ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ಕಳೆದ ಸಾವಿರ ವರ್ಷಗಳ ಯಾವ ಕಂಡುಹಿಡಿತವು ನಮ್ಮ ಜೀವನದ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದೆ? [ಉತ್ತರಿಸಲು ಅನುಮತಿಸಿ.] ಅನೇಕ ಜನರಿಗೆ ವಿದ್ಯುಚ್ಛಕ್ತಿ, ಟೆಲಿಫೋನ್ಗಳು ಅಥವಾ ಕಂಪ್ಯೂಟರ್ಗಳು ಮನಸ್ಸಿಗೆ ಬರುತ್ತವೆ, ಆದರೆ ಬಹುಶಃ ಈ ಯಂತ್ರವೇ ಅಂತಹ ಪ್ರಭಾವವನ್ನು ಬೀರಿದೆ ಎಂದು ಕೆಲವು ಪರಿಣತರು ನಂಬುತ್ತಾರೆ. [17ನೆಯ ಪುಟದಲ್ಲಿರುವ ಚಿತ್ರವನ್ನು ತೋರಿಸಿರಿ.] ಇದು, ಪ್ರಥಮವಾಗಿ ಯಂತ್ರೀಕರಿಸಲ್ಪಟ್ಟ ಪ್ರಿಂಟಿಂಗ್ ಪ್ರೆಸ್ನ ಮಾದರಿ ಆಗಿದೆ, ಮತ್ತು ಅದು ಖಂಡಿತವಾಗಿಯೂ ಜಗತ್ತನ್ನೇ ಬದಲಾಯಿಸಿದೆ. ಇದನ್ನು ಕಂಡುಹಿಡಿದ ಯೋಹಾನಸ್ ಗೂಟನ್ಬರ್ಗ್ನ ಕುರಿತಾದ ಈ ಲೇಖನವನ್ನು ಓದುವುದರಲ್ಲಿ ನೀವು ಖಂಡಿತವಾಗಿಯೂ ಆನಂದಿಸುವಿರಿ ಎಂಬ ಅನಿಸಿಕೆ ನನಗಿದೆ.”
ಕಾವಲಿನಬುರುಜು ಡಿಸೆಂ. 15
“ವರ್ಷದ ಈ ಸಮಯದಲ್ಲಿ ಅಧಿಕಾಂಶ ಜನರು, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುತ್ತಿರಲಿ ಇಲ್ಲದಿರಲಿ, ಅವನ ಕುರಿತು ಯೋಚಿಸುತ್ತಾರೆ. ಅವನು ಒಬ್ಬ ನಿಜವಾದ ವ್ಯಕ್ತಿಯಾಗಿರಲಿಲ್ಲ ಎಂದು ಕೆಲವರು ಹೇಳುತ್ತಾರೆ. ನಿಮ್ಮ ಅಭಿಪ್ರಾಯವೇನು? [ಪ್ರತ್ಯುತ್ತರದ ನಂತರ, ಮತ್ತಾಯ 16:15, 16ನ್ನು ಓದಿರಿ.] ಯೇಸು ಹೇಗೆ ಇಂದು ನಿಮ್ಮ ಮೇಲೆ ಪರಿಣಾಮ ಬೀರುತ್ತಾನೆ ಮತ್ತು ಭವಿಷ್ಯದಲ್ಲಿ ಪರಿಣಾಮ ಬೀರುವನು ಎಂಬುದನ್ನು ನೋಡಲಿಕ್ಕಾಗಿ, ‘ನಿಜವಾದ ಯೇಸು’ವಿನ ಕುರಿತಾದ ಈ ಲೇಖನವನ್ನು ಓದುವುದರಲ್ಲಿ ನೀವು ಆನಂದಿಸುವಿರೆಂದು ನನಗೆ ನಂಬಿಕೆಯಿದೆ.”
ಎಚ್ಚರ! ಅಕ್ಟೋ.-ಡಿಸೆಂ.
“ಚಿಂತೆ ಮಾಡುವುದು ನಿಮಗೆ ಹಾನಿಕರವಾಗಿದೆಯೋ? ಹೌದೆಂದು ಅನೇಕರು ನೆನಸಬಹುದು, ಆದರೆ ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ ಕಂಡುಬರುವ ಲೇಖನಗಳಲ್ಲೊಂದರಲ್ಲಿ, ಕೆಲವೊಮ್ಮೆ ಚಿಂತೆಮಾಡುವುದು ವಾಸ್ತವದಲ್ಲಿ ನಿಮಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದರ ಕುರಿತಾದ ಕೆಲವು ಪ್ರಾಯೋಗಿಕ ಸಲಹೆಗಳೊಂದಿಗೆ, ‘ವಿವೇಕಯುತವಾಗಿ ಚಿಂತಿಸುವ’ ಬಗ್ಗೆಯೂ ಚರ್ಚಿಸಲಾಗಿದೆ. ನೀವು ಈ ಸಂಚಿಕೆಯನ್ನು ಓದಲು ಇಷ್ಟಪಡುವಿರೋ?”
ಕಾವಲಿನಬುರುಜು ಜನ. 1
“ಕೆಲವು ಜನರು ಯಾವದೇ ಕಷ್ಟವಿಲ್ಲದೆ ಸುಲಭವಾಗಿ ಜೀವನವನ್ನು ನಡೆಸುತ್ತಿರುವಂತೆ ತೋರುವಾಗ, ಇತರರು ಹೊಟ್ಟೆಪಾಡಿಗಾಗಿ ಏಕೆ ತುಂಬ ಹೆಣಗಾಡಬೇಕಾಗುತ್ತದೆಂದು ನೀವು ಕುತೂಹಲಪಡುವುದುಂಟೋ? ಇದರ ಕುರಿತು ಬೈಬಲು ಏನನ್ನೋ ಹೇಳುತ್ತದೆ. [ಯೋಬ 34:19ನ್ನು ಓದಿರಿ.] ದೇವರು ಹೇಗೆ ವರ್ಗಬೇಧವನ್ನು ಗತಕಾಲದ ವಿಷಯವನ್ನಾಗಿ ಮಾಡಲಿರುವನು ಎಂಬುದು ಈ ಪತ್ರಿಕೆಯಲ್ಲಿ ವಿವರಿಸಲ್ಪಟ್ಟಿದೆ.”