ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ಜನರು ತಮ್ಮ ಪೂರ್ವಗ್ರಹವನ್ನೆಲ್ಲಾ ಬಿಟ್ಟುಬಿಡುವರು ಎಂದು ನಿಮಗೆ ಅನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಮತ್ತಾಯ 7:12ನ್ನು ಓದಿ.] ಈ ಪತ್ರಿಕೆಯು ಪೂರ್ವಗ್ರಹದ ಕಾರಣಗಳು ಮತ್ತು ಅದರ ವಿರುದ್ಧ ಹೇಗೆ ಹೋರಾಡುವುದು ಎಂಬುದರ ಕುರಿತು ಮಾತಾಡುತ್ತದೆ.”
ಕಾವಲಿನಬುರುಜು ನವೆಂ.15
“ಹೆಚ್ಚಿನ ಜನರು ಒಳ್ಳೇ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತಾರೆ. ಆದರೆ ಸಾಧ್ಯವಿರುವುದಾದರೆ, ನೀವು ಸದಾಕಾಲ ಜೀವಿಸಲು ಬಯಸುವಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯೋಹಾನ 17:3ನ್ನು ಓದಿರಿ.] ಈ ಪತ್ರಿಕೆಯು ನಿತ್ಯಜೀವದ ಕುರಿತಾದ ಬೈಬಲಿನ ವಾಗ್ದಾನವನ್ನು ಚರ್ಚಿಸುತ್ತದೆ. ಆ ವಾಗ್ದಾನವು ನೆರವೇರುವಾಗ ಜೀವನವು ಹೇಗೆ ಇರುವುದು ಎಂಬುದನ್ನೂ ಇದು ನಿಕಟವಾಗಿ ಪರೀಕ್ಷಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಪೂರ್ವಗ್ರಹದ ಕಾರಣದಿಂದಾಗಿ ಹತ್ಯಾಕಾಂಡಗಳು ನಡೆಸಲ್ಪಟ್ಟ ವರದಿಗಳನ್ನು ಕೇಳಿಸಿಕೊಳ್ಳುವಾಗ ನೀವು ದಿಗ್ಭ್ರಾಂತರಾಗುತ್ತೀರಿ ಎಂಬುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಪೂರ್ವಗ್ರಹವು ಕೊಲೆಪಾತಕಕ್ಕೆ ನಡೆಸುವುದಿಲ್ಲವಾದರೂ, ಅದು ಜನರನ್ನು ವಿಭಾಗಿಸುತ್ತದೆ ಮತ್ತು ಹಗೆತನಕ್ಕೆ ಇಂಬುಕೊಡುತ್ತದೆ ಎಂಬುದನ್ನು ನೀವು ಒಪ್ಪುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪೂರ್ವಗ್ರಹದ ಇಂತಹ ಗುಣಲಕ್ಷಣಗಳನ್ನು ಹೋಗಲಾಡಿಸಲು ಏನು ಮಾಡಸಾಧ್ಯವಿದೆ ಎಂಬುದನ್ನು ಎಚ್ಚರ! ಪತ್ರಿಕೆಯಲ್ಲಿರುವ ಈ ಲೇಖನವು ವಿವರಿಸುತ್ತದೆ.”—ಮತ್ತಾಯ 7:12ನ್ನು ಓದಿ.
ಕಾವಲಿನಬುರುಜು ಡಿಸೆಂ.1
“ಮನುಷ್ಯರ ಮತ್ತು ಪ್ರಾಣಿಗಳ ನಡುವೆ ಇರುವ ಒಂದು ವ್ಯತ್ಯಾಸವು, ಸರಿ ಯಾವುದು ತಪ್ಪು ಯಾವುದು ಎಂದು ಹೇಳುವ ಸಾಮರ್ಥ್ಯವೇ ಆಗಿದೆ. ದುಃಖಕರವಾಗಿ, ಅನೇಕ ಜನರು ಕೆಟ್ಟ ವಿಷಯಗಳನ್ನು ಮಾಡುತ್ತಾರೆ. ಇದಕ್ಕೆ ಕಾರಣವೇನೆಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯೆರೆಮೀಯ 17:9 ಅಥವಾ ಪ್ರಕಟನೆ 12:9ನ್ನು ಓದಿರಿ.] ಈ ಪತ್ರಿಕೆಯು ಸರಿಯಾದದ್ದು ಏನೆಂದು ತಿಳಿದುಕೊಳ್ಳಲು ಮತ್ತು ಅದನ್ನು ಮಾಡಲು ನಮಗೆ ಯಾವುದು ಸಹಾಯಮಾಡುವುದು ಎಂಬುದನ್ನು ಚರ್ಚಿಸುತ್ತದೆ.”