ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 10/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವ್ಯಾಯಾಮ ಮತ್ತು ನಿದ್ದೆ
  • ಎಳೆಯ ಕುಡುಕರು
  • ಅಪಾಯಕರ ವಾಹನ ನಡೆಸುವಿಕೆ
  • ಸಿಜೇರಿಅನ್‌ ಜನನಗಳು ಸುರಕ್ಷಿತವಾಗಿವೆಯೋ?
  • ಸುಸಂಘಟಿತವಾದ ಧರ್ಮವನ್ನು ಹದಿವಯಸ್ಕರು ನಿರಾಕರಿಸುತ್ತಾರೆ
  • ಮಾರಕ ಕೋಣೆಗಳು
  • ನಿದ್ರೆ ರೋಗ ಮತ್ತು ರಕ್ತ ಪೂರಣ
  • ದೇವರಿಗೆ ಫ್ಯಾಕ್ಸ್‌ ಸಂದೇಶಗಳೋ?
  • ಇಪ್ಪತ್ತನೆಯ ಶತಮಾನದ ಫ್ಯಾ ಕ್ಸ್‌
    ಎಚ್ಚರ!—1992
  • ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
    ಎಚ್ಚರ!—1995
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಇನ್ನಷ್ಟು
ಎಚ್ಚರ!—1993
g93 10/8 ಪು. 28-29

ಜಗತ್ತನ್ನು ಗಮನಿಸುವುದು

ವ್ಯಾಯಾಮ ಮತ್ತು ನಿದ್ದೆ

“ವಯಸ್ಸಾದ ಪುರುಷರಿಗೆ, ಉತ್ತಮವಾದ ನಿದ್ದೆಗಾಗಿ ವ್ಯಾಯಾಮ ಪರಿಹಾರವಾಗಿರಬಹುದು,” ಎಂದು ಆರ್‌ತ್ರೈಟ್ಸ್‌ ಟುಡೆ ಎಂಬ ಪತ್ರಿಕೆಯು ವರದಿಸುತ್ತದೆ. ಅಮೆರಿಕದ ಉತ್ತರ ಕ್ಯಾರೊಲಿನದಲ್ಲಿ ನಡೆಸಲಾದ ಇತ್ತೀಚೆಗಿನ ಒಂದು ಅಧ್ಯಯನದಲ್ಲಿ, 60ರಿಂದ 72 ವರ್ಷಗಳ ವಯೋಮಿತಿ ಇರುವ 24 ಪುರುಷರ ಒಂದು ಗುಂಪನ್ನು ಎರಡು ಗುಂಪುಗಳಾಗಿ ವಿಭಾಜಿಸಲಾಯಿತು. ಕಡಿಮೆ ಪಕ್ಷ ಒಂದು ವರ್ಷಕ್ಕಾದರೂ, ಒಂದು ಗುಂಪು ವಾರಕ್ಕೆ ಮೂರು ಅಥವಾ ಹೆಚ್ಚಿಗೆ ಸಲ ಹುರುಪಿನ ವ್ಯಾಯಾಮ ಮಾಡಿತು; ಇನ್ನೊಂದು ಗುಂಪು ಅತ್ಯಂತ ಕಡಿಮೆಯಾಗಿ ಮತ್ತು ಅಕ್ರಮವಾಗಿ ವ್ಯಾಯಾಮ ಮಾಡಿತು. ಕಡಿಮೆ ವ್ಯಾಯಾಮ ಮಾಡಿದ ಪುರುಷರಿಗಿಂತ ಕ್ರಮವಾಗಿ ಮತ್ತು ಹುರುಪಿನ ವ್ಯಾಯಾಮ ಮಾಡಿದ ಪುರುಷರು ಸರಾಸರಿ ಎರಡು ಪಟ್ಟಷ್ಟು ಬೇಗನೆ ನಿದ್ದೆ ಹೋದರೆಂದು ಕಂಡುಕೊಳ್ಳಲಾಯಿತು. ಅವರನ್ನು ವ್ಯಾಯಾಮ ಮಾಡಿದ ದಿನವಾಗಲಿ ಯಾ ಇನ್ನೊಂದು ದಿನವಾಗಲಿ ಪರೀಕೆಮ್ಷಾಡಲಾದಾಗ ಇದು ಸತ್ಯವಾಗಿತ್ತು. “ರಾತ್ರಿ ಎಚ್ಚರವಾಗಿರುವುದರಲ್ಲಿ ಅವರು ಕಡಿಮೆ ಸಮಯವನ್ನು ವ್ಯಯಿಸಿದರು,” ಎಂಬುದಾಗಿ ಪತ್ರಿಕೆಯು ಕೂಡಿಸುತ್ತದೆ.

