪ್ಪಿರುತ್ತಾರೆ. ಕೆಲವರಿಗನುಸಾರ, ಅವರಿಂದ ಸ್ವಲ್ಪ ಸಮಯದ ಮೊದಲು ತೆಗೆಯಲ್ಪಟ್ಟ ಅವರ ಸ್ವಂತ ಕೆಂಪು ರಕ್ತ ಕಣಗಳನ್ನು ಪೂರಣದ ಮೂಲಕ ಕೊಡುವುದರಿಂದ, ದೇಹದ ಎಲ್ಲಾ ಭಾಗಗಳಿಗೆ, ಸ್ನಾಯುಗಳ ಸಹಿತ, ಆಮ್ಲಜನಕವು ಹರಿದು ಪ್ರಗತಿ ಹೊಂದುತ್ತದೆ.
ಕೆಲವು ಸ್ತ್ರೀಯರು ಗರ್ಭಧಾರಣೆಯನ್ನು ಮತ್ತುಬರಿಸುವಿಕೆಯ ಒಂದು ವಿಧವಾಗಿ ಬಳಸಿದ್ದಾರೆಂದು ವಾರ್ತಾ ಮೂಲಗಳು ಇತ್ತೀಚೆಗೆ ಹೊರಪಡಿಸಿತು. ಗರ್ಭವತಿ ಸ್ತ್ರೀಯರು ಹೆಚ್ಚಿನ ರಕ್ತದ ಗಾತ್ರ ಉಳ್ಳವರಾಗುತ್ತಾರೆ ಮತ್ತು ಇದು ಸ್ನಾಯುಗಳಿಗೆ ಆಮ್ಲಜನಕವನ್ನು ಸಾಗಣೆಮಾಡುವಿಕೆಯನ್ನು ಏರಿಸುತ್ತದೆ. ಕೆಲವು ಸ್ತ್ರೀಯರು, ಅವರ ಪ್ರದರ್ಶನಗಳಲ್ಲಿ ಸುಧಾರಣೆ ಮಾಡಲು ಗರ್ಭಧಾರಣೆಯ ಆರಂಭಿಕ ಹಂತದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಆಟವು ಮುಗಿದ ನಂತರ, ಅವರು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ.
ಒಂದು ಗಂಭೀರ ಸಮಸ್ಯೆ
ಆದರೆ ಸಮಸ್ಯೆಯ ವ್ಯಾಪಕತೆಯು ಎಷ್ಟು? ಮದ್ದುಗಳ ಬಳಕೆಯ ಕಾರಣ ಆಟಗಾರರು ಅನರ್ಹರಾಗುವದು ವಿರಳ ಸಂಭವಗಳಾಗಿರುವದರ ಆಧಾರದ ಮೇಲೆ ತೀರ್ಪು ಮಾಡುತ್ತಾ, ಕೆಲವು ಕ್ರೀಡಾಸಕ್ತರು, ಕ್ರೀಡಾಪಟುಗಳ ಕೇವಲ ಕೊಂಚ ಪ್ರತಿಶತ ಇಂತಹ ಮತ್ತುಬರಿಸುವಿಕೆಗೆ ಬಲಿಯಾಗುತ್ತಾರೆ ಮತ್ತು ಅವರು ಮೆಚ್ಚುವಂತಹವರು ಹಾಗೆ ಎಂದೂ ಖಂಡಿತವಾಗಿ ಮಾಡುವುದಿಲ್ಲ ಎಂದು ಎಣಿಸಬಹುದು. ಆದರೆ ಕ್ರೀಡಾ ಜಗತ್ತಿನ ಒಳ್ಳೆಯ ಪರಿಚಯವಿದವ್ದರು ವಿಷಯಗಳನ್ನು ಭಿನ್ನವಾಗಿಯೇ ನೋಡುವರು.
