ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ಮಕ್ಕಳ ಶೋಷಣೆಯ ಕುರಿತು ಕೇಳಿಸಿಕೊಳ್ಳುವಾಗ ನಮ್ಮೆಲ್ಲರ ಮನಮರುಗುತ್ತದೆ. ‘ದೇವರು ನಿಜವಾಗಿಯೂ ಚಿಂತಿಸುತ್ತಾನೋ?’ ಎಂದು ನೀವು ಸೋಜಿಗಪಟ್ಟಿರಬಹುದು. [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 72:12-14ನ್ನು ಓದಿ.] ದೇವರಿಗೆ ಮಕ್ಕಳ ಕುರಿತು ಯಾವ ಅನಿಸಿಕೆಯಿದೆ ಮತ್ತು ದುರುಪಚಾರವನ್ನು ಅನುಭವಿಸುವ ಸಕಲರಿಗೂ ಆತನು ಶೀಘ್ರದಲ್ಲಿ ಶಾಶ್ವತ ಬಿಡುಗಡೆಯನ್ನು ಹೇಗೆ ತರಲಿದ್ದಾನೆ ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.”
ಕಾವಲಿನಬುರುಜು ಅಕ್ಟೋ.15
“ತಮ್ಮಲ್ಲಿ ಎಷ್ಟು ಹೆಚ್ಚು ಹಣವಿದೆಯೋ ಜೀವನವು ಅಷ್ಟು ಹೆಚ್ಚು ಸಂತೃಪ್ತಿಕರವಾಗಿರುವುದು ಎಂದು ಕೆಲವರು ನೆನಸುತ್ತಾರೆ. ಇದು ನಿಜ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿಯನ್ನು ಹೊಂದಿದ್ದ ಒಬ್ಬ ಶ್ರೀಮಂತನು ಏನು ಬರೆದಿದ್ದಾನೆಂಬುದನ್ನು ಗಮನಿಸಿ. [ಪ್ರಸಂಗಿ 5:10ನ್ನು ಓದಿ.] ಈ ಪತ್ರಿಕೆಯು ಪ್ರಾಪಂಚಿಕ ಐಶ್ವರ್ಯಕ್ಕಿಂತ ಉತ್ತಮವಾಗಿರುವ ಮೌಲ್ಯಗಳ ಕುರಿತು ಚರ್ಚಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಬೇರೆ ದೇಶಗಳಲ್ಲಿ ವಿಶೇಷವಾಗಿ ಯುವ ಜನರ ಮಧ್ಯೆ ಲೈಂಗಿಕ ಅನೈತಿಕತೆಯು ಹೆಚ್ಚಾಗುತ್ತಿರುವುದರ ಕುರಿತು ಕೇಳಿಸಿಕೊಳ್ಳುವಾಗ ನಾವು ಚಿಂತಿತರಾಗುತ್ತೇವೆ. ಅದು ಇಲ್ಲಿಯೂ ಸಂಭವಿಸುತ್ತಿದೆ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ವಿಷಯದಲ್ಲಿ ದೇವರ ಬುದ್ಧಿವಾದವನ್ನು ಗಮನಿಸಿರಿ. [1 ಥೆಸಲೋನಿಕ 4:3-5ನ್ನು ಓದಿ.] ಈ ಪತ್ರಿಕೆಯು ಅನೈತಿಕತೆಯ ಅಪಾಯಗಳನ್ನು ಮತ್ತು ಅವುಗಳನ್ನು ತಪ್ಪಿಸಲು ಸ್ವನಿಯಂತ್ರಣವು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ವಿವರಿಸುತ್ತದೆ.”
ಕಾವಲಿನಬುರುಜು ನವೆಂ.1
“ಇಂದಿನ ಸಮಸ್ಯೆಗಳನ್ನು ಮಾನವ ನಾಯಕರು ನೀಗಿಸಬಲ್ಲರು ಎಂಬ ವಿಚಾರದಲ್ಲಿ ಕೆಲವರು ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ವಚನಗಳಲ್ಲಿ ಮುಂತಿಳಿಸಲ್ಪಟ್ಟಿರುವ ವಿಷಯಗಳನ್ನು ಯಾರಾದರೂ ನೆರವೇರಿಸಬಲ್ಲರು ಎಂದು ನಿಮಗನಿಸುತ್ತದೋ? [ಕೀರ್ತನೆ 72:7, 12, 16ನ್ನು ಓದಿ. ತದನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮುಂತಿಳಿಸಲ್ಪಟ್ಟಿರುವ ಈ ನಾಯಕನು ಯಾರು ಮತ್ತು ಅವನು ಏನನ್ನು ಸಾಧಿಸುವನು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”