ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“‘ಬಾಲ್ಯ ವೇಶ್ಯಾವೃತ್ತಿ’ ಎಂಬುದು ಮನಸ್ಸಿಗೆ ಹಿಡಿಸುವಂಥ ಒಂದು ವಿಷಯವಾಗಿರುವುದಿಲ್ಲ. ಅಧಿಕಾಂಶ ಜನರು ಅದರ ಬಗ್ಗೆ ಚರ್ಚಿಸಲೂ ಇಷ್ಟಪಡುವುದಿಲ್ಲ, ಆದರೂ ಇದು ಹೆಚ್ಚೆಚ್ಚು ಸರ್ವಸಾಮಾನ್ಯವಾಗುತ್ತಿದೆ. ಇದಕ್ಕೆ ಪರಿಹಾರವೇನು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಕ್ಕಳನ್ನು ದುರುಪಯೋಗಿಸುವ ಈ ದುಃಖಕರವಾದ ವಿಷಯವನ್ನು ದೇವರು ಅತಿ ಬೇಗನೆ ಕೊನೆಗೊಳಿಸುವನು ಎಂದು ಪವಿತ್ರ ಶಾಸ್ತ್ರವು ವಾಗ್ದಾನಿಸುತ್ತದೆ. [ಜ್ಞಾನೋಕ್ತಿ 2:21, 22ನ್ನು ಓದಿರಿ.] ಇದು ಹೇಗೆ ನಿಲ್ಲಿಸಲ್ಪಡುವುದು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”
ಕಾವಲಿನಬುರುಜು ಮೇ15
“ದಿನನಿತ್ಯವೂ ನಾವು ಹಿಂಸಾಚಾರದ ಕುರಿತಾದ ವರದಿಗಳನ್ನು ಕೇಳಿಸಿಕೊಳ್ಳುತ್ತಿರುತ್ತೇವೆ. ಇಂಥ ಪರಿಸ್ಥಿತಿಗಳು ಈ ಮುಂಚೆ ಎಂದಾದರೂ ಅಸ್ತಿತ್ವದಲ್ಲಿದ್ದವು ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು ಏನು ಹೇಳುತ್ತದೆ ಎಂಬುದನ್ನು ಗಮನಿಸಿರಿ. [ಮತ್ತಾಯ 24:37ನ್ನು ಓದಿರಿ.] ನೋಹನ ದಿನಗಳು ಎಷ್ಟು ಕೆಟ್ಟವುಗಳಾಗಿದ್ದವೆಂದರೆ, ದೇವರು ನೋಹನನ್ನು ಮತ್ತು ಅವನ ಕುಟುಂಬವನ್ನು ಬಿಟ್ಟು ಬೇರೆಲ್ಲರನ್ನೂ ಜಲಪ್ರಳಯದಿಂದ ನಾಶಮಾಡಿದನು. ಇಂದು ಆ ಘಟನೆಗಳು ನಮಗೆ ಹೇಗೆ ಮಹತ್ವಪೂರ್ಣವಾಗಿವೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ನಿಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ನೀವು ಗಣ್ಯಮಾಡುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆದರೂ, ಆಯ್ಕೆಮಾಡುವ ಸ್ವಾತಂತ್ರ್ಯವನ್ನು ಹೊಂದಿರುವುದು ಮಾತ್ರವೇ, ಒಬ್ಬ ವ್ಯಕ್ತಿಯು ಸರಿಯಾದ ಆಯ್ಕೆಯನ್ನು ಮಾಡುವನು ಎಂಬ ಖಾತ್ರಿಯನ್ನು ನೀಡುವುದಿಲ್ಲ. ವಿವೇಕಯುತವಾದ ಆಯ್ಕೆಗಳನ್ನು ಮಾಡುವುದರಲ್ಲಿ ನಮಗೆ ಸಹಾಯಮಾಡಸಾಧ್ಯವಿರುವ ಯಾವ ಮೂಲತತ್ತ್ವಗಳಾದರೂ ಇವೆಯೋ? [ಪ್ರತಿಕ್ರಿಯೆಯ ಬಳಿಕ, ಗಲಾತ್ಯ 6:7ನ್ನು ಓದಿರಿ. 12ನೆಯ ಪುಟವನ್ನು ತೋರಿಸಿರಿ.] ನೀವು ಈ ಪತ್ರಿಕೆಯಲ್ಲಿ ಉತ್ತರವನ್ನು ಕಂಡುಕೊಳ್ಳುವಿರಿ.”
ಕಾವಲಿನಬುರುಜು ಜೂನ್1
“ದಾನವಾಗಿ ಕೊಟ್ಟಿರುವಂಥ ಹಣವನ್ನು ದುರುಪಯೋಗಿಸಿರುವ ವರದಿಗಳು, ಧರ್ಮಕಾರ್ಯಸಂಸ್ಥೆಗಳಿಗೆ ಕಾಣಿಕೆಯನ್ನು ಕೊಡುವುದು ವಿವೇಕಯುತವಾಗಿದೆಯೋ ಎಂದು ಕೆಲವರು ಕುತೂಹಲಪಡುವಂತೆ ಮಾಡಿವೆ. ಆದರೂ, ಅತ್ಯಧಿಕ ಸಂಖ್ಯೆಯ ಜನರು ಅಗತ್ಯದಲ್ಲಿದ್ದಾರೆ. ಇದರ ಕುರಿತು ಏನು ಮಾಡಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಇಬ್ರಿಯ 13:16ನ್ನು ಓದಿ.] ದೇವರು ಮೆಚ್ಚುವಂಥ ರೀತಿಯ ಕೊಡುವಿಕೆಯನ್ನು ಈ ಪತ್ರಿಕೆಯು ವಿವರಿಸುತ್ತದೆ.”