ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 6/8 ಪು. 31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮೋಸಂಬೀಕ್‌ನಲ್ಲಿ ಸಮ್ಮೇಳನ
  • ಬರವಾದರೂ ಆಹಾರಕ್ಕೆ ಕೊರತೆಯಿಲ್ಲ
  • ಹಕ್ಕಿ ಕಳ್ಳಸಾಗಣೆ
  • ಏಸ್ಯಾದಲ್ಲಿ ಏಡ್ಸ್‌
  • ಇಲಿ ಹಿಡಿಯುವ ಕುಲ
  • ಹವಳಗಳು ಕಾವಿನಿಂದ ಸಾಯುತ್ತಿವೆ
  • ಟಾಗ್ವ ಬೀಜ—ಆನೆಗಳನ್ನು ರಕ್ಷಿಸಬಲ್ಲದೊ?
    ಎಚ್ಚರ!—1999
  • ಹವಳ—ಅಪಾಯದಲ್ಲಿದೆ ಮತ್ತು ಸಾಯುತ್ತಿದೆ
    ಎಚ್ಚರ!—1996
  • ಹವಳ ದಿಬ್ಬಗಳನ್ನು ಕಾಪಾಡಲು ಏನು ಮಾಡಸಾಧ್ಯವಿದೆ?
    ಎಚ್ಚರ!—1996
  • ಜಗತ್ತನ್ನು ಗಮನಿಸುವುದು
    ಎಚ್ಚರ!—1995
ಇನ್ನಷ್ಟು
ಎಚ್ಚರ!—1992
g92 6/8 ಪು. 31

ಜಗತ್ತನ್ನು ಗಮನಿಸುವುದು

ಮೋಸಂಬೀಕ್‌ನಲ್ಲಿ ಸಮ್ಮೇಳನ

ಅನೇಕ ವರ್ಷಗಳಲ್ಲಿ ಮೋಸಂಬೀಕ್‌ನಲ್ಲಿ ನಿಷೇಧಕ್ಕೊಳಗಾಗಿದ್ದ ಯೆಹೋವನ ಸಾಕ್ಷಿಗಳು, ಅಧಿಕಾರಿಗಳು ತಮಗೆ ಕೊಟ್ಟಿರುವ ಹೆಚ್ಚಿನ ಆರಾಧನಾ ಸ್ವಾತಂತ್ರ್ಯವನ್ನು ಗಣ್ಯಮಾಡುತ್ತಾರೆ. ಇತ್ತೀಚೆಗೆ, ಮೋಸಂಬೀಕ್‌ನ ರಾಜಧಾನಿಯಾದ ಮಾಪುಟೋದಲ್ಲಿ ಒಂದು ನಾಲ್ಕು ದಿನಗಳ “ಶುದ್ಧ ಭಾಷೆ” ಡಿಸ್ಟ್ರಿಕ್ಟ್‌ ಸಮ್ಮೇಳನವು ಕೋಸ್ಟ ಡೊ ಸಾಲ್‌ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಮ್ಮೇಳನದ ವಿಷಯ ವರದಿ ಮಾಡುತ್ತಾ, ಮಾಪುಟೋದಲ್ಲಿ ಪ್ರಕಟವಾಗುವ ಟೆಂಪೊ ಪತ್ರಿಕೆಯು, ಸಮ್ಮೇಳನದಾರಂಭದ ಕಾರ್ಯಕ್ರಮಕ್ಕೆ ಸುಮಾರು ಆರು ಸಾವಿರ ಜನರು ಹಾಜರಿದ್ದರೆಂದು ಹೇಳಿತು. ಭಾಷಣಗಳನ್ನು ಪೋರ್ಚುಗೀಸ್‌ ಮತ್ತು ಟ್ಸಾಂಗ ಭಾಷೆಗಳಲ್ಲಿ ಕೊಡಲಾಯಿತು. ಈ ಸಮ್ಮೇಳನದ ಉದ್ದೇಶವು, “ಜನರೊಳಗೆ ಭೇದ ಹುಟ್ಟಿಸಿರುವ ಭಾಷಾ ವ್ಯತ್ಯಾಸಗಳೆದುರಲ್ಲಿಯೂ ಕ್ರೈಸ್ತ ಏಕತೆಯನ್ನು ಬಲಪಡಿಸುವುದಾಗಿದೆ” ಎಂದು ಟೆಂಪೊ ಕೂಡಿಸಿ ಹೇಳಿತು. ಯೆಹೋವನ ಸಾಕ್ಷಿಗಳು ಯಾವ “ರಾಷ್ಟ್ರ, ಕುಲ, ವಿದ್ಯಾಭ್ಯಾಸ, ಮತ್ತು ಸಾಮಾಜಿಕ ಸ್ಥಾನಗಳವರು” ಆದರೂ ಈ ಉದ್ದೇಶದ ಗುರಿಯಲ್ಲಿ ಅಂತಾರಾಷ್ಟ್ರೀಯವಾಗಿ ಕೆಲಸ ನಡಿಸುತ್ತಾರೆಂದು ಈ ಲೇಖನ ವಿವರಿಸುತ್ತದೆ. (g91 5/8)