ಎಳೆಯ ಕುಡುಕರು

“ಬ್ರಿಟನ್‌ನಲ್ಲಿ ಸುಮಾರು 90,000 ಮಕ್ಕಳನ್ನು ವಿಪರೀತವಾದ ಕುಡುಕರೆಂದು ಪರಿಗಣಿಸಲಾಗುತ್ತದೆ,” ಎಂಬುದಾಗಿ ಲಂಡನ್‌ನಿನ ದ ಸಂಡೆ ಟೈಮ್ಸ್‌ ವರದಿಸುತ್ತದೆ. ಬ್ರಿಟಿಷ್‌ ಸರಕಾರವು ಪುರುಷರಿಗೆ ಮದ್ಯಪಾನದ 21 ಏಕಮಾನಗಳು ಮತ್ತು ಸ್ತ್ರೀಯರಿಗೆ ಮದ್ಯಪಾನದ 14 ಏಕಮಾನಗಳಷ್ಟು ಗರಿಷ್ಠವನ್ನು ಒಂದು ವಾರಕ್ಕೆ ನಿಗದಿಪಡಿಸುತ್ತದೆ. ಏಕಮಾನವು, ಒಂದು ಗ್ಲಾಸು ವೈನ್‌ ಅಥವಾ ತೀಕ್ಷೈ ಮದ್ಯಪಾನದ ಒಂದು ಅಳತೆ ಯಾ ಬಿಯರ್‌ನ 1⁄4 ಗ್ಯಾಲನ್‌ನನ್ನು ಸೂಚಿಸುತ್ತದೆ. ವಯಸ್ಕ ಪುರುಷರಿಗಾಗಿ ಶಿಫಾರಸ್ಸು ಮಾಡಲಾದ ವಾರದ ಮಿತಿಗಿಂತ ಹೆಚ್ಚನ್ನು 15 ವರ್ಷ ಪ್ರಾಯದ ಹುಡುಗರಲ್ಲಿ 11.5 ಪ್ರತಿಶತ ಹುಡುಗರು ಕುಡಿಯುತ್ತಿದ್ದರೆಂದು 18,000 ಬ್ರಿಟಿಷ್‌ ಶಾಲಾಮಕ್ಕಳ ಇತ್ತೀಚೆಗಿನ ಒಂದು ಅಧ್ಯಯನವು ಕಂಡಿತು. ಹುಡುಗಿಯರೊಳಗೆ, 14 ಮತ್ತು 15 ವರ್ಷ ಪ್ರಾಯದ 20 ಹುಡುಗಿಯರಲ್ಲಿ ಒಬ್ಬಳು ವಯಸ್ಕ ಸ್ತ್ರೀಯರಿಗಾಗಿ ಇಡಲಾದ ಮಿತಿಗಿಂತ ಹೆಚ್ಚನ್ನು ಕುಡಿಯುವುದಾಗಿ ಒಪ್ಪಿಕೊಂಡಳು. ಕಳವಳಗೊಳಿಸುವ ಈ ಸಂಖ್ಯೆಗಳು ಸಮಸ್ಯೆಯ ನಿಜ ಪ್ರಮಾಣವನ್ನು ಕಡಿಮೆಯಾಗಿ ಎಣಿಸುತ್ತವೆ.

