ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನ. - ಮಾರ್ಚ್
“ಅನೇಕ ಜನರು ಸಮಸ್ಯೆಗಳಿಂದ ಕುಗ್ಗಿ ಹೋದಾಗ ದೇವರನ್ನು ಬೇಡಿಕೊಳ್ಳುತ್ತಾರೆ. ಕಳೆದ 2,000 ವರ್ಷಗಳಿಂದ ಜನರು ಮಾಡುತ್ತಿರುವ ಪ್ರಾರ್ಥನೆಯ ಒಂದು ಭಾಗವನ್ನು ನಾನು ನಿಮಗಾಗಿ ಓದಿ ಹೇಳಬಹುದೋ? [ಮನೆಯವನು ಅನುಮತಿಸುವುದಾದರೆ ಮತ್ತಾಯ 6:9, 10ನ್ನು ಓದಿ.] ಈ ರಾಜ್ಯವೆಂದರೇನು ಮತ್ತು ಅದು ಯಾವಾಗ ಬರುವುದು ಎಂದು ನೀವು ತಿಳಿಯಲಿಚ್ಛಿಸುತ್ತೀರೋ? [ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಲ್ಲಿ, ಪತ್ರಿಕೆ ನೀಡಿರಿ.] ಈ ವಿಷಯದ ಬಗ್ಗೆ ಬೈಬಲ್ ಏನನ್ನುತ್ತದೆ ಎಂದು ಈ ಪತ್ರಿಕೆ ತಿಳಿಸುತ್ತದೆ.”
ಎಚ್ಚರ! ಜನ. - ಮಾರ್ಚ್
“ಇತಿಹಾಸದಾದ್ಯಂತ ಸ್ತ್ರೀಯರು ಹಿಂಸೆ ಹಾಗೂ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವೇನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಗಂಡನು ಹೆಂಡತಿಯನ್ನು ಹೇಗೆ ಉಪಚರಿಸಬೇಕೆಂದು ದೇವರು ಕೊಟ್ಟಿರುವ ಸಲಹೆಯನ್ನು ನಿಮಗೆ ಓದಿ ತಿಳಿಸಬಹುದೋ? [ಪ್ರತಿಕ್ರಿಯೆಗಾಗಿ ಅನುಮತಿಸಿ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಲ್ಲಿ, 1 ಪೇತ್ರ 3:7ನ್ನು ಓದಿ.] ಸ್ತ್ರೀಯರ ಕುರಿತು ದೇವರ ನೋಟವೇನೆಂದು ನೀವು ತಿಳಿಯಬಯಸುವಲ್ಲಿ ಈ ಪತ್ರಿಕೆಯನ್ನು ನಿಮ್ಮಲ್ಲಿ ಬಿಟ್ಟು ಹೋಗುತ್ತೇನೆ.”