ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ಯೆಹೂದ್ಯರು ಮತ್ತು ಅರಬ್ಬರು, ಹಿಂದೂಗಳು ಮತ್ತು ಮುಸ್ಲಿಮರು, ಕರಿಯರು ಮತ್ತು ಬಿಳಿಯರು, ಕ್ಯಾಥೊಲಿಕರು ಮತ್ತು ಪ್ರಾಟೆಸ್ಟಂಟರು, ಎಲ್ಲರೂ ಒಟ್ಟಿಗೆ ಶಾಂತಿಯಿಂದ ಜೀವಿಸಸಾಧ್ಯವಿರುವಂತಹ ಒಂದು ಲೋಕವನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ಇದು ಅಸಾಧ್ಯವೆಂದು ನೀವು ನೆನಸುತ್ತಿರಬಹುದು, ಆದರೆ ಲೋಕದಾದ್ಯಂತ ಜನರು ಅಂತಹ ಪೂರ್ವಾಗ್ರಹವನ್ನು ಹಾಗೂ ದ್ವೇಷವನ್ನು ಜಯಿಸುವಂತೆ ಹೇಗೆ ಸಹಾಯಮಾಡಲ್ಪಟ್ಟಿದ್ದಾರೆ ಎಂಬುದನ್ನು ಓದುವುದರಿಂದ ನೀವು ಖಂಡಿತ ಆನಂದಿಸುವಿರಿ.”
ಕಾವಲಿನಬುರುಜು ನವೆಂ.15
“‘ಯೇಸು ನಮಗೋಸ್ಕರ ಸತ್ತನು’ ಎಂಬ ಹೇಳಿಕೆಯನ್ನು ನಾವು ಕೇಳಿಸಿಕೊಂಡಿದ್ದೇವೆ. [ಯೋಹಾನ 3:16ನ್ನು ಉಲ್ಲೇಖಿಸಿ.] ಒಬ್ಬ ಮನುಷ್ಯನ ಮರಣವು ಹೇಗೆ ನಮ್ಮೆಲ್ಲರನ್ನೂ ರಕ್ಷಿಸಬಲ್ಲದು ಎಂದು ನೀವು ಎಂದಾದರೂ ಯೋಚಿಸಿದ್ದುಂಟೋ? [ಉತ್ತರಿಸಲು ಅನುಮತಿಸಿ.] ಬೈಬಲ್ ಸರಳವಾದ ಉತ್ತರವನ್ನು ಕೊಡುತ್ತದೆ. ಮತ್ತು ‘ಯೇಸು ರಕ್ಷಿಸುತ್ತಾನೆ—ಹೇಗೆ?’ ಎಂಬ ಈ ಲೇಖನವು ಅದನ್ನು ಸ್ಪಷ್ಟವಾಗಿ ವಿವರಿಸುತ್ತದೆ.”
ಎಚ್ಚರ! ಅಕ್ಟೋ.-ಡಿಸೆಂ.
“ಅನೇಕ ಧರ್ಮಗಳ ಜನರು, ಈ ವಿಶ್ವವನ್ನು ಸೃಷ್ಟಿಸಿದ ಒಬ್ಬ ದೇವರಲ್ಲಿ ನಂಬಿಕೆಯಿಟ್ಟಿದ್ದಾರೆ, ಆದರೆ ನೀವು ನಂಬಿಕೆಯಿಟ್ಟಿದ್ದೀರೋ? [ಉತ್ತರಿಸುವಂತೆ ಅನುಮತಿಸಿ.] ಆತನು ಯಾರು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿರಬಹುದೋ ಎಂದು ನೀವು ಯೋಚಿಸಿದ್ದಿರಬಹುದು. ಒಂದು ಬುಡಕಟ್ಟಿನ ಮಹಿಳೆಯು ದೇವರ ಹೆಸರು ಯಾವುದು ಎಂಬುದನ್ನು, ಬೈಬಲಿನಲ್ಲಿರುವ ಈ ವಚನವು ತೋರಿಸಲ್ಪಟ್ಟಾಗ ಕಂಡುಕೊಂಡಳು ಎಂಬುದನ್ನು ಈ ಲೇಖನವು ತೋರಿಸುತ್ತದೆ. ಆ ವಚನ: [ಕೀರ್ತನೆ 83:18ನ್ನು ಓದಿ.] ಇದು ಅವಳ ಜೀವಿತದಲ್ಲಿ ಮಾಡಿದ ವ್ಯತ್ಯಾಸದ ಕುರಿತು ಓದಲು ನೀವು ಆಸಕ್ತರಾಗಿರಬಹುದು.”
ಕಾವಲಿನಬುರುಜು ಡಿಸೆಂ.1
“ವರ್ಷದ ಈ ಸಮಯಾವಧಿಯಲ್ಲಿ ಜನರು ಉಡುಗೊರೆಯನ್ನು ಕೊಡುವುದರಲ್ಲಿ ಮತ್ತು ಇನ್ನಿತರ ದಯಾಪರ ಕೃತ್ಯಗಳನ್ನು ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಇದು ಸುವರ್ಣ ನಿಯಮವನ್ನು ನಮ್ಮ ಮನಸ್ಸಿಗೆ ತರುತ್ತದೆ. [ಮತ್ತಾಯ 7:12ನ್ನು ಓದಿ.] ಆದರೆ, ವರ್ಷವಿಡೀ ಆ ನಿಯಮಕ್ಕನುಸಾರ ಜೀವಿಸುವುದು ಸಾಧ್ಯವೆಂದು ನಿಮಗೆ ಅನಿಸುತ್ತದೋ? [ಉತ್ತರಿಸುವಂತೆ ಅನುಮತಿಸಿ.] ಈ ಪತ್ರಿಕೆಯು, ‘ಸುವರ್ಣ ನಿಮಯ—ಈಗಲೂ ವ್ಯಾವಹಾರಿಕವೋ?’ ಎಂಬುದನ್ನು ಆಲೋಚಿಸಲು ಹೆಚ್ಚಿನ ವಿಷಯವನ್ನು ಒದಗಿಸುತ್ತದೆ.”