ಜಗತ್ತನ್ನು ಗಮನಿಸುವುದು
ಜ್ವಾಲಾಮುಖಿ ಗ್ರಹವನ್ನು ತಣಿಸುತ್ತದೆ
ಫಿಲಿಪ್ಪೀನ್ ಜ್ವಾಲಾಮುಖಿಯಾದ ಮೌಂಟ್ ಪಿನಟೂಬೊ 1991ರಲ್ಲಿ ಹೊರಚಿಮ್ಮಿದಾಗ, ಇದರ ಪರಿಣಾಮವಾಗಿ ನಮ್ಮ ಗ್ರಹ ತುಸು ತಣ್ಣಗಾಗುವುದೆಂದು ವಿಜ್ಞಾನಿಗಳು ಮುಂತಿಳಿಸಿದರು. ಅದು ಹಾಗೆಯೇ ನಡೆದುದರಿಂದ ಅವರು ಹೇಳಿದ್ದು ಸರಿಯಾಗಿತ್ತು. ಈ ಜ್ವಾಲಾಮುಖಿ ವಾಯುಮಂಡಲ ಸರ್ತಕ್ಕೆ ಸುಮಾರು 2 ಕೋಟಿ ಟನ್ನು ಸಲ್ಫರ್ ಡೈಆಕ್ಸೈಡ್ ಅನಿಲವನ್ನು ಎಸೆಯಿತು. ಈ ಅನಿಲವು ಸಲ್ಫ್ಯೂರಿಕ್ ಆ್ಯಸಿಡಿನ ತುಂತುರು ಹನಿಗಳನ್ನೊಳಗೊಂಡ ಒಂದು ವಿಸ್ತಾರವಾದ ಮೋಡವನ್ನು ನಿರ್ಮಿಸಿ, ಕೆಲವೇ ವಾರಗಳಲ್ಲಿ ಉನ್ನತವಾದ ರಭಸದ ವಾಯು ಪ್ರವಾಹದ ಮೂಲಕ ಭೂಗೋಲದ ಸುತ್ತಲೂ ಹರಡಿತು. ಈ ಸಣ್ಣ ಹನಿಗಳು ಸೂರ್ಯನ ಕಿರಣಗಳಲ್ಲಿ ಕೆಲವನ್ನು ಹರಡಿಸಿ ತಡೆಯುವುದರಿಂದ ಕೆಳಗೆ ನೆಲದಲ್ಲಿ ಹೆಚ್ಚು ತಂಪಾದ ತಾಪಮಾನವಿರುತ್ತದೆ. ಸೈಎನ್ಸ್ ನ್ಯೂಸ್ ಪತ್ರಿಕೆಗನುಸಾರ, ಉತ್ತರಾರ್ಧಗೋಳದ ಕೆಲವು ಭಾಗಗಳಲ್ಲಿ, ಸರಾಸರಿ ತಾಪಮಾನದಲ್ಲಿ ಸುಮಾರು ಒಂದು ಡಿಗ್ರಿ ಸೆಂಟಿಗ್ರೇಡ್ ಕಡಮೆಯಾಗಿರುವುದನ್ನು ನೋಡಲಾಗಿದೆ. ಆದರೂ, ಈ ಪರಿಣಾಮ ತಾತ್ಕಾಲಿಕ ಮತ್ತು ಇದು ಭೂಗೋಳ ಬಿಸಿಯಾಗುತ್ತಿರುವುದಕ್ಕೆ ಪರಿಹಾರವೆಂಬಂತೆ ವೀಕ್ಷಿಸಬಾರದು. ಒಬ್ಬ ಹವಾಮಾನ ತಜ್ಞನು, ಈ ಜ್ವಾಲಾಮುಖಿ ಪ್ರೇರಿತ ಶೀತಲ ಪ್ರವೃತ್ತಿ 1994ರೊಳಗೆ ಮಾಸಿಹೋಗುವುದೆಂದು ಮುಂತಿಳಿಸುತ್ತಾನೆ.
