ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 5/8 ಪು. 28-29
  • ಇಪ್ಪತ್ತನೆಯ ಶತಮಾನದ ಫ್ಯಾ ಕ್ಸ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಪ್ಪತ್ತನೆಯ ಶತಮಾನದ ಫ್ಯಾ ಕ್ಸ್‌
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದು ಹೇಗೆ ಕೆಲಸ ನಡಿಸುತ್ತದೆ?
  • ಈ ಯಂತ್ರಕಲೆಯ ಮೂಲವೆಲ್ಲಿ?
  • ಫ್ಯಾಕ್ಸ್‌ ಹೇಗೆ ಉಪಯೋಗಿಸಲ್ಪಡುತ್ತದೆ?
  • ಫಾಕ್ಸ್‌ನ ಭವಿಷ್ಯವೇನು?
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಕಾಗದರಹಿತ ಆಫೀಸು ಕನ್ನಡಿಯೊಳಗಿನ ಗಂಟು
    ಎಚ್ಚರ!—1999
  • ತೊದಲುವಿಕೆ ನಿಂತುಹೋಯಿತು!
    ಎಚ್ಚರ!—1998
  • ಉದ್ಯೋಗ ಸುರಕ್ಷೆ ಮತ್ತು ಸಂತೃಪ್ತಿಗಳು ಬೆದರಿಕೆಗೊಳಗಾಗಿವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಎಚ್ಚರ!—1992
g92 5/8 ಪು. 28-29

ಇಪ್ಪತ್ತನೆಯ ಶತಮಾನದ ಫ್ಯಾ ಕ್ಸ್‌

ನ್ಯೂಯಾರ್ಕಿನಿಂದ ಟೊರಾಂಟೋಗೆ ಒಂದಕ್ಕೂ ಕಡಮೆ ನಿಮಿಷದಲ್ಲಿ. ಇದು ಫ್ಯಾಕ್ಸಿನ ವೇಗ. ಅದೇನು? ಸರಳವಾಗಿ ಹೇಳುವುದಾದರೆ, ಇದು ದೂರ ಸಂಬಂಧದ ಫೋಟೊ ಯಥಾಪ್ರತಿ—ಒಂದು ಶಬ್ದವನ್ನೂ ಮಾತಾಡದೆ ಸಂಪರ್ಕ ಬೆಳೆಸುವ ರೀತಿ. ಕೇವಲ ಅಮೆರಿಕದಲ್ಲಿಯೇ ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ಫ್ಯಾಕ್ಸಿಮಿಲಿ [ಯಥಾಪ್ರತಿ ಮಾಡುವ] ಯಂತ್ರಗಳನ್ನು ಖರೀದಿಸಲಾಗುತ್ತದೆ.

ವೈದ್ಯರು ಮೆಡಿಕಲ್‌ ವರದಿಗಳನ್ನು, ವಕೀಲರು ನ್ಯಾಯಸಂಬಂಧವಾದ ನಕಲುಗಳನ್ನು, ದಿನಸಿ ಅಂಗಡಿಯವರು ಆಹಾರಕ್ಕಾಗಿ ಆರ್ಡರುಗಳನ್ನು, ರೇಡಿಯೊ ಗ್ರಾಹಕರು ಸಂಗೀತ ವಿನಂತಿಯನ್ನು ಫ್ಯಾಕ್ಸಿನ ಮೂಲಕ ಕಳುಹಿಸುತ್ತಾರೆ. ತನಗೆ ಕೂಸು ಹುಟ್ಟಿ ಒಂದು ತಾಸಿನೊಳಗೆ, ಕ್ಯಾಲಿಫೋರ್ನಿಯದ ಒಬ್ಬ ತಾಯಿ ಇನ್ನೊಂದು ರಾಜ್ಯದಲ್ಲಿ ಜೀವಿಸುವ ಕೂಸಿನ ಅಜ್ಜಅಜಿಗ್ಜೆ ಅದರ ಹೆಜ್ಜೆಗುರುತನ್ನು ಕಳುಹಿಸಿದಳು.

ಅದು ಹೇಗೆ ಕೆಲಸ ನಡಿಸುತ್ತದೆ?

