ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 3/8 ಪು. 24-25
  • ನಗೆಬರಿಸುವ ನರಹುಲಿ ಹಂದಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಗೆಬರಿಸುವ ನರಹುಲಿ ಹಂದಿ
  • ಎಚ್ಚರ!—1994
  • ಅನುರೂಪ ಮಾಹಿತಿ
  • ವಾಲ್ರಸ್‌ ಮತ್ತು ಮಾದಕ ದ್ರವ್ಯ ವ್ಯಾಪಾರ
    ಎಚ್ಚರ!—1991
  • ಚಿರತೆ—ಬೆಕ್ಕುಗಳಲ್ಲಿ ಅತಿ ವೇಗಿ
    ಎಚ್ಚರ!—1997
  • ವೇಗದಲ್ಲಿ ಕುಲೀನ
    ಎಚ್ಚರ!—1996
ಎಚ್ಚರ!—1994
g94 3/8 ಪು. 24-25

ನಗೆಬರಿಸುವ ನರಹುಲಿ ಹಂದಿ

ಕುಕ್ಕೋಟಕ್ಕೆ ಹೋಗುತ್ತಿರುವ ನರಹುಲಿಗಳ ಒಂದು ಕುಟುಂಬವು, ಆಫ್ರಿಕನ್‌ ಪೊದೆಯಲ್ಲಿನ ಅತ್ಯಂತ ವಿನೋದಕಾರಿ ದೃಶ್ಯಗಳಲ್ಲಿ ಒಂದಾಗಿದೆ. ಪ್ರತಿಯೊಂದು ತನ್ನ ತೆಳ್ಳನೆಯ ಕುಚ್ಚಾದ ಬಾಲವನ್ನು ಚಿಕ್ಕದಾದೊಂದು ರೇಡಿಯೊ ಆ್ಯಂಟೆನದಂತೆ ಬಿಗಿಯಾಗಿ ನೆಟ್ಟಗೆ ನಿಲ್ಲಿಸಿ, ಗಂಭೀರ ನರಹುಲಿ ಹಂದಿಯ ವಿಧಾನದಲ್ಲಿ ವೇಗವಾದ ಹೆಜ್ಜೆಗಳನ್ನಿಡುತ್ತಾ ಅವು ಕುಕ್ಕೋಟ ಮಾಡುತ್ತಿರುವುದನ್ನು ನೋಡಸಾಧ್ಯವಿದೆ. ನಿಸ್ಸಂದೇಹವಾಗಿ, ನರಹುಲಿ ಹಂದಿಯ ಉದ್ದೇಶವು ವೀಕ್ಷಕರನ್ನು ರಂಜಿಸುವುದಾಗಿರುವುದಿಲ್ಲ. ಮೇಬರ್ಲಿಸ್‌ ಮ್ಯಾಮಲ್ಸ್‌ ಆಫ್‌ ಸದರ್ನ್‌ ಆಫ್ರಿಕ ಎಂಬ ಇಂಗ್ಲಿಷ್‌ ಪುಸ್ತಕಕ್ಕನುಸಾರ, “ಓಡಿಹೋಗುವಾಗ, ವಿಶೇಷವಾಗಿ ಬಹಳ ಕಡಿಮೆ ದೃಷ್ಟಿಯಿರುವ ಎಳೆಯ ಹಂದಿಗಳ ಸಂಬಂಧದಲ್ಲಿ, ಉದ್ದವಾದ ಹುಲ್ಲುಗಳಲ್ಲಿ ಒಬ್ಬರನ್ನೊಬ್ಬರು ನೋಡುವಂತೆ ಈ ರೂಢಿಯು ಬಹುಶಃ ಪ್ರಾಣಿಗಳಿಗೆ ಸಹಾಯ ಮಾಡುತ್ತದೆ.”

