ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ-ಸೆಪ್ಟೆಂ.
“ಹೆಚ್ಚೆಚ್ಚು ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು ನಮ್ಮ ನಗರಗಳಲ್ಲಿ ತೆರೆಯಲ್ಪಡುತ್ತಿವೆ, ಆದರೆ ಇಂದು ಜನರು ಹೆಚ್ಚು ಉತ್ತಮವಾದ ಆರೋಗ್ಯವನ್ನು ಅನುಭವಿಸುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೋ? [ಪ್ರತ್ಯುತ್ತರದ ನಂತರ, ಯೆಶಾಯ 33:24ನ್ನು ಓದಿ.] ವೈದ್ಯಕೀಯ ವಿಜ್ಞಾನದಿಂದ ಮಾಡಲ್ಪಟ್ಟಿರುವ ಪ್ರಗತಿಯನ್ನು ಮತ್ತು ಆ ಗುರಿಯನ್ನು ಎಟುಕಲು ಇನ್ನೇನು ಮಾಡಲಿಕ್ಕಿದೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ. 15
“ಬಹುಮಟ್ಟಿಗೆ ಎಲ್ಲ ಧರ್ಮಗಳಲ್ಲಿಯೂ ಸತ್ಯಪ್ರೇಮಿಗಳು ಇದ್ದಾರೆ. ಆದರೂ, ಸಾಮಾನ್ಯವಾಗಿ ಎಲ್ಲ ಧರ್ಮಗಳು ಮಾನವಕುಲವನ್ನು ಬೇರ್ಪಡಿಸುವ ಪ್ರವೃತ್ತಿಯುಳ್ಳವುಗಳಾಗಿವೆ. ಸಹೃದಯವುಳ್ಳ ಜನರನ್ನು ಐಕ್ಯಗೊಳಿಸಲು ಯಾವುದರ ಆವಶ್ಯಕತೆಯಿದೆ? [ಪ್ರತ್ಯುತ್ತರದ ನಂತರ, ಚೆಫನ್ಯ 3:9ನ್ನು ಓದಿ.] ಸತ್ಯ ದೇವರ ಕುರಿತಾದ ಜ್ಞಾನವು ಹೇಗೆ ಎಲ್ಲೆಡೆಯೂ ಇರುವ ಜನರನ್ನು ಐಕ್ಯಗೊಳಿಸುತ್ತಿದೆ ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂ.
“ನಮ್ಮಲ್ಲಿ ಅನೇಕರು, ನಮ್ಮ ಜೀವಿತದ ಯಾವುದೋ ಒಂದು ಸಮಯದಲ್ಲಿ ಪ್ರಾರ್ಥಿಸುತ್ತೇವೆ, ಆದರೆ ನಾವೇನನ್ನು ಹೇಳುತ್ತೇವೊ ಅದನ್ನು ದೇವರು ಕೇಳುತ್ತಾನೆ ಎಂದು ನಿಮಗೆ ಅನಿಸುತ್ತದೋ? [ಮನೆಯವನು ಉತ್ತರಿಸುವಂತೆ ಅನುಮತಿಸಿ.] ‘ದೇವರು ನನ್ನ ಪ್ರಾರ್ಥನೆಗಳನ್ನು ಕೇಳುವನೋ?’ ಎಂಬ ಈ ಲೇಖನವು, ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗಬೇಕಾದರೆ ಏನು ಆವಶ್ಯಕವಾಗಿದೆ ಎಂಬುದನ್ನು ನೋಡಲು ನಮಗೆ ಸಹಾಯಮಾಡುತ್ತದೆ. ಖಂಡಿತವಾಗಿಯೂ, ನೀವು ಮತ್ತು ನಿಮ್ಮ ಕುಟುಂಬವು ಇದನ್ನು ಓದುವುದರಲ್ಲಿ ಆನಂದವನ್ನು ಕಂಡುಕೊಳ್ಳುವಿರಿ ಎಂಬುದರ ಕುರಿತು ನನಗೆ ಪೂರ್ಣ ಭರವಸೆಯಿದೆ.”
ಕಾವಲಿನಬುರುಜು ಅಕ್ಟೋ. 1
“ನಂಬಿಕೆಯು ತುಂಬ ಅಪ್ರಿಯವಾದ ವಿಷಯವಾಗಿಬಿಟ್ಟಿದೆ ಮತ್ತು ಕೆಲವರು ಮಾತ್ರ ಅದರ ಕುರಿತಾಗಿ ಮಾತಾಡಲು ಬಯಸುತ್ತಾರೆ ಎಂಬುದನ್ನು ನೀವು ಒಪ್ಪಿಕೊಳ್ಳಬಹುದು. ಆದರೆ ವಿಷಯವು ಹೀಗೇಕೆ ಇದೆ? [ಪ್ರತ್ಯುತ್ತರದ ನಂತರ, ಇಬ್ರಿಯ 11:1ನ್ನು ಓದಿ.] ಈ ಪತ್ರಿಕೆಯು, ನಿಜವಾದ ನಂಬಿಕೆ ಏನಾಗಿದೆ ಮತ್ತು ನಮಗೆ ನಂಬಿಕೆ ಇರುವುದು ಅಥವಾ ಇಲ್ಲದಿರುವುದು ಯಾವ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸುತ್ತದೆ.”