ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ.-ಮಾರ್ಚ್
“ನಾವು ಹಿಂಸಾತ್ಮಕ ಸಮಯಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನೀವು ಬಹುಶಃ ಒಪ್ಪಿಕೊಳ್ಳುವಿರಿ. [ಪ್ರತಿಕ್ರಿಯೆಯನ್ನು ಪಡೆದುಕೊಂಡ ನಂತರ, 2 ತಿಮೊಥೆಯ 3:3ನ್ನು ಓದಿರಿ.] ಅನೇಕವೇಳೆ “ಉಗ್ರ” ಕೃತ್ಯಗಳು ಕುಟುಂಬ ವೃತ್ತದೊಳಗೆ ಸಹ ನಡೆಯುತ್ತವೆ. ‘ಹೊಡೆತಕ್ಕೊಳಗಾಗಿರುವ ಸ್ತ್ರೀಯರಿಗೆ ಸಹಾಯ’ ಎಂಬ ಈ ಲೇಖನವು, ನಿರೀಕ್ಷೆಯ ಒಂದು ಸಂದೇಶವನ್ನು ಕೊಡುತ್ತದೆ. ಈ ವಿಷಯವನ್ನು ನೀವು ಹಂಚಿಕೊಳ್ಳಬಹುದಾದ ಯಾರಾದರೊಬ್ಬರು ನಿಮಗೆ ಗೊತ್ತಿರಬಹುದು.”
ಕಾವಲಿನಬುರುಜು ಜನ. 15
“ಅನೇಕರು ತಮ್ಮ ಆರಾಧನೆಯಲ್ಲಿ ವಿಗ್ರಹಗಳನ್ನು ಉಪಯೋಗಿಸುತ್ತಾರೆ. ಇಂತಹ ವಸ್ತುಗಳಿಗೆ ರಕ್ಷಿಸುವ ಶಕ್ತಿಯಿದೆ ಎಂದು ನಿಮಗೆ ಅನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಸತ್ಯ ದೇವರು ನಮಗಾಗಿ ಏನು ಮಾಡಲಿರುವನು ಎಂಬುದನ್ನು ದಯವಿಟ್ಟು ಗಮನಿಸಿ. [ಪ್ರಕಟನೆ 21:3, 4ನ್ನು ಓದಿರಿ.] ನಿಜವಾಗಿರುವ ಒಬ್ಬ ದೇವರು ಮಾತ್ರವೇ ಇದನ್ನು ಸಾಧಿಸಶಕ್ತನು. ಆತನು ಯಾರಾಗಿದ್ದಾನೆ ಮತ್ತು ಆತನಲ್ಲಿ ಭರವಸೆಯಿಡುವ ಮೂಲಕ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಎಚ್ಚರ! ಜನ.-ಮಾರ್ಚ್
“ಲೋಕದಲ್ಲಿ ಈ ದಿನಗಳಲ್ಲಿ ಎಷ್ಟೋ ಘೋರ ಕೃತ್ಯಗಳು ನಡೆಯುತ್ತಿರುವುದರಿಂದ, ‘ದೇವರು ಇದನ್ನು ಏಕೆ ಅನುಮತಿಸುತ್ತಾನೆ?’ ಎಂದು ಕೆಲವರು ಕೇಳುತ್ತಾರೆ. ಇದರ ಕುರಿತು ನಿಮಗೇನನಿಸುತ್ತದೆ? [ಪ್ರತಿಕ್ರಿಯೆಯನ್ನು ಪಡೆದುಕೊಂಡ ನಂತರ, ಯೆರೆಮೀಯ 12:1, 2ಎ ಭಾಗವನ್ನು ಓದಿರಿ.] ದೇವರು ದುಷ್ಟತನವನ್ನು ಸಹಿಸಿಕೊಂಡಿರುವುದಕ್ಕೆ ಒಂದು ಕಾರಣವಿದೆ, ಆದರೆ ಆತನ ತಾಳ್ಮೆಯು ಶೀಘ್ರವೇ ಕೊನೆಗೊಳ್ಳುವುದು. 16ನೆಯ ಪುಟದಲ್ಲಿರುವ ಈ ಲೇಖನವು, ಅದಕ್ಕೆ ಕಾರಣವನ್ನು ಸೂಚಿಸುತ್ತದೆ.”
ಕಾವಲಿನಬುರುಜು ಫೆಬ್ರ. 1
“ಪರಿಸರ ಮಾಲಿನ್ಯದ ಕುರಿತು ಎಲ್ಲರೂ ತುಂಬ ಚಿಂತಿಸುತ್ತಾರೆ. ಆದರೆ, ನೀವೆಂದಾದರೂ ಮಾನಸಿಕ ಮಾಲಿನ್ಯದ ಕುರಿತು ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಶಾರೀರಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧರಾಗಿರುವುದರ ಪ್ರಾಮುಖ್ಯತೆಯನ್ನು ಬೈಬಲು ಒತ್ತಿಹೇಳುತ್ತದೆ. [2 ಕೊರಿಂಥ 7:1ನ್ನು ಓದಿರಿ.] ಈ ವಿಚಾರವು ನಿಮಗೆ ಉಪಯುಕ್ತವೂ ಪ್ರಾಯೋಗಿಕವೂ ಆಗಿರುವುದು ಎಂಬ ಖಾತ್ರಿ ನನಗಿದೆ.”