ವಾಸ್ತವವಾಗಿರುವ ನಿಮ್ಮನ್ನು ಬೆಳಕಿಗೆ ತರುವುದು
ನೀವು ದರ್ಪಣವನ್ನು ನೋಡುವಾಗ ಏನು ನೋಡುತ್ತೀರಿ? ನಿಮ್ಮ ಸ್ವಂತ ಶಾರೀರಿಕ ಪ್ರತಿಬಿಂಬವನ್ನು. ಆದರೆ, ನೀವು ನಿಜವಾಗಿಯೂ ಯಾರಾಗಿದ್ದೀರೆಂದು ಅದು ಹೇಳುತ್ತದೆಯೆ? ಇತರರು ನಿಮ್ಮನ್ನು ಎಂಥ ವ್ಯಕ್ತಿಯೆಂದು ಗ್ರಹಿಸುತ್ತಾರೆಂದು ಅದು ಹೇಳುತ್ತದೆಯೆ? ನೀವು ಯಾರೆಂದು ನಿಮಗೆ ನಿಜವಾಗಿ ತಿಳಿದಿದೆಯೆ? ನಿಮ್ಮ ವ್ಯಕ್ತಿಪರವಾದ ನಡತೆ ಪ್ರಥಮವಾಗಿ ಹೇಗೆ ಸ್ಥಾಪಿಸಲ್ಪಟ್ಟಿತೆಂದು ನಿಮಗೆ ಗೊತ್ತುಂಟೆ? ಹೌದು, ನೀವು, ಒಂದು ವ್ಯಕ್ತಿತ್ವವಾಗಿ ಹೇಗೆ ಬೆಳೆದಿರಿ?
ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದ ಸಕಲ ಸಂಗತಿಗಳನ್ನು ವಿಶೇಷ್ಲಿಸಲು ನೀವು ತುಸು ನಿಲ್ಲುವಲ್ಲಿ, ಅನೇಕ ಪ್ರಭಾವಗಳು—ಇತರ ವ್ಯಕ್ತಿಗಳಿಂದ ಯಾ ಇತರ ಸಂಗತಿಗಳಿಂದ—ನಿಮ್ಮ ಮೇಲೆ ಹೊರಿಸಲ್ಪಟ್ಟಿವೆ ಎಂದು ನೀವು ಗ್ರಹಿಸುವಿರಿ. ನಮ್ಮ ಮೊದಲಿನ ರೂಪುಗೊಳ್ಳುವ ವರ್ಷಗಳಲ್ಲಿ, ನಮ್ಮಲ್ಲಿ ಅನೇಕರಿಗೆ ನಮ್ಮ ಸ್ವಂತ ಸ್ವಭಾವ ಮತ್ತು ರೀತಿಗಳನ್ನು ಸ್ಥಾಪಿಸುವುದರಲ್ಲಿ ಕೇವಲ ಕೊಂಚ ಪಾತ್ರವೇ ಇತ್ತು. ಆದುದರಿಂದ, ನಿಮ್ಮ ಮೇಲೆ ಹೊರಿಸಲ್ಪಟ್ಟ—ಇವುಗಳಲ್ಲಿ ಕೆಲವು ನಿಮಗೆ ನಿಮ್ಮ ಸ್ವಂತ ನಡತೆಯ ಕುರಿತು ಏನಾದರೂ ಮಾಡುವ ಸಂದರ್ಭಕ್ಕೆ ಎಷ್ಟೋ ಮೊದಲು—ಆ ವ್ಯಕ್ತಿತ್ವ ರೂಪಕ ಪ್ರಭಾವಗಳಲ್ಲಿ ಕೆಲವನ್ನು ನೋಡೋಣ.