ಅವು ತಮ್ಮ “ಮನೆ”ಯನ್ನು ಪ್ರವೇಶಿಸುವ ರೀತಿ, ವಿಶೇಷವಾಗಿ ಮಹಾ ವೇಗದಲ್ಲಿ ಹಾಗೆ ಮಾಡುವುದಾದರೆ, ಇನ್ನೂ ಹೆಚ್ಚು ನಗೆಬರಿಸುವಂಥದ್ದಾಗಿದೆ. ನರಹುಲಿ ಹಂದಿಗಳಿಗೆ “ಮನೆ”ಯು, ನೆಲದಲ್ಲಿರುವ ಗೆದ್ದಲುಬಾಕ ಯಾ ಮುಳ್ಳುಹಂದಿಯ ದೊಡ್ಡ ಬಿಲವಾಗಿರುತ್ತದೆ, ಮತ್ತು ಅಪೂರ್ವವಾದೊಂದು ಪ್ರವೇಶದ ಕ್ರಮವು ನರಹುಲಿ ಹಂದಿಗಳಿಗಿವೆ. ಯೋಗ್ಯವಾದ ನರಹುಲಿ ಹಂದಿಗಳ ವಿಧಾನವನ್ನು ಇನ್ನೂ ಕಲಿಯದೆ ಇರುವ ಎಳೆಯ ಹಂದಿಗಳು, ಬೇರೆ ಯಾವುದೇ ಆತ್ಮಗೌರವವುಳ್ಳ ಪ್ರಾಣಿಯಂತೆ ಗುಹೆಯೊಳಗೆ ತಲೆಮುಂದೆ ಮಾಡಿ ನುಗ್ಗುವುವು. ಹೆತ್ತವರು ಹಾಗೆ ಮಾಡುವುದಿಲ್ಲ! ಪೂರ ವೇಗದಲ್ಲಿ, ಸೈನಿಕ ನಿಷ್ಕೃಷ್ಟತೆಯೊಂದಿಗೆ, ತಮ್ಮ ಗುಹೆಯ ದ್ವಾರದಲ್ಲಿ ಕ್ಷಿಪ್ರವಾಗಿ ಹಿಂದು ಮುಂದಾಗಿ ತಮ್ಮ ಮನೆಯ ಸುರಕ್ಷ ಎಲ್ಲೆಯೊಳಗೆ ತರ್ವೆಯಾಗಿ ಹಿಂದಕ್ಕೆ ಚಲಿಸುವವು! ಈ ಚಿಕ್ಕ ಚಲನೆಯು ಕೇವಲ ವೀಕ್ಷಕರನ್ನು ವಿನೋದಿಸಲು ಮಾಡಲಾಗುವುದಿಲ್ಲ. ತನ್ನ ವೈರಿಯನ್ನು ಎದುರಿಸುವ ಹಾಗೂ ತನ್ನ ಮಾರಕ ಕೋರೆ ಹಲ್ಲುಗಳಿಂದ ಯಾವುದೇ ಹೆಚ್ಚಿನ ಆಕ್ರಮಣವನ್ನು ನಿವಾರಿಸುವ ಖಂಡಿತವಾದ ಪ್ರಯೋಜನ ಈಗ ನರಹುಲಿ ಹಂದಿಗೆ ಇದೆಯೆಂದು ತಿಳಿಯಿರಿ.

