ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ಅಶ್ಲೀಲ ಸಾಹಿತ್ಯವು ವ್ಯಾಪಕವಾಗಿ ಲಭ್ಯವಿರುವುದರ ಕುರಿತು ಅನೇಕ ಜನರು ಚಿಂತಿತರಾಗಿದ್ದಾರೆ. ಇದೊಂದು ಚಿಂತಿಸಬೇಕಾದ ವಿಷಯವಾಗಿದೆಯೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿರುವ ಪ್ರಾಯೋಗಿಕ ಬುದ್ಧಿವಾದವು ನಮ್ಮನ್ನು ಸಂರಕ್ಷಿಸಬಲ್ಲದು. [ಎಫೆಸ 5:3, 4ನ್ನು ಓದಿರಿ.] ನಿಧಾನಗತಿಯಲ್ಲಿ ಬೆಳೆಯುತ್ತಿರುವ ಮತ್ತು ಹಾನಿಕಾರಕವಾಗಿರುವ ಈ ಅಪಾಯದಿಂದ ನಾವು ಸ್ವತಃ ಹೇಗೆ ಸಂರಕ್ಷಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಕಾವಲಿನಬುರುಜು ಅಕ್ಟೋ.15
“ನಾವು ಎದುರಿಸುವಂಥ ಅನೇಕ ನಿರ್ಣಯಗಳು ನಮ್ಮ ಜೀವನದ ಮೇಲೆ ದೀರ್ಘಕಾಲಿಕ ಪರಿಣಾಮಗಳನ್ನು ಬೀರುತ್ತವೆ. ನಾವು ಮೂರ್ಖತನದ ನಿರ್ಣಯಗಳನ್ನು ಮಾಡದಿರುವಂತೆ ನಮಗೆ ಯಾವುದು ಸಹಾಯಮಾಡುವುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 3:6ನ್ನು ಓದಿರಿ.] ವಿವೇಕಭರಿತ ನಿರ್ಣಯಗಳನ್ನು ಮಾಡುವುದರಲ್ಲಿ ನಮಗೆ ನೆರವಾಗುವಂತೆ ಕಾವಲಿನಬುರುಜುವಿನ ಈ ಸಂಚಿಕೆಯು ಐದು ಬೈಬಲ್ ಆಧಾರಿತ ನಿರ್ದೇಶನಗಳನ್ನು ಒದಗಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಬೇರೆ ಬೇರೆ ಕುಲಗಳು ಹಾಗೂ ಜಾತಿಗಳ ನಡುವೆ ಕೆಲವೊಮ್ಮೆ ಅಸ್ತಿತ್ವದಲ್ಲಿರುವ ದ್ವೇಷದ ಭಾವನೆಗಳು ಎಂದಾದರೂ ಸಂಪೂರ್ಣವಾಗಿ ಇಲ್ಲವಾಗುವವು ಎಂದು ನೀವು ನಂಬುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಅ. ಕೃತ್ಯಗಳು 10:34, 35ನ್ನು ಓದಿರಿ.] ನಾವು ಈ ಸಮಸ್ಯೆಯನ್ನು ಹೇಗೆ ಜಯಿಸಸಾಧ್ಯವಿದೆ ಎಂಬುದನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು [28ನೆಯ ಪುಟಕ್ಕೆ ಸೂಚಿಸಿರಿ] ತೋರಿಸುತ್ತದೆ.”
ಕಾವಲಿನಬುರುಜು ನವೆಂ.1
“ನಾವು ಯಾರಲ್ಲಿ ಭರವಸೆಯಿಟ್ಟಿರುತ್ತೇವೋ ಆ ವ್ಯಕ್ತಿಯಿಂದಲೇ ದ್ರೋಹಬಗೆಯಲ್ಪಟ್ಟಂಥ ಅನುಭವವು ನಮ್ಮೆಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಆಗಿದೆ. ‘ನಾನು ಭರವಸೆಯನ್ನಿಡಬಲ್ಲ ಯಾರಾದರೊಬ್ಬರು ಇದ್ದಾರೋ’ ಎಂದು ನೀವೆಂದಾದರೂ ನಿಮ್ಮನ್ನೇ ಕೇಳಿಕೊಂಡಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 3:5ನ್ನು ಓದಿರಿ.] ನಾವೇಕೆ ದೇವರಲ್ಲಿ ಪೂರ್ಣ ಭರವಸೆಯನ್ನಿಡಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ. ಮತ್ತು ನಮ್ಮ ಭರವಸೆಗೆ ಯೋಗ್ಯರಾದ ವ್ಯಕ್ತಿಗಳು ಯಾರು ಎಂಬುದನ್ನು ಹೇಗೆ ನಿರ್ಣಯಿಸಸಾಧ್ಯವಿದೆ ಎಂಬ ವಿಷಯವನ್ನೂ ಇದು ಪರಿಗಣಿಸುತ್ತದೆ.”