ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ಕಡೇ ದಿವಸಗಳಲ್ಲಿ ಕಷ್ಟಕರ ಸಮಯಗಳು ಬರುವವು ಎಂದು ಬೈಬಲು ಪ್ರವಾದಿಸಿತ್ತು. [2 ತಿಮೊಥೆಯ 3:1, 3ನ್ನು ಓದಿರಿ.] ಲೋಕದಾದ್ಯಂತ ನಡೆಯುತ್ತಿರುವ ದುಷ್ಕೃತ್ಯದ ಪ್ರಮಾಣವು ಇದರ ಪುರಾವೆಯನ್ನು ನೀಡುತ್ತದೆ. ಒಂದುವೇಳೆ ಪೊಲೀಸರು ಇಲ್ಲದಿರುತ್ತಿದ್ದಲ್ಲಿ ಪರಿಸ್ಥಿತಿಗಳು ಇನ್ನೂ ಹದಗೆಟ್ಟಿರುತ್ತಿದ್ದವು. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಲೋಕವ್ಯಾಪಕವಾಗಿ ಪೊಲೀಸರು ಎದುರಿಸುವ ಪಂಥಾಹ್ವಾನಗಳನ್ನು ಚರ್ಚಿಸುತ್ತದೆ.”
ಕಾವಲಿನಬುರುಜು ಅಕ್ಟೋ.15
“ನೀವು ಮಕ್ಕಳಿಗೆ ಅಥವಾ ಇತರರಿಗೆ, ಇಂದು ಅನೇಕಾನೇಕ ದುಷ್ಟ ಸಂಗತಿಗಳು ಏಕೆ ಸಂಭವಿಸುತ್ತಾ ಇವೆ ಎಂಬುದನ್ನು ಹೇಗೆ ವಿವರಿಸಬಲ್ಲಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ಸಕಲ ದುಷ್ಟತನದ ಹಿಂದೆ ಯಾರ ಕೈವಾಡವಿದೆ?’ ಎಂಬ ಪ್ರಶ್ನೆಯನ್ನು ಬೈಬಲು ಉತ್ತರಿಸುತ್ತದೆ. [1 ಯೋಹಾನ 5:19ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಆ ಕೆಡುಕನು ಯಾರಾಗಿದ್ದಾನೆ ಮತ್ತು ನಾವು ಅವನನ್ನು ಹೇಗೆ ಎದುರಿಸಸಾಧ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು.”
ಎಚ್ಚರ! ಅಕ್ಟೋ.-ಡಿಸೆಂ.
“ಅನೇಕರು ಅಶ್ಲೀಲ ಸಾಹಿತ್ಯವನ್ನು ಹಾನಿರಹಿತವಾದ ಕಾಲಕ್ಷೇಪವಾಗಿ ಅಥವಾ ವಿನೋದವಾಗಿ ಪರಿಗಣಿಸುತ್ತಾರೆ. ಇದು ವ್ಯಕ್ತಿಗಳನ್ನು, ಕುಟುಂಬಗಳನ್ನು ಮತ್ತು ಒಟ್ಟಿನಲ್ಲಿ ಸಮಾಜವನ್ನೇ ಹಾಳುಮಾಡುತ್ತದೆ ಎಂದು ಇತರರು ನೆನಸುತ್ತಾರೆ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಅಶ್ಲೀಲ ಸಾಹಿತ್ಯವನ್ನು, ಆ ವಿಷಯಕ್ಕೆ ಸಂಬಂಧಿಸಿದ ಬೈಬಲ್ ಮೂಲತತ್ತ್ವಗಳ ಬೆಳಕಿನಲ್ಲಿ ಪರೀಕ್ಷಿಸುತ್ತದೆ.” ಒಂದು ಉದಾಹರಣೆಯೋಪಾದಿ, ಎಫೆಸ 4:17-19ನ್ನು ಓದಿರಿ.
ಕಾವಲಿನಬುರುಜು ನವೆಂ.1
“ನಮ್ಮಲ್ಲಿ ಅನೇಕರು ಇತರರೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಹೊಂದಿರಲು ಪ್ರಯತ್ನಿಸುತ್ತೇವೆ. ಅನೇಕವೇಳೆ ಇದನ್ನು ಹೇಳುವುದು ಸುಲಭ ಆದರೆ ಮಾಡುವುದು ಕಷ್ಟ ಎಂಬುದನ್ನು ನೀವು ಸಹ ಬಹುಶಃ ಒಪ್ಪಿಕೊಳ್ಳುವಿರಿ. [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದು ಏಕೆ ಕಷ್ಟಕರ ಎಂಬುದಕ್ಕಿರುವ ಕಾರಣವನ್ನು ಬೈಬಲು ವಿವರಿಸುತ್ತದೆ. [ಯಾಕೋಬ 3:2ನ್ನು ಓದಿರಿ.] ಕ್ಷಮಾಯಾಚನೆಯು, ಶಾಂತಿಯನ್ನು ಪುನಸ್ಸ್ಥಾಪಿಸಿ ಅದನ್ನು ಕಾಪಾಡಿಕೊಳ್ಳುವುದರಲ್ಲಿ ಹೇಗೆ ಒಂದು ನಿರ್ಣಾಯಕ ಅಂಶವಾಗಿದೆ ಎಂಬುದನ್ನು ಈ ಲೇಖನವು ತೋರಿಸುತ್ತದೆ.”