ಪ್ರಾಚ್ಯ ಯೂರೋಪ್ ಒಂದು ಧಾರ್ಮಿಕ ಪುನರುಜ್ಜೀವನ
ಪ್ರಾಚ್ಯ ಯೂರೋಪಿನ ದೇಶಗಳಲ್ಲಿ ಅನೇಕ ದಶಕಗಳಿಂದ ವಾಕ್-ಸ್ವಾತಂತ್ರ್ಯದ ದಮನದ ಜೊತೆಗೆ ಧರ್ಮದ ಮೇಲೂ ತೀವ್ರ ನಿರ್ಬಂಧಗಳು ಸೇರಿದ್ದವು. ನಾಸ್ತಿಕತೆಯು ಕ್ರಿಯಾತ್ಮಕವಾಗಿ ಸಾರಲ್ಪಡಲಾಯಿತು, ಮತ್ತು ಲೆನಿನ್ಗ್ರಾಡ್ನಲ್ಲಿ ಅನೇಕ ಪ್ರವಾಸಿಗಳು ಸಂದರ್ಶಿಸಿರಬಹುದಾದ ಕೆಲವು ಕೆಥಡ್ರಲ್ಗಳನ್ನು ಮತ್ತು ಚರ್ಚುಗಳನ್ನು ನಾಸ್ತಿಕತೆಯ ಸಂಗ್ರಹಾಲಯಗಳಾಗಿ ಪರಿವರ್ತಿಸಲಾಯಿತು. ಯಾವುದೇ ಕಾರ್ಯ ನಿರ್ವಹಿಸುವಂಥ ವೈದಿಕರು ಪ್ರಚಲಿತ ಪ್ರಭುತ್ವದ ಕೈಗೊಂಬೆಗಳಾದರು. ಪಾದ್ರಿಗಳ ವಸತಿ-ಧ್ಯಾನ ಮಾಡುವಂಥ ಕಟ್ಟಡಗಳು (ಮೊನಾಸ್ಟರೀಸ್) ಚರ್ಚುಗಳು, ಮತ್ತು ಮಸೀದಿಗಳಂಥ ಎಲ್ಲಾ ಆರಾಧನಾ ಸ್ಥಳಗಳು ಅಧಿಕೃತವಾಗಿ 1967ರಲ್ಲಿ ಮುಚ್ಚಲ್ಪಟ್ಟವು. ರೇಡಿಯೋ ಟಿರಾನಾದ ಮೂಲಕ, ಆಲ್ಬೇನಿಯಾವು “ಲೋಕದಲ್ಲಿ ಪ್ರಥಮ ನಾಸ್ತಿಕ ದೇಶ” ಎಂದು ಕೂಡ ಘೋಷಿಸಲಾಯಿತು.
ಈಗ, ಪ್ರಾಚ್ಯ ಯೂರೋಪಿನಲ್ಲಿ ಸ್ವಾತಂತ್ರ್ಯವು ಎಲ್ಲೆಡೆಗಳಲ್ಲಿ ವಸಂತಕಾಲದ ಪುಷ್ಪಗಳಂತೆ ಸಮೃದ್ಧಿಯಾಗಿ ಅರಳುವಾಗ, ಧರ್ಮಕ್ಕೆ ಏನು ಸಂಭವಿಸುತ್ತದೆ? ಫ್ರೆಂಚ್ ಲೇಖಕನಾದ ಜೀನ್-ಫ್ರೆಂಕೊಯಿಸ್ ಕಾನ್ಹ್ ಬರೆದಂತಿದೆ: “ಅಂಕೆಯಲ್ಲಿಟ್ಟುಕೊಳ್ಳುವ ದುರುದ್ದೇಶ ಹೊಂದಿರುವ ಧರ್ಮವು, ದಬ್ಬಾಳಿಕೆ ನಡಿಸುವ ದುರುದ್ದೇಶದ ಒಂದು ರಾಷ್ಟ್ರದೊಂದಿಗೆ ಜತೆಗೂಡಬಹುದು. ನಿನ್ನೆ ಅದು ಇರಾನಿನಲ್ಲಿ ನಡೆಯಿತು. ಇಂದು ಅದು ಸೋವಿಯೆಟ್ನ ಅಝೇರ್ಬೈಜಾನ್ನಲ್ಲಿ ನಡೆಯುತ್ತಿದೆ. ನಾಳೆ ಅದು ಕಾಡ್ಗಿಚ್ಚಿನಂತೆ ಇಡೀ ರಶ್ಯಾದಲ್ಲೆಲ್ಲಾ ಹರಡಬಹುದು.” ಇಂದೂ ಕೂಡ ಧರ್ಮಗಳು ತಮ್ಮನ್ನು ಸ್ವತಃ ರಾಷ್ಟ್ರೀಯ ಆದರ್ಶ ಮತ್ತು ಹೆಬ್ಬಯಕೆಗಳೊಂದಿಗೆ ಜೋಡಿಸಿಕೊಳ್ಳುತ್ತವೆ ಮತ್ತು ರಾಜಕೀಯ ಪ್ರತಿಭಟನೆಗಳ ಮುಖ್ಯ ವಾಹಕಗಳಾಗಿ, ಅವರ ಕ್ಯಾಥಲಿಕ್ ಮತ್ತು ಆರ್ಥಡಕ್ಸ್ ಪಾದ್ರಿಗಳ ಹಾಗೂ ಲೂಥರನ್ ಪಾಸ್ಟರ್ಸ್ಗಳ ಹಾಜರಿಯಿಂದಾಗಿ ಪವಿತ್ರಗೊಳಿಸಲ್ಪಡುತ್ತವೆ.
