ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರ್ರಿ
1. ನಾವು ನಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರುವುದು ಏಕೆ ಪ್ರಾಮುಖ್ಯ?
1 ಪರಿಶುದ್ಧ ದೇವರಾದ ಯೆಹೋವನ ಸೇವಕರೋಪಾದಿ, ನಾವು ನಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಲು ಪರಿಶ್ರಮಿಸುತ್ತೇವೆ. (1 ಪೇತ್ರ 1:15, 16) ಇದರರ್ಥ, ನಾವು ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯೆಹೋವನ ಮಟ್ಟಗಳನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತೇವೆಂದೇ. ಈ ವರ್ಷದ ಜಿಲ್ಲಾ ಅಧಿವೇಶನವು ಪರಿಶುದ್ಧ ನಡವಳಿಕೆಯನ್ನು ತೋರಿಸಲು ನಮಗೆ ಒಂದು ವಿಶೇಷ ಅವಕಾಶವನ್ನು ಒದಗಿಸಿಕೊಡುವುದು.
2. ಹೋಟೆಲ್ಗಳಲ್ಲಿ ನಾವು ಹೇಗೆ ಉತ್ತಮ ನಡವಳಿಕೆಯನ್ನು ತೋರಿಸಬಲ್ಲೆವು?
2 ಹೋಟೆಲ್ಗಳಲ್ಲಿ: ಕಳೆದ ವರ್ಷ ಅಧಿವೇಶನದ ಪ್ರತಿನಿಧಿಗಳಿಂದ ಉಪಯೋಗಿಸಲ್ಪಟ್ಟ ಒಂದು ಹೋಟೆಲಿನ ಮ್ಯಾನೇಜರ್ ಹೀಗೆ ಹೇಳಿದನು: “ಯೆಹೋವನ ಸಾಕ್ಷಿಗಳನ್ನು ಅತಿಥಿಗಳನ್ನಾಗಿ ಹೊಂದಿರುವುದು ಎಷ್ಟು ಚೆನ್ನಾಗಿತ್ತು. . . . ನಿಮ್ಮಂಥ ಜನರೇ ನಮ್ಮ ಅತಿಥಿಗಳಾಗಿರಬೇಕೆಂದು ನಾವು ಬಯಸುತ್ತೇವೆ.” ಮುಂದೆ ತಿಳಿಸಲ್ಪಟ್ಟಿರುವ ಮರುಜ್ಞಾಪನಗಳಿಗೆ ವಿಧೇಯರಾಗುವುದು ನಮ್ಮ ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲು ಸಹಾಯಮಾಡುವುದು: (1) ಅಗತ್ಯವಿರುವುದಕ್ಕಿಂತ ಹೆಚ್ಚಿನ ರೂಮ್ಗಳನ್ನು ರಿಸರ್ವ್ ಮಾಡಬೇಡಿ, ಮತ್ತು ಅನುಮತಿಸಲ್ಪಟ್ಟಿರುವುದಕ್ಕಿಂತ ಹೆಚ್ಚಿನ ಜನರನ್ನು ನಿಮ್ಮ ರೂಮ್ನಲ್ಲಿ ಇರಿಸಬೇಡಿ. (2) ನೀವು ನಿಮ್ಮ ರಿಸರ್ವೇಷನ್ ಅನ್ನು ರದ್ದುಮಾಡಬೇಕಾಗಿರುವುದಾದರೆ, ಹೋಟೆಲ್ನವರಿಗೆ ತತ್ಕ್ಷಣವೇ ತಿಳಿಸಿ. (3) ಅನುಮತಿಯಿಲ್ಲದಿರುವಲ್ಲಿ ರೂಮ್ಗಳಲ್ಲಿ ಅಡಿಗೆ ಮಾಡಬೇಡಿ. (4) ಹೌಸ್ಕೀಪರ್ ಮತ್ತು ಪರಿಚಾರಕನಿಗೆ ಪ್ರತಿ ದಿನ ಬಕ್ಷೀಸು ಕೊಡಿ. (5) ಅತಿಥಿಗಳು ಹೋಟೆಲ್ನಲ್ಲಿರುವಾಗ ತೆಗೆದುಕೊಳ್ಳಲು ಉಚಿತವಾಗಿ ಒದಗಿಸಲ್ಪಡುವ ತಿಂಡಿ, ಕಾಫಿ, ಮತ್ತು ಐಸ್ ಅನ್ನು ದುರುಪಯೋಗಿಸಬೇಡಿ. (6) ಹೋಟೆಲ್ನ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗ, ವಿಶೇಷವಾಗಿ ಕಾರ್ಯಮಗ್ನವಾದ ಚೆಕ್-ಇನ್ ಮತ್ತು ಚೆಕ್-ಔಟ್ ಸಮಯಗಳಲ್ಲಿ ಆತ್ಮದ ಫಲವನ್ನು ಪ್ರದರ್ಶಿಸಿರಿ.—ಗಲಾ. 5:22, 23.