ನಿಸ್ಸಂದೇಹವಾಗಿ, ಈ ಅವಸರದ ಹಿಮ್ಮೆಟ್ಟುವಿಕೆಗೆ ಕೆಲವೊಮ್ಮೆ ಅನಿರೀಕ್ಷಿತವಾದ ತೊಡಕುಗಳು ಇರಬಲ್ಲವು. ನೆಲದ ಕೆಳಗಿರುವ ಈ ಧೂಳಾದ ಗುಹೆಗಳಲ್ಲಿ ಇರಬಹುದಾದ ಪ್ರಾಣಿಗಳಲ್ಲಿ ನರಹುಲಿ ಹಂದಿಗಳು ಮಾತ್ರವೇ ಅಲ್ಲ ಎಂಬುದೇ ಸಮಸ್ಯೆಯಾಗಿದೆ. ಕತ್ತೆಕಿರುಬ, ಜೀನುತುಪ್ಪ ತಿನ್ನುವ ಬ್ಯಾಡ್ಜರ್‌, ತೋಳಗಳು ಮತ್ತು ಮುಳ್ಳುಹಂದಿಗಳು ಈ ಬಿಲಗಳಲ್ಲಿ ಆಶ್ರಯವನ್ನು ಹುಡುಕಬಹುದು. “ಬಿಲಗಳಲ್ಲಿ ಈಗಾಗಲೇ ಯಾರಾದರೂ ಇರುವುದಾದರೆ, ಗೊತ್ತಿಲ್ಲದ ಅಹಿತಕರ ಎದುರಿಸುವಿಕೆಗಳಿಗೆ [ನರಹುಲಿ ಹಂದಿಗಳು] ಅಧೀನವಾಗಬಹುದು,” ಎಂಬುದಾಗಿ ಕೂಸ್ಟಾಸ್‌ ಪತ್ರಿಕೆ ವರದಿಸುತ್ತದೆ. “ಕೆಲವು ಸಂದರ್ಭಗಳಲ್ಲಿ, ನರಹುಲಿ ಹಂದಿಗಳ ಹಿಂಭಾಗದಿಂದ [ಮುಳ್ಳು ಹಂದಿಯ] ಮುಳ್ಳುಗಳು ಹೊರಕ್ಕೆ ಚಾಚಿರುವುದನ್ನು ನೋಡಲಾಗಿದೆ.” ಸರ್ವಸಮ್ಮತವಾಗಿ, ಇದು ದುರದೃಷ್ಟದ ನರಹುಲಿ ಹಂದಿಗೆ ಬಹಳ ವಿನೋದಕಾರಿಯಾಗಿರಲಾರದು.

ಭಯ ಸೂಚಕ ಕೋರೆ ಹಲ್ಲುಗಳಿರುವುದರಿಂದ, ನರಹುಲಿ ಹಂದಿಯು ಬೇಟೆಯ ಪ್ರಾಣಿಯನ್ನು ಹುಡುಕುವ ದುಷ್ಟ ಮಾಂಸಾಹಾರಿಯಂತೆ ಕಾಣುತ್ತದೆ. ಆದರೆ ಹಾಗಲ್ಲ. “ಸಾಮಾನ್ಯವಾಗಿ ಕೆಡುಕು ಮಾಡದ ಪ್ರಾಣಿ”ಯಂತೆ ನರಹುಲಿ ಹಂದಿಯು ವರ್ಣಿಸಲ್ಪಟ್ಟಿದೆ. ನರಹುಲಿ ಹಂದಿಯು ಹುಲ್ಲು ತಿನ್ನುವ ಪ್ರಾಣಿಯಾಗಿದೆ, ಮತ್ತು ತಿನ್ನುವುದರ ಕುರಿತು ಅದು ಬಲು ಆಯ್ಕೆಯ ಸ್ವಭಾವವುಳ್ಳದ್ದಾಗಿದೆ! ಅದು ಬಹುಮಟ್ಟಿಗೆ ಪ್ರತ್ಯೇಕವಾಗಿ ಚಿಕ್ಕ ಹುಲ್ಲುಗಳನ್ನು—ಹುಲ್ಲು ಚಿಗುರುಗಳ ಎಳೆಯ ತುದಿಗಳನ್ನು ಮಾತ್ರ ತಿನ್ನುತ್ತಾ, ಕಳೆಗಳನ್ನು, ಉದನ್ದೆಯ ಹುಲ್ಲುಗಳನ್ನು ಯಾ ಇತರ ಗಿಡಗಳನ್ನು ತೊರೆಯುತ್ತದೆ. ಇನ್ನೂ ಹೆಚ್ಚಾಗಿ, ತನ್ನ ಊಟವನ್ನು ಕಂಡುಹಿಡಿಯಲು ಅತ್ಯಂತ ಅನಾಕರ್ಷಕ ಸ್ಥಳವನ್ನೂ ಕೂಡ ವಿವರವಾಗಿ ಪರೀಕ್ಷಿಸಲು ನರಹುಲಿ ಹಂದಿಯು ಸಿದ್ಧವಾಗಿದೆ. ಕೆಳಗೆ ಬೆಳೆಯುತ್ತಿರಬಹುದಾದ ರುಚಿಯಾದ ಹೊಸ ಹುಲ್ಲುಗಳ ಶೋಧನೆಯಲ್ಲಿ ಕುರುಚಲು ಕ್ಷೇತ್ರಗಳೊಳಗೆ ತನ್ನ ಮುಖವನ್ನು ನೂಕುವಾಗ, ಕೋರೆ ಹಲ್ಲುಗಳು ಅದರ ಮುಖವನ್ನು ರಕ್ಷಿಸುವ ಕಾರ್ಯಮಾಡುತ್ತವೆ.