ತಳಿಶಾಸ್ತ್ರ ದೊಡ್ಡ ಪಾತ್ರ ವಹಿಸುತ್ತದೆ
ತಳಿಶಾಸ್ತ್ರ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ? ಅನುವಂಶಿಕ ಲಕ್ಷಣಗಳನ್ನು ರವಾನಿಸುವ ವರ್ಣತಂತು (chromosome)ಗಳಲ್ಲಿರುವ ಡಿಎನ್ಎ (DNA) ನೀಲಪ್ರತಿಯು, ಪ್ರತಿ ವ್ಯಕ್ತಿಯ ಬೆಳವಣಿಗೆಗೆ ವರ್ಣನೆ ಮತ್ತು ಸಂಕೇತ ಭಾಷೆಯ ಮಾಹಿತಿಗಳನ್ನು ಒಯ್ಯುತ್ತದೆ. ಹಾಗಾದರೆ, ನಿಮ್ಮ ವೈಯಕ್ತಿಕ ನಡತೆಯಲ್ಲಿ ಎಷ್ಟು ಭಾಗ ಹೀಗೆ ಅನುವಂಶೀಯವಾಗಿ ಪ್ರಭಾವಿಸಲ್ಪಡುತ್ತದೆ? ವಂಶವಾಹಿಗಳ (genes) ಮತ್ತು ವ್ಯಕ್ತಿತ್ವದ ಮಧ್ಯೆ ನಿಶ್ಚಿತ ಸಂಬಂಧವಿದೆ ಎಂದು ರುಜುಮಾಡಲು ಇನ್ನೂ ತೊಂದರೆಯಿದೆ ಎಂದು ಕಂಡುಬರುತ್ತದೆ. ಆದರೂ, ಬೆಲೆಯಿದೆಯೆಂದು ತೋರಿಬರುವ ಕೆಲವು ಹಾದಿಗಳಿವೆ. ಉದಾಹರಣೆಗೆ, ಅನೇಕ ಅನುವಂಶೀಯವಾದ ಶಾರೀರಿಕ ಸ್ವಭಾವ ಲಕ್ಷಣಗಳಿಗೆ ನಿಮ್ಮ ನಡತೆಯ ಮೇಲೆ ನೇರವಾದ ಸಂಬಂಧವಿದೆ. ಹೀಗೆ, ಅನೇಕ ಜನರಿಗೆ ಇನ್ನೊಂದು ರೀತಿಯ ವರ್ಣ ಯಾ ಕುಲದ ಜನರ ಮೇಲೆ ಅವಿಚಾರಾಭಿಪ್ರಾಯ ಮತ್ತು ಮುನ್ಕಲ್ಪಿತ ವಿಚಾರಗಳಿವೆ.
ಒಬ್ಬ ಗರ್ಭಿಣಿಯು ತನ್ನ ಸ್ವಂತ ವರ್ತನೆ, ಆಲೋಚನೆ ಮತ್ತು ಅನಿಸಿಕೆಗಳಿಂದಾಗಿ ತನ್ನ ಹುಟ್ಟದಿರುವ ಮಗುವಿಗೆ ಪ್ರಯೋಜನ ಅಥವಾ ಹಾನಿಯನ್ನು ತರಬಲ್ಲಳು. ನೀವು ತಾಯಿಯ ಗರ್ಭದಲ್ಲಿದ್ದಾಗ ನಿಮ್ಮ ಮೇಲೆ ಎಷ್ಟು ಶಾಂತಿ ಯಾ ಕೆರಳಿಕೆ ಹೇರಲ್ಪಟ್ಟಿತು? ನಿಮ್ಮ ಹೆತ್ತವರ ಸರ್ವಭಾರ, ಅವರು ಆಲಿಸುತ್ತಿದ್ದ ಸಂಗೀತದಿಂದ ನೀವು ಎಷ್ಟು ಕಲಿತಿರಿ? ನಿಮ್ಮ ತಾಯಿ ತಿಂದ ಆಹಾರದಿಂದ ನೀವೆಷ್ಟು ಪ್ರಭಾವಿತರಾದಿರಿ? ಒಂದು ವೇಳೆ ನಿಮ್ಮ ತಾಯಿ ಮದ್ಯ ಕುಡಿಯುವವರಾಗಿದ್ದರೆ ಯಾ ಮಾದಕ ದ್ರವ್ಯ ತಿನ್ನುವವರಾಗಿದ್ದರೆ, ಅದರಿಂದ ಅವರು ಎಷ್ಟು ಬಾಧಿತರಾಗಿದ್ದರು? ನೀವು ಹುಟ್ಟುವುದರೊಳಗೆ, ನಿಮ್ಮ ಪ್ರವೃತ್ತಿಗಳಲ್ಲಿ ಅನೇಕ ಸ್ಥಾಪಿಸಲ್ಪಟ್ಟಿದ್ದವು ಮತ್ತು ಪ್ರಾಯಶಃ ಅವುಗಳನ್ನು ಬದಲಾಯಿಸುವುದು ಕಷ್ಟ.
ಆಹಾರ ಕ್ರಮ, ಅಹಿತ ಪ್ರತಿಕ್ರಿಯೆ, ಪರಿಸರದ ವಿಷಯವೇನು?