ಅಪಾಯಕರ ವಾಹನ ನಡೆಸುವಿಕೆ

ರಸ್ತೆ ನಕ್ಷೆಗಳನ್ನು ಓದುವುದು, ಟೇಪ್‌ ರೆಕಾರ್ಡರ್‌ಗಳಲ್ಲಿ ಮಾತಾಡುವುದು, ಸ್ಥಾಯಿಯಲ್ಲದ ದೂರವಾಣಿಗಳನ್ನು ಉಪಯೋಗಿಸುವುದು, ಸ್ತ್ರೀಯರು ತಮ್ಮ ಕಾಲುಚೀಲಗಳನ್ನು ಬದಲಾಯಿಸುವುದು. ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆಗಳಲ್ಲಿ ಒಂದಾದ ದ ಸ್ಟಾರ್‌ನ ಅನುಸಾರ, ಕೆಲವೊಮ್ಮೆ ಪ್ರತಿ ಗಂಟೆಗೆ 100 ಕಿಲೋಮೀಟರುಗಳಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ನಡೆಸುತ್ತಾ, ಜನರು ಮಾಡುವ ಕೆಲವೊಂದು ವಿಷಯಗಳಾಗಿವೆ. ವಾಹನ ನಡೆಸುವಾಗ ಜನರು ಎರಡೂ ಕೈಗಳಿಂದ ತಮ್ಮ ಹಲ್ಲುಗಳನ್ನು ಶುಚಿಮಾಡುವುದನ್ನು ಅವನು ಅನೇಕ ಬಾರಿ ನೋಡಿರುತ್ತಾನೆಂದು ಒಬ್ಬ ಸುರಕ್ಷಾ ಅಧಿಕಾರಿಯು ಗಮನಿಸುತ್ತಾನೆ! ಡ್ರೈವರುಗಳು ತಮ್ಮ ಹಲ್ಲುಗಳನ್ನು ಉಜ್ಜುತ್ತಾ ತೊಳೆಯುತ್ತಾ ಇರುವುದನ್ನು ಕೂಡ ನೋಡಲಾಗಿದೆ. ಒಬ್ಬಾಕೆ ಸ್ತ್ರೀಯು ಅವಳ ಮಗನನ್ನು ಶಾಲೆಗೆ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಅವನ ಕೂದಲನ್ನು ಕತ್ತರಿಸಿದಳು. ಪ್ರತಿ ಗಂಟೆ 90 ಕಿಲೋಮೀಟರುಗಳ ವೇಗದಲ್ಲಿ ವಾಹನವನ್ನು ನಡೆಸುವಾಗ, ಒಬ್ಬಾಕೆ ತಾಯಿಯು ಅವಳ ಮಗುವಿನ ಚೌಕವನ್ನು ಬದಲಾಯಿಸುತ್ತಿರುವುದನ್ನು ಗಮನಿಸಲಾಯಿತು. ವಾಹನ ನಡೆಸುವವರು ಇಂಥ ಗಂಡಾಂತರಗಳಿಗೆ ಸಿದ್ಧವಾಗಿರುತ್ತಾರೆ ಯಾಕೆ? ಕಾರಿನಲ್ಲಿ ವ್ಯಯಿಸಿದ ಸಮಯದ ಭರ್ತಿಮಾಡಲು ಉಪಯೋಗವನ್ನು ವಾಹನ ನಡೆಸುವವರು ಮಾಡುವಂತೆ, ಬಹುದೂರದ ಪ್ರಯಾಣಗಳು ಮತ್ತು ಸಂಚಾರ ಮಾರ್ಗಗಳ ಕಿಕ್ಕಿರಿದಿರುವಿಕೆಯು ಪ್ರಲೋಭನಗೊಳಿಸಬಹುದೆಂದು ಒಬ್ಬ ಅಧಿಕಾರಿಯು ಹೇಳಿದನು. ಈ ಉನ್ಮಾದಗಳು ಗಂಭೀರವಾದ ಅಪಘಾತಗಳಲ್ಲಿ ಫಲಿಸಬಲ್ಲವು ಎಂದು ಅವನು ಸೂಚಿಸಿದನು.

ಸಿಜೇರಿಅನ್‌ ಜನನಗಳು ಸುರಕ್ಷಿತವಾಗಿವೆಯೋ?

