ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ಅನೇಕ ಬಡವರಿಗೆ ವಾಸಿಸಲು ಸೂಕ್ತವಾದ ಮನೆಗಳು ಇಲ್ಲದಿರುವುದಾದರೂ, ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ನೆಲಸುನಾಡನ್ನು ಸ್ಥಾಪಿಸುವುದರ ಬಗ್ಗೆ ನಡೆಯುತ್ತಿರುವ ಬಹಳಷ್ಟು ಮಾತುಕತೆಯನ್ನು ಕೇಳುವಾಗ ನಿಮಗೆ ಆಶ್ಚರ್ಯವಾಗುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ತದನಂತರ ಯೆಶಾಯ 65:21, 22ನ್ನು ಓದಿ.] ನಮ್ಮ ಸೃಷ್ಟಿಕರ್ತನ ಈ ವಾಗ್ದಾನದಲ್ಲಿ ಹೇಗೆ ಭರವಸೆಯಿಡಸಾಧ್ಯವಿದೆ ಎಂಬುದರ ಕುರಿತು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ತಿಳಿಸುತ್ತದೆ.”
ಕಾವಲಿನಬುರುಜು ಅಕ್ಟೋ.15
“ಜೀವನದಲ್ಲಿ ಯಶಸ್ಸನ್ನು ಪಡೆಯಲು ಶಿಕ್ಷಣವು ಕೀಲಿಕೈಯಾಗಿದೆ ಎಂಬುದು ಅನೇಕರ ಅಭಿಪ್ರಾಯ. ಒಬ್ಬ ಉತ್ತಮ ವ್ಯಕ್ತಿಯಾಗಲು ಮತ್ತು ಜೀವನದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುವಂಥ ರೀತಿಯ ಶಿಕ್ಷಣವಿದೆಯೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ ರೋಮಾಪುರ 12:2ನ್ನು ಓದಿ.] ಈ ಪತ್ರಿಕೆಯು, ಲಭ್ಯವಿರುವ ಅತ್ಯುತ್ತಮ ಶಿಕ್ಷಣದಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದೆಂಬುದನ್ನು ಚರ್ಚಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಚಿನ್ನದ ಆಭರಣಗಳು ಲೋಕವ್ಯಾಪಕವಾಗಿ ಬಹುಮೂಲ್ಯವೆಂದು ಪರಿಗಣಿಸಲ್ಪಟ್ಟಿವೆ. ಚಿನ್ನವು ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೀವು ಬಯಸುತ್ತೀರೋ? [ಪುಟ 26ರಲ್ಲಿರುವ ರೇಖಾಚೌಕಕ್ಕೆ ತಿರುಗಿಸಿರಿ.] ಈ ಲೇಖನವು ಚಿನ್ನವು ಎಲ್ಲಿ ಸಿಗುತ್ತದೆ ಎಂಬುದನ್ನು ವಿವರಿಸುತ್ತದೆ ಮಾತ್ರವಲ್ಲ ಚಿನ್ನವನ್ನು ಇಂದು ಉಪಯೋಗಿಸಲಾಗುವ ಬೇರೆಬೇರೆ ವಿಧಾನಗಳ ಕುರಿತು ಕೂಡ ತಿಳಿಸುತ್ತದೆ.”
ಕಾವಲಿನಬುರುಜು ನವೆಂ.1
“ಲೋಕದಲ್ಲಿರುವ ಅನ್ಯಾಯದಿಂದ ಅನೇಕ ಜನರು ಬೇಸರಗೊಂಡಿದ್ದಾರೆ. ಈ ಲೋಕವನ್ನು ಯಾರಾದರೂ ನಿಜವಾಗಿ ಬದಲಾಯಿಸಬಹುದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬದಲಾವಣೆಗೆ ಯಾವುದು ಅಡ್ಡಿಯಾಗಿದೆ ಎಂಬುದರ ಬಗ್ಗೆ ಈ ಪತ್ರಿಕೆಯು ಚರ್ಚಿಸುತ್ತದೆ. ಇದನ್ನು ಜಯಿಸುವವನು ಯಾರು ಮತ್ತು ಅವನು ಹೇಗೆ ನಿಜ ಶಾಂತಿ ಹಾಗೂ ಭದ್ರತೆಯ ಲೋಕವನ್ನು ತರಲಿರುವನೆಂದು ಕೂಡ ಈ ಪತ್ರಿಕೆಯು ತಿಳಿಸುತ್ತದೆ.” ಕೀರ್ತನೆ 72:12-14ನ್ನು ಓದಿರಿ.