ಯೆಹೋವನು ಬಲವನ್ನು ನೀಡುತ್ತಾನೆ
1 ಯೆಹೋವನ ಜನರೋಪಾದಿ, ನಮ್ಮ ನಡವಳಿಕೆಯನ್ನು ‘ಅನ್ಯಜನರ ಮಧ್ಯದಲ್ಲಿ ಯೋಗ್ಯ ರೀತಿಯಲ್ಲಿ’ ಕಾಪಾಡುತ್ತಿರುವಾಗಲೇ, ಸುವಾರ್ತೆಯನ್ನು ಸಾರುವ ಕೆಲಸವು ನಮಗೆ ವಹಿಸಲ್ಪಟ್ಟಿದೆ. (1 ಪೇತ್ರ 2:12; ಮತ್ತಾ. 24:14) ಕಠಿನ ಕಾಲಗಳ ಹಾಗೂ ನಮ್ಮ ಸ್ವಂತ ಬಲಹೀನತೆಗಳನ್ನು ಮತ್ತು ಕುಂದುಗಳನ್ನು ಪರಿಶೀಲಿಸುವಲ್ಲಿ, ನಮ್ಮ ಸ್ವಂತ ಬಲದಿಂದ ಈ ಕೆಲಸವನ್ನು ಪೂರೈಸಲು ನಮಗೆ ಎಂದಿಗೂ ಸಾಧ್ಯವಿಲ್ಲ. (2 ತಿಮೊ. 3:1-5) ಸಹಾಯಕ್ಕಾಗಿ ಯೆಹೋವನ ಮೇಲೆ ಭರವಸೆಯಿಡಬಲ್ಲವರಾದ ನಾವು ಎಷ್ಟೊಂದು ಸಂತೋಷಿತರು!
2 ಅಪೊಸ್ತಲ ಪೌಲನು ಅನೇಕ ಪರೀಕೆಗಳ್ಷನ್ನು ತಾಳಿಕೊಂಡನು. (2 ಕೊರಿಂ. 11:23-27) ಇವುಗಳನ್ನು ನಿಭಾಯಿಸಿ ತನ್ನ ನೇಮಿತ ಕೆಲಸವನ್ನು ಮುಗಿಸಲು ಅವನು ಹೇಗೆ ಶಕ್ತನಾಗಿದ್ದನು? ಯೆಹೋವನು ಅವನಿಗೆ “ಸಹಜಸ್ಥಿತಿಗಿಂತ ಅತೀತವಾದ ಬಲವನ್ನು” ದಯಪಾಲಿಸಿದನು. (2 ಕೊರಿಂ. 4:7, NW) ಪೌಲನು ಹೀಗೆ ಬರೆದಾಗ ಅಂಥ ದೈವಿಕ ಸಹಾಯವನ್ನು ಅವನು ಮಾನ್ಯ ಮಾಡಿದನು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿ. 4:13) ತದ್ರೀತಿಯಲ್ಲಿ ಯೆಹೋವನು ನಮಗೆ ಸಹಾಯ ಮಾಡುವನು. ಈ ನೆರವನ್ನು ನಾವು ಹೇಗೆ ಪಡೆಯಬಲ್ಲೆವು?
3 ಎಡಬಿಡದೆ ಪ್ರಾರ್ಥನೆ ಮಾಡುವ ಮೂಲಕ: ಯೇಸು ‘ಬೇಡುತ್ತಾ, ಹುಡುಕುತ್ತಾ, ಮತ್ತು ತಟ್ಟುತ್ತಾ ಇರ್ರಿ’ ಎಂಬುದಾಗಿಯೂ ಪ್ರಯತ್ನವನ್ನು ಬಿಟ್ಟುಬಿಡಬಾರದೆಂದೂ ನಮ್ಮನ್ನು ಪ್ರೇರೇಪಿಸಿದನು. (ಲೂಕ 11:5-10) ಪ್ರಾರ್ಥನೆಯಲ್ಲಿನ ನಮ್ಮ ಪಟ್ಟುಹಿಡಿಯುವಿಕೆಯು, ಯೆಹೋವನಿಗಾಗಿರುವ ನಮ್ಮ ಆಸ್ಥೆಯ ಗಹನತೆ, ನಮ್ಮ ಆಕಾಂಕ್ಷೆಯ ತೀವ್ರತೆ, ಮತ್ತು ನಮ್ಮ ಹೇತುವಿನ ಯಥಾರ್ಥತೆಯನ್ನು ಪ್ರದರ್ಶಿಸುತ್ತದೆ. (ಕೀರ್ತ. 55:17; 88:1, 13; ರೋಮಾ. 1:9-11) “ಎಡೆಬಿಡದೆ ಪ್ರಾರ್ಥನೆ ಮಾಡಿರಿ” ಎಂದು ಪೌಲನು ನಮ್ಮನ್ನು ಪ್ರೇರೇಪಿಸಿದಾಗ, ಪಾರ್ಥನೆಯಲ್ಲಿನ ಪಟ್ಟುಹಿಡಿಯುವಿಕೆಯ ಪ್ರಾಮುಖ್ಯವನ್ನು ಅವನು ಗ್ರಹಿಸಿದನು. (1 ಥೆಸ. 5:17) ನಾವು ಯೆಹೋವನ ಸಹಾಯವನ್ನು ಪಡೆಯುವ, ಅತ್ಯಂತ ಪ್ರಮುಖ ವಿಧಗಳಲ್ಲಿ ಒಂದು ಪ್ರಾರ್ಥನೆಯಾಗಿದೆ.
