ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಆಸಕ್ತಿಯನ್ನು ಬೆಳೆಸಿರಿ
1 ಜನರ ಮನೆಗಳಿಗೆ ನಾವು ಭೇಟಿ ನೀಡುವಾಗ, ಅವರು “ಈ ವಿಷಯಗಳ ವ್ಯವಸ್ಥೆಯ ಚಿಂತೆ” ಗಳಲ್ಲಿ ತಲ್ಲೀನರಾಗಿರುವುದನ್ನು ನಾವು ಸಾಮಾನ್ಯವಾಗಿ ಕಂಡುಕೊಳ್ಳುತ್ತೇವೆ. (ಮಾರ್ಕ 4:19, NW) ಆಲೋಚನೆಯನ್ನು ಕೆರಳಿಸುವ ನಿರೂಪಣೆಯ ಮೂಲಕ ಅವರ ಆಸಕ್ತಿಯನ್ನು ಸೆರೆಹಿಡಿಯುವ ಪಂಥಾಹ್ವಾನದಿಂದ ನಾವು ಎದುರಿಸಲ್ಪಡುತ್ತೇವೆ. ಆರಂಭದಲ್ಲಿ, ಅಧಿಕಾಂಶ ಜನರು ನಮ್ಮ ಸಂದೇಶದಲ್ಲಿ ಕೊಂಚ ಆಸಕ್ತಿಯನ್ನು ಹೊಂದಿರಬಹುದು. ಅವರ ಜೀವಿತಗಳನ್ನು ಪ್ರಭಾವಿಸುವ ಏನನ್ನಾದರೂ ನಾವು ಹೇಳಬಲ್ಲೆವಾದರೆ, ರಾಜ್ಯ ಸಂದೇಶದಲ್ಲಿ ಸ್ವಲ್ಪ ಆಸಕ್ತಿಯನ್ನು ಉದ್ರೇಕಿಸಲು ನಾವು ಶಕ್ತರಾಗಬಹುದು. ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಮಾತಾಡುವ ಆಕರ್ಷಕ ಅಂಶಗಳನ್ನು ಆರಿಸುವುದೇ ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿರುವ ಕೀಲಿ ಕೈಯಾಗಿದೆ. ನೀವು ಏನನ್ನು ಹೇಳಸಾಧ್ಯವಿದೆ?
2 ಈ ಪ್ರಸ್ತಾವವನ್ನು ನೀವು ಉಪಯೋಗಿಸಬಹುದು:
▪ “ನಿಮಗೆ ಅಧಿಕಾರವಿರುತ್ತಿದ್ದರೆ, ನಮ್ಮ ದಿನದಲ್ಲಿರುವ ಯಾವ ಸಂಕಟಕರ ಸಮಸ್ಯೆಯನ್ನು ನೀವು ಸರಿಪಡಿಸುವಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಮತ್ತು ಸೂಕ್ತವಾಗಿರುವಲ್ಲಿ, ಅನೇಕ ಜನರು ತದ್ರೀತಿ ಭಾವಿಸುತ್ತಾರೆಂಬುದನ್ನು ಒಪ್ಪಿಕೊಳ್ಳಿರಿ.] ಇಂದಿನ ತನಕ, ಲೋಕ ಮುಖಂಡರು ದಿನದ ಕಂಗೆಡಿಸುವ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರಲ್ಲಿ ಅತ್ಯಲ್ಪ ಪ್ರಮಾಣದ ಯಶಸ್ಸನ್ನು ಗಳಿಸಿರುವಂತೆ ಭಾಸವಾಗುತ್ತದೆ. ಆದರೆ ಮಾನವಕುಲವನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಅಂತ್ಯವನ್ನು ತರಶಕ್ತನಾದವನು ಮತ್ತು ತರುವಂಥವನು ಒಬ್ಬನಿದ್ದಾನೆ. ಕೀರ್ತನೆ 145:16 ರಲ್ಲಿ ಏನು ಹೇಳಲ್ಪಟ್ಟಿದೆ ಎಂಬುದನ್ನು ದಯವಿಟ್ಟು ಗಮನಿಸಿ. [ವಚನವನ್ನು ಓದಿರಿ, ಮತ್ತು ಪುಟಗಳು 11-13 ರಲ್ಲಿರುವ ದೃಷ್ಟಾಂತಗಳ ಕಡೆಗೆ ನಿರ್ದೇಶಿಸಿರಿ.] ಪುಟ 14 ರಲ್ಲಿ ಪ್ಯಾರಗ್ರಾಫ್ 14 ನಾವು ಈಗ ಚರ್ಚಿಸಿದ ಪ್ರಶ್ನೆಯನ್ನು ಎಬ್ಬಿಸುತ್ತದೆ ಮತ್ತು ಹೀಗೆ ಕೇಳಲು ಮುಂದುವರಿಯುತ್ತದೆ: ‘ಆದರೆ ಇದು ಯಾವಾಗ ಸಂಭವಿಸುತ್ತದೆ?’” ಪುಸ್ತಕವು ಆ ಪ್ರಶ್ನೆಗೆ ಉತ್ತರವನ್ನು ಕೊಡುವುದೆಂಬುದನ್ನು ವಿವರಿಸಿರಿ, ಮತ್ತು ರೂ. 20ರ ಕಾಣಿಕೆಗೆ ಅದನ್ನು ನೀಡಿರಿ.
