ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ನವೆಂ. 1
“ವಿವಾಹದ ಕುರಿತು ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಯಲು ಬಯಸುತ್ತೇನೆ. [ಇಬ್ರಿಯ 13:3ಬಿ ಅನ್ನು ಓದಿ, ಪ್ರತಿಕ್ರಿಯೆಗಾಗಿ ಅನುಮತಿಸಿ.] ವಿವಾಹ ಸಮಾರಂಭವನ್ನು ಎಲ್ಲರ ದೃಷ್ಟಿಯಲ್ಲಿ ಗೌರವಾರ್ಹವಾಗಿ ಮಾಡುವಂಥ ಸಂಗತಿ ಯಾವುದೆಂದು ತಿಳಿಯಲು ನೀವು ಬಯಸುವಿರಿ ಎಂದು ನಾವು ನೆನಸುತ್ತೇವೆ. [ಪುಟ 12ರಲ್ಲಿರುವ ಲೇಖನಕ್ಕೆ ತಿರುಗಿಸಿ.] ವಿವಾಹ ಸಮಾರಂಭಗಳು ಗೌರವಾರ್ಹವಾಗಿರುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳ ಸಾಧ್ಯವಿದೆ ಎಂಬುದನ್ನು ಈ ಲೇಖನ ಮತ್ತು ನಂತರದ ಲೇಖನಗಳು ವಿವರಿಸುತ್ತವೆ.”
ಎಚ್ಚರ! ಅಕ್ಟೋ. - ಡಿಸೆಂ.
“ದೇವರಿದ್ದಾನೆಂದು ನಂಬುವುದು ವೈಜ್ಞಾನಿಕವಾಗಿದೆಯೋ ಎಂದು ಅನೇಕರು ಯೋಚಿಸುತ್ತಾರೆ. ಇದರ ಕುರಿತು ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ ಇಬ್ರಿಯ 3:4ನ್ನು ಓದಿ.] ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆಯು, ಕೆಲವು ವಿಜ್ಞಾನಿಗಳು ಯಾವ ಪುರಾವೆಗಳಿಂದಾಗಿ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ ಎಂಬುದನ್ನು ಪರಿಶೀಲಿಸುತ್ತದೆ.”
ಕಾವಲಿನಬುರುಜು ಡಿಸೆಂ. 1
“ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ಪವಿತ್ರ ಶಾಸ್ತ್ರವು ತಿಳಿಸುತ್ತದೆ. [ಯೋಹಾನ 3:16ನ್ನು ಓದಿ.] ದೇವರ ಪ್ರೀತಿಯಲ್ಲಿ ನಾವು ಹೇಗೆ ನೆಲೆಗೊಳ್ಳಸಾಧ್ಯವಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿ, ನಂತರ ಪುಟ 11ರಲ್ಲಿರುವ ಲೇಖನಕ್ಕೆ ತಿರುಗಿಸಿ.] ಜೀವನದ ವಿವಿಧ ಕ್ಷೇತ್ರಗಳಲ್ಲಿ ನಾವು ಹೇಗೆ ದೇವರ ಪ್ರೀತಿಯಲ್ಲಿ ಉಳಿಯಬಲ್ಲೆವು ಎಂಬುದನ್ನು ಈ ಲೇಖನವು ವಿವರಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಪ್ರಾಚೀನಕಾಲದ ಈ ವಚನದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಯಲು ಬಯಸುತ್ತೇನೆ. [ಇಬ್ರಿಯ 3:4ನ್ನು ಓದಿ, ಪ್ರತಿಕ್ರಿಯೆಗಾಗಿ ಅನುಮತಿಸಿ. ಪುಟ 21ರಲ್ಲಿರುವ ಲೇಖನಕ್ಕೆ ತಿರುಗಿಸಿ.] ಕೆಲವು ಹೆಸರಾಂತ ವಿಜ್ಞಾನಿಗಳು ಎಲ್ಲವನ್ನು ಸೃಷ್ಟಿಸಲಾಯಿತು ಎಂಬುದನ್ನು ಏಕೆ ನಂಬುತ್ತಾರೆಂದು ಈ ಲೇಖನವು ವಿವರಿಸುತ್ತದೆ.”