‘ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ ಆಗಿರಿ’
1 ಅನೇಕ ಶತಮಾನಗಳ ಹಿಂದೆ ಅಪೊಸ್ತಲ ಪೌಲನು ತಿಮೊಥೆಯನಿಗೆ, ಜೊತೆ ವಿಶ್ವಾಸಿಗಳು “ಒಳ್ಳೇದನ್ನು ಮಾಡುವವರೂ, ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ, ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ ಆಗಿರುವಂತೆ” ಪ್ರೋತ್ಸಾಹಿಸಲು ಸೂಚನೆಯನ್ನು ಕೊಟ್ಟನು. (1 ತಿಮೊ. 6:18, NW) ಇಬ್ರಿಯ ಕ್ರೈಸ್ತರು ‘ಒಳ್ಳೇದನ್ನು ಮಾಡುವುದನ್ನು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದನ್ನು’ ಮರೆಯದಂತೆಯೂ ಪೌಲನು ಜ್ಞಾಪಕಹುಟ್ಟಿಸಿದನು. (ಇಬ್ರಿ. 13:16, NW) ಅವನು ಈ ಎಲ್ಲ ಸೂಚನೆಗಳನ್ನು ಕೊಟ್ಟದ್ದೇಕೆ? ಯಾಕೆಂದರೆ “ಒಳ್ಳೇದನ್ನು ನಡಿಸುವ ಪ್ರತಿಯೊಬ್ಬನಿಗೆ ಪ್ರಭಾವವೂ ಮಾನವೂ ಮನಶ್ಯಾಂತಿಯೂ ಉಂಟಾಗುವವು” ಎಂಬುದು ಅವನಿಗೆ ತಿಳಿದಿತ್ತು.—ರೋಮಾ. 2:10.
2 ಯೆಹೋವ ದೇವರು ಸೃಷ್ಟಿಕರ್ತನಾಗಿರುವುದರಿಂದ, ಆತನು ಸರ್ವಕ್ಕೂ ಒಡೆಯನಾಗಿದ್ದಾನೆ. (ಪ್ರಕ. 4:11) ಆತನು ತನ್ನ ಬಳಿ ಇರುವಂಥದ್ದೆಲ್ಲವನ್ನೂ ಉಪಯೋಗಿಸಿ ನಮಗಾಗಿ ಮಾಡುತ್ತಿರುವ ಎಲ್ಲ ಸಂಗತಿಗಳನ್ನು ನಾವು ಖಂಡಿತವಾಗಿಯೂ ತುಂಬ ಗಣ್ಯಮಾಡುತ್ತೇವೆ. ಆದರೆ ಮಾನವಕುಲದಲ್ಲಿ ಹೆಚ್ಚಿನವರು ಆತನಿಗೆ ಕೃತಘ್ನರಾಗಿದ್ದಾರೆ. ಹೀಗಿದ್ದರೂ ಜೀವವನ್ನು ಪೋಷಿಸಲು ತಾನು ಮಾಡಿರುವ ಉದಾರವಾದ ಏರ್ಪಾಡುಗಳಿಂದ ಎಲ್ಲರೂ ಪ್ರಯೋಜನ ಪಡೆಯುವಂತೆ ಆತನು ಈಗಲೂ ಅನುಮತಿಸುತ್ತಿದ್ದಾನೆ. (ಮತ್ತಾ. 5:45) ಅಷ್ಟುಮಾತ್ರವಲ್ಲ, ನಾವು ನಿತ್ಯ ಜೀವವನ್ನು ಪಡೆಯಲು ಸಾಧ್ಯವಾಗುವಂತೆ ಆತನು ತನ್ನ ಅತಿ ಪ್ರಿಯ ಮಗನನ್ನು ಸಹ ಬಲಿಯಾಗಿ ನೀಡಿದ್ದಾನೆ. ಆದುದರಿಂದ, ಆತನು ನಮಗೆ ತೋರಿಸಿರುವ ಈ ಪ್ರೀತಿಯು, ನಾವು ಜೊತೆ ಮಾನವರಿಗೆ ಉದಾರಿಗಳಾಗಿರುವ ಮೂಲಕ ನಮ್ಮ ಕೃತಜ್ಞತೆಯನ್ನು ತೋರಿಸುವಂತೆ ಒತ್ತಾಯಿಸಲ್ಪಡಬೇಕಲ್ಲವೊ?—2 ಕೊರಿಂ. 5:14, 15.
