ಪ್ರಶ್ನಾ ಪೆಟ್ಟಿಗೆ
◼ ಮನೆಯವನು ಪುಸ್ತಕದ ದರಕ್ಕಿಂತ ತುಲನಾತ್ಮಕವಾಗಿ ಎಷ್ಟೋ ಹೆಚ್ಚು ಮೊತ್ತದ ಉದಾರ ದಾನವನ್ನು ಕೊಡುವದಾದರೆ, ನಾವು ಅವನಿಗೆ ಹೆಚ್ಚು ಪುಸ್ತಕಗಳನ್ನು ನೀಡುವರೇ ಪ್ರೇರಿಸಲ್ಪಡಬೇಕೋ?
ಹಾಗೆ ನೀಡುವ ಅವಶ್ಯವಿಲ್ಲ. ಈ ವಿಷಯದಲ್ಲಿ, ಆ ವ್ಯಕ್ತಿಯು ನಮ್ಮ ಕಾರ್ಯದಲ್ಲಿ ತೋರಿಸುವ ಆಸಕ್ತಿಯನ್ನು ಪರಿಗಣನೆಗೆ ತಂದು ನೀವು ಒಳ್ಳೇ ತೀರ್ಮಾನ ಮಾಡ ಸಾಧ್ಯವಿದೆ. ತರುವಾಯದ ಸಂದರ್ಶನೆಗಳಲ್ಲಿ, ಒಂದುವೇಳೆ ಮನೆಯವನ ನಿರ್ದಿಷ್ಟ ಅಗತ್ಯತೆಗಳನ್ನು ತಲಪುವ ಪುಸ್ತಕಗಳನ್ನು ನೀಡ ಸಾಧ್ಯವಿದೆ. ಆದರೆ ದಾನಗಳು ನಮ್ಮ ಲೋಕವ್ಯಾಪಕ ಕಾರ್ಯದ ಹಲವಾರು ಮುಖಗಳನ್ನು—ಕಟ್ಟಡ ಕಾರ್ಯ, ಮಿಶನೆರಿಗಳು, ಮತ್ತು ವಿಶೇಷ ಪಯನೀಯರ ಸೇವೆ ಅಲ್ಲದೆ ನಮ್ಮ ಸಾಹಿತ್ಯ ಪ್ರಕಾಶನ ಕಾರ್ಯವನ್ನು ಸಹಾ ಬೆಂಬಲಿಸುತ್ತದೆ ಎಂಬದನ್ನು ನೆನಪಿನಲ್ಲಿಡಿರಿ.