ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ಪರಿಸರ ಮಾಲಿನ್ಯದ ಕುರಿತು ಜನರಲ್ಲಿ ಬಹಳಷ್ಟು ಚಿಂತನೆಯಿದೆ. ಆದರೆ ಮನಸ್ಸಿನ ಮಾಲಿನ್ಯದ ಕುರಿತು ನೀವು ಎಂದಾದರೂ ಚಿಂತಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿ ಕಂಡುಬರುವ ವ್ಯಾವಹಾರಿಕ ಸಲಹೆಯು ನಮ್ಮನ್ನು ಸಂರಕ್ಷಿಸಬಲ್ಲದು. [ಎಫೆಸ 5:3, 4ನ್ನು ಓದಿರಿ.] ಅಗೋಚರವಾಗಿ ಹರಡುವ ಈ ಗಂಡಾಂತರದಿಂದ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಕಾವಲಿನಬುರುಜು ನವೆಂ.15
“ಈ ಭೂಮಿಯು ಪರದೈಸಾಗಲಿದೆ ಎಂದು ಹಿಂದಿನ ಕಾಲದಲ್ಲಿ ಅನೇಕರು ನಂಬಿದ್ದರು. ಆದರೆ ಇಂದು, ಭೂಮಿಯು ಅಸ್ತಿತ್ವದಲ್ಲಿ ಉಳಿಯುವುದರ ಬಗ್ಗೆಯೂ ಕೆಲವರು ಸಂದೇಹಪಡುತ್ತಾರೆ. ಆದರೆ ಭೂಮಿಯ ಭವಿಷ್ಯತ್ತಿನ ಕುರಿತು ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ಇದರ ಕುರಿತು ಏನನ್ನುತ್ತದೆಂದು ಗಮನಿಸಿರಿ. [ಕೀರ್ತನೆ 37:11ನ್ನು ಓದಿ.] ಭೂಮಿಯ ಭವಿಷ್ಯತ್ತಿನ ಕುರಿತು ಬೈಬಲ್ ಇನ್ನೇನನ್ನು ತಿಳಿಸುತ್ತದೆಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ನೀವೂ ನಿಮ್ಮ ಕುಟುಂಬವೂ ಉತ್ತಮ ಆರೋಗ್ಯವನ್ನು ಅನುಭವಿಸಬೇಕೆಂದು ನೀವು ಬಯಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಪುಟ 11ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಎಚ್ಚರ! ಪತ್ರಿಕೆಯು, ನಿಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳುವ ಆರು ವಿಧಗಳನ್ನು ಚರ್ಚಿಸುತ್ತದೆ. “ತಾನು ಅಸ್ವಸ್ಥನು” ಎಂದು ಯಾರೊಬ್ಬನೂ ಹೇಳದಿರುವ ಸಮಯವು ಬರಲಿದೆ ಎಂದು ನಮ್ಮ ಸೃಷ್ಟಿಕರ್ತನು ವಾಗ್ದಾನ ಮಾಡಿದ್ದಾನೆ. ಯೆಶಾಯ 33:24ನ್ನು ಓದಿರಿ.
ಕಾವಲಿನಬುರುಜು ಡಿಸೆಂ.1
“ಕೆಲವು ಜನರು, ದೇವರಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಒಂದು ಕಾರಣವು, ಅವರನ್ನು ಬಾಧಿಸುತ್ತಿರುವ ಪ್ರಶ್ನೆಗಳಿಗೆ ತೃಪ್ತಿದಾಯಕವಾದ ಉತ್ತರವನ್ನು ಕಂಡುಕೊಳ್ಳಲಾಗದೆ ಇರುವುದೇ ಆಗಿದೆ. ಉದಾಹರಣೆಗೆ ಇಂಥ ಕೆಲವು ಪ್ರಶ್ನೆಗಳು. [ಪುಟ 6ರಲ್ಲಿರುವ ಚೌಕದಿಂದ ಒಂದು ಉದಾಹರಣೆಯನ್ನು ಕೊಡಿರಿ.] ದೇವರಲ್ಲಿ ನಿಜವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವ ಒಂದು ಕೀಲಿಕೈಯ ಕುರಿತು, ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಚರ್ಚಿಸುತ್ತದೆ.” ಫಿಲಿಪ್ಪಿ 1:9ನ್ನು ಓದಿರಿ.