ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/01 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 2001 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸಭಾ ಪುಸ್ತಕ ಅಧ್ಯಯನದ ಏರ್ಪಾಡು ನಮಗೆ ಹೇಗೆ ಸಹಾಯಮಾಡುತ್ತದೆ?
    2007 ನಮ್ಮ ರಾಜ್ಯದ ಸೇವೆ
  • ಕ್ಷೇತ್ರ ಸೇವಾ ಗುಂಪಿನಿಂದ ಪ್ರಯೋಜನ ಪಡೆಯಿರಿ
    2012 ನಮ್ಮ ರಾಜ್ಯದ ಸೇವೆ
  • ಸಭಾ ಪುಸ್ತಕ ಅಭ್ಯಾಸವು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ
    1994 ನಮ್ಮ ರಾಜ್ಯದ ಸೇವೆ
  • ನಮ್ಮ ಸಭಾ ಪುಸ್ತಕ ಅಧ್ಯಯನ ನಿರ್ವಾಹಕರೊಂದಿಗೆ ಸಹಕರಿಸುವುದು
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2001 ನಮ್ಮ ರಾಜ್ಯದ ಸೇವೆ
km 5/01 ಪು. 7

ಪ್ರಶ್ನಾ ರೇಖಾಚೌಕ

◼ ಮತ್ತೊಂದು ಸಭಾ ಪುಸ್ತಕ ಅಭ್ಯಾಸದ ಗುಂಪನ್ನು ರಚಿಸುವುದು ಯಾವಾಗ ಯೋಗ್ಯವಾಗಿರುವುದು?

ರಾಜ್ಯ ಸಭಾಗೃಹವನ್ನು ಸೇರಿಸಿ ಪ್ರತಿಯೊಂದು ಪುಸ್ತಕ ಅಭ್ಯಾಸದ ಗುಂಪಿನಲ್ಲಿ ಸುಮಾರು 15 ಅಥವಾ ಅದಕ್ಕಿಂತ ಕಡಿಮೆ ಮಂದಿಯ ಹಾಜರಿಯನ್ನು ಕಾಪಾಡಿಕೊಳ್ಳುವ ಅಗತ್ಯವಿರುವಾಗ, ಒಂದು ಹೊಸ ಗುಂಪನ್ನು ರಚಿಸುವುದರ ಕುರಿತು ಯೋಚಿಸಬೇಕು. ಇದನ್ನು ಏಕೆ ಶಿಫಾರಸು ಮಾಡಲಾಗುತ್ತದೆ?

ಸಭಾ ಪುಸ್ತಕ ಅಭ್ಯಾಸದ ಗುಂಪುಗಳು ಚಿಕ್ಕದಾಗಿರುವಾಗ, ಹಾಜರಾಗುವ ಪ್ರತಿಯೊಬ್ಬರಿಗೂ ಚಾಲಕನು ಸರಿಯಾದ ಗಮನವನ್ನು ಕೊಡಲು ಸಾಧ್ಯವಾಗುತ್ತದೆ. ಅಲ್ಲದೆ, ತಮ್ಮ ನಂಬಿಕೆಯನ್ನು ಬಾಯಿಂದ ಅರಿಕೆಮಾಡಲು ನೆರವು ನೀಡುವ ಈ ರೀತಿಯ ಸನ್ನಿವೇಶದಲ್ಲಿ, ಎಲ್ಲರಿಗೂ ಸಾಕಷ್ಟು ಅವಕಾಶಗಳು ಸಿಗುತ್ತವೆ. (ಇಬ್ರಿ. 10:23; 13:15) ಟೆರಿಟೊರಿಯಾದ್ಯಂತ ಅನೇಕ ಸ್ಥಳಗಳಲ್ಲಿ ಚಿಕ್ಕ ಗುಂಪುಗಳಿರುವುದರಿಂದ, ಸಭಾ ಪುಸ್ತಕ ಅಭ್ಯಾಸಕ್ಕೆ ಮತ್ತು ಕ್ಷೇತ್ರಸೇವೆಯ ಕೂಟಗಳಿಗೆ ಹಾಜರಾಗಲು ಹೆಚ್ಚು ಅನುಕೂಲವಾಗುತ್ತದೆ. ಪುಸ್ತಕ ಅಭ್ಯಾಸದ ಸ್ಥಳಗಳನ್ನು ಹೆಚ್ಚಿಸಿರುವ ಸಭೆಗಳು, ಪುಸ್ತಕ ಅಭ್ಯಾಸದ ಒಟ್ಟು ಹಾಜರಿಯಲ್ಲಿ ಸಹ ವೃದ್ಧಿಯಾಗಿರುವುದನ್ನು ಕಂಡುಕೊಂಡಿವೆ.