4 ದೇವಪ್ರಭುತ್ವ ಮಾರ್ಗದರ್ಶನೆಯನ್ನು ಅನುಸರಿಸುವ ಮೂಲಕ: “ದೇವಪ್ರಭುತ್ವ” ವೆಂಬುದು ಪ್ರೀತಿಸರೂಪ್ವನಾದ “ದೇವರಿಂದ ಬರುವ ಆಳಿಕ್ವೆ” ಯನ್ನು ಅರ್ಥೈಸುತ್ತದೆ. ಆತನ ಅಧಿಕಾರವನ್ನು ಅಂಗೀಕರಿಸುವುದರ ಮೂಲಕ ಮತ್ತು ದೊಡ್ಡ ಮತ್ತು ಚಿಕ್ಕ ನಿರ್ಣಯಗಳಲ್ಲಿ ಆತನ ಬೋಧನೆಗಳನ್ನು ಅನುಸರಿಸುವ ಮೂಲಕ ಅತನ ಆಳಿಕ್ವೆಯಿಂದ ನಾವು ಪ್ರಯೋಜನವನ್ನು ಪಡೆಯುತ್ತೇವೆ. “ನಂಬಿಗಸ್ತನೂ ವಿವೇಕಿಯೂ ಆದ ಆಳು” ಈ ಭೂಮಿಯ ಮೇಲೆ ದೇವಪ್ರಭುತ್ವ ಆಳಿಕ್ವೆಯನ್ನು ಪ್ರತಿನಿಧಿಸುತ್ತದೆ. (ಮತ್ತಾ. 24:45-47) ಯೆಹೋವನ ಆಶೀರ್ವಾದವನ್ನು ನಾವು ಪಡೆಯಬೇಕಾದಲ್ಲಿ, “ಆಳು” ಬಳಸುವ ಸಂಸ್ಥೆಯೊಂದಿಗೆ ಸಹಕಾರವನ್ನೀಯುವುದು ಅತಿ ಪ್ರಾಮುಖ್ಯವಾಗಿದೆ. (ಇಬ್ರಿ. 13:17ನ್ನು ಹೋಲಿಸಿ.) ಸೂಕ್ತವಾದ ಸಮಯದಲ್ಲಿ ನಮಗೆ ಆವಶ್ಯಕವಾದ ಬಲವನ್ನು ನೀಡುವ ಮೂಲಕ, ಆತನಿಗಾಗಿರುವ ನಮ್ಮ ನಿಷ್ಠೆ ಮತ್ತು ಆತನ ನಿಯಮಗಳಿಗೆ ವಿಧೇಯರಾಗಲು ಇರುವ ನಮ್ಮ ಸಿದ್ಧಮನಸ್ಸಿಗೆ ಯೆಹೋವನು ಪ್ರತಿಫಲವನ್ನು ಕೊಡುವನು.—ಇಬ್ರಿ. 4:16.
