ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ.-ಡಿಸೆಂ.
“ಅನೇಕರು ಪೊಲೀಸರನ್ನು ಕಂಡರೆ ಇಷ್ಟಪಡುವುದಿಲ್ಲ, ಆದರೆ ಅವರು ಇಲ್ಲದಿರುತ್ತಿದ್ದರೆ ದೇಶವು ಹೇಗಿರುತ್ತಿತ್ತು ಎಂದು ನೀವೆಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸದ್ಯಕ್ಕೆ ಪೊಲೀಸರು ಅತ್ಯಗತ್ಯವಾಗಿದ್ದಾರೆ, ಆದರೆ ಅವರ ಆವಶ್ಯಕತೆ ಇನ್ನೆಂದಿಗೂ ಇರದಂಥ ಒಂದು ಸಮಯವು ಅತಿ ಬೇಗನೆ ಬರಲಿದೆ. ಇದಕ್ಕೆ ಕಾರಣವೇನೆಂಬುದನ್ನು ಈ ವಚನದಲ್ಲಿ ನೋಡಿರಿ. [2 ಪೇತ್ರ 3:13ನ್ನು ಓದಿರಿ.] ದುಷ್ಕೃತ್ಯವಿಲ್ಲದಿರುವಂಥ ಒಂದು ಲೋಕದ ಕುರಿತು ನೀವು ಹೆಚ್ಚನ್ನು ಓದಲು ಬಯಸುವಲ್ಲಿ, ಎಚ್ಚರ! ಪತ್ರಿಕೆಯ ಈ ಸಂಚಿಕೆಯನ್ನು ಓದಿ ಆನಂದಿಸಿರಿ.”
ಕಾವಲಿನಬುರುಜು ನವೆಂ.15
“ದೇವರನ್ನು ಆರಾಧಿಸಲಿಕ್ಕಾಗಿ ಚರ್ಚುಗಳು ಮತ್ತು ದೇವಾಲಯಗಳ ಅಗತ್ಯ ಇದೆಯೋ ಎಂದು ಕೆಲವರು ಕುತೂಹಲಪಟ್ಟಿದ್ದಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ವಿಷಯದ ಕುರಿತು ಬೈಬಲು ಏನು ಹೇಳುತ್ತದೆಂಬುದನ್ನು ಗಮನಿಸಿರಿ. [ಅ. ಕೃತ್ಯಗಳು 17:24ನ್ನು ಓದಿರಿ.] ಹಾಗಾದರೆ ಆರಾಧನಾ ಸ್ಥಳಗಳು ಯಾವ ಉದ್ದೇಶವನ್ನು ಪೂರೈಸಬೇಕು? ಆ ಪ್ರಶ್ನೆಗೆ ಈ ಪತ್ರಿಕೆಯು ಶಾಸ್ತ್ರೀಯ ಉತ್ತರವನ್ನು ಕೊಡುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಹೆಚ್ಚೆಚ್ಚು ಜನರು ಕಾರುಗಳನ್ನು ಮತ್ತು ಸ್ಕೂಟರುಗಳನ್ನು ಖರೀದಿಸುತ್ತಿದ್ದಾರೆ, ಆದರೆ ಪ್ರಾಣಾಘಾತವನ್ನು ಉಂಟುಮಾಡುವಂಥ ಅಪಘಾತಗಳು ಸಹ ಹೆಚ್ಚುತ್ತಲೇ ಇವೆ. ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯಾರೊಬ್ಬರೂ ವಿಪತ್ತಿನಿಂದ ಮುಕ್ತರಾಗಿಲ್ಲ ಎಂಬುದನ್ನು ಬೈಬಲು ಒಪ್ಪಿಕೊಳ್ಳುತ್ತದೆ. [ಪ್ರಸಂಗಿ 9:11ನ್ನು ಓದಿರಿ. 22ನೆಯ ಪುಟಕ್ಕೆ ಸೂಚಿಸಿರಿ.] ಆದರೂ ನೀವು ವಾಹನವನ್ನು ಚಲಾಯಿಸುತ್ತಿರುವಾಗ ನಿಮ್ಮ ಸುರಕ್ಷೆಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ ಎಂಬ ವಿಷಯವನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಪರಿಗಣಿಸುತ್ತದೆ.”
ಕಾವಲಿನಬುರುಜು ಡಿಸೆಂ.1
“ಇಂದಿನ ದಿನಗಳಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರಿಗೂ ಆರ್ಥಿಕ ಸಮಸ್ಯೆಗಳಿವೆ. ಚರ್ಚುಗಳ ವಿಷಯದಲ್ಲಿಯೂ ಇದು ನಿಜವಾಗಿದೆ ಮತ್ತು ಹಣಕಾಸಿಗಾಗಿರುವ ವಿನಂತಿಗಳು ದಿನೇ ದಿನೇ ಮುಂದುವರಿಯುತ್ತಿವೆ. ಇದು ನಿಮ್ಮ ಮನಸ್ಸನ್ನು ಕೆಡಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ 1 ಥೆಸಲೊನೀಕ 2:9ನ್ನು ಓದಿರಿ.] ಇದರ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಕಾವಲಿನಬುರುಜು ಪತ್ರಿಕೆಯು ಪರಿಗಣಿಸುತ್ತದೆ.”