ಅವರು ಪ್ರಯೋಜನ ಪಡೆದುಕೊಳ್ಳುವಂತೆ ಇತರರಿಗೆ ಸಹಾಯ ಮಾಡಿರಿ
1 ನಮಗೆ ಏನನ್ನು ತಿಳಿದಿರುವ ಅಗತ್ಯವಿದೆಯೊ ಅದನ್ನು ಕಲಿಸಲು ಯೆಹೋವನು ವಾಗ್ದಾನಿಸುತ್ತಾನೆ. ಕೀರ್ತನೆ 32:8 ರಲ್ಲಿ ಅವನು ನಮಗೆ ಆಶ್ವಾಸನೆ ನೀಡುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ಈ ಆಶ್ವಾಸನೆಯು ನಮಗೆ ಮಹತ್ತಾದ ಪ್ರಯೋಜನದ್ದಾಗಿದೆ. ಬೈಬಲಿನಿಂದ ಕೊಡಲ್ಪಡುವ ವಿವೇಕಯುತವಾದ ಸಲಹೆಗೆ ಗಮನ ಕೊಡುವ ಮೂಲಕ, ಸ್ವತಃ ಅವರು ಹೇಗೆ ಪ್ರಯೋಜನ ಹೊಂದಸಾಧ್ಯವಿದೆಯೆಂದು ನಾವು ನಿಸ್ವಾರ್ಥವಾಗಿ ಇತರರಿಗೆ ತೋರಿಸಲು ಬಯಸುತ್ತೇವೆ. (ಯೆಶಾ. 48:17) ನಾವು ಭೇಟಿಯಾಗುವವರೆಲ್ಲರಿಗೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡುವ ಮೂಲಕ ನಾವು ಸೆಪ್ಟೆಂಬರ್ನಲ್ಲಿ ಇದನ್ನು ಮಾಡಬಹುದು. ನಮ್ಮ ನಿರೂಪಣೆಗಳನ್ನು ಮಾಡುವುದರಲ್ಲಿ, ಬೈಬಲಿನ ಜ್ಞಾನದ ಯಾವುದೇ ಹಿನ್ನೆಲೆಯಿಲ್ಲದ ಮತ್ತು ಬೈಬಲಿನ ಬೋಧನೆಗಳನ್ನು ನಂಬದಿರುವ ವ್ಯಕ್ತಿಗಳಿಗೂ ಬೈಬಲಿನ ವ್ಯಾವಹಾರಿಕ ಮೌಲ್ಯವನ್ನು ನಾವು ತೋರಿಸಬಲ್ಲ ವಿವಿಧ ರೀತಿಗಳಿವೆ.
2 ಇಂದು ವಿವಾಹದ ಸಮಸ್ಯೆಗಳ ಪ್ರಚಲಿತತೆಯ ನೋಟದಲ್ಲಿ, “ಸದಾ ಜೀವಿಸಬಲ್ಲಿರಿ” ಪುಸ್ತಕದಿಂದ ನೀವು ಈ ವಿಚಾರವನ್ನು ಪ್ರದರ್ಶಿಸಲು ಆರಿಸಬಹುದು:
◼ “ನಾನು ಮಾತಾಡಿದಂತಹ ಹೆಚ್ಚಿನ ಜನರು ವೈವಾಹಿಕ ಅಸಂತೋಷ ಮತ್ತು ವಿಚ್ಛೇದದ ಪ್ರಚಂಡ ವೃದ್ಧಿಯ ಕುರಿತಾಗಿ ತುಂಬ ಚಿಂತಿತರಾಗಿದ್ದಾರೆ. ನಿಮಗೆ ಈ ಸಮಸ್ಯೆಯ ಕುರಿತಾಗಿ ಹೇಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮೂಲಭೂತ ಕಾರಣಗಳನ್ನು ಗ್ರಹಿಸಲು ಅನೇಕರು ತಪ್ಪಿಹೋಗಿದ್ದಾರೆ. ಅವರು ಒಂದು ಯಥಾರ್ಥ ಪ್ರಯತ್ನವನ್ನು ಮಾಡುವಲ್ಲಿ, ದಂಪತಿಗಳು ತಮ್ಮ ವಿವಾಹವನ್ನು ಉಳಿಸಬಹುದು ಮಾತ್ರವಲ್ಲ, ಅವರು ನಿಜವಾದ ಸಂತೋಷವನ್ನು ಸಹ ಕಂಡುಕೊಳ್ಳಬಲ್ಲರು. ಬೈಬಲಿನಲ್ಲಿ ಕಂಡುಬರುವ ಸಲಹೆಯನ್ನು ಅನ್ವಯಿಸುವುದರಲ್ಲಿ ಅನೇಕರು ಸಾಫಲ್ಯಕ್ಕೆ ಕೀಲಿ ಕೈಯನ್ನು ಕಂಡುಕೊಂಡಿದ್ದಾರೆ.” ಎಫೆಸ 5:28, 29, 33ನ್ನು ಓದಿರಿ. ಪುಟ 243ಕ್ಕೆ ತಿರುಗಿಸಿರಿ, 16 ಮತ್ತು 17 ನೆಯ ಪ್ಯಾರಗ್ರಾಫ್ಗಳನ್ನು ಚರ್ಚಿಸಿ, ಅನಂತರ ಪುಸ್ತಕವನ್ನು ನೀಡಿರಿ.