ದಿನದ ಹೆಚ್ಚು ಕಾವಿನ ತಾಸುಗಳಲ್ಲಿ, ತಮ್ಮ ಕೋರೆ ಹಲ್ಲುಗಳಿಂದ ದೊಡ್ಡದಾಗಿ ಮಾಡಲ್ಪಟ್ಟಿರುವ ತೊರೆಯಲ್ಪಟ್ಟ ಗೆದ್ದಲುಬಾಕ ಸಸ್ತನಿಯ ಬಿಲದಲ್ಲಿ—“ಮನೆ”ಯಲ್ಲಿ ನರಹುಲಿ ಹಂದಿಗಳನ್ನು ಅನೇಕ ವೇಳೆ ಕಾಣಸಾಧ್ಯವಿದೆ. ಅವು ವಿಶ್ರಾಂತಿ ತೆಗೆದುಕೊಳ್ಳುತ್ತಾ ಇರದಿದ್ದರೆ, ಹತ್ತಿರವಿರುವ ನೀರಿನ ಉತ್ಪತ್ತಿ ಸ್ಥಾನದಲ್ಲಿ ಹೊರಳಾಡುವುದನ್ನು ಮತ್ತು ನೀರು ಕುಡಿಯುವುದನ್ನು ನೀವು ನೋಡಬಹುದು. ತಿನ್ನುವ ಸಮಯವಾದಾಗ, ಅವು ಹುಲ್ಲಿನ ಬಯಲಿನ ಮೇಲೆ ಕುಕ್ಕೋಟ ಮಾಡುವುದನ್ನು ನೋಡಸಾಧ್ಯವಿದೆ. (ಒತ್ತಾಯಿಸಲ್ಪಡುವ ತನಕ ಕುಕ್ಕೋಟದಿಂದ ನಾಗಾಲೋಟಕ್ಕೆ ನಡಗೆಯ ಗತಿಯನ್ನು ಬದಲಿಸಲು ಅವು ನಿರಾಕರಿಸುತ್ತವೆ.) ಅವುಗಳಲ್ಲಿ ಎಲ್ಲವು—ವಯಸ್ಕ ಹಂದಿಯಿಂದ ಎಳೆಯ ಹಂದಿಯವರೆಗೆ—ಬಿಗಿಯಾಗಿ ನೆಟ್ಟಗೆ ನಿಂತಿರುವ ತಮ್ಮ ತಂತಿಯಂತಹ ಬಾಲಗಳನ್ನು ಹೊತ್ತುಕೊಂಡು, ಗಂಭೀರವಾಗಿ ಮುಂದೆ ಸಾಗುತ್ತವೆ.