“ಉಪಚಯ (ಅನಾಬಾಲಿಕ್ಸ್) ಬಳಕೆ ಮಾಡುವುದು ಸಾಮಾನ್ಯವಾಗಿ ಎಣಿಸಲ್ಪಡುವದಕ್ಕಿಂತಲೂ ವ್ಯಾಪಕವಾಗಿ ಇರುತ್ತದೆ,” ಎಂದು ಇಟೆಲಿಯ ಮಾಜೀ ಎಸೆಚಕ್ರ (ಡಿಸ್ಕಸ್) ಎಸೆಯುವವನೊಬ್ಬನು ಹೇಳಿದನು. ಮತ್ತು ಔಷಧ ಶಾಸ್ತ್ರದ ಒಬ್ಬ ತಜ್ಞನಾದ ಪ್ರೊಫೆಸರ್ ಸಿಲಿಯ್ವೊ ಗರಟ್ಟಿನಿಯವರಿಗನುಸಾರ ಮತ್ತುಬರಿಸುವಿಕೆಯ ಸಮಸ್ಯೆಯು ಎಣಿಸಲ್ಪಟ್ಟಿರುವದಕ್ಕಿಂತಲೂ ಹೆಚ್ಚು ಇರಬಹುದು. ಕೆಲವು ಮೂಲಗಳಿಗನುಸಾರ, ಶಾರೀರಿಕವಾಗಿ ಯೋಗ್ಯವಾಗಿರುವ ಆಟಗಾರರಲ್ಲಿ 50 ಪ್ರತಿಶತದಷ್ಟು ನಿಷೇಧಿತ ಪದಾರ್ಥಗಳನ್ನು ಉಪಯೋಗಿಸುತ್ತಾರೆ.
ಕ್ರೀಡಾಪಟುಗಳಿಗೆ ಅಪಾಯಸಂಭಾವ್ಯತೆ
ಅಯೋಗ್ಯ ರೀತಿಗಳಿಂದ ಉತ್ತಮ ನಿರ್ವಹಣೆ ಮಾಡುವುದರಲ್ಲಿ ಮಾತ್ರವೇ ಮತ್ತುಬರಿಸುವಿಕೆಯ ಸಮಸ್ಯೆ ಇರುವುದಿಲ್ಲ. ಇಂದಿನ ಆಟಗಾರರು, ವಿಶೇಷವಾಗಿ ಮದ್ದುಗಳನ್ನು ಬಳಸುವವರು, ಗುಪ್ತವಾಗಿರುವುದಾದರೂ ದೊಡ್ಡ ತಂಡದ ಒಂದು ಭಾಗವಾಗಿರುತ್ತಾರೆ, ಇದರಲ್ಲಿ ಅಗತ್ಯಬಿದ್ದಲ್ಲಿ ನಿಷೇಧಿತ ಪದಾರ್ಥಗಳನ್ನು ಕೊಡಲು ಸಾಧ್ಯವಿರುವ ವೈದ್ಯರೂ ಸೇರಿರುತ್ತಾರೆ. ಆದಾಗ್ಯೂ, ಪರಿಣಾಮಗಳಿಗೆ ಬೆಲೆ ತೆರುವವನು ಆಟಗಾರನು—ಕಂಡುಹಿಡಿಯಲ್ಪಟ್ಟದ್ದರ ಅಪಮಾನ ಇಲ್ಲವೆ ಅನರ್ಹನಾಗುವಿಕೆ ಮತ್ತು, ಅತಿ ಮುಖ್ಯವಾಗಿ, ಗಂಭೀರ ಆರೋಗ್ಯ ಗಂಡಾಂತರಗಳು.
ಅನಾಬಾಲಿಕ್ ಸ್ಟೆರಾಯ್ಡ್ಸ್ ಪಿತ್ಥಕೋಶಕ್ಕೆ ಮತ್ತು ಹೃದಯ ರಕ್ತನಾಳ ಸಂಬಂಧಿ ವ್ಯವಸ್ಥೆಗೆ ಹಾನಿ ತರುತ್ತದೆ ಹಾಗೂ ಇತರ ದ್ವಿತೀಯ ಮಟ್ಟದ ಅನೇಕ ಶಾರೀರಿಕ ಪರಿಣಾಮಗಳನ್ನು ಉತ್ಪಾದಿಸುತ್ತವೆ. ಈ ಮದ್ದುಗಳು ಮೂತ್ರಜನನಾಂಗದ ವ್ಯವಸ್ಥೆಗೆ ಕೇಡುಂಟುಮಾಡಲು ಮತ್ತು ಕೆಲವು ಕ್ರೀಡಾಪಟುಗಳ ಹಿಂಸಾಚಾರದ ವ್ಯಕ್ತಿತ್ವಕ್ಕೆ ಜವಾಬ್ದಾರವೆಂದು ಪರಿಗಣಿಸಲಾಗಿದೆ.
