ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಮಧುಮೇಹದಂತಹ ದೀರ್ಘಕಾಲಿಕ ರೋಗಗಳಾಗಲಿ ಅಥವಾ ದೊಡ್ಡದಾದ ಮತ್ತು ಚಿಕ್ಕದಾದ ಕಾಯಿಲೆಗಳಾಗಲಿ ಇಲ್ಲದಿರುವ ಒಂದು ಕಾಲಕ್ಕಾಗಿ ನಾವು ಎದುರುನೋಡಸಾಧ್ಯವಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿ ಮತ್ತು ಪುಟ 12ರಲ್ಲಿರುವ ಲೇಖನವನ್ನು ತೋರಿಸಿ.] ಎಲ್ಲಾ ಅಸ್ವಸ್ಥತೆಗಳನ್ನು ತೆಗೆದುಹಾಕುತ್ತೇನೆಂಬ ನಮ್ಮ ಸೃಷ್ಟಿಕರ್ತನ ವಾಗ್ದಾನದ ಕುರಿತು ಈ ಪತ್ರಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಫೆಬ್ರ.15
“ಧರ್ಮದ ಹೆಸರಿನಲ್ಲಿ ಮಾಡಲ್ಪಡುವ ದುಷ್ಕೃತ್ಯಗಳಿಂದಾಗಿ ಅನೇಕ ಜನರು ಅಸಮಾಧಾನಗೊಂಡಿದ್ದಾರೆ. ಧರ್ಮವು ಮಾನವಕುಲದ ಸಮಸ್ಯೆಗಳ ಮೂಲಕಾರಣವಾಗಿದೆ ಎಂಬುದು ಕೆಲವರ ಅನಿಸಿಕೆ. ಇದರ ಕುರಿತು ನೀವೆಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಪ್ರಕಟನೆ 18:24ನ್ನು ಓದಿ.] ಈ ವಿಷಯದ ಕುರಿತು ಬೈಬಲು ಏನನ್ನುತ್ತದೆ ಎಂಬುದನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಗಿಡಮೂಲಿಕೆಯ ಔಷಧಿಗಳು ತಮಗೆ ಸಹಾಯಮಾಡಬಲ್ಲವು ಎಂದು ಅನೇಕರು ನೆನಸುತ್ತಾರೆ. ಅದು ಸತ್ಯವಾಗಿರಬಹುದಾದರೂ, ಅರ್ಹರಾದ ವೈದ್ಯರ ಸಹಾಯವಿಲ್ಲದೆ ಗಿಡಮೂಲಿಕೆಗಳನ್ನು ಉಪಯೋಗಿಸುವ ಅಪಾಯಗಳ ಕುರಿತು ನೀವು ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿ ಮತ್ತು ಪುಟ 16ರಲ್ಲಿರುವ ಲೇಖನವನ್ನು ತೋರಿಸಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಗಿಡಮೂಲಿಕೆ ಔಷಧಿಗಳ ಪ್ರತಿಫಲತೆ ಮತ್ತು ವೈಫಲ್ಯತೆಯೊಂದಿಗೆ ಸ್ವ-ಚಿಕಿತ್ಸೆಯ ಅಪಾಯಗಳನ್ನೂ ಪರಿಶೀಲಿಸುತ್ತದೆ.”
ಕಾವಲಿನಬುರುಜು ಮಾರ್ಚ್1
“ಒಂದು ಸಂದರ್ಭದಲ್ಲಿ, ಯೇಸು ಕ್ರಿಸ್ತನನ್ನು ಹೀಗೆ ಕೇಳಲಾಯಿತು: ‘ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವದು’? ಅವನ ಪ್ರತ್ಯುತ್ತರವನ್ನು ಗಮನಿಸಿರಿ. [ಮಾರ್ಕ 12:29, 30ನ್ನು ಓದಿ.] ಯೇಸು ಏನನ್ನು ಅಥೈಸುತ್ತಿದ್ದನು ಎಂಬುದರ ಕುರಿತು ನೀವೆಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆ ಪ್ರಸಿದ್ಧವಾದ ಮಾತುಗಳ ಅರ್ಥನಿರೂಪಣೆಯನ್ನು, ‘ನಾವು ದೇವರನ್ನು ಪ್ರೀತಿಸುತ್ತೇವೆಂದು ತೋರಿಸುವ ವಿಧ’ ಎಂಬ ಲೇಖನವು ಪರಿಶೀಲಿಸುತ್ತದೆ.”