ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ನಮ್ಮಲ್ಲಿ ಹೆಚ್ಚಿನವರಿಗೆ, ಮಧುಮೇಹ ರೋಗವಿರುವ ಯಾರಾದರೊಬ್ಬರ ಕುರಿತು ತಿಳಿದಿರಬಹುದು. ನಿಮಗೆ ಈ ರೋಗದ ಕುರಿತು ಹೆಚ್ಚು ಮಾಹಿತಿಯು ತಿಳಿದಿದೆಯೋ? [ಪತ್ರಿಕೆಯ ಮುಖಪುಟವನ್ನು ತೋರಿಸಿರಿ, ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಮಧುಮೇಹದ ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಒಳನೋಟ ಬೀರುತ್ತದೆ. ಮತ್ತು ಎಲ್ಲಾ ರೋಗಗಳೂ ಶಾಶ್ವತವಾಗಿ ವಾಸಿಯಾಗುವ ಬೈಬಲಿನ ವಾಗ್ದಾನದ ಕುರಿತೂ ಇದು ಚರ್ಚಿಸುತ್ತದೆ.” ಯೆಶಾಯ 33:24ನ್ನು ಓದಿ ಸಮಾಪ್ತಿಗೊಳಿಸಿರಿ.
ಕಾವಲಿನಬುರುಜು ಜನ.15
“ಪೂರೈಸಲ್ಪಡದಿರುವ ವಾಗ್ದಾನಗಳು ಇಂದು ಸರ್ವಸಾಮಾನ್ಯವಾಗಿರುವುದರಿಂದ, ಅನೇಕರಿಗೆ ಯಾರಲ್ಲೇ ಆಗಲಿ ಭರವಸೆಯಿಡುವುದು ತುಂಬ ಕಷ್ಟಕರವಾಗಿದೆ. ನಾವು ಯಾರ ವಾಗ್ದಾನಗಳಲ್ಲಿಯಾದರೂ ಭರವಸೆಯಿಡಸಾಧ್ಯವಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯೆಹೋಶುವ 23:14ನ್ನು ಓದಿರಿ.] ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ವಾಗ್ದಾನಗಳಲ್ಲಿ ನಾವು ಹೇಗೆ ಭರವಸೆಯನ್ನು ಬೆಳೆಸಿಕೊಳ್ಳಬಲ್ಲೆವು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ನಿಮಗೆ ಆಪ್ತರಾಗಿರುವ ಯಾರಿಗಾದರೂ ಒಂದು ವಿಷಯದಲ್ಲಿ ಅತ್ಯುತ್ತಮ ಸಾಮರ್ಥ್ಯವಿರುವಲ್ಲಿ, ನೀವು ಅಸಮಾಧಾನ ತೋರಿಸುತ್ತೀರೋ ಅಥವಾ ಕೀಳುಭಾವನೆಗಳಿಂದ ಪರಿತಪಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು 13ನೇ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.] ಈ ರೀತಿಯ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಫೆಬ್ರ.1
“ನಮ್ಮಲ್ಲಿ ಹೆಚ್ಚಿನವರು ನಮ್ಮ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೂ, ನಮ್ಮ ಸುಕ್ಷೇಮವು ನಮ್ಮ ಆಧ್ಯಾತ್ಮಿಕತೆಯಿಂದಲೂ ಪ್ರಭಾವಿಸಲ್ಪಡುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸುತ್ತವೆ. ಇದು ಸಾಧ್ಯವೆಂದು ನಿಮಗೆ ತೋರುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಮತ್ತಾಯ 5:3ನ್ನು ಓದಿರಿ.] ನಾವು ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಹೇಗೆ ತೃಪ್ತಿಪಡಿಸಬಲ್ಲೆವು ಎಂಬುದನ್ನು ಕಾವಲಿನಬುರುಜುವಿನ ಈ ಸಂಚಿಕೆಯು ಚರ್ಚಿಸುತ್ತದೆ.”