ಚೋದಕಗಳಂಥ ಇತರ ಮದ್ದುಗಳ ದುರುಪಯೋಗವು, “ಅವ್ಯವಸ್ಥೆಯ ಸ್ಥಿತಿ, ವಿಷಕರ ಅವಲಂಬಿಸುವಿಕೆ, ದೃಷ್ಟಿ ಗೋಚರ ವಿಭ್ರಮೆ”ಯನ್ನು ಉಂಟುಮಾಡುತ್ತವೆ. ರಕ್ತ ಪೂರಣಗಳ ಕುರಿತಾಗಿಯಾದರೋ, ವೈಜ್ಞಾನಿಕ ನಿಯತ ಕಾಲಿಕ ಡಾಕ್ಟರ್ ತಿಳಿಸುವದೇನಂದರೆ ಕ್ರೀಡಾಪಟುವಿನ ಸ್ವಂತ ಕೆಂಪು ರಕ್ತ ಕಣಗಳನ್ನು ಪುನಃ ಪೂರಣ ಮಾಡಿಕೊಳ್ಳುವದು ಗಂಡಾಂತರರಹಿತವಾಗಿರುವದಿಲ್ಲ. ಇದರಲ್ಲಿ ಒಂದು “ಅತಿಯಾದ ಒತ್ತಡವನ್ನು ಹಾಕುವದು ಮತ್ತು ರಕ್ತದ ಪ್ರವಾಹ ನಿರೋಧಕತೆಯ (ವಿಸ್ಕಾಸಿಟಿ) ಏರುವಿಕೆಯಿಂದಾಗಿ ಕೆಲವೊಂದು ನಿರ್ದಿಷ್ಟ ಅಂಗಗಳಲ್ಲಿ ರಕ್ತದ ಹರಿಯುವಿಕೆಯು ಕುಗ್ಗಲು ಕಾರಣವಾಗುತ್ತದೆ” ಮತ್ತು ಕಬ್ಬಿಣದ ಸಂಗ್ರಹಣೆಯು “ಅಂಗ ಸಾರದ್ರವ್ಯಕ್ಕೆ (ಪರೆಂಕಿಮ ಅಂದರೆ ಪಿತ್ತಕೋಶ, ಮೂತ್ರಪಿಂಡಗಳು, ಹೃದಯ, ಅಂತಃಸ್ರಾವಕ ಗ್ರಂಥಿಗಳು, ಇತ್ಯಾದಿ) ನಕಾರಾತ್ಮಕ ಪರಿಣಾಮಗಳನ್ನು ತರುತ್ತದೆ.”