ಏಷ್ಯದ ಅವಯವ ವ್ಯಾಪಾರ
“ಸರಬರಾಯಿ ಮತ್ತು ಗಿರಾಕಿ ದೇಶದ ನಿಯಮ,” ಎನ್ನುತ್ತದೆ ಏಷಿಯವೀಕ್ ಪತ್ರಿಕೆ, ಮಾನವ ಅವಯವಗಳ ಮಾರಾಟದ ಕುರಿತು. ಹಾಂಗ್ ಕಾಂಗ್‌ನಲ್ಲಿ ಸುಮಾರು 600 ಜನರು 1992ರ ವಸಂತಕಾಲದಲ್ಲಿ ಮೂತ್ರ ಜನಕಾಂಗದ ಸ್ಥಲಾಂತರಕ್ಕಾಗಿ ಕಾಯುತ್ತಿದ್ದರೂ ಅವರಲ್ಲಿ ಕೇವಲ 50 ಜನರಿಗೆ ಆ ವರ್ಷದ ಅಂತ್ಯದೊಳಗೆ ಅದು ದೊರೆಯುವ ನಿರೀಕ್ಷೆ ಇತ್ತು. ಆದುದರಿಂದ ಅನೇಕರು ಭಾರತದಂಥ ಇತರ ದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಭಾರತದಲ್ಲಿ ಸುಮಾರು 6,000 ಮೂತ್ರ ಜನಕಾಂಗ ಸ್ಥಲಾಂತರಗಳು ವಾರ್ಷಿಕವಾಗಿ ನಡೆಸಲ್ಪಟ್ಟು, ಅದು ವರ್ಷಕ್ಕೆ 2 ಕೋಟಿ ಡಾಲರುಗಳ ವ್ಯಾಪಾರವಾಗಿದೆ. ಅನೇಕ ವೇಳೆ ಬಡವರು ಯಾ ಯಾವುದೊ ಆರ್ಥಿಕ ದೌರ್ಭಾಗ್ಯಕ್ಕೊಳಗಾದವರು, ಒಂದು ಮೂತ್ರ ಜನಕಾಂಗವಿರುವಲ್ಲಿ ಸಾಮಾನ್ಯವಾಗಿ ಒಬ್ಬನು ಬದುಕಿ ಉಳಿಯಸಾಧ್ಯವಾಗಿರುವುದರಿಂದ, ಇನ್ನೊಂದನ್ನು ಮಾರಲು ಸಿದ್ಧರಾಗಿರುತ್ತಾರೆ. ಆದರೆ ಏಷಿಯವೀಕ್ ಗಮನಿಸುವುದೇನಂದರೆ ಈ ಅವಯವ ವ್ಯಾಪಾರ ಭ್ರಷ್ಟಾಚಾರದಿಂದ ಪೀಡೆಗೊಳಗಾಗಿದೆ. ಕೆಲವು ದಾನಿಗಳು ಮಧ್ಯಸ್ಥರಿಂದ ಹಣದ ಸಂಬಂಧದಲ್ಲಿ ವಂಚನೆಗೊಳಗಾಗಿದ್ದಾರೆ. ಒಬ್ಬನು ಹೊಟ್ಟೆಯ ಚಿಕ್ಕ ಸಮಸ್ಯೆಗಾಗಿ ಆಸ್ಪತ್ರೆಗೆ ಹೋಗಲಾಗಿ ಒಂದು ಮೂತ್ರ ಜನಕಾಂಗವನ್ನು ಕಳೆದುಕೊಂಡನೆಂದು ವರದಿಯಾಗಿದೆ—ಅದನ್ನು ಅವನ ಒಪ್ಪಿಗೆಯಿಲ್ಲದೆ ತೆಗೆಯಲಾಗಿತ್ತು!
ನಿರ್ದೋಷಿಗಳ ಸಂಹಾರ
ಅಮೆರಿಕದಲ್ಲಿ 1991ರಲ್ಲಿ ಕಡಮೆ ಪಕ್ಷ 1,383 ಮಕ್ಕಳು ಅಪಪ್ರಯೋಗ ಯಾ ಅಸಡ್ಡೆಯಿಂದ ಕೊಲ್ಲಲ್ಪಟ್ಟರೆಂದು ದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡುತ್ತದೆ. ನ್ಯಾಷನಲ್ ಕಮಿಟಿ ಫಾರ್ ಪ್ರಿವೆನ್ಶನ್ ಆಫ್ ಚೈಲ್ಡ್ ಎಬ್ಯೂಸ್ ಕೊಟ್ಟ ಈ ಮಿತವಾದ ಅಂದಾಜು, ಭೀತಿ ಹುಟ್ಟಿಸುವ, ಪ್ರತಿ ದಿವಸದ ನಾಲ್ಕು ಮಕ್ಕಳ ಅಪಪ್ರಯೋಗ ಸಂಬಂಧಿತ ಮರಣಗಳನ್ನು ಸೂಚಿಸುತ್ತದೆ ಮತ್ತು ಇದು ಕಳೆದ ಆರು ವರ್ಷಗಳಲ್ಲಿ 50 ಪ್ರತಿಶತ ಉನ್ನತಿಯಾಗಿದೆ. ಈ ಉನ್ನತಿಗಿರುವ ಕಾರಣಗಳು ವಿವಿಧ. ಕೆಲವು ವಿಶೇಷಜ್ಞರು ಕೆಡುತ್ತಿರುವ ಆರ್ಥಿಕ ಪರಿಸ್ಥಿತಿ—ಕೆಲಸ ನಷ್ಟಗಳು, ಕಡಮೆ ಆದಾಯ, ಮತ್ತು ಹತಾಶೆ—ಗಳನ್ನು ದೂರಿ, ಇವು ಜನರು ತಮ್ಮ ಹತಾಶೆಗಳನ್ನು ಈ ಸಹಾಯಶೂನ್ಯ ಬಲಿಪಶುಗಳ ಮೇಲೆ ಕಾರುವಂತೆ ಮಾಡುತ್ತದೆಂದು ಹೇಳುತ್ತಾರೆ. ಅನೇಕ ವ್ಯಾಪಕವಾಗಿ ಪ್ರಕಟವಾಗಿದ್ದ ಕೇಸುಗಳಲ್ಲಿ ತಮ್ಮ ಪಾಲನೆಯಲ್ಲಿದ್ದ ಮಕ್ಕಳನ್ನು ಅಪಪ್ರಯೋಗಿಸಿದ್ದು ಶಿಶುಪಾಲಕರಾಗಿದ್ದರೂ, “ಈ ಸಂಖ್ಯೆಯ ಹಿಂದಿರುವ ನಿಜ ಕಥೆಯು ಸಾಮಾನ್ಯವಾಗಿ ಮನೆಯಲ್ಲಿ, ಶಿಶುಗಳನ್ನು ಅತಿಯಾಗಿ ಪ್ರೀತಿಸಬೇಕಾಗಿರುವ ಅಪ್ಪ, ಅಮ್ಮನಲ್ಲಿದೆ ಎಂದು ವಿಶೇಷಜ್ಞರು ತಿಳಿದಿದ್ದಾರೆ,” ಎಂದು ಪೋಸ್ಟ್ ಗಮನಿಸುತ್ತದೆ.
