ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಇಂದು ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ. ಲೋಕದಲ್ಲಿರುವ ಆಹಾರ ಅಭಾವವು ಎಂದಾದರೂ ಬಗೆಹರಿಯಲಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ ಕೀರ್ತನೆ 145:15ನ್ನು ಓದಿರಿ ಮತ್ತು ಪುಟ 12ರಲ್ಲಿರುವ ಲೇಖನದ ಕಡೆಗೆ ಗಮನ ಸೆಳೆಯಿರಿ.] ಲೋಕದ ಸನ್ನಿವೇಶವನ್ನು ಮತ್ತು ಈ ಸಮಸ್ಯೆಯನ್ನು ಬಗೆಹರಿಸಲು ಸೃಷ್ಟಿಕರ್ತನು ಏನು ಮಾಡಲಿದ್ದಾನೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”
ಕಾವಲಿನಬುರುಜು ಫೆಬ್ರ.15
“ಈ ಲೋಕವನ್ನು ಆಳಲಿಕ್ಕಾಗಿ ಯಾರನ್ನಾದರೂ ಆರಿಸಿಕೊಳ್ಳಲು ನಿಮಗೆ ಸಾಧ್ಯವಿರುವಲ್ಲಿ ನೀವು ಯಾರನ್ನು ಆಯ್ಕೆಮಾಡುವಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಈ ಲೋಕವನ್ನು ಆಳಲಿಕ್ಕಾಗಿ ದೇವರು ಆಯ್ಕೆಮಾಡಿರುವವನನ್ನು, ಅಂದರೆ ಮೆಸ್ಸೀಯನನ್ನು ಗುರುತಿಸುವ ಸಾಕ್ಷ್ಯಗಳನ್ನು ತಿಳಿಸುತ್ತದೆ. ಅವನ ಆಳ್ವಿಕೆಯು ಮಾನವಕುಲಕ್ಕೆ ಎಷ್ಟು ಮಹತ್ತ್ವದ್ದಾಗಿದೆ ಎಂಬುದನ್ನು ಸಹ ಇದು ವಿವರಿಸುತ್ತದೆ.” ಯೆಶಾಯ 9:6, 7ನ್ನು ಓದಿರಿ.
ಎಚ್ಚರ! ಜನ. - ಮಾರ್ಚ್
“ಇಂದಿನ ಆರ್ಥಿಕ ವ್ಯವಸ್ಥೆಯ ಸ್ಥಿತಿಯನ್ನು ನೋಡುವಾಗ, ಮದುವೆಗಳಿಗಾಗಿ ಮಾಡಬೇಕಾಗುವ ಖರ್ಚು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಕೆಲವರು ಒಂದು ಸರಳ ಮದುವೆಯನ್ನು ಏರ್ಪಡಿಸುತ್ತಾರೆ, ಇತರರು ಅದು ತುಂಬ ಆಡಂಬರವಾಗಿರಬೇಕೆಂದು ಬಯಸುತ್ತಾರೆ. ಇದರ ಬಗ್ಗೆ ನಿರ್ಣಯ ಮಾಡಲು ಒಬ್ಬ ವ್ಯಕ್ತಿಗೆ ಯಾವುದು ಸಹಾಯಮಾಡಬಲ್ಲದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ರೋಮಾಪುರ 12:2ನ್ನು ಓದಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯ 25ನೇ ಪುಟದಲ್ಲಿ, ನೀವು ವಿವೇಕಯುತ ನಿರ್ಣಯವನ್ನು ಮಾಡಲು ಸಹಾಯಮಾಡಬಲ್ಲ ಬೈಬಲ್ ಮೂಲತತ್ತ್ವಗಳನ್ನು ಚರ್ಚಿಸಲಾಗಿದೆ.”
ಕಾವಲಿನಬುರುಜು ಮಾರ್ಚ್1
“ಅನೇಕ ಜನರು, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದನ್ನು ಒಪ್ಪಿಕೊಳ್ಳುತ್ತಾರೆ. ಇದನ್ನೇ ಯೇಸು ಸಹ ಈ ವಚನದಲ್ಲಿ ಆಜ್ಞಾಪಿಸಿದ್ದನು. [ಯೋಹಾನ 13:34, 35ನ್ನು ಓದಿರಿ.] ಆದರೆ, ಯೇಸುವಿನ ಬೋಧನೆಗಳನ್ನು ತಮ್ಮ ಜೀವನದಲ್ಲಿ ಅನ್ವಯಿಸುವಂಥ ಜನರನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಿಜ ಕ್ರೈಸ್ತರನ್ನು ನಾವಿಂದು ಹೇಗೆ ಗುರುತಿಸಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.”