ನಮ್ಮ ವಾಚಕರಿಂದ
ಕ್ಷಯರೋಗ “ಕ್ಷಯರೋಗ—ಹಂತಕ ರೋಗದ ಪುನರಾಗಮನ” (ಜನವರಿ 8, 1998) ಎಂಬ ಲೇಖನಮಾಲೆಯನ್ನು ನಾನು ಗಣ್ಯಮಾಡಿದೆ. 1988ರಲ್ಲಿ ನಾನು ಟಿಬಿಯಿಂದ ಸೋಂಕಿತನಾದೆ, ಆದರೆ ಅನಂತರ ಚೇತರಿಸಿಕೊಂಡೆ. ರೋಗಿಗಳು, “ತಪ್ಪದೇ ಕ್ರಮವಾಗಿ” ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದು ಸರಿಯಾಗಿದೆ.
ವೈ. ಎಲ್., ಫ್ರಾನ್ಸ್
ಧರ್ಮದಲ್ಲಿ ಆಸಕ್ತಿಯಿಲ್ಲದ ನನ್ನ ಅತ್ತೆಯವರು, ಮೇಜಿನ ಮೇಲಿದ್ದ ಲೇಖನವನ್ನು ನೋಡಿ, ಅದನ್ನು ಓದಿದರು. ಅದನ್ನು ತನ್ನ ಮನೆಗೆ ತೆಗೆದುಕೊಂಡುಹೋಗಬಹುದೋ ಎಂದು ಅವರು ಕೇಳಿದರು. ಅವರಿಗೆ ನಾನು ಇನ್ನೂ ಎರಡು ಎಚ್ಚರ! ಪತ್ರಿಕೆಗಳನ್ನು ಕೊಡಲು ಶಕ್ತಳಾದೆ. ಪ್ರತಿ ಪತ್ರಿಕೆಯನ್ನು ಹೊರತರಲು ನೀವು ಮಾಡುವ ಎಲ್ಲ ಪರಿಶ್ರಮಕ್ಕಾಗಿ ನಿಮಗೆ ಉಪಕಾರ.
ಎಲ್. ಎನ್., ಅಮೆರಿಕ
ನಾನು 11 ವರ್ಷಗಳ ಹಿಂದೆ ಟಿಬಿಯಿಂದ ಸೋಂಕಿತಳಾದೆ. ನೀಡಲ್ಪಟ್ಟ ಮಾಹಿತಿಯು ತುಂಬ ನಿಷ್ಕೃಷ್ಟವಾಗಿತ್ತು. ಕೆಲವೊಮ್ಮೆ, ಅದನ್ನು ಓದುವುದು ನಾನು ಮತ್ತೇ ಅದನ್ನು ಅನುಭವಿಸುವಂತಹ ರೀತಿಯಲ್ಲಿತ್ತು. ಜೀವದ ಕೊಡುಗೆಗಾಗಿ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ, ಎಚ್ಚರ! ಪತ್ರಿಕೆಯಲ್ಲಿ ನೀಡಲ್ಪಡುವ ಕ್ರಮವಾದ ಸಲಹೆಗಾಗಿ ನಾನು ಯೆಹೋವನಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ.
ಜಿ. ಬಿ., ಇಟಲಿ
ನಾನು ಈ ರೋಗದಿಂದ ಸೋಂಕಿತನಾಗಿ, ಆರು ತಿಂಗಳುಗಳ ಕಾಲ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೆ. ಈ ಹಂತಕ ರೋಗದ ಕುರಿತಾಗಿ ಇನ್ನೂ ಹೆಚ್ಚನ್ನು ಕಲಿತುಕೊಳ್ಳಲು ಈ ಲೇಖನವು ನನಗೆ ಸಹಾಯಮಾಡಿತು. ಇನ್ನೂ ಪ್ರಾಮುಖ್ಯವಾಗಿ, ಈ ಸಮಸ್ಯೆಗೆ ಒಂದು ಭೌಗೋಲಿಕ ಪರಿಹಾರವನ್ನು ದೇವರ ರಾಜ್ಯವು ತರುವುದು ಎಂಬ ವಿಷಯದಲ್ಲಿರುವ ನನ್ನ ನಂಬಿಕೆಯನ್ನು ಬಲಪಡಿಸಲು ಇದು ಸಹಾಯಮಾಡಿದೆ.
ಪಿ. ಪಿ., ಇಂಡೋನೇಷಿಯ
ಮಾಹಿತಿಯ ಚಿಂತೆ “ಮಾಹಿತಿಯ ಚಿಂತೆ—ಅದು ನಿಮ್ಮನ್ನು ಹೇಗೆ ಬಾಧಿಸಬಲ್ಲದು?” (ಜನವರಿ 8, 1998, ಇಂಗ್ಲಿಷ್) ಎಂಬ ಸರಣಿಗಾಗಿ ಉಪಕಾರ ಹೇಳಲು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನನಗೆ ಓದುವುದೆಂದರೆ ಪ್ರಾಣ, ಆದರೆ ಲಭ್ಯವಿರುವ ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳುವ ನನ್ನ ಆಸೆಯಲ್ಲಿ ನಾನು ಚಿಂತೆಗೊಳಗಾಗುತ್ತಿದ್ದೆ ಎಂಬುದನ್ನು ಈಗಲೇ ತಿಳಿದುಕೊಂಡದ್ದು. ಈ ಲೇಖನಗಳು ಒಂದು ಸಮತೂಕದ ದೃಷ್ಟಕೋನವನ್ನು ಇಟ್ಟುಕೊಳ್ಳುವಂತೆ ನನಗೆ ಸಹಾಯಮಾಡಿತು.
