ಶಿಷ್ಯರನ್ನು ತಯಾರಿಸುವ ಬೈಬಲ್ ಅಭ್ಯಾಸಗಳು
1 ಫಿಲಿಪ್ಪನು ಐಥಿಯೋಪ್ಯದ ಕಂಚುಕಿಗೆ, “ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದ” ಅನಂತರ, ಆ ಕಂಚುಕಿಯು ಅವನಿಗೆ, “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”? ಎಂದು ಕೇಳಿದನು. (ಅ. ಕೃ. 8:27-39) ಆ ಕಂಚುಕಿಯ ವಿಷಯದಲ್ಲಿ ಹೇಳುವುದಾದರೆ, ಅವನಿಗೆ ಆಗಲೇ ದೇವರ ಪ್ರೇರಿತ ಬರವಣಿಗೆಗಳಿಗಾಗಿ ಪ್ರೀತಿಯಿತ್ತು, ಮತ್ತು ಫಿಲಿಪ್ಪನಿಂದ ಆತ್ಮಿಕ ಸಹಾಯವನ್ನು ಪಡೆದುಕೊಂಡ ಬಳಿಕ, ಅವನು ಒಬ್ಬ ಶಿಷ್ಯನಾಗಲು ಸಿದ್ಧನಾಗಿದ್ದನು. ಆದರೆ, ಸ್ವತಃ ತಾವೇ ಶಾಸ್ತ್ರಗಳನ್ನು ಪರೀಕ್ಷಿಸಬೇಕೆಂಬ ವಿಷಯವನ್ನು ಎಲ್ಲಾ ಜನರು ಮನಗಂಡಿರುವುದಿಲ್ಲ.
2 ಕೃತಜ್ಞತಾಪೂರ್ವಕವಾಗಿ, ಒಂದು ಸಂಕ್ಷಿಪ್ತ ಸಮಯಾವಧಿಯಲ್ಲಿ ನಮ್ಮ ದಿನಕ್ಕಾಗಿರುವ ಬೈಬಲಿನ ಸಂದೇಶವನ್ನು ಜನರು ಪರೀಕ್ಷಿಸಶಕ್ತರಾಗುವಂತೆ ಮಾಡಲು, ಯೆಹೋವನ ಸಂಸ್ಥೆಯು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಒದಗಿಸಿದೆ. ಬ್ರೋಷರಿನಲ್ಲಿರುವ ಮಾಹಿತಿಯು, ವಿದ್ಯಾವಂತರಾಗಿರಬಹುದಾದರೂ ಬೈಬಲಿನ ಕುರಿತಾಗಿ ಏನನ್ನೂ ತಿಳಿದಿರದ ಪ್ರಾಮಾಣಿಕ ಜನರಿಗೆ ಆಕರ್ಷಕವಾಗಿರಬೇಕು. ಈ ಉತ್ತಮವಾದ ಸಾಧನವು, ಜನರು ಬೈಬಲನ್ನು ಪರೀಕ್ಷಿಸುವಂತೆ ಅವರನ್ನು ಪ್ರೇರಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ.
3 ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವಾಗ, ಜ್ಞಾನ ಪುಸ್ತಕದಿಂದ ಒಂದು ಫಲಪ್ರದವಾದ ಅಭ್ಯಾಸವು ನಡಿಸಲ್ಪಡಸಾಧ್ಯವಿರುವ ವಿಧದ ಕುರಿತಾಗಿ, ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಪ್ರಕಾಶಿಸಲ್ಪಟ್ಟ ಉತ್ಕೃಷ್ಟ ಸಲಹೆಗಳನ್ನು ಪುನರ್ವಿಮರ್ಶಿಸುವುದು ಸಹಾಯಕರವಾಗಿರುವುದು. ಅಭ್ಯಾಸದ ಕ್ರಮಾವಧಿಯಲ್ಲಿ, ಯಾವ ಕ್ಷೇತ್ರಗಳಿಗೆ ಹೆಚ್ಚಿನ ಗಮನದ ಅಗತ್ಯವಿದೆಯೆಂಬುದನ್ನು ನೀವು ನಿರ್ಧರಿಸಶಕ್ತರಾಗುವಂತೆ, ವಿದ್ಯಾರ್ಥಿಯಿಂದ ಮಾಡಲ್ಪಡುವ ಪ್ರಗತಿಯನ್ನು ಪರಿಗಣಿಸಿರಿ. ಶಾಸ್ತ್ರವಚನಗಳನ್ನು