5 ನಮ್ಮ ಸಹೋದರರೊಂದಿಗೆ ನಿಕಟವಾಗಿರುವ ಮೂಲಕ: ಯೇಸುವಿನ ಶಿಷ್ಯರ ಗುರುತಿನ ಚಿಹ್ನೆ ಪ್ರೀತಿಯಾಗಿದೆ. (ಯೋಹಾನ 13:34, 35) ವ್ಯಕ್ತಿತ್ವಗಳ ವ್ಯಾಪಕವಾದ ವಿವಿಧತೆಯಿಂದ ವೈಯಕ್ತಿಕ ಭಿನ್ನತೆಗಳಿರುವ ಕಾರಣ, ಘರ್ಷಣೆಯು ನಮ್ಮ ಮಧ್ಯೆ ಏಳಬಲ್ಲದು. ಕೋಮಲವಾಗಿ ಕನಿಕರಿಸುವವರೂ, ಒಬ್ಬರಿಗೊಬ್ಬರು ಕಮಿಸ್ಷುವವರಾಗಿಯೂ ಇರುವ ಆವಶ್ಯಕತೆ ನಮಗಿದೆ. (ಎಫೆ. 4:32) ನಂಬಿಕೆಯಲಿರುವ್ಲ ನಮ್ಮ ಸಹೋದರರೊಂದಿಗೆ ನಿಕಟವಾಗಿ ಉಳಿಯಲು ಮತ್ತು ಪರೀಕ್ಷೆಯ ಕೆಳಗೆ ಅವರ ದೃಢ ನಿಷ್ಠೆಯ ಸೈರಣೆಯಿಂದ ಪ್ರೋತ್ಸಾಹನೆಯನ್ನು ಪಡೆಯುವ ಸಾಧ್ಯತೆಯನ್ನು ಇದು ಮಾಡುತ್ತದೆ. ‘ಲೋಕದಲ್ಲಿರುವ [ನಮ್ಮ] ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ತಿಳಿಯುವ ಮೂಲಕ,’ ತದ್ರೀತಿಯ ಒತ್ತಡಗಳೊಂದಿಗೆ ವ್ಯವಹರಿಸಲು ದೇವದತ್ತ ಬಲವನ್ನು ನಾವು ಹೊಂದಿದ್ದೇವೆ.—1 ಪೇತ್ರ 5:9.
6 ವೈಯಕ್ತಿಕ ಅಧ್ಯಯನದ ಒಂದು ಒಳ್ಳೆಯ ನಿಯತಕ್ರಮವನ್ನು ಕಾಪಾಡುವ ಮೂಲಕ: ನಮ್ಮ ಮನಸ್ಸುಗಳನ್ನು ಮತ್ತು ಹೃದಯಗಳನ್ನು ಆತ್ಮಿಕತೆಯಲ್ಲಿ ಬೇರೂರಿಸುವುದು, ಸೈತಾನನ ಆಕ್ರಮಣವನ್ನು ವಿಚಲಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. (1 ಪೇತ್ರ 5:8) ವೈಯಕ್ತಿಕ ಅಧ್ಯಯನದ ಒಂದು ಒಳ್ಳೆಯ ನಿಯತಕ್ರಮವು ನಮ್ಮ ದಿವ್ಯ ಜ್ಞಾನದ ಸಂಗ್ರಹವನ್ನು ವೃದ್ಧಿಸುವುದು. ಪ್ರತಿದಿನವೂ ಸಮಸ್ಯೆಗಳನ್ನು ಎದುರಿಸುವಾಗ ಈ ದಿವ್ಯ ಜ್ಞಾನದಿಂದ ನಾವು ಸ್ಫೂರ್ತಿ ಪಡೆಯಬಲ್ಲೆವು. ರಕ್ಷಣೆಯನ್ನು ಗಳಿಸುವುದರಲ್ಲಿ “ನಿಷ್ಕೃಷ್ಟ ಜ್ಞಾನ” ಒಂದು ಅತಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆಂದು ಪೌಲನು ಒತ್ತಿ ಹೇಳಿದನು. (1 ತಿಮೊ. 2:3, 4, NW) ಕ್ರಮವಾಗಿ ಆತ್ಮಿಕಾಹಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.
7 ನಮ್ಮನ್ನು ಬಲವಾಗಿರಿಸಲು ಸಹಾಯ ಮಾಡುವ ಆವಶ್ಯಕವಾದ ಸಕಲ ಒದಗಿಸುವಿಕೆಗಳು, ಕ್ರೈಸ್ತ ಸಭೆಯ ಮುಖಾಂತರ ಸುಲಭವಾಗಿ ದೊರಕುತ್ತದೆ. ಅದರ ಚಟುವಟಿಕೆಗಳಿಗೆ ಪೂರ್ಣ ಹೃದಯದ ಬೆಂಬಲವು ನಾವು ‘ನಡೆಯುತ್ತೇವೆ ಮತ್ತು ಬಳಲುವುದಿಲ್ಲ’ ವೆಂಬ ಖಾತ್ರಿಯನ್ನೀಯುವುದು.—ಯೆಶಾ. 40:29-31.