ಶಸ್ತ್ರಚಿಕಿತ್ಸೆಯು ಸುರಕ್ಷಿತವಾಗಿರುವುದು ಮತ್ತು ನೋವು ಕಡಿಮೆಯಾಗಿರುವುದು ಎಂಬ ನಂಬಿಕೆಯಲ್ಲಿ ಅನೇಕ ಸ್ತ್ರೀಯರು ಸಿಜೇರಿಅನ್‌ನ ಮೂಲಕ ಜನ್ಮ ಕೊಡುವುದನ್ನು ಆರಿಸಿಕೊಳ್ಳುತ್ತಾರೆ. ಷೋರ್‌ನೆಲ್‌ ಡೊ ಬ್ರಾಜೆಲ್‌ನ ಅನುಸಾರ, ಅನೇಕ ವೈದ್ಯರೂ ಕೂಡ ಒಂದು ಸಿಜೇರಿಅನ್‌ ಮಾಡಲು ಇಷ್ಟಪಡುತ್ತಾರೆ ಯಾಕಂದರೆ, “ಸಾಮಾನ್ಯವಾಗಿ ಒಂದು ಸಾಧಾರಣವಾದ ಜನ್ಮವು ಸರಾಸರಿ 8ರಿಂದ 12 ತಾಸುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಿಗದಿತವಾದ ತಾರೀಖಿನೊಂದು ಸಂಭವಿಸುವುದಿಲ್ಲ, ಆದರೆ ಶಸ್ತ್ರಚಿಕಿತ್ಸೆಯನ್ನು ಯೋಜಿಸ ಸಾಧ್ಯವಿದೆ ಮತ್ತು ಅತಿ ಹೆಚ್ಚು ಅಂದರೆ ಒಂದು ತಾಸನ್ನು ತೆಗೆದುಕೊಳ್ಳುತ್ತದೆ.” ಹಾಗಿದ್ದರೂ, ಪ್ರಸವವಿದ್ಯಾಪಾರಂಗತರಾದ ಫರ್‌ನಾನ್‌ಡೊ ಎಸ್ಟ್‌ಲಿಟಾ ಲಿನ್ಸ್‌ ಹೀಗೆ ಹೇಳಿರುವುದನ್ನು ನಮೂದಿಸಲಾಗಿದೆ: “ಸೋಂಕುಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರಣ ರಕ್ತಸ್ರಾವದಿಂದಾಗುವ ಹಾನಿಯ ಸಂಖ್ಯೆಯು ಸಿಜೇರಿಅನ್‌ ಆದ ಸ್ತ್ರೀಯರಲ್ಲಿ ಬಹಳ ಹೆಚ್ಚಾಗಿದೆ.” ತಾಯಂದಿರಲ್ಲಿ ಮರಣದ ಪ್ರಮಾಣವು “ಸಾಧಾರಣವಾದ ಹೆರಿಗೆಯ ಮೂಲಕ ಪ್ರತಿ 100 ಸಾವಿರಕ್ಕೆ 43 ಆದಾಗ್ಯೂ ಸಿಜೇರಿಅನ್‌ ಮೂಲಕ ಅದು ಪ್ರತಿ 100 ಸಾವಿರಕ್ಕೆ 95 ಆಗಿತ್ತು,” ಎಂಬುದಾಗಿ ಬ್ರೆಸೀಲಿಯನ್‌ ಸಂಶೋಧನೆಯು ತೋರಿಸಿತು. (g93 6/22)