3. ಎಳೆಯ ಸಾಕ್ಷಿಗಳ ನಡವಳಿಕೆಯು ಹೇಗೆ ಇತರರ ಮೇಲೆ ಪ್ರಭಾವ ಬೀರಬಲ್ಲದು?
3 ನಮ್ಮ ಸಭ್ಯ ನಡತೆಯು ಪ್ರಬಲವಾದ ಸಾಕ್ಷಿಯನ್ನು ಕೊಡಬಲ್ಲದು. ಕಳೆದ ವರ್ಷ ಒಬ್ಬ ಯುವ ಸಾಕ್ಷಿಯು ಹೋಟೆಲ್ನ ಒಬ್ಬ ಗುಮಾಸ್ತಳ ಬಳಿ ಹೋಗಿ ಕೆಲವು ಕಾಗದ-ಲೇಖನಿಗಳಿಗಾಗಿ ವಿನಯದಿಂದ ಕೇಳಿಕೊಂಡನು ಮತ್ತು ನಂತರ ಉಪಕಾರ ಹೇಳಿದನು. ಇದು ಆ ಗುಮಾಸ್ತಳನ್ನು ಸ್ಪರ್ಶಿಸಿತು, ಮತ್ತು ಅವಳು ಹೀಗೆ ಹೇಳಿದ್ದಾಗಿ ತಿಳಿದುಬಂದಿತು: “ಇಂತಹ ವಿನಯ ನಡತೆಯುಳ್ಳ ಯುವಜನರು ಈ ನಡುವೆ ಕಾಣಸಿಗುವುದಿಲ್ಲ.” ಆದರೂ, ಕೆಲವು ವಿದ್ಯಮಾನಗಳಲ್ಲಿ, ನಿಗಾವಿಲ್ಲದ ಮಕ್ಕಳು ಈಜುತ್ತಿರುವುದನ್ನು, ಲಿಫ್ಟ್ಗಳಲ್ಲಿ ಆಟವಾಡುತ್ತಿರುವುದನ್ನು, ಜೋರಾಗಿ ಮಾತಾಡುತ್ತಿರುವುದನ್ನು, ಮತ್ತು ಕಾರಿಡಾರ್ಗಳಲ್ಲಿ ಓಡುತ್ತಿರುವುದನ್ನು ಗಮನಿಸಲಾಗಿದೆ. ಹೆತ್ತವರು ತಮ್ಮ ಮಕ್ಕಳನ್ನು ಅವರಷ್ಟಕ್ಕೆ ಓಡಾಡುತ್ತಿರುವಂತೆ ಬಿಡಬಾರದು, ಬದಲಿಗೆ ಅವರ ನಡವಳಿಕೆಯು ಯೆಹೋವನಿಗೆ ಸ್ತುತಿಯನ್ನು ತರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಮೇಲೆ ನಿಗಾ ಇಡಬೇಕು.—ಜ್ಞಾನೋ. 29:15.
4. ನಾವು ರೆಸ್ಟರಾಂಟ್ಗಳಲ್ಲಿ ಊಟಮಾಡುತ್ತಿರುವಾಗ ಇತರರಿಗೆ ಪರಿಗಣನೆಯನ್ನು ಹೇಗೆ ತೋರಿಸಬಲ್ಲೆವು?
