ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ಇಂದು ಲೋಕವು ಧಾರ್ಮಿಕ ಸಮುದಾಯಗಳು ಮತ್ತು ಜಾತೀಯ ಗುಂಪುಗಳ ಮಧ್ಯೆಯಿರುವ ದ್ವೇಷದಿಂದ ತುಂಬಿದೆ. ಇಂತಹ ವಾತಾವರಣದಲ್ಲಿ ‘ನಿಮ್ಮ ವೈರಿಗಳನ್ನು ಪ್ರೀತಿಸುವುದು’ ಪ್ರಾಯೋಗಿಕವಾದದ್ದು ಅಥವಾ ಸಾಧ್ಯವಾದದ್ದು ಎಂದು ನೀವು ನೆನಸುತ್ತೀರೋ? [ಉತ್ತರಿಸುವಂತೆ ಅನುಮತಿಸಿ.] ಒಬ್ಬ ಮಹಾನ್ ಬೋಧಕನಿಂದ ಇದು ಉತ್ತೇಜಿಸಲ್ಪಟ್ಟಿತು: [ಮತ್ತಾಯ 5:44ನ್ನು ಓದಿ.] ಆ ವಾಕ್ಯವನ್ನು ಹೇಳುವ ಮೂಲಕ ಅವನು ಏನನ್ನು ಅರ್ಥೈಸಿದನು ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ, ಮಾತ್ರವಲ್ಲದೆ ಇಂದು ಅವನ ಬೋಧನೆಯ ಪರಿಣಾಮಗಳನ್ನು ಸಹ ತೋರಿಸುತ್ತದೆ.”
ಕಾವಲಿನಬುರುಜು ಅಕ್ಟೋ.15
“ಒಂದು ಹೆಚ್ಚು ಉತ್ತಮವಾದ, ಸಂತೋಷಕರ ಲೋಕವನ್ನು ಸೃಷ್ಟಿಸಲು ಯಾವುದರ ಆವಶ್ಯಕತೆಯಿದೆ? [ಉತ್ತರಿಸುವಂತೆ ಅನುಮತಿಸಿ.] ವಿಷಯಗಳನ್ನು ಸುಧಾರಿಸಲಿಕ್ಕಾಗಿ ಮನುಷ್ಯನು ಒಂದರ ನಂತರ ಇನ್ನೊಂದು ರೀತಿಯ ಸರಕಾರವನ್ನು ಪ್ರಯತ್ನಿಸಿ ನೋಡಿದ್ದಾನೆ. ಆದರೆ ಇದರ ಕುರಿತಾದ ದೇವರ ದೃಷ್ಟಿಕೋನವನ್ನು ಗಮನಿಸಿರಿ. [ಯೆರೆಮೀಯ 10:23ನ್ನು ಓದಿ.] ಈ ಲೇಖನವು ‘ಸಂತೋಷಭರಿತ ಲೋಕಕ್ಕಾಗಿರುವ ಕೀಲಿ ಕೈ’ಯನ್ನು ತಿಳಿಯಪಡಿಸುತ್ತದೆ, ಮತ್ತು ಇದು ಅತಿ ಬೇಗನೆ ಹೇಗೆ ಸಂಭವಿಸುವುದು ಎಂಬುದನ್ನು ತೋರಿಸುತ್ತದೆ.”
ಎಚ್ಚರ! ಅಕ್ಟೋ.-ಡಿಸೆಂ.
“ಒಬ್ಬ ಯುವ ವ್ಯಕ್ತಿಯಾಗಿರುವ ನಿಮ್ಮನ್ನು ಯಾವುದು ಹೆಚ್ಚು ಚಿಂತೆಗೀಡುಮಾಡುತ್ತದೆ? [ಉತ್ತರಿಸುವಂತೆ ಅನುಮತಿಸಿ.] ಅನೇಕರು ತಮ್ಮ ಭವಿಷ್ಯದ ಕುರಿತು, ತಮ್ಮ ಪರೀಕ್ಷೆಗಳ ಕುರಿತು, ಮತ್ತು ಒಂದು ಕೆಲಸವನ್ನು ಪಡೆದುಕೊಳ್ಳುವುದರ ಕುರಿತು ಚಿಂತಿಸುತ್ತಾರೆ ಅಥವಾ ತಮ್ಮ ಸ್ನೇಹಿತರು ತಮ್ಮನ್ನು ಇಷ್ಟಪಡಬೇಕು ಎಂಬುದರ ಕುರಿತು ಚಿಂತಿಸುವವರೂ ಇದ್ದಾರೆ. ಆದರೆ ತುಂಬ ಚಿಂತಿಸುವುದು ಸಹ ನಿಮಗೆ ಹಾನಿಯನ್ನುಂಟುಮಾಡಬಹುದು. [ಜ್ಞಾನೋಕ್ತಿ 12:25ನ್ನು ಓದಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ, ನಮ್ಮ ಜೀವಿತಗಳಲ್ಲಿ ಒತ್ತಡ ಮತ್ತು ಚಿಂತೆಯನ್ನು ಕಡಿಮೆಗೊಳಿಸಬಹುದಾದ ಕೆಲವು ಪ್ರಾಯೋಗಿಕ ಸಲಹೆಗಳು ಕೊಡಲ್ಪಟ್ಟಿವೆ. ಇದನ್ನು ನೀವು ಪ್ರಾಯೋಗಿಕವಾದದ್ದಾಗಿ ಕಂಡುಕೊಳ್ಳುವಿರಿ ಎಂದು ನಾನು ನಂಬುತ್ತೇನೆ.”
ಕಾವಲಿನಬುರುಜು ನವೆಂ.1
ಚಿಂತೆಗೊಳಪಡಿಸುವಂಥ ಒಂದು ಸಮಾಚಾರದ ಕುರಿತು ತಿಳಿಸಿದ ನಂತರ, ಹೀಗೆ ಕೇಳಿ: “ಇಂತಹ ದುಷ್ಕೃತ್ಯಗಳನ್ನು ಜನರು ಏಕೆ ಮಾಡುತ್ತಾರೆ? ನಮ್ಮೆಲ್ಲರಿಗೂ ಸರಿ ಮತ್ತು ತಪ್ಪಿನ ಭೇದವು ಗೊತ್ತಿರಬೇಕು, ಆದರೆ ಜನರು ಇನ್ನೂ ಇಂತಹ ಕೆಟ್ಟ ವಿಷಯಗಳನ್ನು ಮಾಡುತ್ತಾರೆ. ಏಕೆ? [ಉತ್ತರವನ್ನು ಪಡೆದುಕೊಂಡ ನಂತರ, ಪ್ರಕಟನೆ 12:9ನ್ನು ಓದಿ.] ನಮ್ಮ ಮನಸ್ಸಾಕ್ಷಿಯನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವ ಮೂಲಕ ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳುವುದು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”