ಆದುದರಿಂದ, ಹೊಸ ಪ್ರಜಾಪ್ರಭುತ್ವದ ಪರಿಸರದಲ್ಲಿ ಧಾರ್ಮಿಕ ಸ್ವಾತಂತ್ರ್ಯತೆಯು ಹೇಗೆ ಮುಂದುವರಿಯುತ್ತಿದೆ?
ವಿಷಯಗಳು ಬದಲಾಗಿರುವ ರೀತಿ
ಪ್ರಾಚ್ಯ ಯೂರೋಪಿನ ಪ್ರಮುಖ ಧರ್ಮಗಳು, ವಿಶೇಷವಾಗಿ ಕ್ಯಾಥಲಿಕ್ ಚರ್ಚು, ಹೊಸ ಸರಕಾರಗಳಿಂದ ಕಾನೂನುಬದ್ಧ ಮನ್ನಣೆಯನ್ನು ಪಡೆದು ಕೊಳ್ಳಲು ತ್ವರಿತ ಕಾರ್ಯಾಚರಣೆಯನ್ನು ತೆಗೆದು ಕೊಂಡಿತು. ಉದಾಹರಣೆಗೆ, ಎಲ್ ಒಸ್ಸರ್-ವಟೊರ್ ರೊಮಾನೊ ವರದಿ ಮಾಡಿದ್ದೇನಂದರೆ “ಫೆಬ್ರವರಿ [1990] 9ರಂದು, ರೋಮ್ ಮಠಾಧಿಪತ್ಯ ಮತ್ತು ಹಂಗೆರಿಯ ರಿಪಬ್ಲಿಕ್ನ ನಡುವಣ ಒಂದು ಹೊಂದಾಣಿಕೆಯ ಕಾಗದ ಪತ್ರಗಳಿಗೆ ರುಜುಹಾಕಲಾಯಿತು. ಈ ಹೊಂದಾಣಿಕೆಯ ಕಾಗದ ಪತ್ರಗಳ ಮೂಲಕ ರಾಯಭಾರ ನಿರ್ವಾಹಕ ಸಂಬಂಧಗಳನ್ನು ಪುನಃ ಸ್ಥಾಪಿಸಲು ಎರಡೂ ಪಕ್ಷಗಳು ಒಪ್ಪಿಕೊಂಡವು. (ವ್ಯಾಟಿಕನ್ ಒಂದು ಪ್ರತ್ಯೇಕ ಸಾರ್ವಭೌಮ ರಾಜ್ಯವೆಂದು ಪರಿಗಣಿಸಲಾಗುತ್ತಿದೆ.)
ವ್ಯಾಟಿಕನ್ನ ಇನ್ನೊಂದು ವರದಿಯು ತಿಳಿಸುವಂಥಾದ್ದು, ಯುಕ್ರೇನೀಯನ್ ಸಂಸ್ಕಾರದ ಕ್ಯಾಥಲಿಕ್ ಚರ್ಚು, 1946ರಲ್ಲಿ ದಮನಿಸಲ್ಪಟ್ಟಿದ್ದುದರಿಂದ, ಈಗ ಶಾಸನಬದ್ಧತೆಯನ್ನು ವಿನಂತಿಸಿಕೊಂಡು, “ಯುಕ್ರೇನೀಯನ್ನಲ್ಲಿ ಚರ್ಚು ಜೀವಿತದ ಕುರಿತು, ಸರಕಾರದೊಂದಿಗೆ ಮತ್ತು ರಶ್ಯನ್ ಆರ್ಥಡಕ್ಸ್ ಚರ್ಚಿನೊಂದಿಗೆ ವ್ಯಾವಹಾರಿಕ ಪ್ರಶ್ನೆಗಳನ್ನು” ಚರ್ಚಿಸಲು ಮುಂದುವರಿದಿದೆ.
