ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಅಕ್ಟೋ. - ಡಿಸೆಂ.
“ನಮಗಿರುವಂಥ ರೀತಿಯ ಸ್ನೇಹಿತರು ನಮ್ಮ ಮೇಲೆ ಪ್ರಭಾವ ಬೀರಬಹುದು ಎಂದು ನೀವು ನೆನಸುತ್ತೀರೋ? [1 ಕೊರಿಂಥ 15:33ನ್ನು ಓದಿ, ಅನಂತರ ಪುಟ 13ರಲ್ಲಿರುವ ಲೇಖನಕ್ಕೆ ಗಮನ ಸೆಳೆಯಿರಿ.] ತಪ್ಪಾದ ಸ್ನೇಹಿತರೊಂದಿಗೆ ಸೇರಿಕೊಳ್ಳದಂತೆ ಸಹಾಯಮಾಡುವ ಪ್ರಾಯೋಗಿಕ ಸಲಹೆಗಳನ್ನು ಈ ಲೇಖನವು ನಮಗೆ ನೀಡುತ್ತದೆ.”
ಕಾವಲಿನಬುರುಜು ನವೆಂ.15
“ಮಾನವಕುಲವನ್ನು ಬಾಧಿಸುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಾ ಇದೆಯೇ ಹೊರತು ಪರಿಸ್ಥಿತಿಯು ಏಕೆ ಉತ್ತಮವಾಗುತ್ತಿಲ್ಲವೆಂಬುದರ ಬಗ್ಗೆ ಅನೇಕ ಜನರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣ ಏನಾಗಿರಬಹುದು ಎಂಬುದು ಈ ವಚನದಲ್ಲಿ ತಿಳಿಸ್ಪಟ್ಟಿದೆ. ಈ ವಿಚಾರವನ್ನು ನೀವೆಂದಾದರೂ ಪರಿಗಣಿಸಿದ್ದೀರೊ? [ಪ್ರಕಟನೆ 12:9ನ್ನು ಓದಿರಿ. ಅನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ಜನರನ್ನು ತಪ್ಪುದಾರಿಗೆಳೆಯಲು ಪಿಶಾಚನು ಮಾಡುವ ತಂತ್ರಗಳ ಕುರಿತು ಮತ್ತು ಅವನ ಪ್ರಭಾವವನ್ನು ನಾವು ಹೇಗೆ ಪ್ರತಿರೋಧಿಸಬಹುದು ಎಂಬುದರ ಕುರಿತು ಚರ್ಚಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಅನೇಕ ಜನರು ತಕ್ಕಮಟ್ಟಿಗೆ ಒಳ್ಳೇ ಮನೆಗಳನ್ನು ಹೊಂದಲು ಶಕ್ತರಾಗಿರುವುದಿಲ್ಲ. ಒಂದು ದಿನ ಎಲ್ಲರಿಗೂ ಒಳ್ಳೇ ಮನೆಗಳಿರುವುದೆಂದು ನೀವು ನೆನಸುತ್ತಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ವಸತಿ ಬಿಕ್ಕಟ್ಟಿನ ಕುರಿತು ಈ ಎಚ್ಚರ! ಪತ್ರಿಕೆಯು ಸದ್ಯೋಚಿತ ವರದಿಯನ್ನು ಕೊಡುತ್ತದೆ. ದೇವರ ಈ ವಾಗ್ದಾನವು ನೆರವೇರುವುದೆಂಬ ವಿಷಯದಲ್ಲಿ ನಾವೇಕೆ ಭರವಸವುಳ್ಳವರಾಗಿರಬಲ್ಲೆವು ಎಂಬುದನ್ನು ಸಹ ಇದು ತೋರಿಸುತ್ತದೆ.” ಯೆಶಾಯ 65:21, 22ನ್ನು ಓದಿರಿ.
ಕಾವಲಿನಬುರುಜು ಡಿಸೆಂ.1
“‘ಅರ್ಮಗೆದೋನ್’ ಎಂಬ ಪದವನ್ನು ಕೇಳುವಾಗ, ಹೆಚ್ಚಿನವರು ಘೋರವಾದ ಸಾಮೂಹಿಕ ಸರ್ವನಾಶವನ್ನು ಚಿತ್ರಿಸಿಕೊಳ್ಳುತ್ತಾರೆ. [ಪುಟ 3ರಲ್ಲಿರುವ ಚೌಕವನ್ನು ತೋರಿಸಿ.] ಆದರೆ ಅರ್ಮಗೆದೋನ್ ವಾಸ್ತವದಲ್ಲಿ ನಮಗೆ ಪ್ರಯೋಜನವನ್ನು ತರುತ್ತದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅದು ಹೇಗೆ ಎಂದು ಈ ಪತ್ರಿಕೆ ವಿವರಿಸುತ್ತದೆ.” ಎರಡನೇ ಪೇತ್ರ 3:13ನ್ನು ಓದಿರಿ.