ಸುಸಂಘಟಿತವಾದ ಧರ್ಮವನ್ನು ಹದಿವಯಸ್ಕರು ನಿರಾಕರಿಸುತ್ತಾರೆ

ಕನೇಡಿಅನ್‌ ಹದಿವಯಸ್ಕರು ಧಾರ್ಮಿಕ ನಾಯಕರುಗಳಿಗೆ ಗಂಭೀರವಾದೊಂದು ಸಂದೇಶವನ್ನು ಕಳುಹಿಸುತ್ತಿದ್ದಾರೆ: ದೇವರ ವಾಕ್ಯದ ಬೋಧಕರೋಪಾದಿ ವೈದಿಕರು ತಪ್ಪಿಹೋಗಿದ್ದಾರೆ. ಹಿಂದೆಂದಿಗಿಂತಲೂ ಇಂದು ಅತಿ ಕಡಿಮೆ ಹದಿವಯಸ್ಕರು ಸುಸಂಘಟಿತವಾದ ಧರ್ಮವನ್ನು ಬೆಂಬಲಿಸುತ್ತಾರೆಂದು ಇತ್ತೀಚೆಗಿನ ಒಂದು ನ್ಯಾಷನಲ್‌ ಸಮೀಕ್ಷೆಯು ಪ್ರಕಟಿಸುತ್ತದೆ. ಒಂದು ಧಾರ್ಮಿಕ ಗುಂಪಿನೊಂದಿಗೆ ಒಳಗೂಡುವಿಕೆಯು ಅವರ ಜೀವಿತಗಳಲ್ಲಿ ಪ್ರಾಮುಖ್ಯವಾಗಿದೆ ಎಂದು ಕೇವಲ 10 ಪ್ರತಿಶತ ಹದಿವಯಸ್ಕರು ನಂಬುತ್ತಾರೆ. ಆದರೂ, “80ಕ್ಕಿಂತಲೂ ಹೆಚ್ಚಿನ ಪ್ರತಿಶತವು ಜನನ, ಮದುವೆ ಮತ್ತು ಮರಣಕ್ಕೆ ಸಂಬಂಧಿಸಿದ ಆಚರಣೆಗಳಿಗಾಗಿ ಸುಸಂಘಟಿತವಾದ ಧರ್ಮಕ್ಕೆ ತಿರುಗುತ್ತಾರೆ,” ಎಂದು ದ ಟೊರೆಂಟೊ ಸ್ಟಾರ್‌ ವರದಿಸುತ್ತದೆ. ಆಶ್ಚರ್ಯಕರವಾಗಿ, 80 ಪ್ರತಿಶತವು ದೇವರ ಅಸ್ತಿತ್ವದಲ್ಲಿಯೂ ಕೂಡ ನಂಬುತ್ತಾರಾದರೂ, 60 ಪ್ರತಿಶತವು ಮರಣಾನಂತರ ಜೀವಿತದಲ್ಲಿ ನಂಬಿಕೆಯನ್ನು ಇಡುತ್ತಾರೆ. “ವೈದಿಕರಿಗಿಂತಲೂ ಹೆಚ್ಚಾಗಿ ಹದಿವಯಸ್ಕರು ತಮ್ಮ ಸಮವಯಸ್ಕರು, ಮಾಧ್ಯಮ, ಚಲನ ಚಿತ್ರಗಳು ಮತ್ತು ಜನಪ್ರಿಯವಾದ ಸಂಗೀತದ ಮೂಲಕ ಪ್ರಭಾವಿತರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ,” ಎಂಬುದಾಗಿ ಸ್ಟಾರ್‌ ಕೂಡಿಸುತ್ತದೆ. ಜೀವನದ ಮುಖ್ಯ ವಿವಾದಾಂಶಗಳ ಕುರಿತಾದ ಮಾರ್ಗದರ್ಶನಕ್ಕಾಗಿ, ಹದಿವಯಸ್ಕರ ಒಂದು ಸಣ್ಣ ಗುಂಪು ಮಾತ್ರ ಚರ್ಚು ನಾಯಕರುಗಳ ಕಡೆಗೆ ನೋಡುವುದು.

ಮಾರಕ ಕೋಣೆಗಳು

“ಮಾನವ ನಿರ್ಮಿತ ಮಲಿನ ಮಾಡುವ ಬೇರೆ ಯಾವುದೇ ಅಂಶಕ್ಕಿಂತ ಪರಿಸರದ ತಂಬಾಕಿನ ಹೊಗೆಯು ಹೆಚ್ಚಿನ ಮರಣಗಳನ್ನು ಉಂಟುಮಾಡುತ್ತದೆ,” ಎಂಬುದಾಗಿ ದಕ್ಷಿಣ ಆಫ್ರಿಕದ ಕೇಪ್‌ ಟೌನ್‌ನಲ್ಲಿ ಆರೋಗ್ಯದ ವೈದ್ಯಕೀಯ ಅಧಿಕಾರಿಯಾದ ಡಾ. ಮೈಕಲ್‌ ಪಾಪ್‌ಕಿಸ್‌ ಹೇಳುತ್ತಾರೆ. ಸಾಕಾಗದ ವಾಯುಸಂಚಾರವು ಅದಕ್ಕೆ ಸಮಸ್ಯೆಯಾಗಿದೆ ಎಂದು ಹೇಳಿಕೊಂಡ, ದಕ್ಷಿಣ ಆಫ್ರಿಕದ ತಂಬಾಕಿನ ಸಂಸ್ಥೆಯ ಮೂಲಕ ವಿತರಿಸಲಾದ ಒಂದು ಲಘು ಲೇಖನಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು. “ಶುದ್ಧ ಹವೆಗಾಗಿರುವ ಸರಾಸರಿ ಹವೆ ಗುಣಮಟ್ಟಗಳನ್ನು ಸಾಮಾನ್ಯವಾಗಿ ಕಟ್ಟಡಗಳಲ್ಲಿ ತಂಬಾಕು ಹೊಗೆಯ ಸಾಂದ್ರತೆಗಳು ಮೀರುತ್ತವೆ” ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಹೃದಯ ಅಪಘಾತಗಳು, ಅಷ್ಟೇ ಅಲ್ಲದೆ ಮಕ್ಕಳಲ್ಲಿ ಕುಂಠಿತವಾದ ಶ್ವಾಸಕೋಶದ ಬೆಳವಣಿಗೆಯಲ್ಲಿ ಫಲಿಸಬಲ್ಲದು. ಒಂದು ಕಟ್ಟಡದಲ್ಲಿ ತಂಬಾಕು ಹೊಗೆಯಿಂದ ಅದು ಸಂಪೂರ್ಣವಾಗಿ ಸ್ವಚ್ಛವಾಗಿರುವಂತೆ, ಹವೆಯನ್ನು ಸೋಸುವ ಅಥವಾ ವಾಯುಸಂಚಾರ ಮಾಡುವ ಯಾವುದೇ ವಿಧಾನವು ಇರುವುದಿಲ್ಲ ಎಂದು ಅವರು ಹೇಳಿದರು. “ಹವೆಯನ್ನು ಮಲಿನ ಮಾಡುವ ಅಂಶಗಳನ್ನು ಅವುಗಳ ಉಗಮದಲ್ಲಿಯೇ ಸೀಮಿತಗೊಳಿಸುವುದು ಹವೆಯನ್ನು ಸ್ವಚ್ಛವಾಗಿ ಇಡುವ ಅತ್ಯಂತ ಪರಿಣಾಮಕಾರಿಯಾದ ತಂತ್ರವಾಗಿದೆ,” ಎಂದು ಅವರು ಸೇರಿಸಿದರು.