3 ಅಥವಾ ಈ ರೀತಿಯಾಗಿ ಏನನ್ನಾದರೂ ನೀವು ಹೇಳಸಾಧ್ಯವಿದೆ:
▪ “ಮರಣದಲ್ಲಿ ಪ್ರಿಯನೊಬ್ಬನನ್ನು ಕಳೆದುಕೊಂಡಾಗ ಬರುವ ಶೂನ್ಯಭಾವನೆಯು ಪ್ರಾಯಶಃ ನಿಮಗೆ ತಿಳಿದದೆ. ಅದು ನಿಮ್ಮನ್ನು ದುಃಖಿಸುವಂತೆ ಮತ್ತು ತೀರ ನಿಸ್ಸಹಾಯಕ ಭಾವನೆಯುಂಟಾಗುವಂತೆ ಮಾಡಿರುವುದು ಸಂಭವನೀಯ. ಈ ಪ್ರಶ್ನೆಗಳನ್ನು ನೀವು ಪರ್ಯಾಲೋಚಿಸಿದಿರ್ದಬಹುದು: [ಪುಟ 76, ಪ್ಯಾರಗ್ರಾಫ್ 1 ರಲ್ಲಿರುವ ಪ್ರಶ್ನೆಗಳನ್ನು ಓದಿರಿ.] ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದಿರುವುದು ಸಾಂತ್ವನಗೊಳಿಸುವಂತಹದ್ದಾಗಿ ಇರುವುದಿಲ್ಲವೊ? ಸತ್ತವರಿಗೋಸ್ಕರ ಒಂದು ನಿಶ್ಚಿತ ನಿರೀಕ್ಷೆಯನ್ನು ಬೈಬಲು ಕೊಡುತ್ತದೆಂಬುದನ್ನು ತಿಳಿಯುವುದು ನಿಮ್ಮನ್ನು ಪ್ರೋತ್ಸಾಹಗೊಳಿಸಬಹುದು. [ಓದಿರಿ ಯೋಹಾನ 5:28, 29.] ಸತ್ತವರ ಸ್ಥಿತಿಯ ಕುರಿತು ತಿಳಿಯಲಿಕ್ಕಾಗಿ ಮತ್ತು ಭವಿಷ್ಯತ್ತಿಗಾಗಿ ಯಾವ ನಿರೀಕ್ಷೆಯಿದೆ ಎಂಬುದನ್ನು ತಿಳಿಯಲು ಈ ಪುಸ್ತಕವು ನಮಗೆ ಸಹಾಯ ಮಾಡುತ್ತದೆ.” ಅಧ್ಯಾಯಗಳು 8 ಮತ್ತು 20ಕ್ಕೆ ಸಂಕ್ಷಿಪ್ತವಾಗಿ ನಿರ್ದೇಶಿಸಿರಿ. ಪುಸ್ತಕವನ್ನು ಪರೀಕ್ಷಿಸಲಿಕ್ಕಾಗಿ ಮನೆಯವನಿಗೆ ಸಂದರ್ಭವನ್ನು ಕೊಡಿರಿ ಮತ್ತು ನೀಡುವಿಕೆಯನ್ನು ಮಾಡಿರಿ.