ಏಪ್ರಿಲ್ 1990ರಲ್ಲಿ ಪೋಪ್ರು ಜೆಕಸ್ಲೊವಾಕಿಯಾಕ್ಕೆ ಭೇಟಿ ನೀಡಿದರು ಮತ್ತು ಪ್ರಾಗ್ ವಿಮಾನ ನಿಲ್ದಾಣದಲ್ಲಿ “ರಿಪಬ್ಲಿಕ್ನ ರಾಷ್ಟ್ರಪತಿಯಾದ ಶ್ರೀಮಾನ್. ವಾಕ್ಲಾವ್ ಹಾವೆಲ್ರನ್ನು ಸೇರಿಸಿ . . . ಚರ್ಚ್ ಮತ್ತು ರಾಜ್ಯದ ವರಿಷ್ಠ ಅಧಿಕಾರಿಗಳಿಂದ” ವಂದಿಸಲ್ಪಟ್ಟರು. (ಎಲ್ ಒಸ್ಸರ್-ವಟೊರ್ ರೊಮಾನೊ) ಒಂದು ಹೊಸ ಧಾರ್ಮಿಕ ವಾತಾವರಣವು ಕೂಡಾ ಅಲ್ಲಿ ವಿಕಸಿತವಾಗುತ್ತಾ ಇದೆ.
ಕ್ಯಾಥಲಿಕ್ ಚರ್ಚ್ ಯಾವಾಗಲೂ ಪೊಲೇಂಡಿನಲ್ಲಿ ಪರಿಗಣನೆಗೆ ತೆಗೆದು ಕೊಳ್ಳಬೇಕಾದ ಒಂದು ಶಕ್ತಿಯಾಗಿತ್ತು. ಈಗ, ಅದರ ಹೊಸತಾಗಿ ಕಂಡುಕೊಂಡ ಸ್ವಾತಂತ್ರ್ಯತೆಯಿಂದಾಗಿ, ಅದು ತನ್ನ ಸ್ನಾಯುಗಳನ್ನು ಉಬ್ಬಿಸುತ್ತಿದೆ ಮತ್ತು ಶಾಲೆಗಳಲ್ಲಿ ಧಾರ್ಮಿಕ ತರಗತಿಯನ್ನು ಪುನಃ ಪ್ರಸ್ತಾಪಿಸಲು ಕಾರ್ಯಾಚರಣೆಯನ್ನು ನಡಿಸುತ್ತಿದೆ. ಒಬ್ಬ ಪಾದ್ರಿಯು ತಿಳಿಸಿದ್ದು: “ಶಾಲೆಗಳು ರಾಷ್ಟ್ರದ ಆಸ್ತಿಯಾಗಿವೆ. ಪೋಲಿಶ್ ರಾಷ್ಟ್ರವು 90 ಶೇಕಡಾಕ್ಕಿಂತಲೂ ಹೆಚ್ಚು ಕ್ಯಾಥಲಿಕ್ ಆಗಿದೆ. . . . ಬೇರೆ ಧರ್ಮಗಳಿಗೆ ತಕ್ಕದಾದ್ದ ಗೌರವದೊಂದಿಗೆ, ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವು ಶಿಕ್ಷಕರ ಮತ್ತು ಅಧಿಕಾರಿಗಳ . . . ಅಧಿಕಾರವನ್ನು ಪುನಃಸ್ಥಾಪಿಸುವದು, ಯಾಕಂದರೆ ಅದು ಮಾನವನ ನೀತಿಶಾಸ್ತ್ರದ ಬೆನ್ನೆಲುಬಿನೊಂದಿಗೆ ಕೂಡಿಕೊಂಡಿದೆ.”
ರೊಮಾನಿಯಾದಲ್ಲಿ ಆರ್ಥಡಕ್ಸ್ ಚರ್ಚಿನ ಕುರಿತಾದ ವರದಿಯು ತಿಳಿಸುವದು: “[ಸಿಯಾಸಸ್ಕು] ಪ್ರಭುತ್ವದೊಂದಿಗೆ ಜತೆಗೂಡಿ ಕೆಲಸ ಮಾಡಿದ ಪೇಟ್ರಿಆರ್ಕ್ ಮತ್ತು ಗಣನೀಯ ಸಂಖ್ಯೆಯ ಬಿಷಪ್ರು ರಾಜೀನಾಮೆ ನೀಡುವಂತೆ ಒತ್ತಾಯಿಸಲ್ಪಟ್ಟರು. ಚರ್ಚ್ನ್ನು ಪುನಃ ಚೈತನ್ಯಗೊಳಿಸಲು ಒಂದು ನಿಯೋಗವನ್ನು ರಚಿಸಲಾಯಿತು. ಈ ಮುಂಚೆ ನಂಬಿಕೆಯಲ್ಲಿ ಇಲ್ಲದ ಅನೇಕರು ಧರ್ಮದ ಕಡೆಗೆ ತಿರುಗುತ್ತಿದ್ದಾರೆ ಮತ್ತು ಸ್ಥಳೀಯ ಚರ್ಚ್ಗಳಲ್ಲಿ ತುಂಬುತ್ತಿದ್ದಾರೆ. . . . ನಾಲ್ವತ್ತು ವರ್ಷಗಳ ಹಿಂದೆ ರೊಮಾನಿಯನ್ ಬೈಝೊಂಟೈನ್ ಕ್ಯಾಥಲಿಕ್ ಚರ್ಚ್ ಚದರಲ್ಪಡುವಂತೆ ಬಲಾತ್ಕರಿಸಲ್ಪಟ್ಟಿತು. ಈಗ ಪುನಃ ಸಂಸ್ಥಾಪಿಸಲ್ಪಡುವಂತೆ ಅನುಮತಿಸಲ್ಪಟ್ಟಿದೆ.”—ಆರ್ಥಡಕ್ಸ್ ಯುನಿಟಿ, ಜುಲೈ 1990.
ಆಲ್ಬೇನಿಯಾದಲ್ಲಿ ಬದಲಾವಣೆಗಳು
ವಾರ್ತಾ ವರದಿಗಳ ಪ್ರಕಾರ, ಆಲ್ಬೇನಿಯಾದಲ್ಲಿ ಆಶ್ಚರ್ಯಕರ ಬದಲಾವಣೆಗಳು ಮೆಲ್ಲಮೆಲ್ಲನೆ ಆಗುತ್ತಾ ಇದ್ದವು, ಇದು ಮೂವತ್ತೆರಡೂವರೆ ಲಕ್ಷ ನಿವಾಸಿಗಳಿರುವ ಒಂದು ಸಣ್ಣ ಪರ್ವತಮಯ ದೇಶವಾಗಿದ್ದು, ಯುಗೊಸ್ಲೊವಿಯಾ ಮತ್ತು ಗ್ರೀಸಿನ ನಡುವೆ ಸಿಕ್ಕಿಹಾಕಿಕೊಂಡಿದ್ದು ಎಡ್ರಿಯಾಟಿಕ್ ಕರಾವಳಿಯಲ್ಲಿದೆ. ಜರ್ಮನ್ ವಾರ್ತಾಪತ್ರ ಡಯೀ ವೆಲ್ಟ್ ವರದಿ ಮಾಡಿದ್ದು: “ಆಲ್ಬೇನಿಯಾದಲ್ಲಿ ಯೂರೋಪಿನಲ್ಲಿರುವ ಪ್ರಾಚೀನ ಶೈಲಿಯ ಕಮ್ಯೂನಿಸಂನ ಕೊನೆಯ ಭದ್ರಕೋಟೆಯಾಗಿತ್ತು,” ಪಶ್ಚಿಮದ ರಾಯಭಾರ ಕಚೇರಿಗಳಲ್ಲಿ ಆಶ್ರಯ ಪಡೆಯಲು ಯತ್ನಿಸುತ್ತಾ, “ಅಲ್ಲಿ ಜನರು ಅವರ ಕಾಲುಗಳ ಮೇಲೆ ನಿಂತು ಮತವನ್ನು ನೀಡಲು ಆರಂಭಿಸಿದರು.” ಅಲ್ಲಿಂದ ಅವರು ಇಟೆಲಿ, ಜರ್ಮನಿ ಮತ್ತು ಇನ್ನಿತರ ದೇಶಗಳಿಗೆ ಹೋಗಲು ಅನುಮತಿಸಲಾಯಿತು.