ಮತ್ತುಬರಿಸುವದಕ್ಕೆ ತುತ್ತಾದವರು, ಈಗಾಗಲೇ ಪರಿಚಿತರಾಗಿರುವವರು ಬಹಳಷ್ಟು ಸಂಖ್ಯೆಯಲ್ಲಿರುತ್ತಾರೆ. ತಿಳಿದಿರುವ ಕೆಲವು ಹೆಚ್ಚಿನ ಮೊಕದ್ದಮೆಗಳಲ್ಲಿ, 1960ರ ರೋಮ್ ಒಲಿಂಪಿಕ್ಸ್ನಲ್ಲಿ ಮೃತನಾದ ಡ್ಯಾನಿಷ್ ಸೈಕಲ್ ಸವಾರ ಜೆನ್ಸನ್; ಬ್ರಿಟಿಷ್ ಸೈಕಲ್ ಸವಾರ ಟೊಮ್ ಸಿಂಪ್ಸನ್, ಇವನು 1967ರ ಟೂರ್ ಡಿ ಫ್ರಾನ್ಸ್ನಲ್ಲಿ ಮೃತನಾದದ್ದು; 1984ರಲ್ಲಿ ಲಾಸ್ ಆ್ಯಂಜಲೀಸ್ ಒಲಿಂಪಿಕ್ಸ್ನಲ್ಲಿ ಒಂದು ಓಟವಾದ ತಕ್ಷಣವೇ ಸತ್ತ ಮಧ್ಯಮ-ದೂರ ಓಟಗಾರ ಅಗಸ್ಟೀನ್ ಜಸ್ಪರ್ಸ್; ಪಶ್ಚಿಮ ಜರ್ಮನಿಯ ಬ್ರಿರ್ಜಿಟ್ ಡ್ರೆಸ್ಸಲ್, ಏಳು ಆಟಗಳ ಕ್ರೀಡಾ ಪಟುವಿಗೆ ವರ್ಷಗಳಿಂದ ಒಬ್ಬ ಕ್ರೀಡಾ ವೈದ್ಯನು ಸೂಚಿಸಿದ ಮದ್ದುಗಳಿಂದ ವಿಷಭರಿತಳಾಗಿ ಸತ್ತಳು.
“ಕ್ರೀಡೆಗೆ ಕರುಣೆಯೆಂಬುದು ಇಲ್ಲ,” ಎಂದನು ಕಾರ್ಲ್ ಲುವಿಸ್, ಹಲವಾರು ಬಾರಿಯ ಒಲಿಂಪಿಕ್ ಚಾಂಪಿಯನ್. “ಮತ್ತುಬರಿಸುವಿಕೆಯು ತನ್ನ ಬಲಿಪಶುಗಳನ್ನು ಈಗಾಗಲೇ ಪಡೆದಿದೆ. ಸಂಸ್ಥಾಪಕರಿಗೆ ಅದು ತಿಳಿದಿದೆ, ಆದರೂ ಏನು ಹೇಳುವದಿಲ್ಲ.”
ಇಂತಹ ಮನ ಕಲಂಕಿಸುವ ವಾಸ್ತವತೆಗಳ ಕುರಿತು ತಿಳಿದಿರುವುದಾದರೂ, ಈ ಪ್ರಶ್ನೆಗೆ ಕ್ರೀಡಾ ಪಟುಗಳು ಹೇಗೆ ಉತ್ತರಿಸುತ್ತಾರೆ: “ನಿನಗೆ ಒಬ್ಬ ಒಲಿಂಪಿಕ್ ಚಾಂಪಿಯನ್ ಮಾಡಲು ಶಕ್ಯವಾದ, ಆದರೆ ಒಂದು ವರ್ಷದೊಳಗೆ ನಿನ್ನನ್ನು ಕೊಲ್ಲಬಹುದಾದ ಆ ಒಂದು ಗುಳಿಗೆಯನ್ನು ಕೊಟ್ಟರೆ, ನೀನು ಅದನ್ನು ತಿನ್ನುವಿಯೋ?” ಅಮೆರಿಕದ ಕ್ರೀಡಾಪಟುಗಳ ಸಮೀಕ್ಷೆ ನಡಿಸಿದಾಗ, 50 ಪ್ರತಿಶತ ಹೌದು ಎಂದು ಉತ್ತರಿಸಿದರು. ಮತ್ತು ಇದೇ ಉತ್ತರವನ್ನು ಲೋಕದ ಇತರ ಭಾಗದಲ್ಲಿರುವ ಅನೇಕ ಕ್ರೀಡಾ ಪಟುಗಳು ಕೊಡಬಹುದು.