ಬರವಾದರೂ ಆಹಾರಕ್ಕೆ ಕೊರತೆಯಿಲ್ಲ

“ಲೋಕ ನಿಧಿಯ ಅಧ್ಯಯನಗಳು, ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಲ್ಯಾಟಿನ್‌ ಅಮೆರಿಕದಲ್ಲಿ, ಬರಗಾಲ ಹೆಚ್ಚಾಗಿದೆ” ಎಂದು ಫ್ರೆಂಚ್‌ ಅರ್ಥಶಾಸ್ತ್ರಜ್ಞ ಶಾಕ್ಸ್‌ ಚಾಂಚೊಲ್‌, ಸಾವ್‌ ಪೌಲೊ, ಬ್ರೆಸೀಲ್‌ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಹೇಳಿದರು. ಅದರ ಮುಖ್ಯ ವಿಷಯವು, “ಕ್ಷಾಮ—90ಗಳ ಪಂಥಾಹ್ವಾನ” ಎಂದಾಗಿದ್ದರೂ ಕಡಮೆ ನ್ಯೂನಪೋಷಿತರೆಂದೆಣಿಸಲ್ಪಡುವ 111 ಕೋಟಿ 60 ಲಕ್ಷ ಜನರಿಗೆ ಹೆಚ್ಚು ನಿರೀಕ್ಷೆ ಕೊಡಲ್ಪಡಲಿಲ್ಲ. ಒ ಎಸ್ಟಾಡೊ ಡಿ ಎಸ್‌ ಪೌಲೊ ವಾರ್ತಾಪತ್ರಿಕೆ ವರದಿ ಮಾಡುವುದು: “ವಿಶೇಷಜ್ಞರು ಖಾತ್ರಿ ಕೊಡುವುದೇನಂದರೆ ಆಹಾರದ ಕೊರತೆಯ ಕಾರಣ ಈ ಸಮಸ್ಯೆಯಿರುವುದಲ್ಲ. 5.3 [ಸಹಸ್ರ ಲಕ್ಷ] ನಿವಾಸಿಗಳ ಆವಶ್ಯಕತೆಗಳನ್ನು ತೃಪ್ತಿಪಡಿಸಲು ಸಾಕಷ್ಟನ್ನು ಲೋಕವು ಉತ್ಪಾದಿಸುತ್ತದೆ. ಆದರೆ ಜನರಿಗೆ ಆಹಾರವನ್ನು ಕೊಳ್ಳುವಷ್ಟು ಹಣವಿಲ್ಲ.” ಏಕೆ? ಅಂತಾರಾಷ್ಟ್ರೀಯ ಸಾಲ ಮಾತುಕತೆಯಿಂದಾದ ಸಾಮಾಜಿಕ ಕಾರ್ಯಕ್ರಮಗಳ ಕಡಿತದಿಂದಾಗಿ ಕ್ಷಾಮವು ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಚಾಂಚೊಲರಿಗನುಸಾರ, ಇನ್ನೊಂದು ಕಾರಣವು: “ನಗರೀಕರಣದ ಕಾರಣ ಕ್ಷಾಮವು ಅತಿ ಕೆಟ್ಟು ಹೋಗಿದೆ.” (g91 5/8)

