ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
ನೀವು ಒಬ್ಬ ಯುವ ವ್ಯಕ್ತಿಯನ್ನು ಭೇಟಿಯಾಗುವಲ್ಲಿ ಹೀಗೆ ಹೇಳಬಹುದು: “ಅನೇಕ ಯುವಜನರು ಕೆಲವೊಮ್ಮೆ ತಾವು ಯಾರಿಗೂ ಬೇಡವಾಗಿದ್ದೇವೆ ಅಥವಾ ತಾವು ಒಬ್ಬಂಟಿಗರು ಎಂದು ಭಾವಿಸುತ್ತಾರೆ. ನಿಮಗೆ ಎಂದಾದರೂ ಹಾಗೆ ಅನಿಸಿದೆಯಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಜ್ಞಾನೋಕ್ತಿ 15:13ನ್ನು ಓದಿ.] ಒಂಟಿಗ ಭಾವನೆ ನಿಜವಾಗಿಯೂ ತುಂಬ ಮನನೋಯಿಸುತ್ತದೆ. ಈ ಲೇಖನವು, ನಾವು ಒಂಟಿಗ ಭಾವನೆಗಳನ್ನು ಹೇಗೆ ತೊರೆಯಸಾಧ್ಯವಿದೆ ಎಂಬುದರ ಕುರಿತು ಉತ್ತಮ ಸಲಹೆಗಳನ್ನು ಕೊಡುತ್ತದೆ.” ಪುಟ 12ರಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ನವೆಂ.1
“ನಮ್ಮ ಭವಿಷ್ಯವು ತುಂಬ ಅನಿಶ್ಚಿತವಾಗಿ ಇರುವುದರಿಂದ ಇವತ್ತಿನದನ್ನು ಇವತ್ತು ನೋಡಿಕೊಂಡು ಬದುಕುವುದೇ ಮೇಲು ಎಂದು ಅನೇಕ ಜನರು ಎಣಿಸುತ್ತಾರೆ. ಇದರ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಯೇಸು ಈ ಆಸಕ್ತಿಕರ ಹೇಳಿಕೆಯನ್ನು ನೀಡಿದ್ದಾನೆ. [ಮತ್ತಾಯ 6:34ನ್ನು ಓದಿ.] ಈ ಪತ್ರಿಕೆಯು, ನಾವು ಹೇಗೆ ಭವಿಷ್ಯತ್ತಿಗಾಗಿ ಯೋಜನೆ ಮಾಡಬಲ್ಲೆವು ಮತ್ತು ಅದೇ ಸಮಯದಲ್ಲಿ ಭವಿಷ್ಯತ್ತಿನ ಕುರಿತ ಅನಾವಶ್ಯಕ ಚಿಂತೆಯನ್ನು ಹೇಗೆ ತಪ್ಪಿಸಬಲ್ಲೆವು ಎಂಬುದನ್ನು ವಿವರಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ನಮ್ಮಲ್ಲಿ ಹೆಚ್ಚಿನವರು ಒಳ್ಳೇ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಅಪೇಕ್ಷಿಸುತ್ತೇವೆ. ಆಶಾವಾದಿಗಳಾಗಿರುವುದು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಜ್ಞಾನೋಕ್ತಿ 17:22ನ್ನು ಓದಿ.] ಈ ಲೇಖನವು, ಆಶಾವಾದದ ಮನೋಭಾವವನ್ನು ಬೆಳೆಸಿಕೊಳ್ಳುವುದು ಏಕೆ ಪ್ರಯೋಜನಕರವಾಗಿದೆ ಎಂದು ಚರ್ಚಿಸುತ್ತದೆ.” ಪುಟ 22ರಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಡಿಸೆಂ.1
“ನಾವೆಲ್ಲರೂ ಸಂತೋಷಕರವಾದ ಅರ್ಥಭರಿತ ಜೀವನವನ್ನು ನಡೆಸಲು ಇಷ್ಟಪಡುತ್ತೇವೆ. ಸಂತೋಷಕ್ಕಿರುವ ಕೀಲಿಕೈಯ ಕುರಿತು ಯೇಸು ಇಲ್ಲಿ ಏನು ಹೇಳಿದ್ದಾನೋ ಅದನ್ನು ನೀವು ಒಪ್ಪುತ್ತೀರೋ? [ಮತ್ತಾಯ 5:3ನ್ನು ಓದಿರಿ. ಬಳಿಕ ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು, ದೇವರನ್ನು ಆರಾಧಿಸುವ ನಮ್ಮ ಸಹಜವಾದ ಮತ್ತು ಮೂಲಭೂತ ಆವಶ್ಯಕತೆಯನ್ನು ತಣಿಸುವುದು ಹೇಗೆ ನಮ್ಮ ಬದುಕಿಗೆ ಅರ್ಥವನ್ನು ಕೊಡುತ್ತದೆಂದು ವಿವರಿಸುತ್ತದೆ.”