ಮಿತಿಮೀರಿದ ಜನಸಂಖ್ಯೆ—ಏಕೆ?
ಹೆಚ್ಚು ಬಡತನವಿರುವ ದೇಶಗಳಲ್ಲಿ ಮಿತಿ ಮೀರಿದ ಜನಸಂಖ್ಯೆ ಇರಲು ಕಾರಣವೇನು? ವೀಸಾವ್ ಪತ್ರಿಕೆಯಲ್ಲಿ ಪೌಲೊ ನೊಗೇರ ನೆಟೊ, ಬ್ರೆಸೀಲ್‌ನ ಮಾಜಿ ಪರಿಸರ ಕಾರ್ಯದರ್ಶಿ, ಇದಕ್ಕೆ ಶಕ್ತಿ ತುಂಬಿದ ಉತ್ತರವನ್ನು ಕೊಡುತ್ತಾರೆ: “ಬ್ರೆಸೀಲ್‌ನಲ್ಲಿ ಒಂದು ಕಥೆ ಹೇಳಲ್ಪಡುತ್ತದೆ. ಒಂಬತ್ತು ಮಕ್ಕಳೇಕೆ ಎಂದು ಒಬ್ಬನನ್ನು ಕೇಳಲಾಗಿ ಅವನು, ‘ಮೂವರು ಚಿಕ್ಕವರಾಗಿರುವಾಗ ಸಾಯುತ್ತಾರೆ; ಇನ್ನು ಮೂವರು ಸಾವೊ ಪೌಲೊ, ರಿಯೊ ಡಿ ಷೆನೀರೊ, ಯಾ ಬ್ರೆಸೀಲಿಯಕ್ಕೆ ವಲಸೆ ಹೋಗುತ್ತಾರೆ, ಉಳಿದ ಮೂವರು ನಾವು ವೃದ್ಧರಾಗುವಾಗ ನಮ್ಮನ್ನು ನೋಡಿಕೊಳ್ಳುತ್ತಾರೆ.’ ಒಂದು ಮಗು ಬಡ ಜನಸಂಖ್ಯೆಯ ಸಾಮಾಜಿಕ ರಕ್ಷಣೆಯಾಗಿದೆ.” ನೆಟೊ ಅಶುಭಸೂಚಕವಾಗಿ ಸೇರಿಸಿ ಹೇಳುವುದು: “ಇದನ್ನು ಲೋಕಾದ್ಯಂತ ಗಮನಿಸಬಹುದು: ಎಲ್ಲಿ ಬಡತನವಿದೆಯೊ ಅಲ್ಲಿ ಜನಸಂಖ್ಯೆಯ ಸ್ಫೋಟನವಿದೆ. ಮತ್ತು ಇದು ಮುಂದುವರಿಯುವಲ್ಲಿ, ಈ ಗ್ರಹ ದುರ್ಗತಿಗೊಳಗಾಗುವುದು. ಮಿತವಾಗಿರುವ ಸಂಪನ್ಮೂಲಗಳ ಲೋಕದಲ್ಲಿ, ಆತ್ಮಿಕ, ನೈತಿಕ ಯಾ ವೈಜ್ಞಾನಿಕ ವಿಕಸನವನ್ನು ಬಿಟ್ಟರೆ [ಈ ವಿಧದ] ಅಮಿತವಾದ ವಿಕಸನವಾಗಸಾಧ್ಯವಿಲ್ಲ.” (g93 1/22)
ಹೆಚ್ಚಿರುವ ಆಯುಸ್ಸುಅನುಗ್ರಹವೊ?
