ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ. - ಮಾರ್ಚ್
“ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ತರಬೇತಿಯನ್ನು ನೀಡುವುದರ ಮೌಲ್ಯವನ್ನು ಅನೇಕ ಜನರು ಮನಗಾಣುತ್ತಾರೆ. ಇದು ಪ್ರಾಮುಖ್ಯ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಜ್ಞಾನೋಕ್ತಿ 22:6ನ್ನು ಓದಿರಿ.] ತಮ್ಮ ಮಕ್ಕಳು ಒಳ್ಳೆಯ ಯಶಸ್ವಿದಾಯಕ ವಯಸ್ಕರಾಗಿ ಬೆಳೆಯುವಂತೆ ಸಹಾಯಮಾಡಲು ಹೆತ್ತವರು ಮಾಡಸಾಧ್ಯವಿರುವ ನಿರ್ದಿಷ್ಟ ವಿಷಯಗಳ ಕುರಿತು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಮಾತಾಡುತ್ತದೆ.”
ಕಾವಲಿನಬುರುಜು ಫೆಬ್ರ.15
“ಕೆಲವೊಮ್ಮೆ, ಎಲ್ಲೋ ಒಂದು ಅದ್ಭುತವು ಸಂಭವಿಸಿದೆ ಎಂಬುದರ ಕುರಿತ ವರದಿಗಳನ್ನು ನಾವು ಕೇಳಿಸಿಕೊಳ್ಳುತ್ತೇವೆ. [ಒಂದು ಉದಾಹರಣೆಯನ್ನು ಕೊಡಿರಿ.] ಕೆಲವರು ಇಂತಹ ವರದಿಗಳನ್ನು ನಂಬುತ್ತಾರೆ. ಇತರರು ನಂಬುವುದಿಲ್ಲ. ಈ ಪತ್ರಿಕೆಯು, ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಅದ್ಭುತಗಳು ನಿಜವಾಗಿಯೂ ಸಂಭವಿಸಿದವೋ ಮತ್ತು ಇಂತಹ ವಿಷಯಗಳು ಇಂದು ಸಂಭವಿಸುತ್ತವೋ ಎಂಬುದರ ಕುರಿತು ಮಾತಾಡುತ್ತದೆ.” ಯೆರೆಮೀಯ 32:21ನ್ನು ಓದಿರಿ.
ಎಚ್ಚರ! ಜನ. - ಮಾರ್ಚ್
“ತಮ್ಮ ಮಕ್ಕಳು ಉತ್ತಮವಾಗಿ ಬೆಳೆದು ಯಶಸ್ವಿಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಹೆತ್ತವರು ಏನನ್ನಾದರೂ ಮಾಡಬಲ್ಲರೋ? ಅದರ ಫಲಿತಾಂಶಗಳೇನಾಗಿರುವವು ಎಂಬುದನ್ನು ಗಮನಿಸಿರಿ. [ಜ್ಞಾನೋಕ್ತಿ 23:24, 25ನ್ನು ಓದಿರಿ, ಅನಂತರ ಪುಟ 20ರಲ್ಲಿರುವ ಲೇಖನಕ್ಕೆ ತಿರುಗಿಸಿರಿ.] ಈ ಲೇಖನವು ಮಕ್ಕಳನ್ನು ಶಿಸ್ತಿನಲ್ಲಿ ತರಬೇತುಗೊಳಿಸುವುದರ ಕುರಿತ ಉಪಯುಕ್ತಕರ ಸಲಹೆಗಳನ್ನು ಒದಗಿಸುತ್ತದೆ.”
ಕಾವಲಿನಬುರುಜು ಮಾರ್ಚ್1
“ಎಲ್ಲರೂ ಈ ಸಲಹೆಯನ್ನು ಅನ್ವಯಿಸುವುದಾದರೆ ಈ ಲೋಕವು ಉತ್ತಮಗೊಳ್ಳುವುದೆಂದು ನಿಮಗೆ ತೋರುತ್ತದೋ? [ರೋಮಾಪುರ 12:17, 18ನ್ನು ಓದಿ. ಅನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದುಃಖಕರವಾಗಿ, ಕೆಲವೊಮ್ಮೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಂಭವಿಸುತ್ತವೆ. ಬೈಬಲಿನ ಬುದ್ಧಿವಾದದ ಅನ್ವಯವು, ಘರ್ಷಣೆಗಳನ್ನು ಇತ್ಯರ್ಥಗೊಳಿಸಿ ಸಮಾಧಾನವನ್ನು ಪುನಃಸ್ಥಾಪಿಸಲು ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”