ಹಕ್ಕಿ ಕಳ್ಳಸಾಗಣೆ

“ಪ್ರತಿ ವರ್ಷ, ಸುಮಾರು 5 ಕೋಟಿ ಡಾಲರ್‌ ಮಾರಾಟದ ಕ್ರಯವಿರುವ ಕಡಮೆ ಪಕ್ಷ 2,25,000 ಪಕ್ಷಿಗಳು ಕಳ್ಳಸಾಗಣೆಗೆ ಒಳಗಾಗುತ್ತವೆ ಯಾ ಮೋಸದ ಪ್ರಮಾಣ ಪತ್ರಗಳನ್ನು ಕೊಟ್ಟು ಅವುಗಳನ್ನು ಆಮದು ಮಾಡಲಾಗುತ್ತದೆ. ಉದಾಹರಣೆಗೆ, ಆಫ್ರಿಕ, ಇಂಡೊನೇಸ್ಯ, ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಸ್ಥಳೀಕರು ಗಿಳಿಗಳನ್ನು ಹಿಡಿದು ಕೆಲವೇ ಡಾಲರುಗಳಿಗೆ ಮಾರುತ್ತಾರೆ. “ಆದರೆ ಆ ಹಕ್ಕಿಗಳು ಅಮೆರಿಕದ ಯಾ ಯೂರೋಪಿನ ಬಳಕೆದಾರರನ್ನು ಮುಟ್ಟುವಷ್ಟರಲ್ಲಿ, ಡೊಮಿನಿಕದ ದೊಡ್ಡ ಇಂಪೀರಿಯಲ್‌ ಆ್ಯಮೆಸೋನ್‌ ಹಕ್ಕಿಗಳಂಥವುಗಳು ಪ್ರತಿಯೊಂದಕ್ಕೆ 1,00,000 ಡಾಲರು ಬೆಲೆ ಬಾಳುತ್ತವೆ,” ಎಂದು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ಗಮನಿಸುತ್ತದೆ. ಅನೇಕ ಗಿಳಿ ಜಾತಿಗಳು ಕಾಡುಗಳಿಂದ ನಿರ್ಮೂಲವಾಗುವ ಅಪಾಯವು ಒಡನೆ ಇದೆ ಎಂದು ಹೇಳಲಾಗುತ್ತದೆ. ಕಳ್ಳಸಾಗಣೆಯ ಹಕ್ಕಿಗಳಲ್ಲಿ 90 ಪ್ರತಿಶತ ಹಕ್ಕಿಗಳು “ಅಯೋಗ್ಯ ಆಹಾರ ತಿನ್ನಿಸುವಿಕೆ ಮತ್ತು ನಿರ್ದಯದ ಪರಿಸ್ಥಿತಿಗಳ ಕಾರಣ ಸಾಗಾಣಿಕೆಯಲ್ಲಿ ಸಾಯುತ್ತವೆ.” (g91 5/8)