4 ಅನೌಪಚಾರಿಕವಾಗಿ ಸಾಕ್ಷಿ ನೀಡಲಿಕ್ಕಾಗಿ ನೀವು ಅವಕಾಶಗಳನ್ನು ಎದುರಿಸುತ್ತೀರೆಂಬುದಕ್ಕೆ ಬಲವಾದ ಸಂಭವನೀಯತೆಯಿದೆ. ಹಾಗಿರುವುದಾದರೆ, ನಿಮ್ಮ ಸ್ವಂತ ಮಾತುಗಳಲ್ಲಿ ಹೀಗೆ ಏನನ್ನಾದರೂ ನೀವು ಹೇಳಬಹುದು:
▪ “ಇಂದಿನ ದಿನಗಳಲ್ಲಿ ಲೋಕವು ಸಮಸ್ಯೆಗಳಿಂದ ತುಂಬಿದೆ, ಮತ್ತು ಅವುಗಳಲ್ಲಿ ನಿಮ್ಮ ಪಾಲನ್ನು ನೀವು ಹೊಂದಿದ್ದೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಿಷಾದಕರವಾಗಿ, ಮುಗ್ಧ ಜನರು ಅತ್ಯಧಿಕವಾಗಿ ಕಷ್ಟಾನುಭವಿಸುತ್ತಾರೆಂದು ತೋರುತ್ತದೆ. ಎಲ್ಲಾ ಕಷ್ಟಾನುಭವಗಳಿಗೆ ದೇವರು ಎಂದಾದರೂ ಅಂತ್ಯವನ್ನು ತರುತ್ತಾನೆಂದು ನೀವು ಭಾವಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆತನನ್ನು ಸೇವಿಸುವವರಿಗಾಗಿ ದೇವರು ಏನನ್ನು ಮಾಡುತ್ತೇನೆಂದು ವಾಗ್ದಾನಿಸಿದ್ದಾನೆಂಬುದನ್ನು ನಾನು ತೋರಿಸುತ್ತೇನೆ. [ಕೀರ್ತನೆ 37:40 ನ್ನು ಓದಿರಿ ಮತ್ತು ಬಳಿಕ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪುಟ 99ಕ್ಕೆ ತೆರೆಯಿರಿ.] ದೇವರು ದುಷ್ಟತನಕ್ಕೆ ಯಾಕೆ ಅನುಮತಿ ನೀಡಿದ್ದಾನೆ ಮತ್ತು ಅದನ್ನು ಆತನು ಹೇಗೆ ಅಂತ್ಯಗೊಳಿಸುವನೆಂದು ಈ ಪುಸ್ತಕವು ವಿವರಿಸುತ್ತದೆ.”
5 ನೀವು ಒಬ್ಬ ಎಳೆಯ ಪ್ರಚಾರಕರಾಗಿರುವಲ್ಲಿ, ಪುಟಗಳು 156-8 ರಲ್ಲಿ ಕಂಡುಬರುವ ದೃಷ್ಟಾಂತಗಳ ಮೇಲೆ ಆಧಾರಿತವಾದ ಒಂದು ನಿರೂಪಣೆಯನ್ನು ನೀವು ಉಪಯೋಗಿಸಸಾಧ್ಯವಿದೆ. ಹೀಗೆ ಕೇಳುವುದರ ಮೂಲಕ ನೀವು ಆರಂಭಿಸಬಹುದು:
▪ “ಇಂತಹ ಒಂದು ಲೋಕದಲ್ಲಿ ಜೀವಿಸಲು ನೀವು ಬಯಸುವಿರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸುಂದರವಾದ ಈ ಚಿತ್ರಗಳಲ್ಲಿ ಪ್ರತಿಯೊಂದೂ, ದೇವರ ವಾಕ್ಯವಾದ ಬೈಬಲಿನಲ್ಲಿ ನಮೂದಿಸಲ್ಪಟ್ಟಿರುವ ವಾಗ್ದಾನದ ಮೇಲಾಧಾರಿತವಾದದ್ದಾಗಿದೆ. [ವಚನಗಳ ಉಲ್ಲೇಖಗಳಿಗೆ ನಿರ್ದೇಶಿಸಿರಿ.] ಇಡೀ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡುವ ದೇವರ ವಾಗ್ದಾನದ ಕುರಿತು ನೀವು ಹೆಚ್ಚನ್ನು ಕಲಿಯುವಂತೆ ಈ ಪುಸ್ತಕವು ನಿಮಗೆ ಸಹಾಯ ಮಾಡಬಲ್ಲದು. ಜೀವರಕ್ಷಕ ಸಂದೇಶವನ್ನು ಅದು ಒಳಗೊಂಡಿದೆ ಮತ್ತು ಅದನ್ನು ಓದಲಿಕ್ಕಾಗಿ ವ್ಯಯಿಸುವ ಸಮಯವು ಪ್ರಯೋಜನಕರವಾದದ್ದಾಗಿದೆ.”—ಯೋಹಾನ 17:3.
6 ಪುಸ್ತಕವನ್ನು ನೀಡುವಾಗ, ಸಕಾರಾತ್ಮಕರಾಗಿರಿ ಮತ್ತು ಉತ್ಸಾಹಿಗಳಾಗಿರಿ. ಅದರಲ್ಲಿ ಆಸಕ್ತಿಯನ್ನು ಬೆಳೆಸಿರಿ ಮತ್ತು ನಮ್ಮ ರಾಜ್ಯದ ಆಶ್ಚರ್ಯಕರ ನಿರೀಕ್ಷೆಯನ್ನು ಹಂಚಿರಿ.