3 ಮಕ್ಕಳಿಗೆ ತಮ್ಮ ಹೆತ್ತವರಿಂದ ಗುಣಮಟ್ಟದ ಸಮಯ ಮತ್ತು ತರಬೇತಿಯ ಅಗತ್ಯವಿದೆ. “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ಪ್ರದರ್ಶಿಸುವಾಗ, ನೀವು ಹೀಗನ್ನಸಾಧ್ಯವಿದೆ:
◼ “ನಮ್ಮ ಯುವ ಜನರ ಭವಿಷ್ಯತ್ತಿನ ಒಳಿತಿನ ಕುರಿತಾಗಿ ನಾವೆಲ್ಲರೂ ಚಿಂತಿತರಾಗಿದ್ದೇವೆ. ನಿಮ್ಮ ಅಭಿಪ್ರಾಯದಲ್ಲಿ, ತಮ್ಮ ಮಕ್ಕಳು ಒಂದು ಭದ್ರವಾದ ಭವಿಷ್ಯತ್ತನ್ನು ಕಂಡುಕೊಳ್ಳಲು ಹೆತ್ತವರು ಸಹಾಯ ಮಾಡಬಲ್ಲ ಅತ್ಯುತ್ತಮ ಮಾರ್ಗವು ಯಾವುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸುಮಾರು 3,000 ವರ್ಷಗಳ ಹಿಂದೆ ಬರೆಯಲ್ಪಟ್ಟಿದ್ದ ಒಂದು ಬೈಬಲ್ ಜ್ಞಾನೋಕ್ತಿಯಿಂದ ಈ ಸಲಹೆಗೆ ಕಿವಿಗೊಡಿರಿ. [ಜ್ಞಾನೋಕ್ತಿ 22:6ನ್ನು ಓದಿರಿ.] ಶಾಲೆಯಲ್ಲಿ ಅವರು ಪಡೆಯುವ ಉಪದೇಶದಿಂದ ನಮ್ಮ ಮಕ್ಕಳು ಮಹತ್ತಾಗಿ ಪ್ರಯೋಜನ ಪಡೆಯಸಾಧ್ಯವಿರುವಾಗ, ಅವರ ಅತಿ ಅಮೂಲ್ಯವಾದ ತರಬೇತಿಯು ಅವರ ಹೆತ್ತವರಿಂದ ಮನೆಯಲ್ಲಿ ಒದಗಿಸಲ್ಪಡುತ್ತದೆ. ಅದಕ್ಕೆ ಸಮಯ, ಗಮನ, ಮತ್ತು ಪ್ರೀತಿಯ ಅಗತ್ಯವಿದೆ, ಆದರೆ ಅದು ಪ್ರಯತ್ನಕ್ಕೆ ಯೋಗ್ಯವಾಗಿದೆ.” ಪುಟ 245ಕ್ಕೆ ತಿರುಗಿಸಿರಿ, 20 ಮತ್ತು 21 ನೆಯ ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ, ಮತ್ತು ಅನಂತರ ಪುಸ್ತಕವನ್ನು ಕುಟುಂಬ ಚರ್ಚೆಗಳಿಗಾಗಿ ಒಂದು ಆಧಾರವಾಗಿ ಹೇಗೆ ಉಪಯೋಗಿಸಸಾಧ್ಯವಿದೆಯೆಂದು ವಿವರಿಸಿರಿ.
