ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಫೆಬ್ರ. 1
“ಯಾವಾಗಲೂ ಸತ್ಯವನ್ನೇ ಹೇಳುವುದು ತುಂಬ ಪ್ರಾಮುಖ್ಯ ಎಂದು ಅನೇಕರು ನೆನಸುತ್ತಾರೆ. ಆದರೆ ಅದು ಯಾಕೆ ಪ್ರಾಮುಖ್ಯ ಎಂದು ನೀವೆಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ನಂತರ ಎಫೆಸ 4:25ನ್ನು ಓದಿ, ಪುಟ 4ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು ಸುಳ್ಳು ಅಂದರೆ ಏನು ಎಂಬುದನ್ನು ತಿಳಿಸುತ್ತದೆ ಮಾತ್ರವಲ್ಲ, ಎಲ್ಲ ಸಮಯದಲ್ಲಿ ಸತ್ಯವನ್ನೇ ನುಡಿಯಲು ಉತ್ತೇಜನ ನೀಡುತ್ತದೆ.”
ಎಚ್ಚರ! ಜನ. - ಮಾರ್ಚ್
“ಪ್ರೀತಿ, ನ್ಯಾಯ, ಶಕ್ತಿಯಿರುವಂಥ ದೇವರೊಬ್ಬನು ಇರುವುದಾದರೆ ಇಷ್ಟೊಂದು ಕಷ್ಟಸಂಕಟಗಳು ಏಕಿವೆ ಎಂದು ನೀವು ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಕಷ್ಟಸಂಕಟಗಳಿಗಿರುವ ಕಾರಣದ ಬಗ್ಗೆ ಈ ಶಾಸ್ತ್ರವಚನ ಏನು ಹೇಳುತ್ತದೆಂಬುದನ್ನು ಗಮನಿಸಿ. [1 ಯೋಹಾನ 5:19ನ್ನು ಓದಿ.] ಈ ಪತ್ರಿಕೆಯು, ಇಂದಿರುವ ಕಷ್ಟಸಂಕಟಗಳನ್ನು ನಿರ್ಮೂಲಮಾಡಲು ದೇವರು ಏನು ಮಾಡಲಿದ್ದಾನೆ ಎಂಬುದನ್ನು ಬೈಬಲಿನಿಂದ ವಿವರಿಸುತ್ತದೆ.”
ಕಾವಲಿನಬುರುಜು ಮಾರ್ಚ್ 1
“ಮಾನವರು ಈ ಭೂಮಿಯನ್ನು ಹಾಳುಮಾಡುತ್ತಿದ್ದಾರೆ ಎಂದು ಕೆಲವರೆಣಿಸುತ್ತಾರೆ. ನೀವೆಂದಾದರೂ ಇದರ ಬಗ್ಗೆ ಚಿಂತಿಸಿದ್ದೀರಾ? ಸಾಂತ್ವನ ನೀಡುವ ಈ ವಾಗ್ದಾನವನ್ನು ಗಮನಿಸಿ. [ಪ್ರಕಟನೆ 11:18ನ್ನು ಓದಿ.] ಯಾವುದು ಈ ಭೂಗ್ರಹವನ್ನು ಅಪೂರ್ವವಾದದ್ದಾಗಿ ಮಾಡುತ್ತದೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ. ಮಾತ್ರವಲ್ಲ ಭೂಮಿಯ ಭವಿಷ್ಯದ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ಸಹ ತಿಳಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಮನೆಯಲ್ಲಿ ಹೆತ್ತವರು ರೂಲ್ಸ್ ಹಾಕುವುದನ್ನು ಇಂದು ಅನೇಕ ಯುವಜನರು ಸ್ವಲ್ಪವೂ ಇಷ್ಟಪಡುವುದಿಲ್ಲ. ಆದರೆ ಒಬ್ಬ ವಿವೇಕಿಯು ಏನು ಹೇಳಿದ್ದಾನೆಂಬುದನ್ನು ನಾನು ಓದಿ ತೋರಿಸುತ್ತೇನೆ. ಅದರ ಬಗ್ಗೆ ನಿಮ್ಮ ಅನಿಸಿಕೆಯೇನೆಂದು ದಯವಿಟ್ಟು ತಿಳಿಸಿ. [ಜ್ಞಾನೋಕ್ತಿ 6:20ನ್ನು ಓದಿ, ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಪುಟ 10ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು ಹೆತ್ತವರು ಹಾಕುವ ರೂಲ್ಸನ್ನು ಹೇಗೆ ಅನುಸರಿಸಿ ನಡೆಯಬೇಕೆಂದು ಯುವಜನರಿಗೆ ತೋರಿಸಿಕೊಡುತ್ತದೆ.”