ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“‘ತಾನು ಅಸ್ವಸ್ಥನು’ ಎಂದು ಯಾರೊಬ್ಬರೂ ಹೇಳದಿರುವಂಥ ಸಮಯವು ಬರುತ್ತದೆಂದು ಬೈಬಲ್ ಪ್ರವಾದನೆಯು ಸೂಚಿಸುತ್ತದೆ. [ಯೆಶಾಯ 33:24ನ್ನು ಓದಿ.] ಇದು ಬೆರಗುಗೊಳಿಸುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆದರೂ, ಇಂದು ಮಾನವಕುಲವು ಏಡ್ಸ್ನಂತಹ ಅನೇಕ ರೋಗಗಳಿಂದ ಬಾಧಿಸಲ್ಪಟ್ಟಿದೆ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಏಡ್ಸ್ ರೋಗವನ್ನು ಎಂದಾದರೂ ನಿಲ್ಲಿಸಸಾಧ್ಯವಿದೆಯೋ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತದೆ.”
ಕಾವಲಿನಬುರುಜು ಜನ.15
“ಇದು ವರೆಗೂ ನಡೆದಿರುವ ಎಲ್ಲಾ ರಕ್ತಪಾತವನ್ನು ನೋಡುವಾಗ, ದುಷ್ಟತ್ವವು ಒಳ್ಳೇತನವನ್ನು ಜಯಿಸಿದೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಗಮನಿಸಿರಿ. [ಕೀರ್ತನೆ 83:18ನ್ನು ಓದಿ.] ದೇವರೇ ಭೂಲೋಕದಲ್ಲೆಲ್ಲಾ ಸರ್ವೋನ್ನತನಾಗಿರುವುದರಿಂದ, ದುಷ್ಟತನವು ನಿಜವಾಗಿಯೂ ಜಯಗಳಿಸುವುದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಆ ಪ್ರಶ್ನೆಗೆ ಸಂತೃಪ್ತಿಕರವಾದ ಉತ್ತರವನ್ನು ನೀಡುತ್ತದೆ.”
ಎಚ್ಚರ! ಜನ. - ಮಾರ್ಚ್
“ಇಂದಿನ ದಿನಗಳಲ್ಲಿ ಅನೇಕ ಯುವ ಜನರು ಮೋಬೈಲ್ ಫೋನ್ಗಳನ್ನು ಹೊಂದಿರಲು ಅತ್ಯಾತುರ ಪಡುತ್ತಾರೆ. ಇದು ಅವರಿಗೆ ಒಳಿತನ್ನು ಉಂಟುಮಾಡುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿರುವ ಈ ವಿವೇಕಯುತ ಹೇಳಿಕೆಯನ್ನು ಗಮನಿಸಿರಿ. [ಎಫೆಸ 5:15, 16ನ್ನು ಓದಿ.] ಸೆಲ್ ಫೋನ್ಗಳಿಂದ ಅನೇಕ ಪ್ರಯೋಜನಗಳಿರುವುದಾದರೂ, ಇವು ಕೆಲವೊಮ್ಮೆ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ವ್ಯಯಿಸುವಂತೆ ಮಾಡಬಲ್ಲವು. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಮೋಬೈಲ್ ಫೋನ್ಗಳ ಉಪಯೋಗದ ಕಡೆಗೆ ಒಂದು ಸಮತೂಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತದೆ.”
ಕಾವಲಿನಬುರುಜು ಫೆಬ್ರ.1
“ಇಂದು ಅನೇಕ ಜನರು ನಿರುದ್ಯೋಗದಿಂದ ಚಿಂತಿತರಾಗಿದ್ದಾರೆ, ಮತ್ತು ಇನ್ನಿತರರು ಕೆಲಸದ ಸ್ಥಳದಲ್ಲಿ ಅತ್ಯಧಿಕ ಒತ್ತಡಕ್ಕೆ ಗುರಿಯಾಗಿರುತ್ತಾರೆ. ಕೆಲಸದ ಸ್ಥಳದಲ್ಲಿ ಸಂತೋಷದಿಂದಿರಲು ಮತ್ತು ಸುಭದ್ರರಾಗಿರಲು ಸಾಧ್ಯವಿದೆ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ ಯೆಶಾಯ 65:21-23ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಪ್ರತಿಫಲದಾಯಕವಾಗಿರುವ ಕೆಲಸವನ್ನು ಎಲ್ಲರೂ ಹೊಂದಿರುವಂಥ ಒಂದು ಸಮಯದ ಕುರಿತು ಚರ್ಚಿಸುತ್ತದೆ.”