ನಡಿಸುವ ವಿಧ ಸರಳ. ನಿಮಗೆ ಬೇಕಾಗಿರುವ ಸಾಧನಗಳೆಂದರೆ ಒಂದು ಟೆಲಿಫೋನ್‌, ಒಂದು ವಾಲ್‌ ಪ್ಲಗ್‌ ಮತ್ತು ಒಂದು ಫ್ಯಾಕ್ಸ್‌ ಯಂತ್ರ. ಪ್ರಮಾಣ ಪತ್ರವನ್ನು ಯಂತ್ರದೊಳಗೆ ಹಾಕಿದಾಗ ಅದರಲ್ಲಿರುವ ಸೂಕ್ಷ್ಮ ಪರಿಶೀಲಕ ಯಂತ್ರವು ಆ ಪುಟದಲ್ಲಿರುವ ಸರ್ವ ಕಪ್ಪು ಛಾಯೆಗಳನ್ನು ಓದಿ, ಅವನ್ನು ವಿದ್ಯುತ್‌ ಮಿಡಿತಗಳಾಗಿ ಭಾಷಾಂತರಿಸಿ, ಟೆಲಿಫೋನಿನ ಮೂಲಕ ರವಾನಿಸುತ್ತದೆ. ಅದನ್ನು ಸ್ವೀಕರಿಸುವ ಫ್ಯಾಕ್ಸ್‌ ಯಂತ್ರವು ಆ ಮಿಡಿತಗಳನ್ನು ಕಪ್ಪು ಛಾಯೆಗಳಾಗಿ ಪುನಃ ಭಾಷಾಂತರ ಮಾಡಿ ಯಥಾಪ್ರತಿಯನ್ನು ಮುದ್ರಿಸುತ್ತದೆ.

ಈ ಯಂತ್ರಕಲೆಯ ಮೂಲವೆಲ್ಲಿ?

ಅಲೆಗ್ಸಾಂಡರ್‌ ಬೆಯ್ನ್‌ ಎಂಬ ಒಬ್ಬ ಸ್ಕಾಟಿಷ್‌ ಗಡಿಯಾರ ತಯಾರಕ ಮತ್ತು ನಿರ್ಮಾಪಕನು 1843ರಲ್ಲಿ ಮೊದಲನೆಯ ಫ್ಯಾಕ್ಸನ್ನು ತಯಾರಿಸಿ ಅದರ ಸ್ವಾಮ್ಯಹಕ್ಕನ್ನು ಪಡೆದನು. ಇಂದಿನ ಮಟ್ಟವನ್ನು ನೋಡುವುದಾದರೆ ಅದೊಂದು ಒರಟಾದ ಪರೀಕ್ಷಕ ಯಂತ್ರ. ಒಂದು ತೂಗಾಡುವ ಲೋಲಕದಂಡದ ತುದಿಗೆ ಕಟ್ಟಿರುವ ವಿದ್ಯುತ್‌ ಲೇಖನಿಯು ಲೋಹದ ಅಚ್ಚುಮೊಳೆಯ ದಿಮ್ಮಿಯ ಮೇಲೆ ತೂಗಾಡುತ್ತಾ ಟೆಲಿಗ್ರಾಫ್‌ ತಂತಿಯ ಮೂಲಕ ವಿದ್ಯುತ್‌ ಮಿಡಿತಗಳನ್ನು ಕಳುಹಿಸಿತು. ತಂತಿ ಕಟ್ಟಿರುವ ಇನ್ನೊಂದು ಲೋಲಕ ದಂಡವು ಪ್ರತಿಯೊಂದು ಮಿಡಿತವನ್ನು ವಿದ್ಯುತ್‌ ಸೂಕ್ಷ್ಮಗ್ರಾಹಿ ಕಾಗದದ ಮೇಲೆ ಕಪ್ಪು ಕಲೆಯಾಗಿ ಭಾಷಾಂತರಿಸಿತು.

ಫ್ಯಾಕ್ಸ್‌ಗಳು 1907ರೊಳಗೆ, ಸಾಧಾರಣ ಮುದ್ರಣವನ್ನು ಸ್ತಂಭ ದಂಡದ ಸುತ್ತಲು ಕಟ್ಟಿದ ಕಾಗದದಿಂದಲೇ ಓದಬಲ್ಲ ತಿರುಗು ಸ್ತಂಭ ದಂಡ ಮತ್ತು ವಿದ್ಯುತ್ಕೋಶವನ್ನು ಉಪಯೋಗಿಸುವಷ್ಟು ಬೆಳೆದವು. ಆದರೂ ರೇಡಿಯೊ ಸಂಕೇತಗಳ ರವಾನೆ ನಿಧಾನ ಮಾತ್ರವಲ್ಲ, ಅನೇಕ ವೇಳೆ ತಡೆಗೊಳಗಾಗುತ್ತಿತ್ತು.

