ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋ. 1
“ಇಂದಿನ ಅವನತಿ ಹೊಂದುತ್ತಿರುವ ಲೋಕದಲ್ಲಿ ನಮ್ಮ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ತದನಂತರ ಜ್ಞಾನೋಕ್ತಿ 22:3ನ್ನು ಓದಿ ಮತ್ತು ಪುಟ 12ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನದಲ್ಲಿ, ತುಂಬ ಸಹಾಯಕರವೆಂದು ರುಜುವಾಗಿರುವ ಪ್ರಾಯೋಗಿಕ ಅಂಶಗಳನ್ನು ಕೊಡಲಾಗಿದೆ.”
ಎಚ್ಚರ! ಅಕ್ಟೋ. - ಡಿಸೆಂ.
“ನಾವು ಸೃಷ್ಟಿಸಲ್ಪಟ್ಟಿದ್ದೇವೆ ಎಂದು ಅನೇಕರು ಭಾವಿಸುತ್ತಾರೆ. ಇನ್ನೂ ಕೆಲವರು ನಾವು ವಿಕಾಸದಿಂದ ಬಂದಿದ್ದೇವೆಂದು ನೆನಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನೋಡಿ, ಇಲ್ಲಿರುವ ಸಲಹೆಯು ನಾವು ಸರಿಯಾದ ತೀರ್ಮಾನಕ್ಕೆ ಬರಲು ಸಹಾಯಮಾಡುತ್ತದೆ? [ಯೋಬ 12:7, 8ನ್ನು ಓದಿ.] ಪ್ರಕೃತಿಯಲ್ಲಿ ತೋರಿಬರುವ ವಿವೇಕ ಹಾಗೂ ವಿನ್ಯಾಸದಿಂದ ನಾವೇನನ್ನು ಕಲಿಯಸಾಧ್ಯವಿದೆ ಎಂಬುದನ್ನು ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ನವೆಂ. 1
“ಮಕ್ಕಳನ್ನು ಬೆಳೆಸುವುದರ ಬಗ್ಗೆ ವ್ಯತಿರಿಕ್ತವಾದ ಅನೇಕ ಅಭಿಪ್ರಾಯಗಳನ್ನು ನಾವಿಂದು ಕಾಣಬಹುದು. ಇದರ ಕುರಿತು ಒಂದು ಭರವಸಾರ್ಹ ಸಲಹೆಯನ್ನು ಹೆತ್ತವರು ಪಡೆಯಸಾಧ್ಯವಿದೆ ಎಂದು ನೀವು ಭಾವಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ ಕೀರ್ತನೆ 32:8ನ್ನು ಓದಿರಿ.] ಮಕ್ಕಳನ್ನು ಬೆಳೆಸುವುದರ ಕುರಿತು ಬೈಬಲಿನಲ್ಲಿರುವ ಪ್ರಾಯೋಗಿಕ ಮಾರ್ಗದರ್ಶನವನ್ನು ಈ ಪತ್ರಿಕೆಯು ಒದಗಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಒಬ್ಬ ಸೃಷ್ಟಿಕರ್ತನು ಇದ್ದಾನೆಂದು ಅನೇಕರು ನಂಬುತ್ತಾರೆ. ಈ ನಂಬಿಕೆಯನ್ನು ನಾವು ಹೇಗೆ ಸಮರ್ಥಿಸಬಹುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ ಇಬ್ರಿಯ 3:4ನ್ನು ಓದಿ ಮತ್ತು ಪುಟ 26ರಲ್ಲಿರುವ ಲೇಖನವನ್ನು ತೋರಿಸಿರಿ.] ಸೃಷ್ಟಿಕರ್ತನಿದ್ದಾನೆಂದು ನಂಬಲು ನಮಗಿರುವ ಕಾರಣಗಳನ್ನು ಹೇಗೆ ಇತರರಿಗೆ ವಿವರಿಸಸಾಧ್ಯವಿದೆ ಎಂಬುದರ ಕುರಿತು ಈ ಲೇಖನವು ಸಲಹೆಗಳನ್ನು ಒದಗಿಸುತ್ತದೆ.”