ನಿದ್ರೆ ರೋಗ ಮತ್ತು ರಕ್ತ ಪೂರಣ

ವಾರ್ಷಿಕವಾಗಿ 20,000 ಬ್ರೆಸೀಲಿಯನರು ನಿದ್ರೆ ರೋಗದಿಂದ ಸೋಂಕಿಸಲ್ಪಡುತ್ತಾರೆ. ಹಾಗಿದ್ದರೂ, ನ್ಯಾಷನಲ್‌ ಹೆಲ್ತ್‌ ಫೌಂಡೇಷನ್‌ನ ಅಧ್ಯಕ್ಷರಾದ ಜೋಒ ಕಾರ್ಲೋಸ್‌ ಡೈಎಸ್‌, ಗ್ಲೋಬೊ ಸಿಎನ್‌ಸಿಯಾನಲ್ಲಿ ಹೀಗೆ ಹೇಳುತ್ತಾರೆ: “ಪರಿಸ್ಥಿತಿಯು ಹೆಚ್ಚು ಕೆಟ್ಟದಾಗಬಲ್ಲದು ಯಾಕಂದರೆ, ದೊಡ್ಡ ಪಟ್ಟಣಗಳಿಗೆ ಗ್ರಾಮದ ಜನಸಂಖ್ಯೆಗಳ ತೀವ್ರವಾದ ವಲಸೆಯಿಂದಾಗಿ ರೋಗವು ನಗರ ಪ್ರದೇಶಗಳಲ್ಲಿಯೂ ಹರಡಬಲ್ಲದು.” ರೋಗವನ್ನು ಉಂಟುಮಾಡುವ ಪರೋಪಜೀವಿಯು ‘ಹೃದಯವನ್ನು ಸೇರಿ ಯಾವುದೇ ಅಂಗದಲ್ಲಿ ನೆಲಸಬಹುದಾದರ್ದಿಂದ, ರೋಗಿಯು ಅಂತಿಮವಾಗಿ ಹೃದಯದ ಕೊರತೆಯಿಂದಾಗಿ ಸಾಯಬಹುದು.’ ಕೇವಲ 8,000 ಜನರು ಮಾತ್ರ ಕೀಟದ ಕಡಿತದಿಂದ ಸೋಂಕಿಸಲ್ಪಡುತ್ತಾರೆಂದು ವಿವರಿಸುತ್ತಾ, “ಇನ್ನೊಂದು ಬಹುಸಂಖ್ಯೆಯ ಸೋಂಕು ರಕ್ತಪೂರಣದಿಂದಾಗಿದೆ. ವಾರ್ಷಿಕವಾಗಿ ಸಮತಲ ಸಾಗಣೆ (ತಾಯಿಯಿಂದ ಮಗುವಿಗೆ) ಅಥವಾ ಪೂರಣದ ಮೂಲಕ 12,000 ಹೊಸ ಕೇಸುಗಳು ಸಂಭವಿಸುತ್ತದೆ ಎಂದು ಅಂದಾಜು ಮಾಡಲಾಗಿದೆ,” ಎಂದು ಪತ್ರಿಕೆಯು ಸೇರಿಸುತ್ತದೆ.