ವೈದ್ಯಕೀಯ ವಿಜ್ಞಾನವು ಮಾನವನ ಸರಾಸರಿ ಜೀವನ ನಿರೀಕ್ಷಣೆಯನ್ನು ಇತ್ತೀಚಿನ ವರ್ಷಗಳಲ್ಲಿ ತುಸು ಹೆಚ್ಚಿಸಿದೆಯಾದರೂ, ಡಬ್ಲ್ಯುಎಚ್‌ಓ (ಲೋಕಾರೋಗ್ಯ ಸಂಘ) ಡೈರೆಕ್ಟರ್ ಜನರಲ್, ಡಾ. ಹೀರೋಶೀ ನಾಕಾಜೀಮ, “ಲೋಕದ ಜನಸಂಖ್ಯೆಯ ಆರೋಗ್ಯ ಮತ್ತು ಜೀವನ ಗುಣಮಟ್ಟವು ಉತ್ತಮಗೊಳ್ಳುತ್ತಲೇ ಇಲ್ಲ,” ಎಂದು ಒಪ್ಪುತ್ತಾರೆ. ಲೆ ಪೀಗಾರೊ ಎಂಬ ಪ್ಯಾರಿಸ್ ವೃತ್ತಪತ್ರಕೆಯೊಂದಿಗೆ ಮಾಡಿದ ಪತ್ರಿಕಾಭೇಟಿಯಲ್ಲಿ ಡಾ. ನಾಕಾಜಿಮ ಹೇಳಿದ್ದು: “ನಮ್ಮ ಮಾಹಿತಿಗನುಸಾರ, ವಿಶೇಷವಾಗಿ ವೃದ್ಧರ ಪೈಕಿ, ರೋಗಿಗಳ ಯಾ ಅಂಗಹೀನರ ಸಂಖ್ಯೆ ಹೆಚ್ಚಿರಬಹುದು.” ಭೌಗೋಲಿಕವಾಗಿ, ಈಗ ಸರಾಸರಿ ಆಯುಸ್ಸಿನ ನಿರೀಕ್ಷಣೆ 65 ವರ್ಷ. ಔದ್ಯಮಿಕ ರಾಷ್ಟ್ರಗಳಲ್ಲಿ ಅದು 76 ವರ್ಷಗಳಾಗಿರುವಾಗ, ವಿಕಾಸಶೀಲ ರಾಷ್ಟ್ರಗಳಲ್ಲಿ ಅದು 62 ವರ್ಷ. ಮತ್ತು ಭೂಮಿಯ ಅತಿ ಕಡಮೆ ಪ್ರಗತಿಪರ ಪ್ರದೇಶಗಳಲ್ಲಿ ಅದು ಕೇವಲ 50 ವರ್ಷ. ಮುಂದಿನ ಐದು ವರ್ಷಗಳಲ್ಲಿ ಡಬ್ಲ್ಯುಎಚ್‌ಓ ಈ ಸರಾಸರಿ ಜೀವನ ನಿರೀಕ್ಷಣೆಯನ್ನು ನಾಲ್ಕು ತಿಂಗಳು ಹೆಚ್ಚಿಸಲು ನಿರೀಕ್ಷಿಸುತ್ತದೆ. ಆದರೆ ಡಾ. ನಾಕಾಜೀಮ ಗಮನಿಸಿದ್ದು: “ದೀರ್ಘಾಯುಸ್ಸಿನಲ್ಲಿ ಅಭಿವೃದ್ಧಿಯು ದೌರ್ಬಲ್ಯ ಮತ್ತು ಅಸ್ಥಿಗತ ರೋಗಗಳಿಲ್ಲದ ಜೀವನ ಎಂದು ಅರ್ಥವಾಗುವುದಿಲವ್ಲೆಂಬುದು ವ್ಯಕ್ತ.” (g93 2/8)
ಭಾಷೆಗಳು ಮತ್ತು ಮಿದುಳು
ಇಟೆಲಿಯ ಟ್ರೀಸ್ಟ್ ಯೂನಿವರ್ಸಿಟಿಯ ಸಂಶೋಧಕ, ಫ್ರಾಂಕೊ ಫಾಬ್ರೊ ಎಂಬವರಿಗನುಸಾರ, ನಮಗೆ ಗೊತ್ತಿರುವ ಯಾ ಅಂಶವಾಗಿ ಗೊತ್ತಿರುವ ಪ್ರತಿಯೊಂದು ಭಾಷೆಯ ನೆಲೆಯು ಮಿದುಳಿನ ಒಂದು ದೂರದ ಸ್ಥಳದಲ್ಲಿದೆ. ಅವರು ಈ ತೀರ್ಮಾನಕ್ಕೆ ಹೇಗೆ ಬಂದರು? ಮಿದುಳಿಗೆ ಹಾನಿ ಸಂಭವಿಸಿದ್ದ ಮತ್ತು ತಮ್ಮ ಸ್ವಂತ ಭಾಷೆಯನ್ನೇ ಸರಿಯಾಗಿ ಮಾತಾಡಲು ಆಗದಿದ್ದ ಅನೇಕ ಬಹುಭಾಷಿಗಳು, ತಮಗೆ ಮೇಲು ಮೇಲೆ ಬರುತ್ತದೆಂದು ನೆನಸಿದ್ದ ವಿದೇಶೀ ಭಾಷೆಯನ್ನು ಸರಾಗವಾಗಿ ಮಾತಾಡಲಾರಂಭಿಸಿದರು. ಇದು, ಲೆಸ್ಪೆಸ್ರೊ ಸೂಚಿಸುವಂತೆ, “ಮಾತೃಭಾಷೆ ಇತರ ಭಾಷೆಗಳನ್ನು ಅಡ್ಡೈಸಿ ಅವುಗಳ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತದೆ.” (g93 1/22)