ನೀವು ಶೈಶವಕ್ಕೆ ಬೆಳೆದಂತೆ, ನಿಮ್ಮ ಆಹಾರದಲ್ಲಿದ್ದ ಕೆಲವು ವಸ್ತುಗಳು ನಿಮ್ಮ ವರ್ತನೆಯ ಮೇಲೆ ಪ್ರಭಾವ ಬೀರಿರಬಹುದು. ಸಿಹಿಕಾರಕಗಳು, ಕೃತಕ ವರ್ಣದ್ರವ್ಯಗಳು, ಮತ್ತು ರಕ್ಷಕ ರಾಸಾಯನಿಕಗಳು—ಇವೆಲ್ಲ ನಿಮ್ಮ ನಡತೆಯ ಮೇಲೆ ಅದೃಶ್ಯ ಪ್ರಭಾವವನ್ನು ಬೀರಬಲ್ಲವು. ವಿಪರೀತ ಕ್ರಿಯಾಶೀಲತೆ, ಏರಿದ ಉದ್ವೇಗ, ಕೆರಳಿಕೆ, ನರ ನೋವು, ಮತ್ತು ಮಿತಿ ಮೀರಿದ ಮತ್ತು ಅನಿಯಂತ್ರಿತ ವರ್ತನೆಗಳು ಇದರಿಂದ ಬರುವ ಕೆಲವೇ ಪರಿಣಾಮಗಳು. ಕಾರಿನಿಂದ ಬಹಿರ್ಗಮಿಸುವ ಹೊಗೆ, ಉದ್ಯಮಗಳು ವಿಸರ್ಜಿಸಿದ ಮಾಲಿನ್ಯ, ಮತ್ತು ಪರಿಸರದಲ್ಲಿರುವ ಇತರ ರೀತಿಯ ವಿಷಗಳು ಸಹ ವರ್ತನೆಯನ್ನು ರೂಪಿಸಬಲ್ಲವು. ಅಥವಾ, ವ್ಯಕ್ತಿಪರವಾದ ಮಟ್ಟದಲ್ಲಿ, ನಿಮ್ಮನ್ನು ಗುರುತರವಾಗಿ ಬಾಧಿಸುವ ಆದರೆ ನಿಮ್ಮ ಸುತ್ತಲಿರುವವರನ್ನು ಬಾಧಿಸದ ಆ್ಯಲರ್ಜಿ ಅಹಿತ ಪ್ರತಿಕ್ರಿಯೆ ನಿಮಗಿರಬಹುದು.
ಈ ಪ್ರಭಾವಗಳಲ್ಲದೆ, ನಿಮ್ಮ ಹೆತ್ತವರ ನಡತೆ, ಅವರ ರುಚಿ, ಅರುಚಿಗಳು, ಮತ್ತು ನೀವು ಶೈಶವದಿಂದ ಅವರ ಅವಿಚಾರಾಭಿಪ್ರಾಯಗಳೊಂದಿಗೆ ಕಳೆದ ಸಮಯ, ನಿಮ್ಮ ಮೇಲೆ ಪರಿಣಾಮ ಬೀರಿ ಸ್ವಲ್ಪ ಮಟ್ಟಿಗಾದರೂ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಇದರ ಫಲವೇನಂದರೆ ನಿಮ್ಮ ಅನೇಕ ರೀತಿಗಳು ಮತ್ತು ಜೀವನದ ಕುರಿತ ನಿಮ್ಮ ಸಾಮಾನ್ಯ ಹೊರನೋಟ ಅವರದರ್ದ ಪ್ರತಿಬಿಂಬವಾಗಿದೆ. ಅವರನ್ನು ಸಿಟ್ಟಿಗೆಬ್ಬಿಸುವ ವಿಷಯಗಳು ನಿಮ್ಮನ್ನೂ ಕೆರಳಿಸುತ್ತವೆ. ಅವರು ಸಹಿಸುವ ಸಂಗತಿಗಳನ್ನು ನೀವೂ ಸಹಿಸುವ ಪ್ರವೃತ್ತಿಯವರಾಗುತ್ತೀರಿ. ಮತ್ತು, ಯಾರಾದರೂ ನೀವು ನಿಮ್ಮ ತಂದೆ ಯಾ ತಾಯಿಯಂತೆಯೇ ವರ್ತಿಸುತ್ತೀರಿ ಎಂದು ಹೇಳುವ ತನಕ, ನೀವು ಅವರ ವರ್ತನೆಯನ್ನು ನಕಲು ಮಾಡುತ್ತಿದ್ದೀರೆಂದು