ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ.-ಮಾರ್ಚ್
“ಇತ್ತೀಚಿನ ವರ್ಷಗಳಲ್ಲಿ ಕುಟುಂಬದಲ್ಲಿನ ಹಿಂಸಾಚಾರವು ಹೆಚ್ಚಾಗಿದೆಯೆಂಬುದನ್ನು ನಮ್ಮ ಗಮನಕ್ಕೆ ತರಲಾಗಿದೆ. ತಮ್ಮ ಸ್ವಂತ ಮನೆಗಳಲ್ಲೇ ಪೀಡಿಸಲ್ಪಡುವವರಿಗೆ ಸಹಾಯಮಾಡಲಿಕ್ಕಾಗಿ ಏನು ಮಾಡಸಾಧ್ಯವಿದೆ ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದುಂಟೊ? [ಅವರ ಪ್ರತಿಕ್ರಿಯೆಯ ನಂತರ, ಕೀರ್ತನೆ 72:12, 14ನ್ನು ಓದಿರಿ.] ‘ಹೊಡೆತಕ್ಕೊಳಗಾಗಿರುವ ಸ್ತ್ರೀಯರಿಗೆ ಸಹಾಯ’ ಎಂಬ ಈ ಲೇಖನವು, ಈ ಹೆಚ್ಚುತ್ತಿರುವ ಸಮಸ್ಯೆಯ ಒಂದಂಶವನ್ನು ಚರ್ಚಿಸುತ್ತದೆ ಮತ್ತು ಒಂದು ನಿರೀಕ್ಷೆಯ ಸಂದೇಶವನ್ನು ಕೊಡುತ್ತದೆ. ಈ ಮಾಹಿತಿಯಿಂದ ಪ್ರಯೋಜನಪಡೆಯಬಹುದಾದ ಯಾರಾದರೊಬ್ಬರ ಬಗ್ಗೆ ನಿಮಗೆ ತಿಳಿದಿರಬಹುದು.”
ಕಾವಲಿನಬುರುಜು ಮಾರ್ಚ್15
“ನೀತಿಯ ಆಳ್ವಿಕೆಯು ಈ ಭೂಮಿಯನ್ನು ಜೀವಿಸಲಿಕ್ಕಾಗಿ ಇಂದಿಗಿಂತಲೂ ಹೆಚ್ಚು ಉತ್ತಮವಾದ ಸ್ಥಳವನ್ನಾಗಿ ಮಾಡುವುದೆಂದು ನೀವು ಒಪ್ಪಿಕೊಳ್ಳುವುದಿಲ್ಲವೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ಏನು ವಾಗ್ದಾನ ಮಾಡುತ್ತದೆಂಬುದನ್ನು ದಯವಿಟ್ಟು ಗಮನಿಸಿರಿ. [ಕೀರ್ತನೆ 37:11ನ್ನು ಓದಿ.] ಅಂಥ ಶಾಂತಿಯನ್ನು ನಾವು ಆನಂದಿಸಸಾಧ್ಯವಿದೆ. ಅದು ಈ ಲೇಖನಗಳಲ್ಲಿ ಗುರುತಿಸಲ್ಪಟ್ಟಿರುವ ಒಬ್ಬ ಆದರ್ಶ ನಾಯಕನ ಕೆಳಗೆ ವಾಸ್ತವಿಕತೆಯಾಗಲಿದೆ.
ಎಚ್ಚರ! ಜನ.-ಮಾರ್ಚ್
“ಇಂದಿನ ಲೋಕದಲ್ಲಿ ಒಳ್ಳೇ ಜನರಿಗಿಂತಲೂ ಹೆಚ್ಚಾಗಿ ಕೆಟ್ಟ ಜನರಿಗೇ ಒಳಿತಾಗುತ್ತಿದೆಯೆಂದು ಅನೇಕರಿಗನಿಸುತ್ತದೆ. ಇದು ಸತ್ಯವೆಂದು ನಿಮಗೆ ಅನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ದೇವರು ಎಷ್ಟರ ಮಟ್ಟಿಗೆ ಸೈರಣೆಯುಳ್ಳವನಾಗಿದ್ದಾನೆ?’ ಎಂಬ ಈ ಲೇಖನವು, ದೇವರು ಈ ಸದ್ಯದ ಪರಿಸ್ಥಿತಿಯು ಮುಂದುವರಿಯುವಂತೆ ಬಿಟ್ಟಿರಲು ಒಂದು ಕಾರಣವಿದೆ, ಆದರೆ ಬೇಗನೆ ಆತನ ಸೈರಣೆಯು ಕೊನೆಗೊಳ್ಳಲಿದೆ ಎಂಬುದನ್ನು ನಮಗೆ ತೋರಿಸುತ್ತದೆ. ಇದರಿಂದಾಗಿ ಒಳ್ಳೆಯವರಿಗೆ ಏನಾಗುವುದು ಮತ್ತು ಕೆಟ್ಟವರಿಗೆ ಏನಾಗುವುದು ಎಂಬುದಕ್ಕೆ ಉತ್ತರವನ್ನು ನೀವು ಈ ಪತ್ರಿಕೆಯಲ್ಲಿ ಓದಿ ಆನಂದಿಸುವಿರಿ.”
ಕಾವಾಲಿನಬುರುಜು ಏಪ್ರಿ.1
“ನಾನು ನಿಮ್ಮೊಂದಿಗೆ ಬೈಬಲಿನಿಂದ ಹೃದಯೋಲ್ಲಾಸಗೊಳಿಸುವಂಥ ಒಂದು ವಿಚಾರವನ್ನು ಹಂಚಿಕೊಳ್ಳಲು ಬಂದಿದ್ದೇನೆ. [ಮತ್ತಾಯ 22:37ನ್ನು ಓದಿರಿ.] ಇದರ ಅರ್ಥವೇನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ‘ನಿಮ್ಮ ಹೃದಯ ಹಾಗೂ ಬುದ್ಧಿಯಿಂದ ದೇವರನ್ನು ಹುಡುಕಿರಿ’ ಎಂಬ ಈ ಲೇಖನವನ್ನು ಗಮನಿಸಿರಿ. ನಿಜ ನಂಬಿಕೆಯು ಕೇವಲ ಹೃದಯಕ್ಕೆ ಸಂಬಂಧಿಸಿದ ವಿಷಯವಾಗಿದೆಯೊ ಅಥವಾ ಅದರಲ್ಲಿ ಬುದ್ಧಿಯೂ ಒಳಗೂಡಿರಬೇಕೊ? ಅದರ ಉತ್ತರವು ತಿಳಿವಳಿಕೆಭರಿತವಾಗಿದೆ.”