ಎಮ್. ಇ., ಇಟಲಿ
ಅಷ್ಟೊಂದು ಆಳವಾಗಿ ವ್ಯವಹರಿಸದ ಲೇಖನಗಳಿಗೆ ನಾನು ನಿಮ್ಮನ್ನು ಅಭಿವಂದಿಸಲು ಇಷ್ಟಪಡುತ್ತೇನೆ. ನಮ್ಮ ಶೈಕ್ಷಣಿಕ ಮತ್ತು ವಾರ್ತಾ ತಾಂತ್ರಿಕ ಒಕ್ಕೂಟಕ್ಕಾಗಿ ಸುದ್ದಿಪತ್ರವೊಂದರಲ್ಲಿ ಪ್ರಾರಂಭಿಕ ಲೇಖನವನ್ನು ಪುನರ್‌ಪ್ರಕಟಿಸಲು ನೀವು ಅನುಮತಿಯನ್ನು ನೀಡುವುದಾದರೆ, ನಾನು ತುಂಬ ಆಭಾರಿಯಾಗಿರುತ್ತೇನೆ. ಮಹಾ ಹೆದ್ದಾರಿಯೆಂದು ಕರೆಯಲ್ಪಡುವ ಮಾಹಿತಿಯು ಕಿಕ್ಕಿರಿದು ತುಂಬಿದೆ, ಆದುದರಿಂದ ಇಂಥಹ ಲೇಖನಗಳು ನಿಜವಾಗಿಯೂ ಒಳ್ಳೆಯ ಮಾಹಿತಿಯನ್ನು ಒದಗಿಸಸಾಧ್ಯವಿದೆ. ಮತ್ತು ಈ ಮಾಹಿತಿಯ ಯುಗದೊಂದಿಗೆ ನಿಭಾಯಿಸಲು ಶಕ್ತರನ್ನಾಗಿ ಮಾಡುತ್ತದೆ.
ಜಿ. ಡಿ., ಘಾನ
ಈ ಲೇಖನವನ್ನು ಪುನರ್‌ಪ್ರಕಟಿಸಲು ಅನುಮತಿಯು ನೀಡಲ್ಪಟ್ಟಿತು.—ಸಂಪಾ.
ದೇವರಿಗೆ ಭಯಪಡುವುದೋ? “ಬೈಬಲಿನ ದೃಷ್ಟಿಕೋನ: ಒಬ್ಬ ಪ್ರೀತಿಪರ ದೇವರಿಗೆ ನೀವು ಹೇಗೆ ಭಯಪಡಸಾಧ್ಯವಿದೆ?” (ಫೆಬ್ರವರಿ 8, 1998) ಎಂಬ ಲೇಖನಕ್ಕಾಗಿ ನಾನು ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪ್ರಚೋದಿಸಲ್ಪಟ್ಟಿದ್ದೇನೆ. ಸ್ವಲ್ಪ ಸಮಯದ ಹಿಂದೆ, ಇದೇ ಪ್ರಶ್ನೆಯ ಕುರಿತಾಗಿ ನಾನು ಯೋಚಿಸುತ್ತಾ ಇದ್ದೆ. ದೇವರಿಗೆ ಭಯಪಡುವುದು ಅಂದರೆ, ಆತನನ್ನು ಅಪ್ರಸನ್ನಗೊಳಿಸುವ ಹಿತಕರ ಭಯವನ್ನು ಹೊಂದಿರುವುದನ್ನು ಅರ್ಥೈಸಿತು ಎಂಬುದನ್ನು ನಾನು ತಿಳಿದುಕೊಂಡೆ. ಆದರೂ, ಈ ವಿಷಯವನ್ನು ಇನ್ನೂ ಹೆಚ್ಚು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ನಾನು ಕಂಡುಕೊಂಡೆ. ಅನಂತರ ನಾನು ಆ ಲೇಖನವನ್ನು ಓದಿದೆ. ಕೊನೆಗೂ, ದೇವರಿಗೆ ಭಯಪಡುವುದೆಂದರೆ ಏನು ಎಂಬುದರ ಕುರಿತಾದ ಈ ಲೇಖನವು ನಿಜವಾಗಿಯೂ ಒಂದು ಸಂತೃಪ್ತಕರ ಚರ್ಚೆಯೇ ಸರಿ!