ತೆರೆದುನೋಡುತ್ತಾ, ತನ್ನ ಪಾಠಗಳನ್ನು ಮುಂಚಿತವಾಗಿ ತಯಾರಿಸುವಂತೆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿರಿ. ತನ್ನ ಸ್ವಂತ ಮಾತುಗಳಲ್ಲಿ ಕೊಡಲ್ಪಡುವ ಹೇಳಿಕೆಗಳು, ಸತ್ಯಕ್ಕಾಗಿರುವ ಅವನ ಹೃತ್ಪೂರ್ವಕ ಗಣ್ಯತೆಯನ್ನು ಪ್ರತಿಬಿಂಬಿಸಬಹುದು. ಸೊಸೈಟಿಯ ಪ್ರಕಾಶನಗಳ ಹೆಚ್ಚಿನ ವಾಚನವನ್ನು ಮಾಡಿ, ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವವರಿಂದ, ಸಾಮಾನ್ಯವಾಗಿ ಕ್ಷಿಪ್ರವಾದ ಪ್ರಗತಿಯು ಮಾಡಲ್ಪಡುತ್ತದೆ. ಅವನೇನನ್ನು ಕಲಿಯುತ್ತಿದ್ದಾನೊ ಅದರ ಕುರಿತಾಗಿ ಇತರರೊಂದಿಗೆ ಅನೌಪಚಾರಿಕವಾಗಿ ಮಾತಾಡುವಂತೆ ಅವನನ್ನು ಪ್ರೋತ್ಸಾಹಿಸಿರಿ. ಆತ್ಮಿಕ ಪ್ರಗತಿಯನ್ನು ಮಾಡಲಿಕ್ಕಾಗಿ ಅವನೇನನ್ನು ಮಾಡುವ ಅಗತ್ಯವಿದೆಯೆಂಬುದನ್ನು ಅವನಿಗೆ ದಯಾಭಾವದಿಂದ ತೋರಿಸಿರಿ. ಅನಿರ್ಣಾಯಕ ವ್ಯಕ್ತಿಗಳೊಂದಿಗೆ ನಾವು ನಿರಂತರವಾಗಿ ಅಭ್ಯಾಸಗಳನ್ನು ನಡಿಸಬಾರದು. ವಿದ್ಯಾರ್ಥಿಗಳು ಕಲಿಯಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಬೇಕು, ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಸಮರ್ಪಣೆ ಹಾಗೂ ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡಬೇಕು.
4 ಕೆಲವು ಮನೆವಾರ್ತೆಗಳಲ್ಲಿ, ಕುಟುಂಬದ ವಿಭಿನ್ನ ಸದಸ್ಯರು ಪ್ರತ್ಯೇಕವಾದ ಅಭ್ಯಾಸಗಳನ್ನು ಹೊಂದಿರುವುದರಿಂದ, ಒಂದಕ್ಕಿಂತ ಹೆಚ್ಚು ಅಭ್ಯಾಸವು ನಡಿಸಲ್ಪಡುತ್ತದೆ. ಆದಾಗಲೂ, ಹೆಚ್ಚಿನ ವಿದ್ಯಮಾನಗಳಲ್ಲಿ, ಒಂದು ಐಕ್ಯ ಕುಟುಂಬ ಅಭ್ಯಾಸವು ಇಷ್ಟಕರವಾಗಿರಬಹುದು, ಯಾಕಂದರೆ ಅದು ಕುಟುಂಬವನ್ನು ಆತ್ಮಿಕವಾಗಿ ಐಕ್ಯಗೊಳಿಸಲು ಸಹಾಯ ಮಾಡುವುದು.
5 ನಾವು ಹೋಗಿ ಶಿಷ್ಯರನ್ನಾಗಿ ಮಾಡಬೇಕು ಎಂಬುದು ಯೇಸುವಿನ ಆಜ್ಞೆಯಾಗಿದೆ. (ಮತ್ತಾ. 28:19) ಹಾಗೆ ಮಾಡಲಿಕ್ಕಾಗಿ, “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”? ಎಂದು ಕೇಳುವ ಹಂತದ ವರೆಗೆ ಇತರರು ಪ್ರಗತಿಯನ್ನು ಮಾಡಲು ಅವರಿಗೆ ಸಹಾಯ ಮಾಡುವಂತಹ ಬೈಬಲ್ ಅಭ್ಯಾಸಗಳನ್ನು ನಾವು ನಡಿಸಬೇಕು.