ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಜನ. 1
“ಈ ಭೂಮಿಯ ಮೇಲೆ ಎಂದಾದರೂ ನ್ಯಾಯಕ್ಕೆ ಜಯ ಸಿಗುವುದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಲೂಕ 18:7ನ್ನು ಓದಿ. ಪುಟ 17ರಲ್ಲಿರುವ ಲೇಖನವನ್ನು ತೋರಿಸಿರಿ.] ನ್ಯಾಯವು ದೊರಕುವಂತೆ ಸ್ವತಃ ದೇವರೇ ಹೇಗೆ ನೋಡಿಕೊಳ್ಳುವನೆಂದು ಈ ಲೇಖನವು ವಿವರಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಈಗ ನಡೆಯುತ್ತಿರುವ ಎಲ್ಲಾ ವಿಷಯಗಳಿಗೆ ದೇವರೇ ಹೊಣೆಗಾರನೆಂದು ಕೆಲವರು ನೆನಸುತ್ತಾರೆ. ಯಾವುದಾದರೂ ದುರಂತವು ಸಂಭವಿಸುವಲ್ಲಿ, ಇದರ ಹಿಂದೆ ದೇವರಿಗೆ ಏನೋ ಒಂದು ಒಳ್ಳೇ ಕಾರಣವಿದ್ದಿರಬೇಕೆಂದು ಅವರು ಹೇಳುತ್ತಾರೆ. ಇದರ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯಾಕೋಬ 1:13ನ್ನು ಓದಿ.] ಕಷ್ಟಸಂಕಟಕ್ಕಿರುವ ಕಾರಣದ ಕುರಿತು ಬೈಬಲ್ ಏನು ಹೇಳುತ್ತದೆ ಮತ್ತು ದೇವರು ಈಗಿರುವ ಎಲ್ಲ ಕಷ್ಟಸಂಕಟವನ್ನು ಹೇಗೆ ಅಂತ್ಯಗೊಳಿಸುವನು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಕಾವಲಿನಬುರುಜು ಫೆಬ್ರ. 1
“ಪ್ರತಿಯೊಬ್ಬರು ಈ ಮಾತುಗಳಿಗನುಸಾರ ನಡೆದರೆ ನಮ್ಮ ಸಮುದಾಯವು ಸುಧಾರಣೆಗೊಳ್ಳುವುದೆಂದು ನೀವು ನೆನಸುತ್ತೀರೋ? [ಎಫೆಸ 4:25ನ್ನು ಓದಿ. ನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೆಲವು ಸಂದರ್ಭಗಳಲ್ಲಿ ಸುಳ್ಳು ಹೇಳುವುದು ತಪ್ಪೇನಲ್ಲ ಎಂದು ಅನೇಕ ಜನರು ನೆನಸುತ್ತಾರೆ. ಆದರೆ ಯಾವಾಗಲೂ ಸತ್ಯವನ್ನೇ ಹೇಳುವುದರಿಂದ ಪ್ರಯೋಜನವೇನೆಂದು ಈ ಪತ್ರಿಕೆಯು ವಿವರಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಇಂದಿರುವ ನೈತಿಕ ಪರಿಸ್ಥಿತಿಯನ್ನು ನೋಡುವಾಗ, ನಿಷಿದ್ಧ ಅಥವಾ ವಿವಾಹಪೂರ್ವ ಸಂಭೋಗವು ನಿಜ ಪ್ರೀತಿಯಾಗಿದೆಯೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. 1 ಕೊರಿಂಥ 6:18ನ್ನು ಓದಿ. ಪುಟ 18ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು ವಿವಾಹಪೂರ್ವ ಸಂಭೋಗದ ಕುರಿತು ಬೈಬಲಿನ ನೋಟವನ್ನು ಚರ್ಚಿಸುತ್ತದೆ.”