4 ರೆಸ್ಟರಾಂಟ್ಗಳಲ್ಲಿ: ಒಂದು ಅಧಿವೇಶನ ನಿವೇಶನದ ಹತ್ತಿರದಲ್ಲಿದ್ದ ಒಂದು ರೆಸ್ಟರಾಂಟ್ನ ಪರಿಚಾರಕನು ಹೀಗೆ ಹೇಳಿದನು: “ಸಾಕ್ಷಿಗಳು ಭಿನ್ನರಾಗಿದ್ದಾರೆ. ಅವರು ಇತರರಿಗೆ ಗೌರವವನ್ನು ತೋರಿಸುತ್ತಾರೆ.” ಒಳ್ಳೆಯ ನಡವಳಿಕೆಯಲ್ಲಿ, ಊಟಮಾಡುತ್ತಿರುವ ಇತರರನ್ನು ಡಿಸ್ಟರ್ಬ್ ಮಾಡಬಹುದಾದ ರೀತಿಯಲ್ಲಿ ಜೋರಾಗಿ ಮಾತಾಡದಿರುವುದೂ ನಗಾಡದಿರುವುದೂ ಒಳಗೂಡಿದೆ. ಅನೇಕ ಸ್ಥಳಗಳಲ್ಲಿ 15ರಿಂದ 20 ಪ್ರತಿಶತ ಬಕ್ಷೀಸನ್ನು ಬಿಟ್ಟುಬರುವುದು ವಾಡಿಕೆಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಮತ್ತು ಇದು ಕೊಡಲ್ಪಡುವ ಸೇವೆಯ ಮೇಲೆ ಅವಲಂಬಿಸಿರುತ್ತದೆ. ಉಣ್ಣುವಾಗಲೂ ಕುಡಿಯುವಾಗಲೂ, ನಾವು ಎಲ್ಲವನ್ನೂ ದೇವರ ಘನತೆಗಾಗಿ ಮಾಡಲು ಬಯಸುತ್ತೇವೆ.—1 ಕೊರಿಂ. 10:31.
5. ಅಧಿವೇಶನದ ನಿವೇಶನದಲ್ಲಿ ತೋರಿಸಲ್ಪಡುವ ಸುನಡತೆಯಲ್ಲಿ ಏನು ಒಳಗೂಡಿದೆ?
5 ಅಧಿವೇಶನದಲ್ಲಿ: ವಿಶೇಷವಾಗಿ ನಮ್ಮ ಸುನಡವಳಿಕೆಯು ಅಧಿವೇಶನದ ನಿವೇಶನದಲ್ಲಿ ಪ್ರತ್ಯಕ್ಷವಾಗಿ ತೋರಿಬರಬೇಕು. ಅಟೆಂಡೆಂಟರು ಪಾರ್ಕಿಂಗ್ ಸ್ಥಳದಲ್ಲಿ ಮತ್ತು ಸಭಾಂಗಣದಲ್ಲಿ ಕೊಡುವ ಮಾರ್ಗದರ್ಶನಕ್ಕೆ ದಯವಿಟ್ಟು ಸಹಕರಿಸಿರಿ. (ಇಬ್ರಿ. 13:17) ಕಳೆದ ವರ್ಷ ಕೇರಳದಲ್ಲಿ ನಮ್ಮ ಅಧಿವೇಶನಗಳಲ್ಲಿ ಒಂದಕ್ಕೆ ಹಾಜರಾದ ಆಸಕ್ತ ವ್ಯಕ್ತಿಯೊಬ್ಬನು ಹೇಳಿದ್ದು: “ಇಲ್ಲಿರುವ ಎಲ್ಲರೂ ಸಂತೋಷವಾಗಿದ್ದಾರೆ. ಇಂತಹ ಜನರ ಮಧ್ಯೆ ಇರಲು ನಾನು ತುಂಬ ಇಷ್ಟಪಡುತ್ತೇನೆ.” ಮತ್ತೊಬ್ಬನು ಹೇಳಿದ್ದು: “ಇಂತಹ ಸುಸಂಘಟಿತ ಕೂಟವೊಂದನ್ನು ನಾನು ಹಿಂದೆಂದೂ ನೋಡಿಲ್ಲ.” ಕುಟುಂಬಗಳು ಒಟ್ಟಿಗೆ ಕುಳಿತುಕೊಳ್ಳಬೇಕೇ ಹೊರತು ತಮ್ಮ ಮಕ್ಕಳು, ಹದಿವಯಸ್ಕರು ಕೂಡ, ಇತರ ಯುವಜನರ ಗುಂಪುಗಳೊಂದಿಗೆ ಕುಳಿತುಕೊಳ್ಳುವಂತೆ ಅನುಮತಿಸಬಾರದು. ಯಾವುದೇ ರೀತಿಯ ಧ್ವನಿಮುದ್ರಕಗಳು ಅಧಿವೇಶನ ಸೌಕರ್ಯದ ಇಲೆಕ್ಟ್ರಿಕಲ್ ಅಥವಾ ಧ್ವನಿವರ್ಧಕ ವ್ಯವಸ್ಥೆಗೆ ಅಳವಡಿಸಲ್ಪಡಬಾರದು ಮತ್ತು ಇತರರಿಗೆ ಅಪಕರ್ಷಣೆಯನ್ನು ಉಂಟುಮಾಡದ ರೀತಿಯಲ್ಲಿ ಮಾತ್ರ ಉಪಯೋಗಿಸಲ್ಪಡಬೇಕು. ನೀವು ಫೋಟೋಗಳನ್ನು ತೆಗೆಯಲು ಬಯಸುವುದಾದರೆ, ಸೆಷನ್ಗಳು ನಡೆಯುತ್ತಿರುವಾಗ ಫ್ಲ್ಯಾಷ್ ಅನ್ನು ಉಪಯೋಗಿಸಬಾರದು. ಪೇಜರ್ಗಳು ಮತ್ತು ಸೆಲ್ ಫೋನ್ಗಳನ್ನು ಇತರರಿಗೆ ಅಪಕರ್ಷಣೆಯನ್ನು ಉಂಟುಮಾಡದ ರೀತಿಯಲ್ಲಿ ಸೆಟ್ ಮಾಡಿ ಇಡಬೇಕು. ನೀವು ಅಧಿವೇಶನ ಸೌಕರ್ಯದಲ್ಲಿ ಒಂದು ಅಪಘಾತವನ್ನು ಗಮನಿಸುವುದಾದರೆ, ದಯವಿಟ್ಟು ಒಬ್ಬ ಅಟೆಂಡೆಂಟ್ಗೆ ಅಥವಾ ಪ್ರಥಮ ಚಿಕಿತ್ಸೆ ಇಲಾಖೆಗೆ ತಿಳಿಸಿರಿ. ಅರ್ಹ ವೈದ್ಯಕೀಯ ನೆರವು ನಿವೇಶನದಲ್ಲೇ ಲಭ್ಯವಿದೆ.
6 ನಮ್ಮ ನಡವಳಿಕೆಯು ನಮ್ಮನ್ನು ಬೇರೆಯವರಿಂದ ಪ್ರತ್ಯೇಕಿಸುತ್ತದೆ ಮತ್ತು ನಮ್ಮ ದೇವರನ್ನು ಘನಪಡಿಸುತ್ತದೆ. (1 ಪೇತ್ರ 2:12) ಅಧಿವೇಶನದಲ್ಲಿ, ಯೆಹೋವನ ಸಾಕ್ಷಿಗಳ ಕಾರ್ಯಗಳು ಸಾರ್ವಜನಿಕ ನೋಟದಲ್ಲಿರುವುದು. ಆದುದರಿಂದ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಲು ದೃಢನಿಶ್ಚಯದಿಂದಿರಿ.
6. ಅಧಿವೇಶನಗಳಲ್ಲಿನ ನಮ್ಮ ನಡವಳಿಕೆಯು ಹೇಗೆ ದೇವರನ್ನು ಘನಪಡಿಸುತ್ತದೆ?
[ಪುಟ 5ರಲ್ಲಿರುವಚೌಕ]
ಪರಿಶುದ್ಧ ನಡವಳಿಕೆಯನ್ನು ತೋರಿಸಿರಿ
◼ ಹೋಟೆಲಿನ ಎಲ್ಲಾ ನಿಯಮಗಳನ್ನು ಪಾಲಿಸಿರಿ
◼ ಮಕ್ಕಳ ಮೇಲೆ ತೀವ್ರ ನಿಗಾ ಇಡಿರಿ
◼ ಇತರರಿಗೆ ಪರಿಗಣನೆ ತೋರಿಸಿ