ಏಸ್ಯಾದಲ್ಲಿ ಏಡ್ಸ್‌

ಫೆಬ್ರವರಿ 1990ರಲ್ಲಿ, ಏಸ್ಯಾದಲ್ಲಿ ಸುಮಾರು 2,000 ಏಡ್ಸ್‌ (AIDS) ರೋಗಿಗಳಿದ್ದರು. ಆದರೆ ಇತ್ತೀಚಿನ ಯುನೊಯಿಟೆಡ್‌ ನೇಷನ್ಸ್‌ ವರದಿಯೊಂದು, ಈಗ ಎಚೈವಿ (HIV) ರೋಗಾಣುವಿನಿಂದ 5,00,000 ಜನರು ಬಳಲುತ್ತಿದ್ದಾರೆಂದು ಲೋಕಾರೋಗ್ಯ ಸಂಘವು ಅಂದಾಜು ಮಾಡುತ್ತದೆಂದು ಹೇಳುತ್ತದೆ. ಏಸ್ಯಾವೀಕ್‌ ಪತ್ರಿಕೆಗನುಸಾರ, “ಯು.ಎನ್‌., ಏಸ್ಯಾದಲ್ಲಿ ಏಡ್ಸ್‌ ಕೇಸುಗಳು ನಾಟಕೀಯವಾಗಿ ವೃದ್ಧಿಯಾಗುತ್ತವೆಂದು ಎಂದು ಈಗ ತಾನೆ ವರದಿ ಮಾಡಿದೆ.” ಈ ಸಮಸ್ಯೆಯನ್ನು ನಿಭಾಯಿಸಲು, ಲೋಕಾರೋಗ್ಯ ಸಂಸ್ಥೆ ಹೆಚ್ಚು ಉತ್ತಮ ಶಿಕ್ಷಣ ಮತ್ತು ಮಾಹಿತಿಯನ್ನು ಶಿಫಾರಸು ಮಾಡುತ್ತದೆ.” (1g91 5/8)

ಇಲಿ ಹಿಡಿಯುವ ಕುಲ

ಭಾರತದ ತಮಿಳ್ನಾಡಿನಲ್ಲಿ ರೈತರು ಇಲಿಗಳ ಕಾಟವನ್ನು ನಿಯಂತ್ರಿಸಲು ರಸಾಯನ, ಜಂತುನಾಶಕ, ಮತ್ತು ಆಹಾರವನ್ನು ಇಟ್ಟು ಪ್ರಯತ್ನಿಸಿದ್ದಾರೆ. ಇದರಲ್ಲಿ ಸೋತ ರೈತರು ಇರುಳ ಬುಡಕಟ್ಟಿನ ಜನರನ್ನು ಕೆಲಸಕ್ಕೆ ಹಿಡಿದಿದ್ದಾರೆ ಎನ್ನುತ್ತದೆ ಇಂಡಿಯ ಟುಡೇ ಪತ್ರಿಕೆ. ಒಂದನೆಯ ವರ್ಷದಲ್ಲಿ ಇರುಳರು 40,000 ಎಕ್ರೆ ಸ್ಥಳದಲ್ಲಿ 1,40,000 ಇಲಿಗಳನ್ನು ಹಿಡಿದರು. ಈ ಇರುಳರು “ಕೀಟನಾಶಕಗಳನ್ನು ಉಪಯೋಗಿಸುವುದಿಲ್ಲ, ಆದರೆ ಅವರ ಕಾರ್ಯರೀತಿ ಇಲಿ ವರ್ತನೆಯ ಮೇಲೆ ಆಧಾರಗೊಂಡಿದೆ.” ಅವರು ಬಿಲಗಳ ದ್ವಾರವನ್ನು ಮುಚ್ಚಿ ಇಲಿಗಳನ್ನು ತಡೆದು ಇಡುತ್ತಾರೆ. ಅವರು ಅಷ್ಟೊಂದು ಇಲಿಗಳನ್ನು ಹಿಡಿಯುವ ಕಾರಣ, ಈ ಇರುಳರು ಇಲಿ ಮಾಂಸವನ್ನು ಕೋಳಿ ಮತ್ತು ಮೀನು ತೀನಿಯಾಗಿ ಮತ್ತು ಇಲಿ ಚರ್ಮವನ್ನು ಉಪಯುಕ್ತ ಚರ್ಮವಾಗಿ ಉಪಯೋಗಿಸುವ ಸಾಧ್ಯತೆಯನ್ನು ಕಂಡುಹಿಡಿಯುತ್ತಿದ್ದಾರೆ. ಇಂಡಿಯ ಟುಡೇ ಹೇಳುವುದೇನಂದರೆ, “ಈ ಪ್ರಯೋಗವು, ಈ ಇರುಳ ವಿಧಾನವು ಅತಿ ಖಾತ್ರಿಯ ವಿಧಾನವೆಂದು ತೀರ್ಮಾನಾತ್ಮಕವಾಗಿ ರುಜು ಮಾಡಿದೆ” ಮತ್ತು ಇಲಿ ನಿಯಂತ್ರಣಕ್ಕೆ ಇದು ಕಡಮೆ ಖರ್ಚಿನ ಮಾರ್ಗ. (g91 5/8)