ಕೆಲವೊಮ್ಮೆ ಕೆಲವು ವಿಶೇಷ ಪರಿಸ್ಥಿತಿಗಳ ಕಾರಣ, ಸಣ್ಣದಾದರೂ ಹೊಸದಾದ ಇನ್ನೊಂದು ಗುಂಪನ್ನು ಆರಂಭಿಸಬೇಕಾಗಿರಬಹುದು. ಇದನ್ನು, ತುಂಬ ದೂರದಲ್ಲಿರುವ ಒಂದು ಕ್ಷೇತ್ರದಲ್ಲಿ ಮಾಡಬೇಕಾಗಬಹುದು, ಇಲ್ಲವೇ ಸದ್ಯದ ಸ್ಥಳವು ಕಿಕ್ಕಿರಿದಿರುವಲ್ಲಿ ಇಲ್ಲವೇ ಕುಳಿತುಕೊಳ್ಳಲು ತಕ್ಕದಾದ ಆಸನವ್ಯವಸ್ಥೆಯಿಲ್ಲದಿರುವಲ್ಲಿ ಮಾಡಬೇಕಾಗಬಹುದು. ಅಗತ್ಯವಿರುವಾಗ, ಅವಿಶ್ವಾಸಿ ಗಂಡಂದಿರನ್ನು ಹೊಂದಿರುವ ಸಹೋದರಿಯರು, ರಾತ್ರಿವೇಳೆಯಲ್ಲಿ ಕೆಲಸಕ್ಕೆ ಹೋಗುವವರು ಇಲ್ಲವೇ ವಯಸ್ಸಾದವರ ಪ್ರಯೋಜನಕ್ಕಾಗಿ ದಿನದ ಸಮಯದಲ್ಲಿ ಕೂಡಿಬರುವ ಒಂದು ಗುಂಪನ್ನು ರಚಿಸಬಹುದು.

ಪ್ರತಿಯೊಂದು ಪುಸ್ತಕ ಅಭ್ಯಾಸದ ಗುಂಪಿನಲ್ಲೂ, ಆತ್ಮಿಕವಾಗಿ ಬಲವಾಗಿರುವ ಮತ್ತು ಕ್ರಿಯಾಶೀಲರಾಗಿರುವ ಅನೇಕ ಪ್ರಚಾರಕರು ಹಾಗೂ ಒಬ್ಬ ಅರ್ಹ ಚಾಲಕನು ಮತ್ತು ಓದುಗನಿರಬೇಕು. ಸಭೆಯಲ್ಲಿರುವ ಈ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಸಹೋದರರು ಪ್ರಯಾಸಪಡಬೇಕು.

ಸಭೆಯ ಉನ್ನತಿಗಾಗಿ, ಸಭಾ ಪುಸ್ತಕ ಅಭ್ಯಾಸಗಳು ಸಾಕಷ್ಟು ಚಿಕ್ಕ ಗುಂಪುಗಳಾಗಿರುವಂತೆ ಹಾಗೂ ಆತ್ಮಿಕವಾಗಿ ಅವುಗಳ ಉತ್ತಮ ಆರೈಕೆಯಾಗುವಂತೆ ಮತ್ತು ಅವುಗಳು ಅನುಕೂಲಕರವಾದ ಸ್ಥಳಗಳಲ್ಲಿ ಒಟ್ಟುಗೂಡುವಂತೆ ಹಿರಿಯರು ಖಚಿತಪಡಿಸಿಕೊಳ್ಳಬೇಕು. ಪ್ರಾಯೋಗಿಕವಾಗಿರುವಾಗಲೆಲ್ಲಾ, ಹೊಸ ಗುಂಪುಗಳು ರಚಿಸಲ್ಪಡಬೇಕು. ಹೀಗೆ, ಈ ಅಪೂರ್ವ ಏರ್ಪಾಡಿನಿಂದ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು. ನಿಮ್ಮ ಮನೆಯನ್ನು ಪುಸ್ತಕ ಅಭ್ಯಾಸದ ಸ್ಥಳವಾಗಿ ಉಪಯೋಗಿಸಲ್ಪಡುವಂತೆ ನೀಡಬಲ್ಲಿರೋ? ಹಾಗೆ ಮಾಡಿರುವ ಅನೇಕರು ಆತ್ಮಿಕ ಆಶೀರ್ವಾದಗಳನ್ನು ಅನುಭವಿಸಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