ನೀವು ಗಮನಿಸುವುದೇ ವಿರಳ. ಅವರ ಆರ್ಥಿಕ ಮತ್ತು ಸಾಮಾಜಿಕ ನೆಲೆ ಹಾಗೂ ನಿಮ್ಮ ನೆರೆಹೊರೆ ಮತ್ತು ಶಾಲೆಯ ಸುತ್ತುಗಟ್ಟು ಸಹ ನಿಮ್ಮ ಮೇಲೆ ಪರಿಣಾಮ ಬೀರಿದೆ. ನಿಮ್ಮ ಮಿತ್ರರು ಮತ್ತು ಒಡನಾಡಿಗಳು ಸಹ ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ. (ನಿಮಗೆ ಯಾ ನಿಮ್ಮ ಆಪ್ತ ಮಿತ್ರನಿಗೆ ಪ್ರಾಯಶಃ ಆದ) ಗುರುತರವಾದ ಅಪಘಾತ, ಸ್ಥಳೀಕವಾಗಿ ನಡೆದ ವಿಪತ್ತು, ಅಥವಾ ಉಪದ್ರವಕಾರಿಯಾದ ಲೋಕ ಸಂಭವಗಳು ಸಹ ನಿಮ್ಮನ್ನು ಬಾಧಿಸಿರಬಹುದು. ಅಥವಾ, ವಿವಾಹ ವಿಚ್ಛೇದ ಯಾ ಗುರುತರವಾದ ಕಾಯಿಲೆಯಂಥ ಯಾವುದೋ ದುರಂತ ನಿಮ್ಮ ವ್ಯಕ್ತಿತ್ವದ ಮೇಲೆ ಕಲೆಯನ್ನು ಬಿಟ್ಟು ಹೋಗಿರಬಹುದು.
ಚಿಂತನೆ ಮಾಡುವಲ್ಲಿ, ಇಂಥ ಯಾವ ಪ್ರಭಾವವನ್ನಾದರೂ ನೀವು ಗುರುತಿಸಬಲ್ಲಿರೆ?
ಧರ್ಮವು ಯಾವ ಪಾತ್ರ ವಹಿಸುತ್ತದೆ?
ಊಹಾತ್ಮಕವಾಗಿ, ಧರ್ಮವು ನೀವು ಹೆಚ್ಚು ಉತ್ತಮ ವ್ಯಕ್ತಿಯಾಗುವಂತೆ ಮಾಡಿ, ನಿಮ್ಮ ನೈತಿಕ ವರ್ತನೆ, ನೀತಿ ಪದ್ಧತಿ ಮತ್ತು ನಿತ್ಯಗಟ್ಟಲೆಗಳು ಉತ್ತಮಗೊಳ್ಳುವಂತೆ ಮಾಡಬೇಕು. ಹಾಗಾದರೆ, ನಿಮ್ಮ ಮೌಲ್ಯಗಳಲ್ಲಿ ಮತ್ತು ವರ್ತನೆಗಳಲ್ಲಿ ಎಷ್ಟು ಧರ್ಮದಿಂದ ಪ್ರಭಾವಿತವಾಗಿವೆ? ಬೇಜವಾಬ್ದಾರಿಯ, ಪಾತಕರೂಪದ ವರ್ತನೆಗಳಿಗೆ ಧರ್ಮವು ತಡೆ ಹಾಕಬೇಕೆಂದು ಎಣಿಸಲ್ಪಡುತ್ತದಾದರೂ, ಧರ್ಮಸಂಪರ್ಕದಿಂದ ಅನೇಕ ಜನರು ಭಿನ್ನವಾದ ರೀತಿಯಲ್ಲಿ ಪ್ರಭಾವಿತರಾಗುತ್ತಾರೆ. ಚರ್ಚುಗಳಲ್ಲಿ ಅವರು ತುಂಬ ಕಪಟಾಚರಣೆಯನ್ನು ಮತ್ತು ಆತ್ಮಿಕ ಮೌಲ್ಯಗಳ ಬದಲು ಪ್ರಾಪಂಚಿಕವಾದುದರ ಮೇಲೆ ಒತ್ತನ್ನು ಅವರು ನೋಡಿ ಕಹಿ ಮನಸ್ಸಿನವರಾಗುತ್ತಾರೆ. ಆತ್ಮಿಕತೆ ಮತ್ತು ನಿರೀಕ್ಷೆ ಕಸುಕೊಳ್ಳಲ್ಪಟ್ಟವರಾಗಿ ಅವರು ಧರ್ಮವಿರೋಧಿಗಳೂ ಆಗಬಹುದು.