ಏಯ್ಡ್ಸ್ ಕಡೆಗಿರುವ ಮನೋಭಾವಗಳು
“ದಕ್ಷಿಣ ಆಫ್ರಿಕದಲ್ಲಿ ಅನೇಕ ಮಂದಿ [ಏಯ್ಡ್ಸ್‌ನ] ಪ್ರಾಮುಖ್ಯತೆಯನ್ನು ನೋಡಲು ತಪ್ಪುತ್ತಾರೆ ಯಾ ಅದು ಅಸ್ತಿತ್ವದಲ್ಲಿದೆಯೆಂದು ನಂಬಲು ನಿರಾಕರಿಸುತ್ತಾರೆ,” ಎಂದು ದಕ್ಷಿಣ ಆಫ್ರಿಕದ ಜೊಹ್ಯಾನೆಸ್‌ಬರ್ಗಿನ ಸ್ಯಾಟರ್ಡೆ ಸ್ಟಾರ್ ವರದಿಸುತ್ತದೆ. “ಶಕ್ತಿ ತುಂಬಿದ ವಂಶ ವಾದ, ದಾರಿದ್ರ್ಯ ಮತ್ತು ಅಜ್ಞಾನಗಳ ಮಿಶ್ರಣವು ಈ ಗುಣವಾಗದ ರೋಗದ ಹರಡುವಿಕೆಯ ವೇಗವನ್ನು ವರ್ಧಿಸುತ್ತದೆ.” ಏಯ್ಡ್ಸ್ ವಿಚಾರವು ಆಫ್ರಿಕವನ್ನು ಬಲಹೀನಗೊಳಿಸಲು ಪಾಶ್ಚಾತ್ಯ ತಂತ್ರವೆಂದು ಅಥವಾ ಈ ರೋಗ ಆಫ್ರಿಕದ ಕಪ್ಪು ಜನರ ಜನನಪ್ರಮಾಣವನ್ನು ತಡೆಯಲು ಬಿಳಿಯರ ಯಾವುದೋ ಕಂಡುಹಿಡಿತವೆಂದು ಕೆಲವರ ಅನಿಸಿಕೆ. ಅನೇಕರಿಗೆ ಪ್ರತಿದಿನದ ಭಾಗವಾಗಿರುವ ಹಿಂಸಾಚಾರವು ಏಯ್ಡ್ಸ್‌ನ ಕಡೆಗೆ ಜನರ ಮನೋಭಾವವನ್ನು ತಟ್ಟುವ ಇನ್ನೊಂದು ಸಂಗತಿ. ಹೋರಾಟ ನಡೆಯುತ್ತಿರುವ ಒಂದು ಪ್ರದೇಶದಲ್ಲಿ ಒಬ್ಬ ದಕ್ಷಿಣ ಆಫ್ರಿಕದವನು ಏಯ್ಡ್ಸ್ ಸಲಹೆಗಾರರ ಒಂದು ತಂಡಕ್ಕೆ ಹೇಳಿದ್ದು: “ಹತ್ತು ವರ್ಷಗಳಲ್ಲಿ ಏಯ್ಡ್ಸ್ ನನ್ನನ್ನು ರೋಗಿಯಾಗಿ ಮಾಡುತ್ತದೆಂದು ನೀವು ಹೇಳುತ್ತೀರಿ. ಆದರೆ ಇಲ್ಲಿ 25 ಜನರು . . . ಕಳೆದ ವಾರಾಂತ್ಯ [ರಾಜಕೀಯ ಹಿಂಸಾಚಾರದಲ್ಲಿ] ಸತ್ತರು. ಜೀವನವನ್ನು ಏಯ್ಡ್ಸ್ ನಿಜವಾಗಿಯೂ ಈಗ ಇರುವುದಕ್ಕಿಂತಲೂ ಹೆಚ್ಚು ಕೆಡುಕಾಗಿ ಮಾಡಬಲ್ಲದೊ?” ದೃಷ್ಟಿಕೋನ ಬದಲಾಗದೆ ಇರುವಲ್ಲಿ, ದಕ್ಷಿಣ ಆಫ್ರಿಕದಲ್ಲಿ ಈ ರೋಗ ಮುಂದಿನ ಹತ್ತರಿಂದ ಹದಿನೈದು ವರ್ಷಗಳಲ್ಲಿ ವಿಪರೀತ ವೃದ್ಧಿಯಾಗುವುದೆಂದು ಅಂದಾಜಿಸಲಾಗುತ್ತದೆ.