ಫೈಬರ್‌ ಆಪ್ಟಿಕ್ಸ್‌, ಡಿಜಿಟಲ್‌ ರವಾನೆ, ಮತ್ತು ಸಿಗ್ನಲ್‌ ಕಂಪ್ರೆಶನ್‌, ಇವುಗಳನ್ನು ಉಪಯೋಗಿಸಿ ವಿಶೇಷ ಪರಿಸ್ಥಿತಿಯಲ್ಲಿ ಒಂದು ಪುಟವನ್ನು ಮೂರು ಸೆಕೆಂಡುಗಳಷ್ಟೂ ವೇಗವಾಗಿ ಓದಿ ರವಾನಿಸುವ ಫ್ಯಾಕ್ಸ್‌ಗಳನ್ನು 1980ಗಳ ಯಂತ್ರಕಲೆಯು ಸಾಧ್ಯ ಮಾಡಿತು. ಪ್ರಚಲಿತವಾಗಿ, ಅತಿ ವ್ಯಾಪಕವಾಗಿ ಉಪಯೋಗಿಸುತ್ತಿರುವ ಯಂತ್ರಗಳಿಗೆ ಪುಟವೊಂದನ್ನು 45 ಸೆಕೆಂಡುಗಳಲ್ಲಿ ರವಾನಿಸುವ ವೇಗವಿದೆ.

ಫ್ಯಾಕ್ಸ್‌ ಹೇಗೆ ಉಪಯೋಗಿಸಲ್ಪಡುತ್ತದೆ?

ವಾಡಿಕೆಯಾಗಿ ರಾತ್ರಿಕಾಲದ ಸಂದೇಶ ವಾಹಕರಿಂದ ಯಾ ಟಪಾಲಿನಿಂದ ಕಳುಹಿಸಲ್ಪಡುತ್ತಿದ್ದ ಸಮಯದಲ್ಲಿ ಮುಟ್ಟಬೇಕಾಗಿದ್ದ ಮಾಹಿತಿಯನ್ನು ಈಗ ಕೆಲವೇ ನಿಮಿಷಗಳಲ್ಲಿ ಮುಟ್ಟಿಸಬಹುದು. ಮುಖ್ಯ ಪ್ರಮಾಣ ಪತ್ರಗಳನ್ನು ಇನ್ನೊಬ್ಬ ವ್ಯಕ್ತಿಗೆ ಫ್ಯಾಕ್ಸ್‌ ಮಾಡುವಲ್ಲಿ, ಸುಮಾರು ಒಂದು ಲಕೋಟೆಯಲ್ಲಿ ವಿಳಾಸ ಬರೆದು, ಸ್ಟ್ಯಾಂಪನ್ನು ಹಚ್ಚಿ, ಅದನ್ನು ಟಪಾಲಿಗೆ ಹಾಕುವಷ್ಟೇ ಸಮಯದೊಳಗೆ ಅದು ಆ ವ್ಯಕ್ತಿಯ ಕೈಯಲ್ಲಿರುವುದು.

ಇತ್ತೀಚೆಗೆ, ಕೆನಡದಲ್ಲಿ ಒಂದು ಮಗುವಿಗೆ ಗುರುತರವಾದ, ಜೀವಾಪಾಯವಿರುವ ರಕ್ತ ಚಿಕಿತ್ಸೆ ಬೇಕಾಗುವ ರೋಗವಿದೆಯೆಂದು ನಿರ್ಣಯ ಮಾಡಲ್ಪಟ್ಟಿತು. ಯೆಹೋವನ ಸಾಕ್ಷಿಗಳಾಗಿದ್ದ ಹೆತ್ತವರು ಯಾವ ಪರಿಸ್ಥಿತಿಯಲ್ಲಿಯೂ ರಕ್ತವನ್ನು ಉಪಯೋಗಿಸಬಾರದೆಂಬ ತಮ್ಮ ಧಾರ್ಮಿಕ ನಂಬಿಕೆಯಲ್ಲಿ ಸ್ಥಿರವಾಗಿದ್ದರು. ವೈದ್ಯಕೀಯ ಸಂಶೋಧಕರನ್ನು ಸಂಪರ್ಕಿಸಿ, ಕೆಲವೇ ನಿಮಿಷಗಳೊಳಗೆ, ರಕ್ತರಹಿತ ಅನ್ಯ ಚಿಕಿತ್ಸೆಯನ್ನು ಕೊಡುವ ವಿಷಯವನ್ನು ವೈದ್ಯಕೀಯ ತಂಡವು ಮೌಲ್ಯಮಾಪನ ಮಾಡುವಂತೆ ಲೇಖನಗಳನ್ನು ಮುಖ್ಯ ವೈದ್ಯರಿಗೆ ಫ್ಯಾಕ್ಸ್‌ ಮಾಡಲಾಯಿತು. ಹೆತ್ತವರ ಅಪೇಕ್ಷೆಯನ್ನು ಗೌರವಿಸಲಾಯಿತು ಮತ್ತು ಮಗುವಿಗೆ ಸಫಲವಾದ ಚಿಕಿತ್ಸೆ ನಡೆಯಿತು. ಆಸ್ಪತ್ರೆಯ ವೈದ್ಯಕೀಯ ತಂಡಗಳು ವೈದ್ಯಕೀಯ ಕ್ರಮ ವಿಹಿತ ವರದಿಯಲ್ಲಿ ಭಾಗಿಗಳಾಗಲು ಫ್ಯಾಕ್ಸನ್ನು ಉಪಯೋಗಿಸಿದ ವಿಷಯವು ಕುಟುಂಬಕ್ಕೆ ತುಂಬ ಹಿಡಿಸಿತು.

