“ಒಂದು ಶಾಂತಿ ವ್ಯಾಧಿಯೋ?”
“ಶಾಂತಿ ವ್ಯಾಧಿ.” “ಅಹಾ, ಎಂಥಾ ಶಾಂತಿಯುಕ್ತ ಲೋಕ.” “ಶಾಂತಿ ಎಲ್ಲಾ ಕಡೆಗಳಿಂದ ಹೊರಚಿಮ್ಮುತ್ತಾ ಇದೆ.” ಈ ಕೆಲವು ವಾರ್ತಾಪತ್ರ ಮೇಲ್ಬರಹಗಳು ಕಳೆದ ಒಂದೆರಡು ವರ್ಷಗಳಿಂದ ವಾಚಕರನ್ನು ಅಚ್ಚರಿಗೆ ಒಳಪಡಿಸಿವೆ. ಭೂಸುತ್ತಲಿನ ನಿರಾಶೆಯ ಕಗ್ಗತ್ತಲೆಯಿಂದ ಆಶಾವಾದಕ್ಕೆ ಬದಲಾಯಿಸಿದ ಈ ವಾರ್ತೆಯು ಆಶ್ಚರ್ಯಜನಕ. ಏನು ಸಂಭವಿಸುತ್ತಾ ಇದೆ?
ಗಮನಾರ್ಹವಾಗಿ, ಕೆಲವೇ ಸಮಯದ ಹಿಂದೆ ಹಲವಾರು ದೊಡ್ಡ ಸಮರಗಳು ಕೇವಲ ಕೆಲವೇ ತಿಂಗಳುಗಳೊಳಗೆ ಕೊನೆಗೊಂಡವು ಅಥವಾ ತೀವ್ರತೆಯಲ್ಲಿ ಕುಗ್ಗಿದವು. ಆಫ್ರಿಕಾದಲ್ಲಿ, ಅಂಗೋಲದ ಶಾಂತಿ ‘ಹೊರಬಂತು.’ ಮಧ್ಯ ಆಸ್ಯಾದಲ್ಲಿ, ಸೋವಿಯೆಟ್ ಯೂನಿಯನ್ ತನ್ನ ದಳಗಳನ್ನು ಅಫಘಾನಿಸ್ಥಾನದಿಂದ ಹೊರಗೆಳೆಯಿತು. ಮಧ್ಯ ಅಮೇರಿಕದಲ್ಲಿ, ನಿಕಾರಗ್ವನ್ ಸರಕಾರ ಮತ್ತು ಕ್ವಾಂಟ್ರಾ ಕ್ರಾಂತಿಕಾರರಲ್ಲಿ ಜಗಳವು ಕಡಿಮೆಗೊಂಡಿತು. ತೆಂಕಣ ಏಸ್ಯಾದಲ್ಲಿ ವಿಯೆಟ್ನಾಮಿಗಳು ಕಂಪೂಚಿಯದಿಂದ ಹೊರಹೋಗಲು ಸಮ್ಮತಿಸಿದರು. ಇರಾನ್ ಮತ್ತು ಇರಾಕ್ ನಡುವಣ ರಕ್ತಮಯ ಯುದ್ಧವು ಕಟ್ಟ ಕಡೆಗೆ ಕೊನೆಗೊಂಡಾಗ, ಆ ‘ಶಾಂತಿ ಸೋಂಕು’ ಮಧ್ಯಪೂರ್ವವನ್ನೂ ತಗಲಿತು.
ಪ್ರಾಯಶಃ ಇನ್ನೂ ಹೆಚ್ಚು ಗಮನಾರ್ಹವು, ಪ್ರಬಲ ರಾಷ್ಟ್ರಗಳ ನಡುವೆ ಉಂಟಾದ ಹೊಸ ಪರಿಸರವೇ. ಸುಮಾರು 40 ವರ್ಷಗಳ ಶೀತ ಸಮರಗಳ ನಂತರ, ಸೋವಿಯೆಟ್ ಯೂನಿಯನ್ ಮತ್ತು ಯುನೊಯಿಟೆಡ್ ಸ್ಟೇಟ್ಸ್‌ಗಳ ನಡುವಣ ಸ್ನೇಹಾಚಾರದ ಪ್ರವೃತ್ತಿ, ಪರಸ್ಪರ ಅಭಿರುಚಿಗಳ ವ್ಯಕ್ತಪಡಿಸುವಿಕೆ ಮತ್ತು ಶಾಂತಿಯೆಡೆಗೆ ನಡಿಸಲ್ಪಟ್ಟ ಪ್ರತ್ಯಕ್ಷ ವ್ಯವಹಾರವೇ ಮುಂತಾದವುಗಳನ್ನು ನಂಬುವುದು ಕಷ್ಟವಾಗಿತ್ತು. ಅಷ್ಟಲ್ಲದೆ, ದಿ ಇಕ್‌ನಾಮಿಸ್ಟ್ ಅನುಸಾರ, ಯುರೋಪು ತನ್ನ ಇತಿಹಾಸದ ದಾಖಲೆಯಲ್ಲೆಲ್ಲಾ ಸತತ ಯುದ್ಧರಹಿತವಾದ ಒಂದು ಅತ್ಯಂತ ದೀರ್ಘಾವಧಿಯನ್ನು ಗುರುತಿಸಿದೆ. ನಿಜವಾಗಿಯೂ ಶಾಂತಿಯ ಹೊಸ ಸುದ್ಧಿ ಕೇಳಿಬರುತ್ತಿದೆ.
ಇದರ ಅರ್ಥವೇನು? ರಾಜನೀತಿಜ್ಞರು ನಮಗಾಗಿ ‘ಶಾಂತಿ ಸಮಯ’ವನ್ನು ತರುವ ಕೊನೇ ಹಂತದಲ್ಲಿದ್ದಾರೋ? ಈ ಮಾತುಗಳನ್ನು ಸುಮಾರು ಐವತ್ತು ವರ್ಷಗಳ ಹಿಂದೆ ನುಡಿದವರು ಬ್ರಿಟಿಷ್ ಪ್ರಧಾನ ಮಂತ್ರಿ ನೆವಿಲ್ಲ್ ಷಾಂಬರೆನ್ಲ್. ಆದರೆ ತುಸು ಸಮಯದೊಳಗೇ ಎರಡನೇ ಲೋಕ ಯುದ್ಧವು ಆರಂಭಿಸಿದಾಗ ಆ ಮಾತುಗಳು ಹಾಸ್ಯವ್ಯಂಗವಾಗಿ ರುಜುವಾದವು. ಈಗ ಕೊನೆಗಾದರೂ ಅದು ಸತ್ಯವಾಗಿ ಪರಿಣಮಿಸಲಿದೆಯೇ? (w90 4/1)