ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಮಧುಮೇಹದಿಂದ ನರಳುತ್ತಿರುವ ಯಾರಾದರೊಬ್ಬರ ಕುರಿತು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುತ್ತದೆ. ಇಂಥವರಿಗೆ ಸಹಾಯಮಾಡುವ ಸಲುವಾಗಿ ನಾವು ಏನಾದರೂ ಮಾಡಸಾಧ್ಯವಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿ ಮತ್ತು 12ನೇ ಪುಟದಲ್ಲಿರುವ ಲೇಖನವನ್ನು ತೋರಿಸಿ.] ಈ ಪತ್ರಿಕೆಯು, ಒಬ್ಬ ದೀರ್ಘಕಾಲಿಕ ರೋಗಿಗೆ ಈಗ ಪರಿಣಾಮಕಾರಿಯಾಗಿ ಸೇವೆಸಲ್ಲಿಸಲು ದೇವರ ವಾಕ್ಯವು ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಚರ್ಚಿಸುತ್ತದೆ ಮಾತ್ರವಲ್ಲದೆ, ಎಲ್ಲಾ ಅಸ್ವಸ್ಥತೆಯೂ ಶೀಘ್ರವೆ ಇಲ್ಲವಾಗುವುದು ಎಂಬ ನಮ್ಮ ಸೃಷ್ಟಿಕರ್ತನ ವಾಗ್ದಾನದೊಂದಿಗೆ ನಮ್ಮನ್ನು ಸಂತೈಸುತ್ತದೆ.”
ಕಾವಲಿನಬುರುಜು ಮಾರ್ಚ್15
“ನಾವು ನಿಮ್ಮನ್ನು, ಏಪ್ರಿಲ್ 4, ಭಾನುವಾರದಂದು ಆಚರಿಸಲ್ಪಡುವ ಕರ್ತನ ರಾತ್ರಿ ಭೋಜನಕ್ಕಾಗಿ ಆಮಂತ್ರಿಸಲು ಬಯಸುತ್ತೇವೆ. [ಪತ್ರಿಕೆಯ ಹಿಂದಿನ ಪುಟ ಅಥವಾ ಮುದ್ರಿತ ಜ್ಞಾಪಕದ ಆಮಂತ್ರಣವನ್ನು ಉಪಯೋಗಿಸುತ್ತಾ ವಿವರಿಸಿರಿ. ನಂತರ ಲೂಕ 22:19ನ್ನು ಓದಿರಿ.] ಕಾವಲಿನಬುರುಜುವಿನ ಈ ಸಂಚಿಕೆಯ ಮುಖಪುಟ ಲೇಖನಗಳು ಈ ಸಂದರ್ಭದ ಅರ್ಥವನ್ನು ಮತ್ತು ಇದು ಹೇಗೆ ಆಚರಿಸಲ್ಪಡುತ್ತದೆ ಎಂಬುದನ್ನು ಚರ್ಚಿಸುತ್ತವೆ.”
ಎಚ್ಚರ! ಜನ. - ಮಾರ್ಚ್
“ಕೀಳರಿಮೆಯಿಂದ ನರಳುತ್ತಿರುವ ಯಾರಾದರೊಬ್ಬರ ಕುರಿತು ನಿಮಗೆ ತಿಳಿದಿರಬಹುದು. ಇಂಥವರು ತಮ್ಮ ಕುರಿತೇ ಗೌರವಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ವಿಷಯದಲ್ಲಿ ಒಳ್ಳೆಯ ಅನಿಸಿಕೆಯನ್ನು ಬೆಳೆಸಿಕೊಳ್ಳಲು ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿ ಮತ್ತು 13ನೇ ಪುಟದಲ್ಲಿರುವ ಲೇಖನವನ್ನು ತೋರಿಸಿ.] ಅವರಿಗೆ ಸಹಾಯಮಾಡಲಿಕ್ಕಾಗಿ ನೀವು ತೆಗೆದುಕೊಳ್ಳಬಲ್ಲ ಕೆಲವು ಪ್ರಾಯೋಗಿಕ ಹೆಜ್ಜೆಗಳ ಕುರಿತು ಈ ಪತ್ರಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಏಪ್ರಿ.1
“ಕಾಡು ಮೃಗದ ಗುರುತಿನ ಕುರಿತು ಬೈಬಲ್ ಒದಗಿಸುವ ಗೂಢಾರ್ಥವುಳ್ಳ ಚಿತ್ರಣವು ಎಬ್ಬಿಸಿರುವಷ್ಟು ಊಹಾಪೋಹಗಳನ್ನು ಕೇವಲ ಕೆಲವೇ ವಿಷಯಗಳು ಎಬ್ಬಿಸಿವೆ. ನೀವು ಇದರ ಕುರಿತು ಎಂದಾದರೂ ಕೇಳಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿ. ನಂತರ ಪ್ರಕಟನೆ 13:16-18ನ್ನು ಓದಿ.] ಈ ರಹಸ್ಯದ ಅರ್ಥವನ್ನು ಗ್ರಹಿಸಲಿಕ್ಕಾಗಿರುವ ಕೀಲಿ ಕೈಗಳನ್ನು ಬೈಬಲ್ ಸ್ವತಃ ಒದಗಿಸುತ್ತದೆ. ಅವು ಯಾವವು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”