ಚಂದ್ರ ಶಕ್ತಿ
ಭೂಮಿಯ ಸಾಗರದ ಏರುಬೀಳುಗಳ ಇಳಿತ ಮತ್ತು ಪ್ರವಾಹಗಳನ್ನು ಆಗಿಸುವುದು ಚಂದ್ರನೆಂಬುದು ದೀರ್ಘಕಾಲದಿಂದ ತಿಳಿದಿರುವುದಾದರೂ ಫ್ರೆಂಚ್ ಪತ್ರಿಕೆ ಟೆರ್ ಸೋವಜ್ ವರದಿಸುವುದೇನಂದರೆ ಸಿಎನ್‌ಆರ್‌ಎಸ್ (ಫ್ರೆಂಚ್ ನ್ಯಾಷನಲ್ ಸೆಂಟರ್ ಆಫ್ ಸೈಎಂಟಿಫಿಕ್ ರೀಸರ್ಚ್)ನ ವಿಜ್ಞಾನಿಗಳು ಈಗ, ಚಂದ್ರನಿಗೆ ಭೂಮಿಯ ನೆಲಪ್ರದೇಶಗಳ ಮೇಲೆಯೂ ತದ್ರೀತಿಯ ಪರಿಣಾಮವಿದೆಯೆಂದು ದೃಢೀಕರಿಸುತ್ತಾರೆ. ಭೂಮಿಯ ಮೇಲ್ಮೈಯ 1.000 ಮೀಟರ್ ಕೆಳಗೆ ಒಂದು ಮುಚ್ಚಿದ ಗುಹೆಯಲ್ಲಿದ್ದ ಉಪ್ಪುನೀರಿನ ಕೆರೆಯಲ್ಲಿ ಮಾಡಿದ ಪರೀಕ್ಷೆಯ ಮೂಲಕ, ಪ್ರತಿ ಹನ್ನೆರಡು ತಾಸುಗಳಲ್ಲಿ, ಆ ಗುಹೆಯಲ್ಲಿದ್ದ ವಸ್ತುವಿನ ಏರುಬೀಳುಗಳನ್ನು ಕಂಡುಹಿಡಿಯಲು ಸಂಶೋಧಕರು ಶಕ್ತರಾದರು. ಗುಹೆಯ ಗೋಡೆಗಳ ಸೂಕ್ಷ್ಮ ವಿಸ್ತರಣ ಮತ್ತು ಸಂಕೋಚನಗಳು ಮಾಡಿದ ಈ ಚಲನೆ, ಚಂದ್ರನು ಭೂಮಿಯ ಸುತ್ತಲು ಮಾಡುವ ಆವರ್ತನಕ್ಕೆ ಅನುರೂಪವಾಗಿದ್ದು, ಚಂದ್ರನು ನಿಶ್ಚಯವಾಗಿಯೂ ಟೆರ್ ಸೊವಾಜ್ ಯಾವುದನ್ನು “ಆಶ್ಚರ್ಯಗೊಳಿಸುವ ಭೂಮ್ಯಂತರ್ಗತ ಉಸಿರಾಟ”ವೆಂದು ಕರೆಯಿತೋ, ಅದರ ಮೂಲವೆಂದು ರುಜುಪಡಿಸುತ್ತದೆ.
ಚಲನಾರೋಗದ ಕಾರಣ
ಅಧಿಕಾಂಶ ಜನರು ತಮ್ಮ ಜೀವನಗಳ ಯಾವುದೇ ಸಂಧಿಯಲ್ಲಿ ಚಲನಾ ರೋಗಪೀಡಿತರಾಗಿದ್ದಾರೆ. ಲಕ್ಷಗಟ್ಟಲೆ ಜನರು ಪ್ರಯಾಣಿಸುವಾಗ ಅದನ್ನು ಕ್ರಮವಾಗಿ ಸಂಧಿಸುತ್ತಾರೆ. ಆ ಪ್ರತಿನಿಧಿರೂಪದ ಪಿತ್ತೋದ್ರೇಕವನ್ನು ಯಾವುದು ಉಂಟುಮಾಡುತ್ತದೆಂದು ತಮಗೆ ತಿಳಿದದೆಯೆಂದು ವಿಜ್ಞಾನಿಗಳು ಈಗ ನಂಬುತ್ತಾರೆ. ಸಮಸ್ಯೆ ಮಿದುಳಲ್ಲಿ ಇದೆಯೆಂದು ತಿಳಿದುಬರುತ್ತದೆ. ಇಲ್ಲಿ, ಕಣ್ಣುಗಳು ಪ್ರಸಾರ ಮಾಡುವ ಮಾಹಿತಿ, ಒಳಕಿವಿ ಕೇಳುವ ಮಾಹಿತಿಗೆ ಸಮಾನವಾಗಿರುವುದಿಲ್ಲ. ಉದಾಹರಣೆಗೆ, ಒಂದು ಅಲ್ಲಾಡುವ ದೋಣಿಯೊಳಗೆ ದೇಹದ ಚಲನೆಯನ್ನು ಒಳಕಿವಿ ಕಂಡುಹಿಡಿಯುವಾಗ, ಕಣ್ಣುಗಳು ದೇಹವು ದೋಣಿಯೊಂದಿಗೆ ಹೋಗುವಾಗ ಸ್ಥಿರ ದೃಶ್ಯವನ್ನು ನೋಡುತ್ತವೆ. ಮಿದುಳು ಪಡೆಯುವ ಈ ವ್ಯತಿರಿಕ್ತ ಸಂದೇಶಗಳು, ಒತ್ತಡಕ್ಕೆ ಸಂಬಂಧಿಸಿದ ಚೋದಕ ಸ್ರಾವವನ್ನು ಬಿಡುಗಡೆ ಮಾಡುವಂತೆಯೂ, ಹೊಟ್ಟೆಯ ಸ್ನಾಯುಗಳಲ್ಲಿ ವಿದ್ಯುತ್ ಮಿಡಿತದ ಪ್ರಮಾಣವನ್ನು ಹೆಚ್ಚುವಂತೆಯೂ ಮಾಡಿ, ಇದು ಸಕಾಲದಲ್ಲಿ ಪಿತ್ತೋದ್ರೇಕ ಮತ್ತು ಕಾರುವಿಕೆಯನ್ನು ಆಗಿಸುತ್ತದೆ. ಈ ಚಲನಾ ರೋಗವನ್ನು ವಿಸರ್ಜಿಸುವ ವಿಧಗಳಲ್ಲಿ, ಪ್ರಯಾಣಕ್ಕೆ ಮೊದಲು ಒಂದು ಚಿಕ್ಕ ರೀತಿಯ, ಪಿಪ್ಟಿವಿರುವ, ಕಡಮೆ ಕೊಬ್ಬಿನ ಊಟ, ಒಳಕಿವಿಯು ಕೇಳುವುದನ್ನು ಕಣ್ಣುಗಳು ನೋಡಸಾಧ್ಯವಾಗುವಂತೆ ಕಾರಿನಲ್ಲಿ ಪ್ರಯಾಣಿಸುವಾಗ ಸುತ್ತುತ್ತಿರುವ ರಸ್ತೆಯ ಬಾಗುಗಳನ್ನು ಮತ್ತು ದೋಣಿಯಲ್ಲಿರುವಾಗ ದಿಗಂತವನ್ನು ನೋಡುವುದು; ತಲೆ ಮತ್ತು ದೇಹದ ಚಲನೆಯನ್ನು ಕಡಮೆ ಮಾಡುವುದು, ಮತ್ತು ಮನಸ್ಸನ್ನು ಇತರ ಯೋಚನೆಗಳಿಂದ ಮಗ್ನವಾಗಿಡುವುದು ಸೇರಿವೆ.
ಮಧ್ಯವಯಸ್ಕರು ಕೆಲಸನಷ್ಟಹೊಂದುತ್ತಾರೆ
“ನೀವು 40 ಮೀರಿದವರಾಗಿರುವಲ್ಲಿ ಕೆಲಸ ಬದಲಾಯಿಸುವುದನ್ನು ಯೋಚಿಸುವುದೂ ಬೇಡ,” ಎನ್ನುತ್ತದೆ ದ ಸ್ಟಾರ್, ದಕ್ಷಿಣ ಆಫ್ರಿಕದ ಜೊಹ್ಯಾನೆಸ್‌ಬರ್ಗಿನ ಒಂದು ವೃತ್ತಪತ್ರಕೆ. ಆರ್ಥಿಕ ಕುಸಿತದ ಕಾರಣ ದಕ್ಷಿಣ ಆಫ್ರಿಕದಲ್ಲಿ ಅನೇಕ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಪ್ರಥಮವಾಗಿ ಕೆಲಸನಷ್ಟಹೊಂದುವವರು ನಿವೃತ್ತಿಯಾಗುವ ವಯಸ್ಸನ್ನು ಸಮೀಪಿಸುತ್ತಿರುವ ಪ್ರಾಯಸ್ಥರು. ಆಳುಬಲ ಇಲಾಖೆಯ ಸಂಖ್ಯಾಸಂಗ್ರಹಣಕ್ಕನುಸಾರ, ದಕ್ಷಿಣ ಆಫ್ರಿಕದಲ್ಲಿ ಪ್ರತಿ ತಿಂಗಳಲ್ಲಿ, 50 ವರ್ಷ ಪ್ರಾಯಕ್ಕಿಂತ ಹೆಚ್ಚಿನ 37,500 ಜನರು ಕೆಲಸ ನಷ್ಟ ಹೊಂದುತ್ತಿದ್ದಾರೆ. “ದಕ್ಷಿಣ ಆಫ್ರಿಕದ ಈ ಪರಿಸ್ಥಿತಿ, 55ಕ್ಕೆ ಹೆಚ್ಚು ಪ್ರಾಯದ ಪುರುಷ ಮತ್ತು ಸ್ತ್ರೀಯರು ಕೆಲಸ ಸ್ಥಳಗಳಲ್ಲಿ ಅಪಾಯಕ್ಕೊಳಗಾಗಿರುವ ಜಾತಿಯಾಗಿರುವ ಸಮುದ್ರದಾಚೆಯ ಪ್ರವಣತೆಗಿಂತ ಬೇರೆಯಾಗಿಲ್ಲ,” ಎನ್ನುತ್ತದೆ ದ ಸ್ಟಾರ್. “ಆರ್ಥಿಕ ಸಹಕಾರ ಮತ್ತು ವಿಕಸನ ಸಂಘ ಹೇಳುವುದೇನಂದರೆ, 55ಕ್ಕೆ ಮಿಕ್ಕಿದ ವಯಸ್ಸಿನ ಪುರುಷ ಮತ್ತು ಸ್ತ್ರೀಯರ ಔಪಚಾರಿಕ ಉದ್ಯೋಗವು ಈಗ ಜನಪ್ರಿಯ ಪ್ರವಣತೆಯಲ್ಲ. . . . ಇದಕ್ಕಿರುವ ಅಪವಾದಗಳು ಜಪಾನಿನ ಪ್ರಾಯಸ್ಥರು. ಇವರಲ್ಲಿ 60 ಪ್ರತಿಶತ ಕೆಲಸ ಮಾಡುತ್ತಾರೆ.” (g93 2/8)
ಮಧುರ ದಾನಶೀಲತೆ?