ಎಮ್. ಜೆ. ಟಿ., ಅಮೆರಿಕ
ಮನೆ ಬಿಟ್ಟು ಹೋಗುತ್ತಿರುವ ಮಕ್ಕಳು “ಮಕ್ಕಳು ಮನೆ ಬಿಟ್ಟು ಹೋಗುವಾಗ” (ಫೆಬ್ರವರಿ 8, 1998) ಎಂಬ ಲೇಖನಮಾಲೆಗಾಗಿ ನಾನು ತುಂಬ ಆಭಾರಿಯಾಗಿದ್ದೇನೆ. ನನ್ನ ಸ್ವಂತ ಕಣ್ಮಣಿಗಳನ್ನು ಮನೆಬಿಟ್ಟು ಹೋಗುವಂತೆ ಅನುಮತಿಸಿದ್ದು, ವೇದನಾಭರಿತವಾಗಿತ್ತು ಮತ್ತು ಅದನ್ನು ಮರೆಯಲು ನನಗೆ ತುಂಬ ಸಮಯ ಹಿಡಿಯಿತು. ಆದರೆ ನೀವು ಹೇಳಿದ್ದು ಸರಿಯಾಗಿದೆ. ಖಾಲಿಯಾದ ಗೂಡಿನಲ್ಲಿ ವಾಸಿಸುವುದು, ಸಮಯ ಮತ್ತು ತಿಳಿವಳಿಕೆಯಿಂದ ಸರಿಹೋಗುತ್ತದೆ. ಹೆತ್ತವರಾದ ನಾವು ನಮ್ಮ ಸಂಗಾತಿಗಳೊಂದಿಗೆ ವೈವಾಹಿಕ ಬಂಧಗಳನ್ನು ಪುನರ್‌ಚೈತನ್ಯಗೊಳಿಸಸಾಧ್ಯವಿದೆ.
ಎ. ಇ., ಕೆನಡ
ಆ ಲೇಖನಗಳು ನನ್ನ ಪ್ರಾರ್ಥನೆಗಳಿಗೆ ಉತ್ತರವಾಗಿದ್ದವು. ಮಕ್ಕಳು ಮನೆಬಿಟ್ಟುಹೋಗುವುದು ವೈಮನಸ್ಯವನ್ನು ಮತ್ತು ಜಗಳವನ್ನು ಉಂಟುಮಾಡಸಾಧ್ಯವಿದೆ. ಆದರೆ ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಒಳ್ಳೆಯ ಸಲಹೆಯಿಂದ, ಶಾಂತಿ ಮತ್ತು ಪ್ರೀತಿಯು ಜಯಹೊಂದಸಾಧ್ಯವಿದೆ.
ಪಿ. ಎನ್., ಫ್ರಾನ್ಸ್
ಈ ಲೇಖನಗಳು ನನಗಾಗಿಯೇ ಬರೆಯಲ್ಪಟ್ಟಿದ್ದವೋ ಎಂದನಿಸಿತು. ಪೂರ್ಣಸಮಯದ ಸೌವಾರ್ತಿಕರಿಗಾಗಿ ಅಗತ್ಯವಿದ್ದ ಸ್ಥಳವೊಂದರಲ್ಲಿ ಸೇವೆಸಲ್ಲಿಸಲು ನಾನು ಇತ್ತೀಚೆಗೆ ಮನೆಬಿಟ್ಟುಹೋದೆ. ನನ್ನ ಹೆತ್ತವರಿಗೆ ಹೇಗನಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅವರನ್ನು ಬಿಟ್ಟುಬಂದದ್ದಕ್ಕಾಗಿ ನನ್ನಲ್ಲಿದ್ದ ಅಪರಾಧಿ ಭಾವನೆಗಳನ್ನು ನಾನು ಹೇಗೆ ಜಯಿಸಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ನನಗೆ ಈ ಲೇಖನಗಳು ಸಹಾಯಮಾಡಿದವು. ಇನ್ನೂ ಹೆಚ್ಚಾಗಿ, “ಪ್ರಾಯಕ್ಕೆ ಬಂದ ಮಕ್ಕಳಿಗೆ ಒಂದು ಕಿವಿಮಾತು—ನೀವು ಮನೆ ಬಿಟ್ಟು ಹೋಗಲು ಅನುಮತಿಸುವಂತೆ ಹೆತ್ತವರಿಗೆ ಸಹಾಯ ಮಾಡಿರಿ” ಎಂಬ ವಿಭಾಗದಲ್ಲಿರುವ ಬುದ್ಧಿವಾದವನ್ನು ನಾನು ಅನುಸರಿಸುತ್ತೇನೆ. ನಾನು ದೂರವಿರುವುದಾದರೂ ನನ್ನ ಹೆತ್ತವರೊಂದಿಗೆ ಹತ್ತಿರವಿರುವಂತೆ ನನಗನಿಸುವುದು. ಯಾವಾಗಲೂ ತಕ್ಕ ಸಮಯದಲ್ಲೇ ಬರುವ ಇಂಥ ಲೇಖನಗಳಿಗಾಗಿ ನಿಮಗೆ ಉಪಕಾರ!
ಜಿ. ಯು., ಇಟಲಿ