ವಾರ್ತಾ ಮಾಧ್ಯಮಗಳೂ ಫ್ಯಾಕ್ಸನ್ನು ಕಾರ್ಯಸಾಧಕವಾಗಿ ಉಪಯೋಗಿಸಿವೆ. 1989ರಲ್ಲಿ ಚೈನಾದ ಬೀಜಿಂಗ್‌ನ ಟಿಯೆನನ್‌ಮೆನ್‌ ಚೌಕದಲ್ಲಿ ನಡೆದ ವಿದ್ಯಾರ್ಥಿಗಳ ದಂಗೆಯನ್ನು ಚೈನಾದ ಸೈನ್ಯವು ಅಡಗಿಸಿದಾಗ, ಸರಕಾರವು ಟೆಲಿವಿಷನ್‌, ರೇಡಿಯೊ ಮತ್ತು ಮುದ್ರಣಮ್ನ ನಿಯಂತ್ರಿಸಿದರೂ ಅಂತಾರಾಷ್ಟ್ರೀಯ ವ್ಯವಹಾರವನ್ನು ಮುಂದುವರಿಸುವ ಸಲುವಾಗಿ ಟೆಲಿಫೋನನ್ನು ಸಂಪರ್ಕವನ್ನು ತೆರೆದಿಡಲಾಗಿತ್ತು. ಹೀಗೆ, ವರದಿಗಾರರು ಈ ವಾರ್ತೆ ಹಾಗೂ ಚಿತ್ರಗಳನ್ನು ಚೈನಾದ ಒಳಗೂ ಹೊರಗೂ ಕಳುಹಿಸುವಂತಾಯಿತು.

ಈ ಯಂತ್ರಕಲೆಯ ಪೂರ್ತಿ ಪ್ರಯೋಜನವನ್ನು ಜಾಹೀರಾತು ಉದ್ಯಮವೂ ಪಡೆದಿದೆ. ಫ್ಯಾಕ್ಸ್‌ ಜಾಹೀರಾತನ್ನು ಕಳುಹಿಸುವಾಗ, “ಈ ಸಂದೇಶಗಳಿಗೆ ಅವು ತತ್‌ಕ್ಷಣ ಮಾಡಬೇಕಾದ ಜರೂರಿಯ ವಿಷಯಗಳೆಂಬ ಅರ್ಥ ಬರುತ್ತದೆ. ಅವನ್ನು ತತ್‌ಕ್ಷಣ ಓದಲಾಗುತ್ತದೆ” ಎಂದು ಒಬ್ಬ ಮಾರ್ಕೆಟಿಂಗ್‌ ಮ್ಯಾನೆಜರ್‌ ಹೇಳಿದರು. ಆದರೆ ಫ್ಯಾಕ್ಸಿನ ಅನೇಕ ಧಣಿಗಳ ಅಭಿಪ್ರಾಯವೇನಂದರೆ ಇಂಥ ಕಚಡ ಫ್ಯಾಕ್ಸ್‌ ಅವರ ಯಂತ್ರಗಳನ್ನು ಈ ಕಾರಣದಿಂದ ಬಂಧಿಸಿ ಇಡುವುದರಿಂದ ತಮ್ಮ ವ್ಯಾಪಾರಕ್ಕೆ ಅಗತ್ಯವಾಗಿರುವ ಮಾಹಿತಿಯನ್ನು ಬರಗೊಡಿಸುವುದಿಲ್ಲ.

ಈ ಮೇಲೆ ಸೂಚಿಸಿರುವಂತೆ, ಫಾಕ್ಸಿನ ಉಪಯೋಗಕ್ಕೆ ನಿಮ್ಮ ಭಾವನೆಯೇ ಮೇರೆಯಾಗಿದೆ. ಆದರೂ, ಹೊಸತಾದ ಹೆಚ್ಚಿನ ಯಂತ್ರಕಲೆಗಳಂತೆ, ಅದನ್ನು ದುರುಪಯೋಗಿಸುವ ಜನರಿದ್ದಾರೆ.

ಫಾಕ್ಸ್‌ನ ಭವಿಷ್ಯವೇನು?

ಫಾಕ್ಸ್‌ಗಳು ಹೆಚ್ಚು ವೇಗವಾಗಿಯೂ ಚಾಕಚಕ್ಯವಾಗಿಯೂ ಇರುವುವು ಎಂಬುದು ಒಬ್ಬ ಕಂಪ್ಯೂಟರ್‌ ಇಂಜಿನಿಯರನ ಮುನ್ನರಿವು. ಡೆಸ್ಕ್‌ಟಾಪ್‌ ಯಂತ್ರಗಳು ವ್ಯಾಪಾರದಲ್ಲಿ ಸಾಮಾನ್ಯವಾಗುವಾಗ, ಆಂತರಿಕ ಟಪಾಲಿನ ಬದಲು ಆಂತರಿಕ ಫಾಕ್ಸ್‌ ಸಂದೇಶ ಅದರ ಸ್ಥಾನಭರ್ತಿ ಮಾಡುವುದು. ಪೂರ್ಣ ವರ್ಣರಂಜಿತ ಯಥಾಪ್ರತಿಗಳು ಹಾಗೂ ಸುಲಭವಾಗಿ ಒಯ್ಯಬಹುದಾದ ಫ್ಯಾಕ್ಸ್‌ ಯಂತ್ರಗಳು ಈಗ ರಚಿಸಲ್ಪಡುತ್ತಾ ಇವೆ. ಪರ್ಸನಲ್‌ ಕಂಪ್ಯೂಟರಿನಿಂದ ನಡೆಸಲ್ಪಡುವ ಕಾಪಿಯರ್‌/ಪ್ರಿಂಟರ್‌/ಫ್ಯಾಕ್ಸ್‌ ಯಂತ್ರವೂ ಒಂದು ಭಾವೀ ಪ್ರತೀಕ್ಷೆ. ಒಬ್ಬ ದೊಡ್ಡ ತಯಾರಕರು ಒಂದು ಮೆಮೊ ಪ್ಯಾಡಿನಷ್ಟು ಗಾತ್ರದ 100 ಡಾಲರುಗಳ ಫ್ಯಾಕ್ಸ್‌ ಯಂತ್ರ ದೊರೆಯಲಿರುವುದು ಎಂದು ಮುಂತಿಳಿಸುತ್ತಾರೆ.

ಟೆಲಿಫೋನ್‌ ಯಂತ್ರವು ಇನ್ನೂ ಬಾಯಿಮಾತಿನ ಸಂಪರ್ಕವನ್ನು ಒಡನೆ ಒದಗಿಸುತ್ತದಾದರೂ, ಇಂಥ ಸಂದೇಶಗಳನ್ನು ಕೆಲವು ವೇಳೆ ಅನುವದಿಸಲಾಗುತ್ತದೆ ಅಥವಾ ಅಪಾರ್ಥ ಮಾಡಲಾಗುತ್ತದೆ. ಆದರೆ ಫಾಕ್ಸ್‌ ಯಂತ್ರ ನಿಜ ಸಂದೇಶವನ್ನು ಮುದ್ರಿಸಿ—ಮತ್ತು ವೇಗವಾಗಿ—ರವಾನಿಸುತ್ತದೆ. ಇದು ಈಗ ನಮ್ಮ ಜೀವನದಲ್ಲಿ ಒಂದು ಪ್ರಾಮುಖ್ಯ ಸಂಪರ್ಕ ಸಾಧನ. ಫಾಕ್ಸ್‌ ಈಗ ಪ್ರಾಪ್ತ ವಯಸ್ಸಿಗೆ ಬಂದಿರುವುದು ಮಾತ್ರವಲ್ಲ, ಅದು ನೆಲಸಿಯೂ ಬಿಟ್ಟಿದೆ. (g91 1/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