ಕನ್ಸೂಮರ್ ರಿಪೋರ್ಟ್ಸ್ ಪತ್ರಿಕೆ ಇತ್ತೀಚೆಗೆ, ಪತ್ರಗಳನ್ನು ಕಳುಹಿಸಿ ಜನರು ತಮ್ಮ ಮಿತ್ರರು ಮತ್ತು ನೆರೆಯವರಿಂದ ವಂತಿಗೆಗಳನ್ನು ಕೂಡಿಸಿ ಕಳುಹಿಸುವಂತೆ ಹೇಳಿದ ಒಂದು ಕ್ಯಾನ್ಸರ್ ಚ್ಯಾರಿಟಿಯನ್ನು ಪ್ರತ್ಯೇಕಿಸಿ ಮಾತಾಡಿತು. ಆ ಪತ್ರದ ಹಿಂಭಾಗದಲ್ಲಿ ಚಿಕ್ಕ ಅಕ್ಷರಗಳಲ್ಲಿ ಮುದ್ರಿಸಿದ ಬರಹ ಕೆಲವು ಆಸಕ್ತಿಕರ ನಿಜತ್ವಗಳನ್ನು ಬಯಲು ಪಡಿಸಿತೆಂದು ಆ ವರದಿ ಗಮನಿಸುತ್ತದೆ. ಉದಾಹರಣೆಗೆ, ಹಿಂದಿನ ವರ್ಷದಲ್ಲಿ ಈ ಚ್ಯಾರಿಟಿ 25 ಲಕ್ಷ ಡಾಲರುಗಳನ್ನು ಕೂಡಿಸಿತಾದರೂ, ಪ್ರತಿ ಡಾಲರಿನಿಂದ ಒಂದು ಪೆನಿಗೂ ಕಡಮೆ ಹಣ ಕ್ಯಾನ್ಸರ್ ಸಂಶೋಧನೆಗೆ ಹೋಯಿತು. “ಉಳಿದದ್ದು ನಿಧಿ ಸಂಗ್ರಹಕಾರನಿಗೆ, ನಿಧಿ ಸಂಗ್ರಹದ ಖರ್ಚಿಗೆ, ಅದರ ಆಡಳಿತಕ್ಕೆ, ಹಿಂದೆ ತಪ್ಪು ರೀತಿಯಲ್ಲಿ ಹಣವನ್ನು ಕೋರಿದ್ದುದರಿಂದ ಎದ್ದ ವ್ಯಾಜ್ಯಗಳ ನಿರ್ಣಯದ ಖರ್ಚಿಗೆ, ಮತ್ತು ‘ಸಾರ್ವಜನಿಕ ಶಿಕ್ಷಣ’ಕ್ಕೆ ಖರ್ಚು ಮಾಡಲಾಯಿತು” ಎನ್ನುತ್ತದೆ ಆ ಪತ್ರಿಕೆ. ಮೇಲಿನ ಸಾರ್ವಜನಿಕ ಶಿಕ್ಷಣದ ಒಂದು ದೃಷ್ಟಾಂತ—ಕ್ಯಾನ್ಸರನ್ನು ತಡೆಯಲು, “ನಿಮ್ಮ ಕೆಲಸದ ಸ್ಥಳವನ್ನು ಕ್ಯಾನ್ಸರ್ ಅಪಾಯಗಳಿಂದ ಬಿಡುಗಡೆಯುಳ್ಳದ್ದಾಗಿ ಇಡಿರಿ” ಎಂಬ ವಿಧದ ತೀರಾ ಸಪ್ಪೆಯಾದ ಮತ್ತು ಸಾಮಾನ್ಯ ಬುದ್ಧಿವಾದ—ವನ್ನು ಅದು ಕೊಡುತ್ತದೆ. (g93 1/22)