ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನರಳಾಟವನ್ನು ನೋಡುವುದು ನಮಗೆ ಅಪಾರ ದುಃಖವನ್ನು ಉಂಟುಮಾಡುತ್ತದೆ. [ಸ್ಥಳಿಕವಾಗಿ ತಿಳಿದಿರುವ ಒಂದು ಉದಾಹರಣೆಯನ್ನು ತಿಳಿಸಿರಿ.] ಇಂತಹ ವಿಪತ್ತುಗಳು ಹೆಚ್ಚಾಗುತ್ತಾ ಇವೆಯೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಆ ಪ್ರಶ್ನೆಯ ಕುರಿತು ಚರ್ಚಿಸುತ್ತದೆ. ಮಾತ್ರವಲ್ಲದೆ ಇದು, ಅಂಥ ದುರಂತಗಳಲ್ಲಿ ತಮ್ಮ ಪ್ರಿಯ ಜನರನ್ನು ಕಳೆದುಕೊಂಡವರಿಗೆ ಸಾಂತ್ವನವನ್ನೂ ನೀಡುತ್ತದೆ.” ಯೋಹಾನ 5:28, 29ನ್ನು ಓದಿರಿ.
ಕಾವಲಿನಬುರುಜು ಜನ.15
“ಇತ್ತೀಚಿನ ವರುಷಗಳಲ್ಲಿ, ದೇವದೂತರ ವಿಷಯದಲ್ಲಿ ಆಸಕ್ತಿಯು ಹೆಚ್ಚಾಗಿದೆ. ಅವರು ಯಾರು ಮತ್ತು ಅವರು ನಮ್ಮ ಮೇಲೆ ಹೇಗೆ ಪರಿಣಾಮಬೀರಬಲ್ಲರು ಎಂದು ನೀವು ಎಂದಾದರೂ ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 34:7ನ್ನು ಓದಿರಿ.] ಈ ಪತ್ರಿಕೆಯು, ಹಿಂದೆ, ಈಗ ಮತ್ತು ಭವಿಷ್ಯತ್ತಿನಲ್ಲಿ ದೇವದೂತರ ಚಟುವಟಿಕೆಗಳ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ತಿಳಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಇಂದು ಟ್ರ್ಯಾಫಿಕ್ ಜ್ಯಾಮ್ಗಳು ಸರ್ವಸಾಮಾನ್ಯವಾಗಿವೆ. ಅವುಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ ಜ್ಞಾನೋಕ್ತಿ 13:16ನ್ನು ಓದಿರಿ.] ಈ ಪತ್ರಿಕೆಯ ಪುಟ 14ರಲ್ಲಿರುವ ಲೇಖನವು, ತಿಳಿವಳಿಕೆಯಿಂದ ಕ್ರಿಯೆಗೈಯಲು ಸಹಾಯಮಾಡಬಲ್ಲ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ.”
ಕಾವಲಿನಬುರುಜು ಫೆಬ್ರ.1
“ಜೀವಿಸಲಿಕ್ಕಾಗಿ ನಮಗೆಲ್ಲರಿಗೂ ಹಣದ ಆವಶ್ಯಕತೆಯಿದೆ. ಆದರೆ, ಇಲ್ಲಿ ತಿಳಿಸಿರುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ನೀವು ಒಪ್ಪುತ್ತೀರೊ? [1 ತಿಮೊಥೆಯ 6:10ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜುವಿನ ಈ ಸಂಚಿಕೆಯು, ಪ್ರಾಪಂಚಿಕ ಸಮೃದ್ಧಿಯ ಕೆಲವು ಸಾಮಾನ್ಯ ಪಾಶಗಳನ್ನು ಗುರುತಿಸಲು ಸಹಾಯಮಾಡುತ್ತದೆ ಮತ್ತು ಅವುಗಳಿಂದ ಹೇಗೆ ದೂರವಿರುವುದು ಎಂಬುದರ ಕುರಿತು ಚರ್ಚಿಸುತ್ತದೆ.”