ನಡತೆಯನ್ನು ರೂಪಿಸುವ ಇತರ ಬಾಹ್ಯ ಪ್ರಭಾವಗಳನ್ನು ನೀವು ಯೋಚಿಸಬಹುದು. ಇಂದಿನ ವರೆಗೆ ನಿಮ್ಮನ್ನು ಪ್ರಭಾವಿಸಿದಿರ್ದಬಹುದಾದ ಸಂಗತಿಗಳನ್ನು ಒಂದು ಕ್ಷಣ ಚಿಂತನೆ ಮಾಡಿರಿ. ಅವುಗಳಲ್ಲಿ ಕೆಲವನ್ನು ನೀವು ಹೆಸರಿಸಬಲ್ಲಿರೆ? ನಿಜತ್ವಗಳಿಂದ ಪ್ರಭಾವಿತರಾಗಿ ಹೀಗೆ ಯೋಚಿಸುವುದು ಸುಲಭವಲ್ಲ, ಆದರೆ ಅದು ಸಾರ್ಥಕ ಮಾತ್ರವಲ್ಲ ನಿಮಗೆ ಸಹಾಯಕರವೂ ಆಗಬಹುದು. ಅದು ಹೇಗೆ?
ಒಳ್ಳೇದು, ನಿಮ್ಮ ನಡತೆಯಲ್ಲಿರುವ ನಕಾರಾತ್ಮಕ ಪ್ರವೃತ್ತಿಗೆ ಒಂದು ನಿರ್ದಿಷ್ಟ ಪ್ರಭಾವ ಯಾ ಕಾರಣವನ್ನು ಗುರುತಿಸುವಲ್ಲಿ ಮತ್ತು ನೀವು ಅದನ್ನು ನಿರ್ದಿಷ್ಟವಾಗಿ ಬೇರ್ಪಡಿಸುವಲ್ಲಿ, ನೀವು ಅದನ್ನು ನಿಯಂತ್ರಿಸಲು, ಬದಲಾಯಿಸಲು ಸಹ, ಉತ್ತಮ ಸ್ಥಾನದಲ್ಲಿರುವಿರಿ. ಮತ್ತು ನೀವು ಆ ಅನಪೇಕ್ಷಿತ ಪ್ರಭಾವವನ್ನು ನಿಯಂತ್ರಿಸಲು, ಯಾ ತೊಲಗಿಸಲು ಸಹ ಸಮರ್ಥರಾಗುವಲ್ಲಿ, ನೀವು ಇತರರ ಕಡೆಗೆ ಹೆಚ್ಚು ಸಕಾರಾತ್ಮಕವಾಗಿ ವರ್ತಿಸುವ ಭಿನ್ನ ವ್ಯಕ್ತಿಯಾಗಸಾಧ್ಯವಿದೆ.
ಅದೊಂದು ಪಂಥಾಹ್ವಾನವೆಂಬುದು ನಿಶ್ಚಯ. ಆದರೆ ನಿಮ್ಮ ನಡತೆಯ ಮೇಲೆ ಎಷ್ಟೋ ಪ್ರಭಾವಗಳು ಇತರರಿಂದ ಅಥವಾ ನಿಮ್ಮ ಹಿಡಿತಕ್ಕೆ ಮೀರಿದ ಪರಿಸ್ಥಿತಿಗಳಿಂದ ಬಂದಿರುವುದರಿಂದ, ಒಂದು ಆರಂಭದ ಹೆಜ್ಜೆಯನ್ನಿಟ್ಟು ನೀವೇ ಆ ವಿಷಯವನ್ನು ಏಕೆ ಸುಧಾರಿಸಬಾರದು? ಅದರಿಂದ ಒಳ್ಳೆಯದಾಗುವಲ್ಲಿ, ನೀವು ಏನಾಗಿದ್ದೀರೋ ಅದನ್ನು ಏಕೆ ಬದಲಾಯಿಸಿಕೊಳ್ಳಬಾರದು? (g91 7/8)
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಬ್ಬ ಗರ್ಭಿಣಿಯ ವರ್ತನೆ ಮತ್ತು ಅನಿಸಿಕೆಗಳು ಅವಳ ಇನ್ನೂ ಹುಟ್ಟದಿರುವ ಮಗುವನ್ನು ಪ್ರಭಾವಿಸಬಹುದು