ದೇವರಿಗೆ ಫ್ಯಾಕ್ಸ್‌ ಸಂದೇಶಗಳೋ?

ದೇವರನ್ನು ಫ್ಯಾಕ್ಸ್‌ನ ಮೂಲಕ ತಲಪ ಸಾಧ್ಯವೊ? ಬೇಸೆಕ್‌, ಇಸ್ರಾಯೇಲಿನ ದೂರವಾಣಿ ಕಂಪನಿಯು, ನಿಸ್ಸಂಶಯವಾಗಿ ಹಾಗೆ ನೆನಸುತ್ತದೆ. ಯೆರೂಸಲೇಮಿನಲ್ಲಿ, ಅವರ ಫ್ಯಾಕ್ಸ್‌ ಸಂಖ್ಯೆಯ ಮುಖಾಂತರ ದೇವರಿಗೆ ಸಂದೇಶಗಳನ್ನು ಕಳುಹಿಸುವಂತೆ ಜನರಿಗೆ ಅನುಮತಿಸುವಂಥ ಒಂದು ಸೇವೆಯನ್ನು ಬೇಸೆಕ್‌ ಸ್ಥಾಪಿಸಿತು, ಎಂದು ಇಂಟರ್‌ನ್ಯಾಷನಲ್‌ ಹೇರಲ್ಡ್‌ ಟ್ರೈಬ್ಯೂನ್‌ ವರದಿಸುತ್ತದೆ. ಫ್ಯಾಕ್ಸ್‌ ಸಿಕ್ಕ ಮೇಲೆ, ಸಿಬ್ಬಂದಿ ವರ್ಗದ ಒಬ್ಬ ಕೆಲಸಗಾರನು, ಸಂದೇಶವನ್ನು ಮಡಚಿ ಮತ್ತು ರೋಮನ್‌ ಸೇನೆಗಳ ಮೂಲಕ ಸಾ. ಶ. 70ರಲ್ಲಿ ನಾಶಮಾಡಲಾದ ಯೆಹೋವನ ದೇವಾಲಯದ ಅವಶೇಷಗಳು ಎಂಬುದಾಗಿ ನಂಬಲಾದ ವೆಸ್ಟ್‌ರ್ನ್‌ ವಾಲ್‌ನಲ್ಲಿರುವ ಅನೇಕ ಬಿರುಕುಗಳಲ್ಲಿ ಒಂದರೊಳಗೆ ಅದನ್ನು ಸೇರಿಸಲು ಕೊಂಡೊಯ್ಯುವನು. ಟ್ರೈಬ್ಯೂನ್‌ನ ಅನುಸಾರ, ಗೋಡೆಯಲ್ಲಿರುವ ಸಂದುಗಳಲ್ಲಿ ಬರೆಯಲ್ಪಟ್ಟ ಪ್ರಾರ್ಥನೆಗಳನ್ನು ಹಾಕುವ ಆಚರಣೆಯು, ಒಬ್ಬ ಮದುವೆಯ ಸಂಗಾತಿ, ಉತ್ತಮ ಆರೋಗ್ಯ, ಅಥವಾ ಬೇರೆ ಗುರಿಗಳ ತಮ್ಮ ಅನ್ವೇಷಣೆಯಲ್ಲಿ ದೈವಿಕ ಸಹಾಯವನ್ನು ಕೊರುವ ಆರಾಧಕರಿಂದ ಆಚರಿಸಲಾಗುವ “ಭಾಗ್ಯೋದಯದ ಮಾನವಾಗಿದೆ.” ಫ್ಯಾಕ್ಸ್‌ ಸೇವೆಯ ಮೊದಲನೆಯ ದಿನದೊಂದು, 60 ಸಂದೇಶಗಳು ಆಗಮಿಸಿದವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