ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋ.-ಡಿಸೆಂ.
“ಕುಟುಂಬ ಸಂತೋಷಕ್ಕೆ ಹೆಚ್ಚು ಸಹಾಯಮಾಡುವಂಥದ್ದು ಯಾವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಬಹಳ ಹಿಂದೆ ಜ್ಞಾನಿಯೊಬ್ಬನು ತಿಳಿಸಿದ ಮಾತನ್ನು ನಾನು ಓದಿ ಹೇಳಬಹುದೋ? [ಆ ವ್ಯಕ್ತಿ ಒಪ್ಪುವುದಾದರೆ, ಯೋಹಾನ 13:34 ಓದಿ.] ಕುಟುಂಬದ ಪ್ರತಿಯೊಬ್ಬನು ಕುಟುಂಬ ಸಂತೋಷಕ್ಕೆ ಹೇಗೆ ನೆರವಾಗಬಲ್ಲನು ಎಂದು ಈ ಲೇಖನವು ತೋರಿಸುತ್ತದೆ.” ಪುಟ 24 ಮತ್ತು 25ರಲ್ಲಿರುವ ಲೇಖನವನ್ನು ತೋರಿಸಿ.
ಎಚ್ಚರ! ಅಕ್ಟೋ.-ಡಿಸೆಂ.
“ಮಕ್ಕಳಿಗೆ ಇಂದು ಶಾಲೆಯಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲಿಕ್ಕಿದೆ. ಅವರಿಗೆ ಸಹಾಯಮಾಡಲಿಕ್ಕಾಗಿ ಹೆತ್ತವರು ಮತ್ತು ಇತರರು ಏನು ಮಾಡಬಲ್ಲರು? [ಪ್ರತಿಕ್ರಿಯೆಗೆ ಅವಕಾಶಕೊಡಿ. ಒಂದು ವಚನವನ್ನು ಓದಬಹುದೋ ಎಂದು ಕೇಳಿ. ಒಪ್ಪಿದರೆ ಜ್ಞಾನೋಕ್ತಿ 22:3 ಓದಿ.] ಹೆಚ್ಚುತ್ತಿರುವ ಒತ್ತಡವನ್ನು ತಡೆಯಲಿಕ್ಕಾಗಿ ನಾವು ವಿವೇಕದಿಂದ ಹೆಜ್ಜೆಗಳನ್ನು ತೆಗೆದುಕೊಳ್ಳಲು ಈ ಲೇಖನವು ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.” 24 ರಿಂದ ಆರಂಭವಾಗುವ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.