ಈ ವ್ಯಾಧಿಯನ್ನು ನಿಗ್ರಹಿಸುವುದರಲ್ಲಿ ಮದ್ದು-ವಿರೋಧ ಕ್ರಮಗಳು ಯಶ್ವಸೀಯಾಗಬಲ್ಲದು ಎಂದು ನಿರೀಕ್ಷಿಸಬಹುದೋ? ಒಳ್ಳೆಯದು, ನಿಪುಣರಿಗನುಸಾರ, ಕೇವಲ ಕೆಲವೇ ಕೇಂದ್ರಗಳು ಯೋಗ್ಯವಾದ ಪರೀಕ್ಷಣೆಯನ್ನು ಮಾಡಲು ಸಾಧನಗಳನ್ನು ಹೊಂದಿವೆ ಮತ್ತು ಪರೀಕ್ಷಣೆಗಳು ತಾವೇ ದುಬಾರಿ ಬೆಲೆಯದ್ದಾಗಿವೆ. ಪರೀಕ್ಷೆಯ ಫಲಿತಾಂಶಗಳನ್ನು ಕೂಡಾ ಸುಳ್ಳಾಗಿ ನಮೂದಿಸಲ್ಪಡಲಾಗಿದೆ. ಅದಲ್ಲದೆ, ಇತ್ತೀಚೆಗಿನ ಕೊರಿಯನ್ ಒಲಿಂಪಿಕ್ಸ್ನಲ್ಲಿ ಸಾಧಿಸಿದ ಸಂಗತಿಗಳ ಹೊರತಾಗಿಯೂ, ಹೊಸ ಮತ್ತುಬರಿಸುವ ಕ್ರಮಗಳು, ಅದನ್ನು ಕಂಡುಹಿಡಿಯುವದಕ್ಕಿಂತ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತವೆ. ಆದರೂ, ಮತ್ತುಬರಿಸುವಿಕೆ ಹಾಗೂ ಕ್ರೀಡೆಗಳಲ್ಲಿ ಹಿಂಸಾಚಾರವು ಬಲುಬೇಗನೇ ಅಂತ್ಯಗೊಳ್ಳಲಿದೆ ಎಂದು ನಿರೀಕ್ಷಿಸಲು ಒಂದು ಸಕಾರಣವಿರುತ್ತದೆ. (g89 11/8)
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಿನಗೆ ಒಬ್ಬ ಒಲಿಂಪಿಕ್ ಚಾಂಪಿಯನ್ ಮಾಡಲು ಶಕ್ಯವಾದ, ಆದರೆ ಒಂದು ವರ್ಷದೊಳಗೆ ನಿನ್ನನ್ನು ಕೊಲ್ಲಬಹುದಾದ ಆ ಒಂದು ಗುಳಿಗೆಯನ್ನು ಕೊಟ್ಟರೆ, ನೀನು ಅದನ್ನು ತಿನ್ನುವಿಯೋ?” ಅಮೆರಿಕದ ಕ್ರೀಡಾಪಟುಗಳ ಸಮೀಕ್ಷೆ ನಡಿಸಿದಾಗ, 50 ಪ್ರತಿಶತ ಹೌದು ಎಂದು ಉತ್ತರಿಸಿದರು
[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸೋವಿಯೆಟ್ ಒಕ್ಕೂಟದಲ್ಲಿ, 1986 ಮತ್ತು 1988ರ ನಡುವೆ, ಮದ್ದನ್ನು ಬಳಸಿದ್ದಕ್ಕಾಗಿ 290 ಕ್ರೀಡಾ ಪಟುಗಳನ್ನು ಮತ್ತು ತರಬೇತಿಗಾರರನ್ನು ಶಿಕ್ಷಿಸಲಾಯಿತು.—ಲೆನಿನ್ಸ್ಕೊಯಿ ಜ್ಞಾಮಿಯ, ಒಂದು ಸೋವಿಯೆಟ್ ಪತ್ರಿಕೆ
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸ್ಟೆರಾಯ್ಡ್ಸ್ನ ಕ್ರೀಡಾ ಪಟುಗಳು ಕೀಳುಸ್ವಭಾವದವರೂ, ಆಕ್ರಮಣಗಾರರೂ ಆಗುತ್ತಾರೆ.”—ಡಾ.ರೋಬರ್ಟ್ ವೊಯ್, ಅಮೆರಿಕದ ಒಲಿಂಪಿಕ್ ಸಮಿತಿಯ ಮುಖ್ಯ ವೈದ್ಯಕೀಯ ಅಧಿಕಾರಿ