ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ನಮ್ಮಲ್ಲಿ ಹೆಚ್ಚಿನವರು ಒಳ್ಳೇ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಅಪೇಕ್ಷಿಸುತ್ತೇವೆ. ಆಶಾವಾದಿಗಳಾಗಿರುವುದು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಜ್ಞಾನೋಕ್ತಿ 17:22ನ್ನು ಓದಿ.] ಈ ಲೇಖನವು ಆಶಾವಾದದ ಮನೋಭಾವವನ್ನು ಬೆಳೆಸಿಕೊಳ್ಳುವುದು ಏಕೆ ಪ್ರಯೋಜನಕರವಾಗಿದೆ ಎಂದು ಚರ್ಚಿಸುತ್ತದೆ.” ಪುಟ 22ರಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಅಕ್ಟೋ.1
“ಜೀವನದಲ್ಲಿ ಒಂದು ಗುರಿಯನ್ನು ಹೊಂದಿರುವುದು ಜೀವನವನ್ನು ಇನ್ನಷ್ಟು ಅರ್ಥಭರಿತವಾಗಿ ಮಾಡುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ ಮತ್ತು 1 ಯೋಹಾನ 2:15-17ನ್ನು ಓದಿ. ಬಳಿಕ ಪುಟ 18ರಲ್ಲಿರುವ ಲೇಖನವನ್ನು ತೋರಿಸಿ.] ಈ ಲೇಖನ ಮತ್ತು ಮುಂದಿನ ಲೇಖನವು ದೇವರ ಚಿತ್ತವನ್ನು ಮಾಡುವುದು ಹೇಗೆ ನಮ್ಮ ಜೀವನವನ್ನು ಅರ್ಥಭರಿತವಾಗಿಯೂ ಹರ್ಷಭರಿತವಾಗಿಯೂ ಮಾಡಬಲ್ಲದು ಎಂಬುದನ್ನು ಚರ್ಚಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಹೆತ್ತವರು ತಮಗೆ ನಿಜವಾಗಿಯೂ ಸಹಾಯಮಾಡಬಲ್ಲ ಸಲಹೆಗಳನ್ನು ಎಲ್ಲಿ ಕಂಡುಕೊಳ್ಳಬಲ್ಲರೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಬೈಬಲ್ನಲ್ಲಿರುವ ಈ ಮಾತನ್ನು ಗಮನಿಸಿ. [2 ತಿಮೊಥೆಯ 3:16ನ್ನು ಓದಿ.] ಈ ಪತ್ರಿಕೆಯು, ಸಂತೋಷಭರಿತ ಮಕ್ಕಳನ್ನು ಬೆಳೆಸಲು ಹೆತ್ತವರಿಗೆ ಸಹಾಯಮಾಡುವುದರಲ್ಲಿ ಬೈಬಲ್ ಎಷ್ಟೊಂದು ಪ್ರಾಯೋಗಿಕವಾಗಿದೆ ಎಂದು ತೋರಿಸುತ್ತದೆ.”
ಕಾವಲಿನಬುರುಜು ನವೆಂ.1
“ನಮ್ಮ ಭವಿಷ್ಯವು ತುಂಬ ಅನಿಶ್ಚಿತವಾಗಿ ಇರುವುದರಿಂದ ಇವತ್ತಿನದನ್ನು ಇವತ್ತು ನೋಡಿಕೊಂಡು ಬದುಕುವುದೇ ಮೇಲು ಎಂದು ಅನೇಕ ಜನರು ಎಣಿಸುತ್ತಾರೆ. ಇದರ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಯೇಸು ಈ ಆಸಕ್ತಿಕರ ಹೇಳಿಕೆಯನ್ನು ನೀಡಿದ್ದಾನೆ. [ಮತ್ತಾಯ 6:34ನ್ನು ಓದಿ.] ಈ ಪತ್ರಿಕೆಯು, ನಾವು ಹೇಗೆ ಭವಿಷ್ಯತ್ತಿಗಾಗಿ ಯೋಜನೆ ಮಾಡಬಲ್ಲೆವು ಮತ್ತು ಅದೇ ಸಮಯದಲ್ಲಿ ಭವಿಷ್ಯತ್ತಿನ ಕುರಿತ ಅನಾವಶ್ಯಕ ಚಿಂತೆಯನ್ನು ಹೇಗೆ ತಪ್ಪಿಸಬಲ್ಲೆವು ಎಂಬುದನ್ನು ವಿವರಿಸುತ್ತದೆ.”