3 ನಾವೇನನ್ನು ಹಂಚಿಕೊಳ್ಳಬಹುದು? ನಮ್ಮ ಬಳಿಯಿರುವ ಯಾವುದೇ ಸ್ವತ್ತುಗಳನ್ನು ದೇವರು ಮೆಚ್ಚುವಂತಹ ರೀತಿಯಲ್ಲಿ ಉಪಯೋಗಿಸುವುದು ಸರಿಯಾಗಿದೆ. ಖಂಡಿತವಾಗಿಯೂ ನಾವು ಲೋಕವ್ಯಾಪಕವಾದ ರಾಜ್ಯ ಕೆಲಸವನ್ನು ಭೌತಿಕ ರೀತಿಯಲ್ಲಿಯೂ ಆತ್ಮಿಕ ರೀತಿಯಲ್ಲಿಯೂ ಬೆಂಬಲಿಸಲು ಬಯಸುತ್ತೇವೆ. ಒಬ್ಬ ವ್ಯಕ್ತಿಯ ಬಳಿ ಇರಬಹುದಾದ ಅತ್ಯಂತ ಅಮೂಲ್ಯವಾದ ನಿಧಿಯು ಸುವಾರ್ತೆಯಾಗಿದೆ. ಏಕೆಂದರೆ ಅದು “ದೇವರ ಬಲಸ್ವರೂಪವಾಗಿದ್ದು . . . ರಕ್ಷಣೆ ಉಂಟುಮಾಡುವಂಥ”ದ್ದಾಗಿದೆ. (ರೋಮಾ. 1:16) ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪಾಲ್ಗೊಳ್ಳಲು ನಾವು ಪ್ರತಿ ತಿಂಗಳು ನಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಉದಾರವಾಗಿ ಉಪಯೋಗಿಸಬಹುದು. ಹೀಗೆ ಮಾಡುವಾಗ, ನಾವು ಈ ಆತ್ಮಿಕ ನಿಧಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಶಕ್ತರಾಗಿರುವೆವು ಮತ್ತು ಇದು ಅವರನ್ನು ನಿತ್ಯ ಜೀವಕ್ಕೆ ನಡೆಸುವುದು.
4 ನಾವು ಬಡವರಿಗೆ ಸಹಾಯಮಾಡುವಾಗ ಯೆಹೋವನಿಗೆ ತುಂಬ ಸಂತೋಷವಾಗುತ್ತದೆ. ಆತನು ನಮ್ಮನ್ನು ಆಶೀರ್ವದಿಸುವನೆಂದು ಮಾತುಕೊಡುತ್ತಾನೆ ಅಷ್ಟೇ ಅಲ್ಲ, ಆತನು ನಮಗೆ ಈ ಸಂಗತಿಯನ್ನೂ ಜ್ಞಾಪಕಕ್ಕೆ ತರುತ್ತಾನೆ: “ಧನವು ಕೋಪದ ದಿನದಲ್ಲಿ ವ್ಯರ್ಥ; ಧರ್ಮವು ಮರಣವಿಮೋಚಕ.” (ಜ್ಞಾನೋ. 11:4; 19:17) ರಾಜ್ಯ ಕೆಲಸವನ್ನು ಭೌತಿಕ ರೀತಿಯಲ್ಲಿ ಬೆಂಬಲಿಸುವುದು ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದು, ನಾವು ನಿಜವಾಗಿಯೂ ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ ಆಗಿದ್ದೇವೆಂಬುದನ್ನು ತೋರಿಸುವ ಅತ್ಯುತ್ತಮ ವಿಧಗಳಾಗಿವೆ.