ಹವಳಗಳು ಕಾವಿನಿಂದ ಸಾಯುತ್ತಿವೆ

“ಭೂವ್ಯಾಪಕವಾಗಿ ಏರುತ್ತಿರುವ ಉಷ್ಣದ ಪ್ರಥಮ ರುಜುವಾತು ಬಿಳಿದಾಗುತ್ತಿರುವ ಹವಳಗಳಿಂದ ಬರಬಹುದು,” ಎನ್ನುತ್ತಾರೆ ಪೋರ್ಟೋರಿಕೋ ವಿಶ್ವವಿದ್ಯಾಲಯದ ಅರ್ನೆಸ್ಟ್‌ ವಿಲ್ಯಮ್ಸ್‌. ಸಮುದ್ರದಲ್ಲಿ ಹೆಚ್ಚುವ ಕಾವು ಹವಳಗಳು ತಿನ್ನುವ ಸೂಕ್ಷ್ಮದರ್ಶಕೀಯ ಪಾಚಿಯನ್ನು ತಳ್ಳಿಹಾಕುವಂತೆ ಮಾಡುತ್ತದೆ. ಇದು ಹವಳ ದಿಬ್ಬಗಳಲ್ಲಿ ಬಿಳಿ ಕಲೆಗಳನ್ನು ಬಿಟ್ಟು ಹೋಗುವುದರಿಂದ “ಬಿಳಿದಾಗುವುದು” ಎಂಬ ಪದವನ್ನು ಉಪಯೋಗಿಸಲಾಗುತ್ತದೆ. “ಈ ಪಾಚಿ ಎಂಬ ಸಹಭಾಗಿ ಇಲ್ಲದಿರುವಲ್ಲಿ, ಹವಳವು ಬಲಹೀನವಾಗಿ ಪುನರುತ್ಪನ್ನ ಕಾರ್ಯವನ್ನು ನಿಲ್ಲಿಸುತ್ತದೆ.” ಬಹಾಮಸ್‌, ಬೆರ್ಮ್ಯುಡ, ಫ್ಲಾರಿಡ, ಹವಾಯಿ, ಜಮೇಕ, ಒಕಿನಾವಾ ಮತ್ತು ಪೋರ್ಟೋರಿಕೋಗಳನ್ನೊಳಗೊಂಡಿರುವ ಅನೇಕ ಸ್ಥಳಗಳಲ್ಲಿ ಬಣ್ಣಗೆಟ್ಟಿರುವ ಯಾ ಬಿಳಿಚಿಗೊಂಡ ಹವಳ ದಿಬ್ಬಗಳು ಕಾಣಸಿಕ್ಕಿವೆ. ಕಳೆದ ನೂರು ವರ್ಷಗಳಲ್ಲಿ 1980ಗಳ ದಶಕವು ಅತಿ ಕಾವೇರಿದ ದಶಕವೆಂದೂ “ಅನೇಕ ಹವಾಮಾನ ತಜ್ಞರು, ಮುಂದಿನ ಶತಮಾನದಲ್ಲಿ ಉಷ್ಣವು ಅನೇಕ ಡಿಗ್ರಿ ಹೆಚ್ಚುವುದೆಂದೂ ಮುಂತಿಳಿಸುತ್ತಾರೆ” ಎಂದು ದ ಟೊರಾಂಟೊ ಸ್ಟಾರ್‌ ಗಮನಿಸುತ್ತದೆ. (g91 5/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