ನರಹುಲಿ ಹಂದಿಗಳು, ಹಂದಿ ಕುಟುಂಬದ ಅತಿ ಸುಂದರ ಸದಸ್ಯರಾಗಿರುವುದಿಲ್ಲ. ಆದರೂ, ತಮ್ಮ ಉದ್ದವಾದ ಮುಖಗಳ ಮೇಲೆ ಸುವ್ಯಕ್ತವಾಗಿರುವ “ನರಹುಲಿ”ಗಳಿಂದ ಹುಟ್ಟಿರುವ ಅತ್ಯಂತ ಯುಕ್ತವಾದ ಹೆಸರು ಅವುಗಳಿಗೆ ಇದೆ. ಇವು ನಿಜವಾಗಿಯೂ ಯಥಾರ್ಥವಾದ ನರಹುಲಿಗಳಲ್ಲ ಆದರೆ ದಪ್ಪದಾದ ಚರ್ಮದ ಸ್ವಾಭಾವಿಕ ಪರಿಣಾಮಗಳಾಗಿವೆ, ಮತ್ತು ಅವು ಬಹಳ ಆಚಾರಾರ್ಥಕವಾಗಿರಬಲ್ಲವು. ನರಹುಲಿ ಹಂದಿಯು ಅಗೆಯುವಾಗ ಮತ್ತು ತಿನ್ನುವಾಗ ಅದರ ಕಣ್ಣುಗಳನ್ನು ಸಂರಕ್ಷಿಸಲು ಅವು ಸಹಾಯ ಮಾಡಬಹುದು. ಗಂಡುಗಳೊಳಗೆ ಕಲಹವೊಂದಿರುವಾಗ ಕೂಡ, ಎದುರಾಳಿಯ ಸೀಳುವ ಕೋರೆ ಹಲ್ಲುಗಳ ವಿರುದ್ಧ ಕವಚದಂತೆ ಕಾರ್ಯಮಾಡುತ್ತಾ ಪ್ರಯೋಜನಕಾರಿಯಾಗಿರಬಲ್ಲದು.

ಈ ನಗೆಬರಿಸುವ ಮುಖದ ಹಿಂದೆ ಒಬ್ಬ ಘೋರ ಕಾದಾಟಗಾರನ ಗುಣ ಅಡಗಿದೆ. ತಮ್ಮ ಎಳೆಯ ಮಕ್ಕಳ ಕುರಿತು ತಾಯಿ ನರಹುಲಿ ಹಂದಿಗಳು ಬಹಳ ಲಕ್ಷ್ಯಕೊಡುವವೂ ಸಂರಕ್ಷಿಸುವವೂ ಆಗಿವೆ. ಅದು ತಮ್ಮನ್ನೇ ಕಷ್ಟದಲ್ಲಿ ಹಾಕಿಕೊಳ್ಳುವ ಅರ್ಥದಲ್ಲಿದ್ದರೂ ಕೂಡ, ಹಿಂಡಿನ ಬೇರೆ ವಯಸ್ಕ ಸದಸ್ಯರು ಅದೇ ರೀತಿಯಲ್ಲಿ ಎಳೆಯ ಹಂದಿಗಳನ್ನು ರಕ್ಷಿಸುವವು. ಉದಾಹರಣೆಗೆ, ಚಿರತೆಯು ಮರಿ ನರಹುಲಿ ಹಂದಿಯನ್ನು ಹಿಡಿಯಲು ಪ್ರಯತ್ನಿಸಿದರೆ, ವಯಸ್ಕ ಹಂದಿಯು ಆಕ್ರಮಣಗಾರನ ಮೇಲೆ ದಾಳಿಮಾಡುವುದು. ಸಾಮಾನ್ಯವಾಗಿ ಈ ದಾಳಿಮಾಡುತ್ತಿರುವ ರೋಷಾವೇಶದ ಮತ್ತು ಚೂಪಾದ ಕೋರೆ ಹಲ್ಲುಗಳ ಮೂಟೆಯ ನೋಟಮಾತ್ರವೇ ಚಿರತೆಯನ್ನು ಓಡಿಹೋಗುವಂತೆ ಮಾಡುವುದು. ಈ ನಡುವೆ, ಮರಿಗಳು ತಮ್ಮ ತಾಯಿಯ ಹೊಟ್ಟೆಯ ಕೆಳಗೆ ಸುರಕ್ಷಿತವಾಗಿ ಉಳಿಯಲು ಪ್ರಯತ್ನಿಸುತ್ತಾ, ಎಗರಾಡುವವು. ಬೆದರಿಕೆಯು ಸಿಂಹ ಅಥವಾ ಚಿರತೆಯಂತೆ, ಹೆಚ್ಚು ಗಂಭೀರವಾಗಿದ್ದರೆ, ನರಹುಲಿ ಹಂದಿಗಳು ಇನ್ನೂ ಎತ್ತರವಾಗಿ ಏರಿಸಲ್ಪಟ್ಟ ತಮ್ಮ ಬಾಲಗಳೊಂದಿಗೆ ವಿವೇಕಪೂರ್ಣವಾಗಿ ಹಿಮ್ಮೆಟ್ಟುತ್ತವೆಂಬುದು ನಿಜ. ವಯಸ್ಕ ಹಂದಿಗಳಾದರೊ, ಎಳೆಯ ಹಂದಿಗಳು ಸುರಕ್ಷೆಯ ಕಡೆಗೆ ಮೊದಲು ತಲಪುವಂತೆ ಅನುಮತಿಸುತ್ತಾ, ಮರಿಗಳನ್ನು ಹಿಂಬಾಲಿಸುವವು.

ಆದರೂ, ಕೂಸ್ಟಾಸ್‌ ಪತ್ರಿಕೆಯಲ್ಲಿ ಡಾ. ಡ್ಯಾರೆಲ್‌ ಮೇಸನ್‌ ಗಮನಿಸುವುದು, “ವಯಸ್ಕ ನರಹುಲಿ ಹಂದಿಗಳು ಚಿರತೆಗಳಿಗೆ ಮತ್ತು ಕತ್ತೆ ಕಿರುಬಗಳಿಗೆ ಭಯಂಕರ ಎದುರಾಳಿಯಾಗಿರಬಲ್ಲವು.” ನರಹುಲಿ ಹೆಣ್ಣು ಹಂದಿಯೊಂದು ತನ್ನ ಎಳೆಯವರಲ್ಲಿ ಒಂದನ್ನು ಒಂದು ದೊಡ್ಡ ಗಂಡು ಚಿರತೆಯ ವಿರುದ್ಧ ರಕ್ಷಿಸುವುದನ್ನು ನೋಡಲಾಯಿತು. ಚಿರತೆಯು ಒಂದು ಮರದೊಳಗೆ ಹಿಮ್ಮೆಟ್ಟುವ ಮೊದಲು 30 ಮೀಟರುಗಳಷ್ಟು ದೂರ ಅದನ್ನು ಬೆನ್ನಟ್ಟುತ್ತಾ, ಅವಳು ಧೈರ್ಯದಿಂದ ಅದರ ಮೇಲೆ ದಾಳಿಮಾಡಿದಳು. ಇನ್ನೊಂದು ಸಂದರ್ಭದಲ್ಲಿ ಎರಡು ನರಹುಲಿ ಹಂದಿಗಳು 16 ಕಾಡು ನಾಯಿಗಳ ಒಂದು ಗುಂಪನ್ನು ತಡೆದು ಹಿಡಿದುದನ್ನು ನೋಡಲಾಯಿತು.

ಆಫ್ರಿಕನ್‌ ಪೊದೆಯ ಈ ಭೀಕರ ಹಾಸ್ಯಕಾರನ ವಿಕಟ ಚೇಷ್ಟೆಗಳನ್ನು ಗಮನಿಸುವುದು ಎಷ್ಟು ಮೋಹಕವಾಗಿದೆ! (g93 11/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