ಆ ವರದಿಯು ಮುಂದುವರಿಸುತ್ತಾ ಅಂದದ್ದು: “ಮೇ, 1990ರಲ್ಲಿ ಆಲ್ಬೇನಿಯರಿಗೆ ರಹದಾರಿ ಪತ್ರಗಳನ್ನು (ಪಾಸ್ಪೋರ್ಟ್) ಮತ್ತು ಧಾರ್ಮಿಕ ಬೆನ್ನಟ್ಟುವಿಕೆಗಳನ್ನು ನಿಷೇಧಿಸುವ ನಿಯಮಗಳನ್ನು ರದ್ದುಮಾಡುವ ವಾಗ್ದಾನವನ್ನು ಮಾಡಲಾಗಿತ್ತು.” (ಜುಲೈ 15, 1990ರ ದ ಜರ್ಮನ್ ಟ್ರಿಬ್ಯೂನ್ನಿಂದ ಉಲ್ಲೇಖಿಸಲಾಗಿದೆ.) ಇತಿಹಾಸದ ಪ್ರೊಫೆಸರರಾದ ಡೆನಿಸ್ ಆರ್. ಜಾನ್ಜ್ ಬರೆದದ್ದು: “ಸಂಪೂರ್ಣ ಧರ್ಮ ನಿರಪೇಕ್ಷತೆಗಾಗಿ ಒಂದು ದೀರ್ಘವಾದ ಮತ್ತು ಕಠಿಣತಮ ಹೋರಾಟವೊಂದನ್ನು ಬದಿಗಿಟ್ಟಂತೆ ಭಾಸವಾಗುತ್ತಿತ್ತು.” ಆದಾಗ್ಯೂ, ಅವರು ಕೂಡಿಸಿದ್ದು: “ಈ ಸಾಮಾಜದಲ್ಲಿ ಧರ್ಮಕ್ಕೆ ವಾಸ್ತವದಲ್ಲಿ ಒಂದು ಜಜ್ಜಿಹಾಕುವ ಹೊಡೆತವನ್ನು ನೀಡಲಾಗಿತ್ತು ಎಂದು . . .. ಅಲ್ಲಿ ರುಜುವಾತು ಇದೆ.”
ಈ ಸುತ್ತುಗಟ್ಟಿನಲ್ಲಿ ಯೆಹೋವನ ಸಾಕ್ಷಿಗಳು ಅವರ ಪದ್ಧತಿಗನುಗುಣವಾದ ಮತ್ತು ಕಟ್ಟುನಿಟ್ಟಿನ ತಟಸ್ಥತೆಯನ್ನು ಕಾಪಾಡಿಕೊಂಡಿರುತ್ತಾರೆ. ಬೈಬಲ್ ಸೂತ್ರಗಳ ಆಧಾರದಲ್ಲಿ, ಅವರು ರಾಜಕೀಯ ಮತ್ತು ರಾಷ್ಟ್ರೀಯತೆಯ ವಿಭಾಗಗಳಲ್ಲಿ ಸೇರ್ಪಡೆಯಾಗುವದಿಲ್ಲ. ದೇವರ ರಾಜ್ಯದ ಸಾರುವಿಕೆಯ ಅವರ ಭೂವ್ಯಾಪಕ ನಿಯೋಗವನ್ನು ಪೂರೈಸಲು ಒಂದು ಶಾಂತಿಯುಕ್ತ ಅಳವಡಿಸುವಿಕೆಯನ್ನು ಅವರಿಗೆ ಒದಗಿಸಿಕೊಡಲು ಅವರು ದೇವರ ಮೇಲೆ ಭರವಸವಿಡುತ್ತಾರೆ.—ಮತ್ತಾಯ 22:21; 1 ತಿಮೊಥಿ 2:1, 2; 1 ಪೇತ್ರ 3:13-15.
ಆದುದರಿಂದ ಪ್ರಾಚ್ಯ ಯೂರೋಪಿನಲ್ಲಿರುವ ಯೆಹೋವನ ಸಾಕ್ಷಿಗಳ ಕುರಿತಾಗಿ ಏನು? ನಿಷೇಧದ ಕೆಳಗೆ ಅವರು ಅಭಿವೃದ್ಧಿ ಹೊಂದಿರುತ್ತಾರೋ? ಅಲ್ಲಿ ಅವರಿಗೆ ಧಾರ್ಮಿಕ ಸ್ವಾತಂತ್ರ್ಯವು ಇದೆಯೋ? (g91 1/8)
[ಪುಟ 7 ರಲ್ಲಿರುವಚಿತ್ರ]
ಪ್ರಾಚ್ಯ ಯೂರೋಪಿನ ಚರ್ಚುಗಳಿಗೆ ಜನರು ಹಿಂತೆರಳುವರೋ?