4 ಭೂಮಿಯು ಹೇಗೆ ಒಂದು ಪ್ರಮೋದವನವಾಗಲಿದೆಯೆಂದು ತೋರಿಸುವ ಮೂಲಕ ನೀವು “ಸದಾ ಜೀವಿಸಬಲ್ಲಿರಿ” ಪುಸ್ತಕವನ್ನು ನೀಡಲು ಬಯಸಬಹುದು:
◼ “ನಿಮ್ಮ ಜೀವಿತವು ಭವಿಷ್ಯತ್ತಿನಲ್ಲಿ ಯಾವ ರೀತಿಯದ್ದಾಗಿರುವುದೆಂಬುದರ ಕುರಿತಾಗಿ ನೀವು ಚಿಂತಿತರಾಗಿದ್ದೀರೆಂದು ನನಗೆ ಖಾತರಿಯಿದೆ. ಅನೇಕ ಧಾರ್ಮಿಕ ಬರಹಗಳು ಭವಿಷ್ಯತ್ತಿನ ಕುರಿತಾಗಿ ಮಾತಾಡುತ್ತವೆ. ಉದಾಹರಣೆಗಾಗಿ, ಬೈಬಲಿನಲ್ಲಿ, ಯೇಸು ನಮಗೆ ದೇವರ ಚಿತ್ತವು ಸ್ವರ್ಗದಲ್ಲಿರುವಂತೆ ಈ ಭೂಮಿಯ ಮೇಲೆ ನೆರವೇರಲು ಪ್ರಾರ್ಥಿಸುವಂತೆ ಕಲಿಸಿದನು. ಅದು ನೆರವೇರುವಾಗ ಭೂಮಿಯು ಹೇಗಿರುವುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಒಂದು ಪ್ರಮೋದವನ ಲೋಕದ ಕುರಿತಾಗಿ ಒಬ್ಬ ಕಲಾಕಾರನ ವರ್ಣನೆಯು ಇಲ್ಲಿದೆ. [12 ಮತ್ತು 13 ನೆಯ ಪುಟಗಳಲ್ಲಿರುವ ಚಿತ್ರಕ್ಕೆ ಸೂಚಿಸಿರಿ. ಅನಂತರ ಪ್ಯಾರಗ್ರಾಫ್ 12 ರಲ್ಲಿ ಒಳಗೂಡಿರುವ ಯೆಶಾಯ 11:6-9ನ್ನು ಓದಿರಿ.] ಇಂತಹ ಒಂದು ಲೋಕದಲ್ಲಿ ಜೀವಿಸುವುದು ಅದ್ಭುತಕರವಾಗಿರಲಾರದೋ? ಈ ರೀತಿಯ ಒಂದು ಪ್ರಮೋದವನದಲ್ಲಿ ನೀವು ಮತ್ತು ನಿಮ್ಮ ಕುಟುಂಬವು ಹೇಗೆ ಜೀವಿಸಸಾಧ್ಯವಿದೆಯೆಂದು ಈ ಪುಸ್ತಕವು ನಿಮಗೆ ತೋರಿಸುವುದು.”
5 ನಿಮ್ಮ ನಿರೂಪಣೆಯನ್ನು ಮುಂಚಿತವಾಗಿಯೇ ತಯಾರಿಸುವುದು, ಮನೆಬಾಗಿಲಲ್ಲಿ ನಿಮ್ಮ ಯಶಸ್ಸನ್ನು ನಿರ್ಧರಿಸುವ ಒಂದು ಮೂಲ ಅಂಶವಾಗಿದೆ. ನೀವು ಬಾಗಿಲು ತಟ್ಟುವ ಮುಂಚೆ, ಒಂದು ಶಾಸ್ತ್ರೀಯ ವಿಚಾರದ ಮೇಲೆ ನಿಮಗೆ ಹೇಳಲು ನಿರ್ದಿಷ್ಟವಾದ ಸಂಗತಿಯಿದೆಯೆಂದು ಖಾತರಿಮಾಡಿಕೊಳ್ಳಿರಿ. ಮತ್ತೂ, ಪುಸ್ತಕವು ಸ್ವೀಕರಿಸಲ್ಪಡದಿದ್ದಲ್ಲಿ ನೀವು ನೀಡಲು ಯೋಜಿಸುವ ಪತ್ರಿಕೆ ಅಥವಾ ಕಿರುಹೊತ್ತಗೆಯ ಒಂದು ಆಸಕ್ತಿಕರ ವೈಶಿಷ್ಟ್ಯದ ಕುರಿತಾಗಿ ಒಂದು ಸಂಕ್ಷಿಪ್ತ ಹೇಳಿಕೆಯನ್ನು ಮನಸ್ಸಿನಲ್ಲಿ ಹೊಂದಿರ್ರಿ. ಸೆಪ್ಟೆಂಬರ್ನಲ್ಲಿ ರಾಜ್ಯ ಸತ್ಯದ ಬೀಜಗಳನ್ನು ಬಿತ್ತಲು ನಿಮಗಿರುವ ಪ್ರತಿಯೊಂದು ಅವಕಾಶದ ಲಾಭವನ್ನು ತೆಗೆದುಕೊಳ್ಳಿರಿ. (ಪ್ರಸಂ. 11:6) ಸದಾಕಾಲ ಬಾಳಲಿರುವ ಪ್ರಯೋಜನಗಳನ್ನು ಕೊಯ್ಯಲು ನೀವು ಇತರರಿಗೆ ಸಹಾಯ ಮಾಡುತ್ತಿರುವಿರಿ.